ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸ್ವಾತಂತ್ರ್ಯೋತ್ಸವ: ಹೆಮ್ಮೆಯೆನಿಸುವ ಭಾರತದ 5 ಸಕ್ರಿಯ ಕ್ರೀಡಾಪಟುಗಳು

5 Active Indian athlets making us proud

ಬೆಂಗಳೂರು: ಆಗಸ್ಟ್ 15ರಂದು ಇಡೀ ಭಾರತ 74ನೇ ಸ್ವಾತಂತ್ರ್ಯೋತ್ಸವ ಸಂಭ್ರಮದಲ್ಲಿದೆ. ಸ್ವಾತಂತ್ರ್ಯ ದಿನವೆಂದರೆ ಭಾರತೀಯರ ಪಾಲಿಗೆ ಹೆಮ್ಮೆಯ ದಿನ. ಬ್ರಿಟಿಷರ ದಾಸ್ಯದಿಂದ ಭಾರತ ನೆಲವನ್ನು ಮುಕ್ತವಾಗಿಸಿದ ಹಿರಿಮೆಯ ದಿನ. ಈ ದಿನ ಸ್ವಾತಂತ್ರಕ್ಕಾಗಿ ಜೀವ ನೀಡಿದ ಮಹನೀಯರನ್ನು ನೆನೆದುಕೊಳ್ಳುತ್ತೇವೆ. ಜೊತೆಗೆ ಭಾರತದ ಪಾಲಿಗೆ ಹೆಮ್ಮೆಯೆನಿಸುವ ಪ್ರತೀ ಸಂಗತಿಗಳೂ ಈ ದಿನ ನಮ್ಮ ಕಣ್ಣ ಮುಂದೆ ಬಂದು ಹೋಗುತ್ತದೆ.

ಈ ಐಪಿಎಲ್ ಸೀಸನ್‌ ಆರಂಭದಲ್ಲಿ ಆಸ್ಟ್ರೇಲಿಯಾ, ಇಂಗ್ಲೆಂಡ್ ಆಟಗಾರರು ಆಡಲ್ಲ!ಈ ಐಪಿಎಲ್ ಸೀಸನ್‌ ಆರಂಭದಲ್ಲಿ ಆಸ್ಟ್ರೇಲಿಯಾ, ಇಂಗ್ಲೆಂಡ್ ಆಟಗಾರರು ಆಡಲ್ಲ!

ಭಾರತವೀಗ ವಿಶ್ವಮಟ್ಟದಲ್ಲಿ ತನ್ನದೇ ಛಾಪು ಹೊಂದಿದೆ. ಇದಕ್ಕೆ ಮುಖ್ಯ ಕಾರಣವೆಂದರೆ ಇಲ್ಲಿನ ಕ್ರೀಡಾಪಟುಗಳು. ಭಾರತೀಯ ಕ್ರೀಡಾಪಟುಗಳು ಪ್ರತೀ ಸಾರಿಯೂ ದೇಶವನ್ನು ವಿಶ್ವ ಮಟ್ಟದಲ್ಲಿ ಮಿನುಗುವಂತೆ ನೋಡಿಕೊಳ್ಳುತ್ತಿದ್ದಾರೆ.

ಎಡಚರ ದಿನ: ಕ್ರಿಕೆಟ್ ಇತಿಹಾಸದ ಟಾಪ್ 10 ಎಡಗೈ ಬ್ಯಾಟ್ಸ್‌ಮನ್‌ಗಳಿವರುಎಡಚರ ದಿನ: ಕ್ರಿಕೆಟ್ ಇತಿಹಾಸದ ಟಾಪ್ 10 ಎಡಗೈ ಬ್ಯಾಟ್ಸ್‌ಮನ್‌ಗಳಿವರು

ಸ್ವಾತಂತ್ರ್ಯ ದಿನ ನಾವು ಹೆಮ್ಮೆಯಿಂದ ನೆನಪು ಮಾಡಿಕೊಳ್ಳಬೇಕಾದ 5 ಸಕ್ರಿಯ ಕ್ರೀಡಾಪಟುಗಳ ಪಟ್ಟಿ ಇಲ್ಲಿದೆ.

