ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮೊದಲ ಓವರ್‌ನಲ್ಲೇ ಅತಿ ಹೆಚ್ಚು ಬಾರಿ ಸಿಕ್ಸರ್: ಟಾಪ್ ಐವರಲ್ಲಿ ಭಾರತೀಯನೇ ಸರ್ವಾಧಿಕ

5 Batsmen Who Have Smashed ‘First Over Sixes’ In Odi Cricket

ಕ್ರಿಕೆಟ್ ಕೇವಲ ಆಟವಾಗಿ ಮಾತ್ರವೇ ಉಳಿದುಕೊಂಡಿಲ್ಲ. ಭಾರತ ಮಾತ್ರವಲ್ಲ ವಿಶ್ವದ ಹಲವು ಭಾಗಗಳಲ್ಲಿ ಕ್ರಿಕೆಟ್‌ಗೆ ವಿಶೇಷ ಮಾನ್ಯತೆಯಿದೆ. ಅಂಗಳದಲ್ಲಿ ಪ್ರತಿ ಎಸೆತ, ವಿಕೆಟ್, ಪ್ರತೀ ಬೌಂಡರಿ ಪ್ರತೀ ಸಿಕ್ಸರ್ ಕೂಡ ಪ್ರೇಕ್ಷಕನಿಗೆ ರೋಮಾಂಚನ ಅನುಭವವನ್ನು ನೀಡುತ್ತದೆ.

ಹೀಗೆ ಕ್ರಿಕೆಟ್‌ನಲ್ಲಿ ರೋಚಕ ಅನುಭವ ನೀಡುವ ಸಂಗತಿಗಳಲ್ಲಿ ಸಿಕ್ಸರ್ ಕೂಡ ಒಂದು. ಅದರಲ್ಲೂ ಮೊದಲ ಓವರ್‌ನಲ್ಲೇ ಸಿಕ್ಸರ್ ಸಿಡಿಸಿದರೆ ಪ್ರೇಕ್ಷಕರ ಪಾಲಿಗೆ ಅದು ಮತ್ತಷ್ಟು ವಿಶೇಷ ಕ್ಷಣವಾಗುತ್ತದೆ. ಏಕದಿನ ಕ್ರಿಕೆಟ್‌ನಲ್ಲಿ ಕಳೆದ ಕೆಲ ವರ್ಷಗಳಲ್ಲಿ ಮೊದಲ ಓವರ್‌ನಲ್ಲೇ ಸಿಕ್ಸರ್‌ಗೆ ಅಟ್ಟಿದ ನಿದರ್ಶನಗಳಿವೆ. ಅದರಲ್ಲೂ ಕೆಲ ಬ್ಯಾಟ್ಸ್‌ಮನ್‌ಗಳು ಇದನ್ನು ಪದೇ ಪದೆ ಮಾಡಿದ್ದಾರೆ.

ಬೇರೆಯಾಗ್ತಿದ್ದಾರಾ ವಿರಾಟ್ ಅನುಷ್ಕಾ? ಟ್ವಿಟ್ಟರ್‌ನಲ್ಲಿ #VirushkaDivorce ಟ್ರೆಂಡ್ !ಬೇರೆಯಾಗ್ತಿದ್ದಾರಾ ವಿರಾಟ್ ಅನುಷ್ಕಾ? ಟ್ವಿಟ್ಟರ್‌ನಲ್ಲಿ #VirushkaDivorce ಟ್ರೆಂಡ್ !

ಹೀಗೆ ಏಕದಿನ ಕ್ರಿಕೆಟ್‌ನಲ್ಲಿ ಮೊದಲ ಓವರ್‌ನಲ್ಲೇ ಚೆಂಡನ್ನು ಸಿಕ್ಸರ್‌ಗೆ ಅತಿ ಹೆಚ್ಚು ಬಾರಿ ಅಟ್ಟಿದ ಬ್ಯಾಟ್ಸ್‌ಮನ್‌ಗಳು ಯಾರೆಲ್ಲಾ? ಅಂತಾ ಟಾಪ್ ಐವರು ಬ್ಯಾಟ್ಸ್‌ಮನ್‌ಗಳು ನಿಮ್ಮ ಮುಂದೆ..

