ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ನಿಮಗೆ ಗೊತ್ತಿಲ್ಲದ ಸಚಿನ್: ಬೌಲಿಂಗ್‌ನಲ್ಲಿ ತೆಂಡೂಲ್ಕರ್ ಮಾಡಿದ 5 ವಿಶೇಷ ದಾಖಲೆಗಳು

5 Bowling Records Held By Sachin Tendulkar In International Cricket

ವಿಶ್ವ ಕ್ರಿಕೆಟ್‌ನಲ್ಲಿ ಸಚಿನ್ ತೆಂಡೂಲ್ಕರ್‌ಗೆ ಅಭಿಮಾನಿಗಳು ಕ್ರಿಕೆಟ್ ದೇವರು ಎಂಬ ಪಟ್ಟವನ್ನು ನೀಡಿದ್ದಾರೆ. ಅದಕ್ಕೆ ಕಾರಣ ಸಚಿನ್ ತೆಂಡೂಲ್ಕರ್ ಕ್ರಿಕೆಟ್‌ನಲ್ಲಿ ಮಾಡಿದ ಸಾಧನೆ ಮತ್ತು ದಾಖಲೆಗಳು. ಅಂತಾ ಅದೆಷ್ಟೋ ದಾಖಲೆಗಳು ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿದೆ.

ಬ್ಯಾಟಿಂಗ್‌ನಲ್ಲಿ ಸಚಿನ್ ತೆಂಡೂಲ್ಕರ್ ಸುಮಾರು ಎರಡೂವರೆ ದಶಕದ ಕಾಲ ಟೀಮ್ ಇಂಡಿಯಾದ ಪ್ರಮುಖ ಆಧಾರ ಸ್ತಂಭವಾಗಿದ್ದರು. ತೆಂಡೂಲ್ಕರ್ ಮಾಡಿದ ಅದೆಷ್ಟೋ ಬ್ಯಾಟಿಂಗ್ ದಾಖಲೆಗಳನ್ನು ಯಾವತ್ತಿಗೂ ಮುರಿಯಲು ಸಾಧ್ಯವೇ ಇಲ್ಲವೇನೋ ಎನಿಸಿದರೆ ತಪ್ಪಿಲ್ಲ.

ಕ್ರಿಕೆಟ್ ಪ್ರೇಮಿಗಳ ಹೃದಯಗೆದ್ದ ಟಾಪ್ 5 ಟಿವಿ ನಿರೂಪಕಿಯರು ಇವರು!ಕ್ರಿಕೆಟ್ ಪ್ರೇಮಿಗಳ ಹೃದಯಗೆದ್ದ ಟಾಪ್ 5 ಟಿವಿ ನಿರೂಪಕಿಯರು ಇವರು!

ಇಂತಾ ಸಚಿನ್ ಬ್ಯಾಟಿಂಗ್ ಮಾತ್ರವಲ್ಲ ಬೌಲಿಂಗ್‌ನಲ್ಲೂ ಸಾಕಷ್ಟು ಪಂದ್ಯಗಳಲ್ಲಿ ಸೈ ಎನಿಸಿಕೊಂಡಿದ್ದಾರೆ. ತಮ್ಮ ಬೌಲಿಂಗ್‌ನಿಂದೇ ಅನೇಕ ಪಂದ್ಯಗಳಲ್ಲಿ ತಂಡವನ್ನು ಗೆಲ್ಲಿಸಿಕೊಟ್ಟಿದ್ದೂ ಇದೆ. ಈ ವರದಿಯಲ್ಲಿ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿರುವ ಕೆಲ ಅಪರೂಪದ ಬೌಲಿಂಗ್ ದಾಖಲೆ ಬಗ್ಗೆ ಕುತೂಹಲಕಾರಿ ಮಾಹಿತಿಯಿದೆ ಓದಿ..