1. ವಿರಾಟ್ ಕೊಹ್ಲಿ, ಕ್ರಿಕೆಟ್

1. ವಿರಾಟ್ ಕೊಹ್ಲಿ, ಕ್ರಿಕೆಟ್

* 2012ರಲ್ಲಿ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನಕ್ಕಾಗಿ ಕೊಹ್ಲಿಯನ್ನು ಐಸಿಸಿ ಏಕದಿನ ಆಟಗಾರ ಎಂದು ಹೆಸರಿಸಲಾಯಿತು.
* ಕೊಹ್ಲಿ 2012, 2014, & 2016ರಲ್ಲಿ ಐಸಿಸಿ ವಿಶ್ವ ಏಕದಿನ ಇಲೆವೆನ್‌ನ ಭಾಗವಾಗಿದ್ದರು.
* ವಿರಾಟ್ ಕೊಹ್ಲಿಗೆ 2013ರಲ್ಲಿ ಅರ್ಜುನ ಪ್ರಶಸ್ತಿ ನೀಡಲಾಯಿತು.
* ಕೊಹ್ಲಿಯನ್ನು 2011-2012 ಮತ್ತು 2013-2014ರ ಅಂತರರಾಷ್ಟ್ರೀಯ ಕ್ರಿಕೆಟಿಗ ಎಂದು ಹೆಸರಿಸಲಾಗಿತ್ತು.
* 2017ರಲ್ಲಿ ಕೊಹ್ಲಿಗೆ ಪದ್ಮಶ್ರೀ ಪ್ರಶಸ್ತಿ ಸಿಕ್ಕಿದೆ.

2. ಸುನಿಲ್ ಛೆಟ್ರಿ, ಫುಟ್ಬಾಲ್

2. ಸುನಿಲ್ ಛೆಟ್ರಿ, ಫುಟ್ಬಾಲ್

* ಜೂನ್ 2017ರಲ್ಲಿ, ಕಿರ್ಗಿಸ್ತಾನ್ ವಿರುದ್ಧ ತನ್ನ 54ನೇ ಗೋಲ್ ಹೊಡೆದಾಗ, ಇಂಗ್ಲೆಂಡ್‌ನ ವೇಯ್ನ್ ರೂನೇ ಅವರನ್ನು ಹಿಂದಿಕ್ಕಿ ಸುನಿಲ್ ಛೆಟ್ರಿ ವಿಶ್ವದಾದ್ಯಂತದ ಸಕ್ರಿಯ ಆಟಗಾರರಲ್ಲಿ ನಾಲ್ಕನೇ ಅತಿ ಹೆಚ್ಚು ಗೋಲ್ ಸ್ಕೋರರ್ ಆಗಿ ಗುರುತಿಸಿಕೊಂಡಿದ್ದರು.
* ಆಗ ಛೆಟ್ರಿ ಯುಎಸ್ಎಯ ಕ್ಲಿಂಟ್ ಡೆಂಪ್ಸೆ, ಪೋರ್ಚುಗಲ್ನ ಕ್ರಿಸ್ಟಿಯಾನೊ ರೊನಾಲ್ಡೊ ಮತ್ತು ಅರ್ಜೆಂಟೀನಾದ ಲಿಯೋನೆಲ್ ಮೆಸ್ಸಿ ಅವರ ಹಿಂದೆ ಇದ್ದರು.
* ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಭಾರತದ ಸಾರ್ವಕಾಲಿಕ ಅತಿ ಹೆಚ್ಚು ಗೋಲು ಗಳಿಸಿದ ಆಟಗಾರ ಸನಿಲ್. ಅಲ್ಲದೆ, ಭಾರತೀಯರಲ್ಲಿ ದೇಶೀಯ ಲೀಗ್‌ನಲ್ಲಿ ಸಾರ್ವಕಾಲಿಕ ಅತಿ ಹೆಚ್ಚು ಗೋಲು ಗಳಿಸಿದ ಆಟಗಾರರೂ ಆಗಿದ್ದಾರೆ.
* 2011ರಲ್ಲಿ ಛೆಟ್ರಿ ಅರ್ಜುನ ಪ್ರಶಸ್ತಿಯನ್ನು ಗೆದ್ದರು. ಬಳಿಕ 2019ರಲ್ಲಿ ಅಖಿಲ ಭಾರತ ಫುಟ್ಬಾಲ್ ಫೆಡರೇಶನ್ (ಎಐಎಫ್ಎಫ್) ದೇಶದ ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿ - ಪದ್ಮಶ್ರೀ ಕೂಡ ಛೆಟ್ರಿಗೆ ಲಭಿಸಿದೆ.

