ಆಸಿಸ್ ಸ್ಪಿನ್ನರ್ ಮುಂದೆ ವಿರಾಟ್ ತಿಣುಕಾಟ- 7 ಬಾರಿ ಔಟ್
ವಿರಾಟ್ ಕೊಹ್ಲಿ ಅತಿ ಹೆಚ್ಚು ಬಾರಿ ವಿಕೆಟ್ ನೀಡಿದ ಬೌಲರ್ಗಳ ಪಟ್ಟಿಯಲ್ಲಿ ಆಸ್ಟ್ರೇಲಿಯಾದ ಸ್ಪಿನ್ನರ್ ಆಡಂ ಜಂಪಾ 3ನೇ ಸ್ಥಾನದಲ್ಲಿ ಜಂಟಿಯಾಗಿ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಜಂಪಾ ವಿರಾಟ್ ಕೊಹ್ಲಿ ವಿಕೆಟನ್ನು 7 ಬಾರಿ ಪಡೆದಿದ್ದಾರೆ. ಈ ಮೂಲಕ ವಿರಾಟ್ ಕೊಹ್ಲಿ ಎದುರು ಜಂಪಾ ಯಶಸ್ವಿ ಬೌಲರ್ ಎನಿಸಿದ್ದಾರೆ. ಏಕದಿನ ಕ್ರಿಕೆಟ್ನಲ್ಲಿ 13 ಬಾರಿ ಜಂಪಾ ಮತ್ತು ಕೊಹ್ಲಿ ಮುಖಾಮುಖಿಯಾಗಿದ್ದಾರೆ. ಇಲ್ಲಿ 5 ಬಾರಿ ವಿರಾಟ್ ಕೊಹ್ಲಿ ಜಂಪಾಗೆ ವಿಕೆಟ್ ಒಪ್ಪಿಸಿದರೆ ಎರಡು ಬಾರಿ ಟಿ20 ಕ್ರಿಕೆಟ್ನಲ್ಲಿ ಕೊಹ್ಲಿ ವಿಕೆಟ್ ಪಡೆಯುವಲ್ಲಿ ಆಡಂ ಜಂಪಾ ಯಶಸ್ವಿಯಾಗಿದ್ದಾರೆ.
ರವಿ ರಾಮ್ಪಾಲ್ಗೂ ಭರ್ಜರಿ ಯಶಸ್ಸು-7 ಬಾರಿ ವಿಕೆಟ್
ವಿರಾಟ್ ಕೊಹ್ಲಿಗೆ ಬೌಲಿಂಗ್ ಮಾಡಿ ಯಶಸ್ಸು ಕಂಡವರಲ್ಲಿ ವೆಸ್ಟ್ ಇಂಡೀಸ್ನ ರವಿ ರಾಮ್ಪಾಲ್ ಕೂಡ ಒಬ್ಬರು. ಆಸಿಸ್ನ ಜಂಪಾ ರೀತಿಯಲ್ಲೇ ರವಿ ರಾಮ್ಪಾಲ್ ಕೂಡ ವಿರಾಟ್ ಕೊಹ್ಲಿಯನ್ನು 7 ಬಾರಿ ಔಟ್ ಮಾಡಿದ್ದಾರೆ. ಏಕದಿನ ಕ್ರಿಕೆಟ್ನಲ್ಲಿ 6 ಬಾರಿ ಮತ್ತು ಟೆಸ್ಟ್ನಲ್ಲಿ ಒಂದು ಬಾರಿ ರವಿ ರಾಮ್ಪಾಲ್ ಕೊಹ್ಲಿ ವಿಕೆಟ್ ಪಡೆದಿದ್ದಾರೆ. ಟಿ20ಯಲ್ಲಿ ಈ ಇಬ್ಬರೂ ಒಂದೇ ಬಾರಿ ಮುಖಾಮುಖಿಯಾಗಿದ್ದು ಕೊಹ್ಲಿ ವಿಕೆಟ್ ಪಡೆಯಲು ರಾಮ್ಪಾಲ್ಗೆ ಇಲ್ಲಿ ಸಾಧ್ಯವಾಗಿಲ್ಲ. ಹೀಗಾಗಿ 7 ಬಾರಿ ವಿರಾಟ್ ವಿಕೆಟ್ ಪಡೆದು ಜಂಪಾ ಜೊತೆಗೆ ಮೂರನೇ ಸ್ಥಾನದಲ್ಲಿ ಜಂಟಿಯಾಗಿದ್ದಾರೆ.