ಟಾಪ್-5: ಡೇವಿಡ್ ವಾರ್ನರ್-7 ಬಾರಿ

ಟಾಪ್-5: ಡೇವಿಡ್ ವಾರ್ನರ್-7 ಬಾರಿ

ಡೇವಿಡ್ ವಾರ್ನರ್ ಆಸ್ಟ್ರೇಲಿಯಾದ ಸ್ಪೋಟಕ ದಾಂಡಿಗ. ಅತಿ ಹೆಚ್ಚು ಬಾರಿ ಮೊದಲ ಓವರ್‌ಗೆ ಸಿಕ್ಸರ್ ಸಿಡಿಸಿದ ಬ್ಯಾಟ್ಸ್ಮನ್‌ಗಳ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದ್ದಾರೆ. ಪವರ್‌ಪ್ಲೇಯಲ್ಲಿ ಪರಿಣಾಮಕಾರಿಯಾಗಿ ತಂಡಕ್ಕೆ ಕೊಡುಗೆಯನ್ನು ವಾರ್ನರ್ ನೀಡುತ್ತಾರೆ. ಡೇವಿಡ್ ವಾರ್ನರ್ ಮೊದಲ ಓವರ್‌ನಲ್ಲಿ 7 ಬಾರಿ ಸಿಕ್ಸರ್ ಸಿಡಿಸಿದ ದಾಖಲೆಯನ್ನು ಹೊಂದಿದ್ದಾರೆ.

ಟಾಪ್-4: ಶಾಹಿದ್ ಅಫ್ರಿದಿ- 9 ಬಾರಿ

ಟಾಪ್-4: ಶಾಹಿದ್ ಅಫ್ರಿದಿ- 9 ಬಾರಿ

ಪಾಕಿಸ್ತಾನದ ಶಾಹಿದ್ ಅಫ್ರಿದಿ ಕೂಡ ಸ್ಪೋಟಕ ಆಟಕ್ಕೆ ಹೆಸರಾದವರು. ಸಿಕ್ಸರ್ ಬಾರಿಸುವ ತಮ್ಮ ಚಾಕಚಕ್ಯತೆಯ ಕಾರಣದಿಂದಾಗಿ ಸಿಕ್ಸರ್ ಕಿಂಗ್ ಎಂದು ಕರೆಸಿಕೊಳ್ಳುತ್ತಿದ್ದರು ಅಫ್ರಿದಿ. ಪಾಕಿಸ್ತಾಮದ ಪರವಾಗಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ದಾಖಲೆಯೂ ಅಫ್ರಿದಿ ಹೆಸರಿನಲ್ಲಿದೆ. ತಮ್ಮ ಕ್ರಿಕೆಟ್ ಆರಂಭದ ದಿನಗಳಲ್ಲಿ ಅಫ್ರಿದಿ ಪಾಕ್ ಪರವಾಗಿ ಇನ್ನಿಂಗ್ಸ್ ಆರಂಭಿಸಲು ಇಳಿಯುತ್ತಿದ್ದರು. ತಮ್ಮ ಆಕರ್ಷಕ ಕೆರಿಯರ್‌ನಲ್ಲಿ ಅಫ್ರಿದಿ 9 ಬಾರಿ ಮೊದಲ ಓವರ್‌ನಲ್ಲೇ ಸಿಕ್ಸರ್ ಸಿಡಿಸಿದ ದಾಖಲೆ ಹೊಂದಿದ್ದಾರೆ.

