ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕಿಂಗ್‌ ಕೋಹ್ಲಿಯನ್ನು ಅತಿ ಹೆಚ್ಚು ಔಟ್‌ ಮಾಡಿದ ಐವರು ಬೌಲರ್‌ಗಳು ಇವರು!

5 Bowlers Who Have Dismissed Virat Kohli The Most Times

ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಪ್ರಸಕ್ತ ಕಾಲದ ಶ್ರೇಷ್ಠ ಬ್ಯಾಟ್ಸ್‌ಮನ್ ಎನಿಸಿದ್ದಾರೆ. ಮೂರೂ ಮಾದರಿಯಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿರುವ ವಿರಾಟ್ ಕೊಹ್ಲಿಯ ವಿಕೆಟ್ ಪಡೆಯಲು ಬೌಲರ್‌ಗಳು ಹರಸಾಹಸ ಪಡುತ್ತಾರೆ. ಪ್ರತೀ ಪಂದ್ಯದಲ್ಲೂ ಸ್ಥಿರವಾಗಿ ಬ್ಯಾಟಿಂಗ್ ಮಾಡುವ ಕೊಹ್ಲಿ ವಿಕೆಟ್ ಪಡೆಯುವುದು ಯಾವುದೇ ಬೌಲರ್‌ಗಳ ಪಾಲಿಗೆ ಸುಲಭದ ಸವಾಲು ಅಲ್ಲ.

ಮೂರೂ ಮಾದರಿಯಲ್ಲಿ ವಿರಾಟ್ ಕೊಹ್ಲಿ 50ಕ್ಕಿಂತ ಹೆಚ್ಚಿನ ಸರಾಸರಿಯನ್ನು ಹೊಂದಿದ್ದಾರೆ. ಈ ಅದ್ಭುತ ಆಟವೇ ಕೊಹ್ಲಿ ಎಂತಾ ಬ್ಯಾಟ್ಸ್‌ಮನ್ ಎಂಬುದನ್ನು ಹೇಳುತ್ತದೆ. ಹೀಗಾಗಿ ಕೊಹ್ಲಿಯನ್ನು ಆದಷ್ಟು ಬೇಗನೆ ಔಟ್ ಮಾಡಬೇಕೆಂಬುದು ಎಲ್ಲಾ ತಂಡಗಳ ಮೊದಲ ಆದ್ಯತೆಯಾಗಿರುತ್ತದೆ.

ಕ್ರಿಕೆಟ್‌ ಇತಿಹಾಸದಲ್ಲಿ ದಾಖಲಾಗಿರುವ ಟಾಪ್ 5 ವೇಗದ ಅರ್ಧ ಶತಕಗಳುಕ್ರಿಕೆಟ್‌ ಇತಿಹಾಸದಲ್ಲಿ ದಾಖಲಾಗಿರುವ ಟಾಪ್ 5 ವೇಗದ ಅರ್ಧ ಶತಕಗಳು

ಇಂತಾ ವಿರಾಟ್ ಕೊಹ್ಲಿಯನ್ನು ಕೆಲ ಬೌಲರ್‌ಗಳು ತಮ್ಮ ಬೌಲಿಂಗ್ ದಾಳಿಯ ಮೂಲಕ ಹೆಚ್ಚು ಬಾರಿ ಔಟ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ವಿರಾಟ್ ಕೊಹ್ಲಿಯನ್ನು ಅತಿ ಹೆಚ್ಚು ಬಾರಿ ಔಟ್ ಮಾಡಿದ ಆ ಐದು ಬೌಲರ್‌ಗಳು ಯಾರು ಎಂಬುದನ್ನು ಮುಂದೆ ಓದಿ..