ಇಂಗ್ಲೆಂಡ್ ವೇಗಿ ಜೇಮ್ಸ್ ಆಂಡರ್ಸನ್- 8 ಬಾರಿ ಔಟ್
ವಿರಾಟ್ ಕೊಹ್ಲಿ ಹೆಚ್ಚು ಬಾರಿ ವಿಕೆಟ್ ಒಪ್ಪಿಸಿದ ಬೌಲರ್ಗಳ ಪಟ್ಟಿಯಲ್ಲಿ ಇಂಗ್ಲೆಂಡ್ನ ಅನುಭವಿ ವೇಗಿ ಜೇಮ್ಸ್ ಆಂಡರ್ಸನ್ ಎರಡನೇ ಸ್ಥಾನದಲ್ಲಿದ್ದಾರೆ. 31.38ರ ಸರಾಸರಿಯಲ್ಲಿ ಆಂಡರ್ಸನ್ ಕೊಹ್ಲಿ ವಿಕೆಟ್ ಪಡದಿದ್ದಾರೆ. ಟೆಸ್ಟ್ ಕ್ರಿಕೆಟ್ನಲ್ಲಿ 17 ಪಂದ್ಯಗಳಲ್ಲಿ ಈ ಇಬ್ಬರು ಆಟಗಾರರು ಮುಖಾಮುಖಿಯಾಗಿದ್ದಾರೆ. ಇದರಲ್ಲಿ ಕೊಹ್ಲಿ 5 ಬಾರಿ ಆಂಡರ್ಸನ್ಗೆ ವಿಕೆಟ್ ಒಪ್ಪಿಸಿದ್ದಾರೆ. 12 ಏಕದಿನ ಪಂದ್ಯಗಳಲ್ಲಿ 3 ಬಾರಿ ಕೊಹ್ಲಿ ವಿಕೆಟ್ ಪಡೆಯಲು ಆಂಡರ್ಸನ್ ಯಶಸ್ವಿಯಾಗಿದ್ದಾರೆ. 2014ರ ಸರಣಿಯೊಂದರಲ್ಲೇ ಕೊಹ್ಲಿ ಆಂಡರ್ಸನ್ಗೆ 4 ಬಾರಿ ವಿಕೆಟ್ ಒಪ್ಪಿಸಿದ್ದರು. ಈ ಸರಣಿ ಕೊಹ್ಲಿ ಪಾಲಿಗೆ ಅತ್ಯಂತ ಕೆಟ್ಟ್ ಸರಣಿಯಾಗಿತ್ತು. ಕೊಹ್ಲಿ 13ರ ಸರಾಸರಿಯನ್ನಷ್ಟೇ ಈ ಸರಣಿಯಲ್ಲಿ ಹೊಂದಿದ್ದರು.