3. ನೀರಜ್ ಚೋಪ್ರಾ, ಅಥ್ಲೆಟಿಕ್ಸ್

3. ನೀರಜ್ ಚೋಪ್ರಾ, ಅಥ್ಲೆಟಿಕ್ಸ್

* ಪೋಲೆಂಡ್‌ನ ಬೈಡ್‌ಗೊಸ್ಜ್‌ನಲ್ಲಿ ನಡೆದ 2016ರ ಐಎಎಎಫ್ ವಿಶ್ವ ಯು-20 ಚಾಂಪಿಯನ್‌ಶಿಪ್‌ನಲ್ಲಿ ನೀರಜ್ ಚೋಪ್ರಾ ಜಾವೆಲಿನ್ ಥ್ರೋನಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. ಅಲ್ಲದೆ ಚೋಪ್ರಾ ವಿಶ್ವ ಜೂನಿಯರ್ ದಾಖಲೆಯನ್ನೂ ಸ್ಥಾಪಿಸಿದ್ದರು.
* 2016ರ ದಕ್ಷಿಣ ಏಷ್ಯಾ ಕ್ರೀಡಾಕೂಟದಲ್ಲಿ 82.23 ಮೀಟರ್ ಎಸೆತದಿಂದ ನೀರಜ್ ಚಿನ್ನದ ಪದಕ ಗೆದ್ದಿದ್ದರು.
* ನೀರಜ್ ಏಷ್ಯನ್ ಅಥ್ಲೆಟಿಕ್ ಚಾಂಪಿಯನ್‌ಶಿಪ್ 2017ರಲ್ಲಿ 85.23 ಮೀಟರ್ ಎಸೆತದಲ್ಲಿ ಬಂಗಾರ ಗೆದ್ದಿದ್ದಾರೆ.
* ನೀರಜ್ ಚೋಪ್ರಾ ಅವರು 2018ರ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಪುರುಷರ ಜಾವೆಲಿನ್ ಥ್ರೋನಲ್ಲಿ 86.47 ಮೀಟರ್ ದೂರ ಸಾಧನೆಯ ಮೂಲಕ ಉತ್ತಮ ಪ್ರದರ್ಶನ ತೋರಿದ್ದರು.
* ಮೇ 2018ರಲ್ಲಿ, ದೋಹಾ ಡೈಮಂಡ್ ಲೀಗ್‌ನಲ್ಲಿ 87.43 ಮೀಟರ್ ದೂರ ಈಟಿ ಎಸೆದಿದ್ದ ಚೋಪ್ರಾ ಮತ್ತೆ ರಾಷ್ಟ್ರೀಯ ದಾಖಲೆಯನ್ನು ಮುರಿದಿದ್ದರು.