ಆಸಿಸ್ ಸ್ಪಿನ್ನರ್‌ ಮುಂದೆ ವಿರಾಟ್ ತಿಣುಕಾಟ- 7 ಬಾರಿ ಔಟ್

ಆಸಿಸ್ ಸ್ಪಿನ್ನರ್‌ ಮುಂದೆ ವಿರಾಟ್ ತಿಣುಕಾಟ- 7 ಬಾರಿ ಔಟ್

ವಿರಾಟ್ ಕೊಹ್ಲಿ ಅತಿ ಹೆಚ್ಚು ಬಾರಿ ವಿಕೆಟ್ ನೀಡಿದ ಬೌಲರ್‌ಗಳ ಪಟ್ಟಿಯಲ್ಲಿ ಆಸ್ಟ್ರೇಲಿಯಾದ ಸ್ಪಿನ್ನರ್ ಆಡಂ ಜಂಪಾ 3ನೇ ಸ್ಥಾನದಲ್ಲಿ ಜಂಟಿಯಾಗಿ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಜಂಪಾ ವಿರಾಟ್ ಕೊಹ್ಲಿ ವಿಕೆಟನ್ನು 7 ಬಾರಿ ಪಡೆದಿದ್ದಾರೆ. ಈ ಮೂಲಕ ವಿರಾಟ್ ಕೊಹ್ಲಿ ಎದುರು ಜಂಪಾ ಯಶಸ್ವಿ ಬೌಲರ್ ಎನಿಸಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ 13 ಬಾರಿ ಜಂಪಾ ಮತ್ತು ಕೊಹ್ಲಿ ಮುಖಾಮುಖಿಯಾಗಿದ್ದಾರೆ. ಇಲ್ಲಿ 5 ಬಾರಿ ವಿರಾಟ್ ಕೊಹ್ಲಿ ಜಂಪಾಗೆ ವಿಕೆಟ್ ಒಪ್ಪಿಸಿದರೆ ಎರಡು ಬಾರಿ ಟಿ20 ಕ್ರಿಕೆಟ್‌ನಲ್ಲಿ ಕೊಹ್ಲಿ ವಿಕೆಟ್ ಪಡೆಯುವಲ್ಲಿ ಆಡಂ ಜಂಪಾ ಯಶಸ್ವಿಯಾಗಿದ್ದಾರೆ.

ರವಿ ರಾಮ್‌ಪಾಲ್‌ಗೂ ಭರ್ಜರಿ ಯಶಸ್ಸು-7 ಬಾರಿ ವಿಕೆಟ್

ರವಿ ರಾಮ್‌ಪಾಲ್‌ಗೂ ಭರ್ಜರಿ ಯಶಸ್ಸು-7 ಬಾರಿ ವಿಕೆಟ್

ವಿರಾಟ್ ಕೊಹ್ಲಿಗೆ ಬೌಲಿಂಗ್ ಮಾಡಿ ಯಶಸ್ಸು ಕಂಡವರಲ್ಲಿ ವೆಸ್ಟ್ ಇಂಡೀಸ್‌ನ ರವಿ ರಾಮ್‌ಪಾಲ್ ಕೂಡ ಒಬ್ಬರು. ಆಸಿಸ್‌ನ ಜಂಪಾ ರೀತಿಯಲ್ಲೇ ರವಿ ರಾಮ್‌ಪಾಲ್ ಕೂಡ ವಿರಾಟ್ ಕೊಹ್ಲಿಯನ್ನು 7 ಬಾರಿ ಔಟ್‌ ಮಾಡಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ 6 ಬಾರಿ ಮತ್ತು ಟೆಸ್ಟ್‌ನಲ್ಲಿ ಒಂದು ಬಾರಿ ರವಿ ರಾಮ್‌ಪಾಲ್ ಕೊಹ್ಲಿ ವಿಕೆಟ್ ಪಡೆದಿದ್ದಾರೆ. ಟಿ20ಯಲ್ಲಿ ಈ ಇಬ್ಬರೂ ಒಂದೇ ಬಾರಿ ಮುಖಾಮುಖಿಯಾಗಿದ್ದು ಕೊಹ್ಲಿ ವಿಕೆಟ್ ಪಡೆಯಲು ರಾಮ್‌ಪಾಲ್‌ಗೆ ಇಲ್ಲಿ ಸಾಧ್ಯವಾಗಿಲ್ಲ. ಹೀಗಾಗಿ 7 ಬಾರಿ ವಿರಾಟ್ ವಿಕೆಟ್ ಪಡೆದು ಜಂಪಾ ಜೊತೆಗೆ ಮೂರನೇ ಸ್ಥಾನದಲ್ಲಿ ಜಂಟಿಯಾಗಿದ್ದಾರೆ.