ಟಾಪ್-3: ಆಡಮ್ ಗಿಲ್‌ಕ್ರಿಸ್ಟ್-10 ಬಾರಿ

ಟಾಪ್-3: ಆಡಮ್ ಗಿಲ್‌ಕ್ರಿಸ್ಟ್-10 ಬಾರಿ

ಆಸ್ಟ್ರೇಲಿಯಾದ ದಿಗ್ಗಜ ವಿಕೆಟ್ ಕೀಪರ್ ಕ್ರಿಕೆಟ್ ಕಂಡ ಸ್ಪೋಟಕ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರು. ಏಕದಿನ ಕ್ರಿಕೆಟ್‌ನಲ್ಲಿ ಆರಂಭಿಕರಾಗಿ ಕಣಕ್ಕಿಳಿಯುತ್ತಿದ್ದ ಗಿಲ್‌ಕ್ರಿಸ್ಟ್ ಟೆಸ್ಟ್ ಜ್ರಿಕೆಟ್‌ನಲ್ಲಿ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಬೀಸುತ್ತಿದ್ದರು. ಆದರೆ ಎರಡೂ ಮಾದರಿಯಲ್ಲೂ ಗಿಲ್‌ಕ್ರಿಸ್ಟ್ ಸ್ಪೋಟಕ ಆಟಕ್ಕೇ ಒತ್ತು ನೀಡುತ್ತಿದ್ದರು. ತಮ್ಮ ಕ್ರಿಕೆಟ್ ಜೀವನದಲ್ಲಿ ಗಿಲ್‌ಕ್ರಿಸ್ಟ್ ಮೊದಲ ಓವರ್‌ನಲ್ಲೇ ಹತ್ತು ಬಾರಿ ಸಿಕ್ಸರ್ ಸಿಡಿಸಿದ ದಾಖಲೆಯನ್ನು ಹೊಂದಿದ್ದಾರೆ.

ಟಾಪ್-2: ಸನತ್ ಜಯಸೂರ್ಯ-13 ಬಾರಿ

ಟಾಪ್-2: ಸನತ್ ಜಯಸೂರ್ಯ-13 ಬಾರಿ

ಶ್ರೀಲಂಕಾ ಕ್ರಿಕೆಟ್‌ನ ದಿಗ್ಗಜ ಆಟಗಾರ ಸನತ್ ಜಯಸೂರ್ಯ ಏಕದಿನ ಕ್ರಿಕೆಟ್‌ನಲ್ಲಿ ಪವರ್‌ಪ್ಲೇಯನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವುದು ಹೇಗೆಂದು ತೋರಿಸಿದ ಆಟಗಾರ. ಆರಂಭದಿಂದಲೇ ಸ್ಪೋಟಕ ಆಟಕ್ಕೆ ಜಯಸೂರ್ಯ ಒತ್ತು ನೀಡುತ್ತಿದ್ದರು. ತಮ್ಮ ವೃತ್ತಿ ಜೀವನದಲ್ಲಿ ಸನತ್ ಜಯಸೂರ್ಯ 13 ಬಾರಿ ಮೊದಲ ಓವರ್‌ನಲ್ಲೇ ಸಿಕ್ಸರ್ ಸಿಡಿಸಿದ ಸಾಧನೆಯನ್ನು ಮಾಡಿದ್ದಾರೆ.

ಟಾಪ್-1: ವೀರೇಂದ್ರ ಸೆಹ್ವಾಗ್- 15 ಬಾರಿ

ಟಾಪ್-1: ವೀರೇಂದ್ರ ಸೆಹ್ವಾಗ್- 15 ಬಾರಿ

ಟೀಮ್ ಇಂಡಿಯಾದ ಸ್ಪೋಟಕ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್ ಮೊದಲ ಓವರ್‌ನಿಂದಲೇ ಬೌಲರ್‌ಗಳ ಮೇಲೆ ಸವಾರಿ ಮಾಡುತ್ತಿದ್ದರು. ಮೊದಲ ಓವರ್‌ನಲ್ಲಿ ಹೆಚ್ಚು ಬಾರಿ ಸಿಕ್ಸರ್ ಸಿಡಿಸಿರುವ ದಾಖಲೆ ವೀರೇಂದ್ರ ಸೆಹ್ವಾಗ್ ಹೆಸರಿನಲ್ಲಿದೆ. ದಾಖಲೆಯ 15 ಬಾರಿ ಮೊದಲ ಓವರ್‌ನಲ್ಲೇ ಸೆಹ್ವಾಗ್ ಸಿಕ್ಸರ್ ಸಿಡಿಸಿದ್ದಾರೆ. ಈ ಮೂಲಕ ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಇನ್ನು ಮೊದಲ ಓವರ್‌ನಲ್ಲಿ ಅತಿ ಹೆಚ್ಚು ಬಾರಿ ಬೌಂಡಿ ಸಿಡಿಸಿದ ದಾಖಲೆಯೂ ಕಊಡ ಸೆಹ್ವಾಗ್ ಹೆಸರಿನಲ್ಲೇ ಇದೆ.

Story first published: Saturday, June 6, 2020, 17:54 [IST]
Other articles published on Jun 6, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X