4. ಸೈನಾ ನೆಹ್ವಾಲ್, ಬ್ಯಾಡ್ಮಿಂಟನ್

4. ಸೈನಾ ನೆಹ್ವಾಲ್, ಬ್ಯಾಡ್ಮಿಂಟನ್

* 2009ರಲ್ಲಿ ಸೈನಾ ನೆಹ್ವಾಲ್ ಅವರಿಗೆ ಅರ್ಜುನ ಪ್ರಶಸ್ತಿ ನೀಡಲಾಯಿತು. ಒಂದು ವರ್ಷದ ನಂತರ, ಭಾರತದ ನಾಲ್ಕನೇ ಅತ್ಯುನ್ನತ ನಾಗರಿಕ ಗೌರವ ಪದ್ಮಶ್ರೀ ಪ್ರಶಸ್ತಿಯನ್ನು ಭಾರತ ಸರ್ಕಾರ ಅವರಿಗೆ ನೀಡಿತ್ತು.
* 2009ರಲ್ಲಿ ಸೈನಾಗೆ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ದೊರೆತಿದೆ.
* 2016ರಲ್ಲಿ ಭಾರತ ಸರ್ಕಾರ ಸೈನಾ ನೆಹವಾಲ್ ಅವರಿಗೆ ಪದ್ಮಭೂಷಣ ನೀಡಿತು. ಇದು ದೇಶದ 3ನೇ ಅತ್ಯುನ್ನತ ನಾಗರಿಕ ಗೌರವವಾಗಿದೆ.

5. ನಾನಿಯಾ ಮಿರ್ಝಾ, ಟೆನಿಸ್

5. ನಾನಿಯಾ ಮಿರ್ಝಾ, ಟೆನಿಸ್

* ಸಾನಿಯಾ ಅವರಿಗೆ 2004ರಲ್ಲಿ ಭಾರತ ಸರ್ಕಾರದಿಂದ ಅರ್ಜುನ ಪ್ರಶಸ್ತಿ ನೀಡಲಾಯಿತು.
* ಅಕ್ಟೋಬರ್ 2005ರಲ್ಲಿ ಟೈಮ್ ಅವರಿಂದ 'ಏಷ್ಯಾದ 50 ಹೀರೋಸ್'ನಲ್ಲಿ ಸಾನಿಯಾ ಅವರನ್ನು ಹೆಸರಿಸಲಾಯಿತು
* 2006ರಲ್ಲಿ, ಮಿರ್ಜಾ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಲಾಯಿತು - ಇದು ಭಾರತದ 4ನೇ ಅತ್ಯುನ್ನತ ನಾಗರಿಕ ಗೌರವವಾಗಿದೆ.
* ಮಾರ್ಚ್ 2010ರಲ್ಲಿ, ದಿ ಎಕನಾಮಿಕ್ ಟೈಮ್ಸ್ ಮಿರ್ಜಾ ಅವರನ್ನು 'ಭಾರತ ಹೆಮ್ಮೆಪಡುವ 33 ಮಹಿಳೆಯರ' ಪಟ್ಟಿಯಲ್ಲಿ ಹೆಸರಿಸಿತ್ತು.
* 2015ರಲ್ಲಿ, ಸಾನಿಯಾಗೆ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಒಂದು ವರ್ಷದ ನಂತರ ಅವರಿಗೆ ಭಾರತದ 3ನೇ ಅತ್ಯುನ್ನತ ನಾಗರಿಕ ಗೌರವವಾದ ಪದ್ಮಭೂಷಣ ನೀಡಲಾಯಿತು.
* ಟೈಮ್ ನಿಯತಕಾಲಿಕೆಯ 2016ರ ವಿಶ್ವದ ಅತ್ಯಂತ ಪ್ರಭಾವಶಾಲಿ 100 ಜನರ ಪಟ್ಟಿಯಲ್ಲಿ ಮಿರ್ಝಾ ಹೆಸರಿಸಲ್ಪಟ್ಟಿದ್ದರು.

Story first published: Saturday, August 15, 2020, 10:55 [IST]
Other articles published on Aug 15, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X