ಇಂಗ್ಲೆಂಡ್ ಸ್ಪಿನ್ನರ್ ಗ್ರೇಮ್ ಸ್ವಾನ್-8 ಬಾರಿ
ಇಂಗ್ಲೆಂಡ್ನ ವೇಗಿ ಜೇಮ್ಸ್ ಆಂಡರ್ಸನ್ ರೀತಿಯಲ್ಲೇ ವಿರಾಟ್ ಕೊಹ್ಲಿಯನ್ನು 8 ಬಾರಿ ಔಟ್ ಮಾಡಿದ್ದಾರೆ. ಆದರೆ ಸ್ವಾನ್ ಇಲ್ಲಿ ಅತ್ಯುತ್ತಮ ಸರಾಸರಿಯನ್ನು ಹೊಂದಿದ್ದಾರೆ ಎಂಬುದು ಗಮನಾರ್ಹ. 16.25ರ ಸರಾಸರಿಯನ್ನು ಸ್ವಾನ್ ಕೊಹ್ಲಿ ವಿರುದ್ಧ ಹೊಂದಿದ್ದಾರೆ. ಟೆಸ್ಟ್ ಕ್ರಿಕೆಟ್ನಲ್ಲಿ ಸ್ವಾನ್ ವಿರಾಟ್ ಕೊಹ್ಲಿಯನ್ನು 3 ಬಾರಿ ಬಲಿ ಪಡೆದ ಸ್ವಾನ್ ಏಕದಿನದಲ್ಲಿ 4 ಮತ್ತು ಟಿ20ಯಲ್ಲಿ ಒಂದು ಬಾರಿ ಔಟ್ ಮಾಡಿ ಯಶಸ್ಸು ಕಂಡಿದ್ದಾರೆ.
ನಂಬರ್ 1 ಟಿಮ್ ಸೌಥಿ- 10 ಬಾರಿ ಕೊಹ್ಲಿ ವಿಕೆಟ್
ನ್ಯೂಜಿಲೆಂಡ್ನ ಅನುಭವಿ ವೇಗಿ ಟಿಮ್ ಸೌಥಿ ವಿರಾಟ್ ಕೊಹ್ಲಿಯನ್ನು ಅತಿ ಹೆಚ್ಚು ಬಾರಿ ಔಟ್ ಮಾಡಿದ ದಾಖಲೆಯನ್ನು ಹೊಂದಿದ್ದಾರೆ. ಕೊಹ್ಲಿ ವಿಕೆಟನ್ನು ಸೌಥಿ ಬರೊಬ್ಬರಿ ಹತ್ತು ಬಾರಿ ಪಡೆದಿದ್ದಾರೆ. ಈ ಸಂದರ್ಭದಲ್ಲಿ ಸೌಥಿ ಬೌಲಿಂಗ್ ಸರಾಸರಿ 33.6 ಆಗಿದೆ. ಟೆಸ್ಟ್ ಕ್ರಿಕೆಟ್ನಲ್ಲಿ 3 ಬಾರಿ ಕೊಹ್ಲಿ ವಿಕೆಟ್ ಕಬಳಿಸಿರುವ ಸೌಥಿ ಸೀಮಿತ ಓವರ್ಗಳಲ್ಲಿ ಹೆಚ್ಚಿನ ಯಶಸ್ಸು ಹೊಂದಿದ್ದಾರೆ. ಏಕದಿನ ಕ್ರಿಕೆಟ್ನಲ್ಲಿ ಕೊಹ್ಲಿಯನ್ನು 6 ಬಾರಿ ಫೆವಿಲಿಯನ್ಗೆ ಅಟ್ಟುವಲ್ಲಿ ಟಿಮ್ ಸೌಥಿ ಯಶಸ್ವಿಯಾಗಿದ್ದಾರೆ. ಟಿ20 ಕ್ರಿಕೆಟ್ನಲ್ಲಿ ಒಂದು ಬಾರಿ ಕೊಹ್ಲಿ ನ್ಯೂಜಿಲೆಂಡ್ ವೇಗಿಗೆ ವಿಕೆಟ್ ಒಪ್ಪಿಸಿದ್ದಾರೆ. ಈ ಮೂಲಕ ವಿರಾಟ್ ಕೊಹ್ಲಿ ವಿರುದ್ಧ ಅತಿ ಹೆಚ್ಚು ಯಶಸ್ಸು ಪಡೆದ ಬೌಲರ್ ಎಂಬ ಖ್ಯಾತಿಯನ್ನು ನ್ಯೂಜಿಲೆಂಡ್ನ ವೇಗಿ ಟಿಮ್ ಸೌಥಿ ಪಡೆದುಕೊಂಡಿದ್ದಾರೆ.