ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕೊಹ್ಲಿ, ರೋಹಿತ್, ಗೇಲ್ ಯಾರಿಂದಲೂ ಮುರಿಯಲಾಗದ 5 ವಿಶ್ವದಾಖಲೆಗಳು!

5 Cricket Records That Are Unlikely To Be Broken Ever

ಬೆಂಗಳೂರು, ಮಾರ್ಚ್ 30: ಕ್ರಿಕೆಟ್ ದಾಖಲೆಗಳು ಇರೋದೇ ಹೀಗೆ. ಇಲ್ಲಿ ಆಟಗಾರರನ್ನು ಇನ್ನೊಬ್ಬರಿಗೆ ಹೋಲಿಸುವುದಾಗಲಿ, ಮುಂದೊಮ್ಮೆ ಕ್ರಿಕೆಟ್ ಮೈದಾನದಲ್ಲಿ ಮತ್ತೊಂದು ದಾಖಲೆ ನಿರ್ಮಾಣವಾಗುವ ಸಾಧ್ಯೆಯಿರಲಿ ಅಲ್ಲಿ ಎರಡು ತಂಡಗಳು ಇರಲೇಬೇಕು. ದಾಖಲೆಗಳನ್ನು ಪರಿಗಣಿಸುವಾಗ ವಿಶ್ಲೇಷಕರು ಎರಡೂ ತಂಡಗಳನ್ನೂ ನೋಡಬೇಕಾಗುತ್ತದೆ. ಕ್ರಿಕೆಟ್ ಇತಿಹಾಸದಲ್ಲಿ ಇಂಥ ಅದೆಷ್ಟೋ ದಾಖಲೆಗಳು ನಿರ್ಮಾಣವಾಗಿಬಿಟ್ಟಿವೆ.

ಟೀಮ್ ಇಂಡಿಯಾವನ್ನು ಯಾವತ್ತೂ ಮುನ್ನಡೆಸದ 3 ಸೂಪರ್ ಸ್ಟಾರ್‌ಗಳು ಇವರುಟೀಮ್ ಇಂಡಿಯಾವನ್ನು ಯಾವತ್ತೂ ಮುನ್ನಡೆಸದ 3 ಸೂಪರ್ ಸ್ಟಾರ್‌ಗಳು ಇವರು

ಕ್ರಿಕೆಟ್‌ ಅಭಿಮಾನಿಗಳು ಹೆಚ್ಚಿನ ಸಾರಿ ಕೇಳುವ ಸಿಂಪಲ್ ಪ್ರಶ್ನೆಗೆ ಎಲ್ಲರಿಗೂ ಸುಲಭವಾಗಿ ಉತ್ತರ ಹೊಳೆಯೋಲ್ಲ. ಮೊದಲ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯ ನಡೆದಿದ್ದು ಯಾವ ದೇಶಗಳ ಮಧ್ಯೆ? ನೀವು ಕ್ರಿಕೆಟ್ ಪ್ರಿಯರಾಗಿದ್ದರೆ ಈ ಪ್ರಶ್ನೆಗೆ ನಿಮಗೆ ಉತ್ತರ ಗೊತ್ತಿರುತ್ತದೆ. ಮೊದಲ ಅಂತಾರಾಷ್ಟ್ರೀಯ ಟೆಸ್ಟ್ ಪಂದ್ಯ ನಡೆದಿದ್ದು 1877ರಲ್ಲಿ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ಮಧ್ಯೆ.

ಗೇಲ್, ಕೊಹ್ಲಿಯಿಲ್ಲ: ಐಪಿಎಲ್‌ನಲ್ಲಿ ಹಾಗ್ ಮೆಚ್ಚಿದ 3 ಪವರ್‌ಪ್ಲೇ ಬ್ಯಾಟ್ಸ್‌ಮನ್‌ಗಳು!ಗೇಲ್, ಕೊಹ್ಲಿಯಿಲ್ಲ: ಐಪಿಎಲ್‌ನಲ್ಲಿ ಹಾಗ್ ಮೆಚ್ಚಿದ 3 ಪವರ್‌ಪ್ಲೇ ಬ್ಯಾಟ್ಸ್‌ಮನ್‌ಗಳು!