ಇಂಗ್ಲೆಂಡ್ ವೇಗಿ ಜೇಮ್ಸ್ ಆಂಡರ್ಸನ್- 8 ಬಾರಿ ಔಟ್

ಇಂಗ್ಲೆಂಡ್ ವೇಗಿ ಜೇಮ್ಸ್ ಆಂಡರ್ಸನ್- 8 ಬಾರಿ ಔಟ್

ವಿರಾಟ್ ಕೊಹ್ಲಿ ಹೆಚ್ಚು ಬಾರಿ ವಿಕೆಟ್ ಒಪ್ಪಿಸಿದ ಬೌಲರ್‌ಗಳ ಪಟ್ಟಿಯಲ್ಲಿ ಇಂಗ್ಲೆಂಡ್‌ನ ಅನುಭವಿ ವೇಗಿ ಜೇಮ್ಸ್ ಆಂಡರ್ಸನ್ ಎರಡನೇ ಸ್ಥಾನದಲ್ಲಿದ್ದಾರೆ. 31.38ರ ಸರಾಸರಿಯಲ್ಲಿ ಆಂಡರ್ಸನ್ ಕೊಹ್ಲಿ ವಿಕೆಟ್ ಪಡದಿದ್ದಾರೆ. ಟೆಸ್ಟ್‌ ಕ್ರಿಕೆಟ್‌ನಲ್ಲಿ 17 ಪಂದ್ಯಗಳಲ್ಲಿ ಈ ಇಬ್ಬರು ಆಟಗಾರರು ಮುಖಾಮುಖಿಯಾಗಿದ್ದಾರೆ. ಇದರಲ್ಲಿ ಕೊಹ್ಲಿ 5 ಬಾರಿ ಆಂಡರ್ಸನ್‌ಗೆ ವಿಕೆಟ್ ಒಪ್ಪಿಸಿದ್ದಾರೆ. 12 ಏಕದಿನ ಪಂದ್ಯಗಳಲ್ಲಿ 3 ಬಾರಿ ಕೊಹ್ಲಿ ವಿಕೆಟ್ ಪಡೆಯಲು ಆಂಡರ್ಸನ್ ಯಶಸ್ವಿಯಾಗಿದ್ದಾರೆ. 2014ರ ಸರಣಿಯೊಂದರಲ್ಲೇ ಕೊಹ್ಲಿ ಆಂಡರ್ಸನ್‌ಗೆ 4 ಬಾರಿ ವಿಕೆಟ್ ಒಪ್ಪಿಸಿದ್ದರು. ಈ ಸರಣಿ ಕೊಹ್ಲಿ ಪಾಲಿಗೆ ಅತ್ಯಂತ ಕೆಟ್ಟ್ ಸರಣಿಯಾಗಿತ್ತು. ಕೊಹ್ಲಿ 13ರ ಸರಾಸರಿಯನ್ನಷ್ಟೇ ಈ ಸರಣಿಯಲ್ಲಿ ಹೊಂದಿದ್ದರು.