50ನೇ ಓವರ್‌ನಲ್ಲಿ ಎರಡು ಬಾರಿ 6ಕ್ಕಿಂತ ಕಡಿಮೆ ರನ್‌ ಡಿಫೆಂಡ್

50ನೇ ಓವರ್‌ನಲ್ಲಿ ಎರಡು ಬಾರಿ 6ಕ್ಕಿಂತ ಕಡಿಮೆ ರನ್‌ ಡಿಫೆಂಡ್

ಸಚಿನ್ ತೆಂಡೂಲ್ಕರ್ ಏಕದಿನ ಕ್ರಿಕೆಟ್‌ನಲ್ಲಿ ಅಂತಿಮ ಓವರ್‌ನಲ್ಲಿ ಎದುರಾಳಿಯ ಗೆಲುವಿಗೆ 6ರನ್‌ಗಿಂತ ಕಡಿಮೆ ಅಗತ್ಯವಿದ್ದ ಸಂದರ್ಭದಲ್ಲಿ ಬೌಲಿಂಗ್ ಮಾಡಿ ತಂಡಕ್ಕೆ ಗೆಲುವನ್ನು ತಂದುಕೊಟ್ಟಿದ್ದಾರೆ. ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಈ ಸಾಧನೆಯನ್ನು ಮಾಡಿದ ಏಕೈಕ ಕ್ರಿಕೆಟಿಗ ಎಂಬ ದಾಖಲೆ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿದೆ. 1993ರ ಹೀರೋಕಪ್‌ನ ಸೆಮಿ ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಮತ್ತು 1996ರ ಟೈಟನ್ ಕಪ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಈ ಸಾಧನೆಯನ್ನು ಮಾಡಿದ್ದಾರೆ.

ನಾಲ್ಕು ವಿಕೆಟ್‌ಗಳ ಗುಚ್ಛ ಪಡೆದ ಅತ್ಯಂತ ಕಿರಿಯ ಬೌಲರ್

ನಾಲ್ಕು ವಿಕೆಟ್‌ಗಳ ಗುಚ್ಛ ಪಡೆದ ಅತ್ಯಂತ ಕಿರಿಯ ಬೌಲರ್

1991ರಲ್ಲಿ ಶರ್ಜಾದಲ್ಲಿ ನಡೆದ ವೆಸ್ಟ್‌ ಇಂಡೀಸ್‌ ವಿರುದ್ಧದ ವಿಲ್ಸ್‌ ಟ್ರೋಫಿ ಟೂರ್ನಿಯಲ್ಲಿ ಸಚಿನ್ ಬೌಲಿಂಗ್‌ ಕೈಚಳಕ ಪ್ರದರ್ಶಿಸಿದ್ದರು. ಆ ಪಂದ್ಯದಲ್ಲಿ ಸಚಿನ್ 34ಕ್ಕೆ 4 ವಿಕೆಟ್‌ ಪಡೆದು ಏಕದಿನ ಕ್ರಿಕೆಟ್‌ನಲ್ಲಿ ಪಂದ್ಯವೊಂದರಲ್ಲಿ 4 ವಿಕೆಟ್‌ ಪಡೆದ ಕಿರಿಯ ಬೌಲರ್‌ ಎಂಬ ದಾಖಲೆಯನ್ನು ಮುಡಿಗೇರಿಸಿಕೊಂಡರು. ಆಗ ಅವರಿಗೆ 18 ವರ್ಷ, 181 ದಿನಗಳ ವಯಸ್ಸಾಗಿತ್ತು. 2001ರ ವರೆಗೂ ಈ ದಾಖಲೆ ತೆಂಡೂಲ್ಕರ್ ಹೆಸರಿನಲ್ಲೇ ಇತ್ತು.

ಒಂದೇ ಮೈದಾನದಲ್ಲಿ ಹೆಚ್ಚು ಬಾರಿ 5 ವಿಕೆಟ್‌ಗಳ ಗೊಂಚಲು

ಒಂದೇ ಮೈದಾನದಲ್ಲಿ ಹೆಚ್ಚು ಬಾರಿ 5 ವಿಕೆಟ್‌ಗಳ ಗೊಂಚಲು

ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿರುವ ಮತ್ತೊಂದು ಬೌಲಿಂಗ್ ದಾಖಲೆಯೆಂದರೆ ಒಂದೇ ಮೈದಾನದಲ್ಲಿ ಹೆಚ್ಚು ಬಾರಿ 5 ವಿಕೆಟ್‌ಗಳ ಗೊಂಚಲನ್ನು ಪಡೆದಿರುವುದು. ಕೊಚ್ಚಿಯ ನೆಹರೂ ಮೈದಾನ ಈ ದಾಖಲೆಗೆ ಸಾಕ್ಷಿಯಾಗಿದೆ. 1998ರ ತ್ರಿಕೋನ ಸರಣಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಮೊದಲು ಈ ಸಾಧನೆಯನ್ನು ಸಚಿನ್ ಮಾಡಿದ್ದರು. ಅದಾದ ನಂತರ ಇದೇ ಕ್ರೀಡಾಂಗಣದಲ್ಲಿ ಪಾಕಿಸ್ತಾನದ ವಿರುದ್ಧವೂ ಈ ದಾಖಲೆಯನ್ನು ತೆಂಡೂಲ್ಕರ್ ಮಾಡಿದ್ದಾರೆ.