ಕ್ರಿಕೆಟ್ ರಂಗದಲ್ಲಿ ಬಹಳಷ್ಟು ವೈಯಕ್ತಿಕ ದಾಖಲೆ ನಿರ್ಮಾಣವಾಗಿವೆ. ಆದರೆ ಎಷ್ಟೋ ಪ್ರತಿಭಾನ್ವಿತ ಆಟಗಾರ ಪ್ರಯತ್ನಿಸಿದರೂ ಮುರಿಯಲು ಕಷ್ಟಸಾಧ್ಯವಿರುವ ಐದು ಅಪರೂಪದ ದಾಖಲೆಗಳ, ಸಾಧಕರ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

1. ಸರ್ ಜ್ಯಾಕ್ ಹಾಬ್ಸ್

1. ಸರ್ ಜ್ಯಾಕ್ ಹಾಬ್ಸ್

ಶತಕ ಬಾರಿಸೋದು ಇವತ್ತಿಗೂ ಆಟಗಾರರಿಗೆ ಸುಲಭದ ಮಾತೇನಲ್ಲ. ಮೂರಂಕಿಯ ಸಾಧನೆ ಮೆರೆಯಬೇಕಾದರೆ ಕಷ್ಟವಿದೆ. ಅಂಥದ್ದರಲ್ಲಿ ಕ್ರಿಕೆಟಿಗರೊಬ್ಬರು ಬರೋಬ್ಬರಿ 199 ಶತಕಗಳನ್ನು ಬಾರಿಸಿದ್ದಾರೆ. ಇಂಗ್ಲೆಂಡ್‌ನ ಸರ್ ಜ್ಯಾಕ್ ಹಾಬ್ಸ್ ಒಟ್ಟಿಗೆ 199 ಶತಕಗಳನ್ನು ಬಾರಿಸಿದ ದಾಖಲೆ ಹೊಂದಿದ್ದಾರೆ. ಇದರಲ್ಲಿ 18 ಟೆಸ್ಟ್ ಶತಕಗಳು, ಇನ್ನುಳಿದವು ಪ್ರಥಮದರ್ಜೆ ಕ್ರಿಕೆಟ್‌ ಶತಕಗಳು. ಅಂತೂ ಇದು ಮುರಿಯದ ದಾಖಲೆಗಳ ಸಾಲಿನಲ್ಲಿ ಗುರುತಿಸಿಕೊಂಡಿದೆ.

2. ವಿಲ್ಫ್ರೆಡ್ ರೋಡ್ಸ್

2. ವಿಲ್ಫ್ರೆಡ್ ರೋಡ್ಸ್

ಕ್ರಿಕೆಟಿಗನೊಬ್ಬ 40 ವರ್ಷ ತುಂಬುತ್ತಲೇ ಸುಸ್ತಾಗುತ್ತಾನೆ. ಫಾರ್ಮ್ ಇಲ್ಲ, ವಯಸ್ಸು ಆಟಕ್ಕೆ ಅಡ್ಡಿಯಾಗುತ್ತಿದೆ ಎಂದು ಸಹಜವಾಗಿ ನುಡಿಯುವವರಿದ್ದಾರೆ. ಇನ್ನು ಆಡಿದ್ದು ಸಾಕಪ್ಪ ಅನ್ನೋರೂ ಇದ್ದಾರೆ. ಆದರೆ ಇಂಗ್ಲೆಂಡ್‌ನ ಇಬ್ಬರು ಆಟಗಾರರು 50 ವರ್ಷಕ್ಕೂ ಮಿಕ್ಕಿ ವೃತ್ತಿಪರ ಕ್ರಿಕೆಟ್ ಆಡಿದ ದಾಖಲೆ ಇಂದಿಗೂ ಉಳಿಸಿಕೊಂಡಿದ್ದಾರೆ. ವಿಲ್ಫ್ರೆಡ್ ರೋಡ್ಸ್ (52 ವರ್ಷ) ಮತ್ತು ಜಾರ್ಜ್ ಗನ್ (50 ವರ್ಷ) ಈ ಸಾಧಕರು.

3. ಸಚಿನ್ ತೆಂಡೂಲ್ಕರ್

3. ಸಚಿನ್ ತೆಂಡೂಲ್ಕರ್

ಟೀಮ್ ಇಂಡಿಯಾದ ಈಗಿನ ನಾಯಕ ವಿರಾಟ್ ಕೊಹ್ಲಿ ಸಚಿನ್ ಬಹುಶಃ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ಎಲ್ಲಾ ದಾಖಲೆಗಳನ್ನು ಮುರಿಯಬಹುದು. ಆದರೆ ಸಚಿನ್ ಹೆಸರಿನಲ್ಲಿರುವ ಶತಕದ ಶತಕ ದಾಖಲೆಯನ್ನು ಮುರಿಯೋದು ಬಲುಕಷ್ಟವಿದೆ. ಸಚಿನ್ ಟೆಸ್ಟ್ ಕ್ರಿಕೆಟ್‌ನಲ್ಲಿ 51, ಏಕದಿನ ಕ್ರಿಕೆಟ್‌ನಲ್ಲಿ 49 ಶತಕಗಳ ದಾಖಲೆ ಹೊಂದಿದ್ದಾರೆ.