ಇಂಗ್ಲೆಂಡ್ ಸ್ಪಿನ್ನರ್ ಗ್ರೇಮ್ ಸ್ವಾನ್-8 ಬಾರಿ

ಇಂಗ್ಲೆಂಡ್ ಸ್ಪಿನ್ನರ್ ಗ್ರೇಮ್ ಸ್ವಾನ್-8 ಬಾರಿ

ಇಂಗ್ಲೆಂಡ್‌ನ ವೇಗಿ ಜೇಮ್ಸ್ ಆಂಡರ್‌ಸನ್ ರೀತಿಯಲ್ಲೇ ವಿರಾಟ್ ಕೊಹ್ಲಿಯನ್ನು 8 ಬಾರಿ ಔಟ್ ಮಾಡಿದ್ದಾರೆ. ಆದರೆ ಸ್ವಾನ್ ಇಲ್ಲಿ ಅತ್ಯುತ್ತಮ ಸರಾಸರಿಯನ್ನು ಹೊಂದಿದ್ದಾರೆ ಎಂಬುದು ಗಮನಾರ್ಹ. 16.25ರ ಸರಾಸರಿಯನ್ನು ಸ್ವಾನ್ ಕೊಹ್ಲಿ ವಿರುದ್ಧ ಹೊಂದಿದ್ದಾರೆ. ಟೆಸ್ಟ್‌ ಕ್ರಿಕೆಟ್‌ನಲ್ಲಿ ಸ್ವಾನ್ ವಿರಾಟ್ ಕೊಹ್ಲಿಯನ್ನು 3 ಬಾರಿ ಬಲಿ ಪಡೆದ ಸ್ವಾನ್ ಏಕದಿನದಲ್ಲಿ 4 ಮತ್ತು ಟಿ20ಯಲ್ಲಿ ಒಂದು ಬಾರಿ ಔಟ್ ಮಾಡಿ ಯಶಸ್ಸು ಕಂಡಿದ್ದಾರೆ.

ನಂಬರ್ 1 ಟಿಮ್ ಸೌಥಿ- 10 ಬಾರಿ ಕೊಹ್ಲಿ ವಿಕೆಟ್

ನಂಬರ್ 1 ಟಿಮ್ ಸೌಥಿ- 10 ಬಾರಿ ಕೊಹ್ಲಿ ವಿಕೆಟ್

ನ್ಯೂಜಿಲೆಂಡ್‌ನ ಅನುಭವಿ ವೇಗಿ ಟಿಮ್ ಸೌಥಿ ವಿರಾಟ್ ಕೊಹ್ಲಿಯನ್ನು ಅತಿ ಹೆಚ್ಚು ಬಾರಿ ಔಟ್ ಮಾಡಿದ ದಾಖಲೆಯನ್ನು ಹೊಂದಿದ್ದಾರೆ. ಕೊಹ್ಲಿ ವಿಕೆಟನ್ನು ಸೌಥಿ ಬರೊಬ್ಬರಿ ಹತ್ತು ಬಾರಿ ಪಡೆದಿದ್ದಾರೆ. ಈ ಸಂದರ್ಭದಲ್ಲಿ ಸೌಥಿ ಬೌಲಿಂಗ್ ಸರಾಸರಿ 33.6 ಆಗಿದೆ. ಟೆಸ್ಟ್‌ ಕ್ರಿಕೆಟ್‌ನಲ್ಲಿ 3 ಬಾರಿ ಕೊಹ್ಲಿ ವಿಕೆಟ್ ಕಬಳಿಸಿರುವ ಸೌಥಿ ಸೀಮಿತ ಓವರ್‌ಗಳಲ್ಲಿ ಹೆಚ್ಚಿನ ಯಶಸ್ಸು ಹೊಂದಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ ಕೊಹ್ಲಿಯನ್ನು 6 ಬಾರಿ ಫೆವಿಲಿಯನ್‌ಗೆ ಅಟ್ಟುವಲ್ಲಿ ಟಿಮ್ ಸೌಥಿ ಯಶಸ್ವಿಯಾಗಿದ್ದಾರೆ. ಟಿ20 ಕ್ರಿಕೆಟ್‌ನಲ್ಲಿ ಒಂದು ಬಾರಿ ಕೊಹ್ಲಿ ನ್ಯೂಜಿಲೆಂಡ್ ವೇಗಿಗೆ ವಿಕೆಟ್ ಒಪ್ಪಿಸಿದ್ದಾರೆ. ಈ ಮೂಲಕ ವಿರಾಟ್ ಕೊಹ್ಲಿ ವಿರುದ್ಧ ಅತಿ ಹೆಚ್ಚು ಯಶಸ್ಸು ಪಡೆದ ಬೌಲರ್ ಎಂಬ ಖ್ಯಾತಿಯನ್ನು ನ್ಯೂಜಿಲೆಂಡ್‌ನ ವೇಗಿ ಟಿಮ್ ಸೌಥಿ ಪಡೆದುಕೊಂಡಿದ್ದಾರೆ.

Story first published: Thursday, May 21, 2020, 20:26 [IST]
Other articles published on May 21, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X