ಏಷ್ಯಾದಲ್ಲಿ ಅತಿಹೆಚ್ಚು ಬಾರಿ 4ಕ್ಕೂ ಹೆಚ್ಚು ವಿಕೆಟ್ ಪಡೆದ ದಾಖಲೆ

ಏಷ್ಯಾದಲ್ಲಿ ಅತಿಹೆಚ್ಚು ಬಾರಿ 4ಕ್ಕೂ ಹೆಚ್ಚು ವಿಕೆಟ್ ಪಡೆದ ದಾಖಲೆ

ಏಷ್ಯಾ ಖಂಡದಲ್ಲಿ ಅತಿ ಹೆಚ್ಚು ಬಾರಿ ನಾಲ್ಕು ಮತ್ತು ಅದಕ್ಕೂ ಅಧಿಕ ವಿಕೆಟ್ ಪಡೆದ ದಾಖಲೆಯೂ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿದೆ. ಕೊಚ್ಚಿಯಲ್ಲಿ ಎರಡು ಬಾರಿ 5 ವಿಕೆಟ್ ಪಡೆದ ಸಚಿನ್ ಢಾಕಾದಲ್ಲಿ ಆಸ್ಟ್ರೇಲಿಯಾ ಮತ್ತು ಬಾಂಗ್ಲಾದೇಶ ವಿರುದ್ಧ ಹಾಗೂ ಶಾರ್ಜಾದಲ್ಲಿ ಮತ್ತು ಫರಿದಾಬಾದ್‌ನಲ್ಲಿ 4 ವಿಕೆಟ್ ಪಡೆದು ಮಿಂಚಿದ್ದಾರೆ. ಹೀಗೆ ಆರು ಬಾರಿ ಸಚಿನ್ 4ಕ್ಕೂ ಹೆಚ್ಚು ವಿಕೆಟ್‌ಗಳನ್ನು ಏಷ್ಯಾ ಖಂಡದಲ್ಲಿ ಪಡೆದ ದಾಖಲೆ ಹೊಂದಿದ್ದಾರೆ. ಈ ಪಟ್ಟಿಯಲ್ಲಿ ತಲಾ 5 ಬಾರಿ ಈ ಸಾಧನೆಯನ್ನು ಮಾಡಿ ಅನಿಲ್ ಕುಂಬ್ಳೆ ಮತ್ತು ರವೀಂದ್ರ ಜಡೇಜಾ ಎರಡನೇ ಸ್ಥಾನದಲ್ಲಿದ್ದಾರೆ.

ಹದಿಹರೆಯದಲ್ಲಿ ಮತ್ತು 40ರ ವಯಸ್ಸಿನಲ್ಲಿ ಟೆಸ್ಟ್ ವಿಕೆಟ್ ಪಡೆದ ಬೌಲರ್

ಹದಿಹರೆಯದಲ್ಲಿ ಮತ್ತು 40ರ ವಯಸ್ಸಿನಲ್ಲಿ ಟೆಸ್ಟ್ ವಿಕೆಟ್ ಪಡೆದ ಬೌಲರ್

ಸಚಿನ್ ಹೆಸರಿನಲ್ಲಿರುವ ಮತ್ತೊಂದು ಅತ್ಯಂತ ವಿಶಿಷ್ಟ ದಾಖಲೆ ಇದು. ಸಚಿನ್ ತಮ್ಮ ಹದಿಹರೆಯದಲ್ಲಿ ಬೌಲಿಂಗ್ ಮಾಡಿ ಟೆಸ್ಟ್ ವಿಕೆಟ್ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಬಳಿಕ 40ರ ವಯಸ್ಸಿಗೆ ಕಾಲಿಟ್ಟ ಸಂದರ್ಭದಲ್ಲೂ ಟೆಸ್ಟ್‌ ಕ್ರಿಕೆಟ್‌ನಲ್ಲಿ ಬೌಲಿಂಗ್ ಮಾಡಿ ವಿಕೆಟ್ ಪಡೆದುಕೊಂಡಿದ್ದಾರೆ. ಕ್ರಿಕೆಟ್ ಇತಿಹಾಸದಲ್ಲಿ ದಾಖಲಾದ ಏಕೈಕ ದೃಷ್ಟಾಂತವಿದು.

Story first published: Wednesday, May 20, 2020, 17:58 [IST]
Other articles published on May 20, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X