4. ಜಿಮ್ ಲ್ಯಾಕರ್

4. ಜಿಮ್ ಲ್ಯಾಕರ್

1956ರಲ್ಲಿ ಇಂಗ್ಲೆಂಡ್‌ನ ಓಲ್ಡ್ ಟ್ರಾಫರ್ಡ್‌ನಲ್ಲಿ ಇಂಗ್ಲೆಂಡ್ ತಂಡ ಆಸ್ಟ್ರೇಲಿಯಾ ವಿರುದ್ಧ ಆ್ಯಷಸ್ ಟೆಸ್ಟ್ ಪಂದ್ಯವನ್ನಾಡುತ್ತಿತ್ತು. ಆರಂಭದಲ್ಲಿ ಪ್ರವಾಸಿ ಆಸ್ಟ್ರೇಲಿಯಾವೇ ಪಾರಮ್ಯ ಸಾಧಿಸಿತ್ತು. ಆದರೆ ಮತ್ತೆ ಇಂಗ್ಲೆಂಡ್ ಸ್ಪಿನ್ ಬೌಲರ್ ಜಿಮ್ ಲ್ಯಾಕರ್ ಅಮೋಘ ಬೌಲಿಂಗ್‌ನಿಂದಾಗಿ ಇಂಗ್ಲೆಂಡ್ ಅಂದು, ಇನ್ನಿಂಗ್ಸ್‌ ಸಹಿತ 170 ರನ್ ಜಯ ದಾಖಲಿಸಿತ್ತು. 4ನೇ ಆ್ಯಷಸ್ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಲ್ಯಾಕರ್ 9 ವಿಕೆಟ್, ದ್ವಿತೀಯ ಇನ್ನಿಂಗ್ಸ್‌ನಲ್ಲಿ 10ಕ್ಕೆ 10 ವಿಕೆಟ್ ಮುರಿದಿದ್ದರು. ಒಟ್ಟಾರೆ 90 ರನ್‌ ನೀಡಿ ಲ್ಯಾಕರ್ ಆವತ್ತು ಬರೋಬ್ಬರಿ 19 ವಿಕೆಟ್‌ಗಳನ್ನು ಉರುಳಿಸಿದ್ದರು.

5. ಡಾನ್ ಬ್ರಾಡ್ಮನ್

5. ಡಾನ್ ಬ್ರಾಡ್ಮನ್

ಕ್ರಿಕೆಟ್‌ನ ಯಾವುದೇ ದಾಖಲೆಗಳ ಪಟ್ಟಿ ಬಹುಶಃ ಆಸ್ಟ್ರೇಲಿಯಾ ದಂತಕತೆ ಡಾನ್ ಬ್ರಾಡ್ಮನ್ ಹೆಸರಿಲ್ಲದೆ ಮುಕ್ತಾಯವಾಗೋದಿಲ್ಲವೋ ಏನೋ. ಟೆಸ್ಟ್ ಕ್ರಿಕೆಟ್‌ನಲ್ಲಿ ಭರ್ಜರಿ 99.94 ಸರಾಸರಿಯ ದಾಖಲೆ ಈಗಲೂ ಬ್ರಾಡ್ಮನ್ ಹೆಸರಿನಲ್ಲಿದೆ. ಒಟ್ಟು 52 ಟೆಸ್ಟ್ ಪಂದ್ಯಗಳನ್ನಾಡಿರುವ ಡಾನ್, 6996 ರನ್‌ಗಳೊಂದಿಗೆ 99.94 ರನ್ ಸರಾಸರಿ ಹೊಂದಿದ್ದಾರೆ. ಇದು ಬಹುಶಃ ಕ್ರಿಕೆಟ್‌ನಲ್ಲಿ ಇನ್ನೂ ಬಹುಕಾಲ ಮುರಿಯದೆ ಉಳಿಯುವ ದಾಖಲೆ.

Story first published: Monday, March 30, 2020, 22:56 [IST]
Other articles published on Mar 30, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X