ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕ್ರಿಕೆಟ್‌ ಪ್ರಿಯರನ್ನೇ ಅಚ್ಚರಿಗೊಳಿಸುವ ಬಲು ಅಪರೂಪದ 5 ದಾಖಲೆಗಳಿವು!

5 Cricket Records That’ll Surprise cricket fans

ಬೆಂಗಳೂರು: ಕ್ರಿಕೆಟ್ ಅನ್ನು ಮನುಷ್ಯ ಕಂಡು ಹಿಡಿದ ಅತ್ಯಂತ ಚಂದದ, ಮನರಂಜನಾತ್ಮಕ ಆಟವೆಂದು ನಿಸ್ಸಂಶಯವಾಗಿ ಹೇಳಬಹುದು. ಕ್ರೀಡೆಗಳೆಂದ ಮೇಲೆ ಎಲ್ಲವೂ ಚಂದಾನೆ. ಆದರೆ ಕ್ರಿಕೆಟ್‌ಗಿರೋ ಕಿಕ್ಕೇ ಕೊಂಚ ಭಿನ್ನ. ಕ್ರಿಕೆಟ್‌ಗಿರುವ ಅಭಿಮಾನಿಗಳ ಬಳಗವೂ ದೊಡ್ಡ ಸಂಖ್ಯೆಯದ್ದು. ಇದೇ ಕಾರಣಕ್ಕೆ ಕ್ರಿಕೆಟ್‌ ಜಗತ್ತಿನ ಮನರಂಜನೆಯ ದೊಡ್ಡ ಕ್ರೀಡೆಯಾಗಿ, ಬಹುದೊಡ್ಡ ಉದ್ಯಮವಾಗಿ ಬೆಳೆಯುತ್ತಿದೆ. ಪ್ರತೀ ವರ್ಷವೂ ಒಬ್ಬರನ್ನು ಮೀರಿಸುವ ಮತ್ತೊಬ್ಬ ಆಟಗಾರ ಕ್ರಿಕೆಟ್‌ ರಂಗದಲ್ಲಿ ಕಾಣಿಸಿಕೊಳ್ಳುತ್ತಲೂ ಇರುವುದರಿಂದ ಚೆಂಡು-ದಾಂಡಿನಾಟ ಇನ್ನಷ್ಟು ಆಕರ್ಷಣೀಯವಾಗುತ್ತಿದೆ.

ಟೆಸ್ಟ್‌ನಲ್ಲಿ ಅತೀ ಹೆಚ್ಚುಬಾರಿ 5+ ವಿಕೆಟ್ ಪಡೆದ ಮಾಂತ್ರಿಕ ಬೌಲರ್‌ಗಳುಟೆಸ್ಟ್‌ನಲ್ಲಿ ಅತೀ ಹೆಚ್ಚುಬಾರಿ 5+ ವಿಕೆಟ್ ಪಡೆದ ಮಾಂತ್ರಿಕ ಬೌಲರ್‌ಗಳು

ಕ್ರಿಕೆಟ್‌ ಆಟದ ಬಗ್ಗೆ, ತಂಡಗಳ ಬಗ್ಗೆ, ಆಟಗಾರರ ಬಗ್ಗೆ, ಪಂದ್ಯಗಳ ಅಪಾರ ಜ್ಞಾನ ಹೊಂದಿರುವ ಅಭಿಮಾನಿಗಳು ದೊಡ್ಡ ಸಂಖ್ಯೆಯಲ್ಲಿದ್ದಾರೆ. ಮುಖ್ಯವಾಗಿ ಕ್ರಿಕೆಟ್‌ ರಂಗದಲ್ಲಾದ ಹೆಚ್ಚಿನ ದಾಖಲೆಗಳ ಬಗ್ಗೆ ಅಭಿಮಾನಿಗಳಿಗೆ ಅರಿವಿರುತ್ತದೆ.

ಸುಲಭಕ್ಕೆ ನಂಬಲಾಗದ ಕ್ರಿಕೆಟ್‌ ಇತಿಹಾಸದ 6 ಅದ್ಭುತ ದಾಖಲೆಗಳು!ಸುಲಭಕ್ಕೆ ನಂಬಲಾಗದ ಕ್ರಿಕೆಟ್‌ ಇತಿಹಾಸದ 6 ಅದ್ಭುತ ದಾಖಲೆಗಳು!

ಆದರೆ ಕೇಳಿದರೆ ಅಚ್ಚರಿಯೆನಿಸುವ, ಇದು ಹೌದೋ ಅಲ್ಲವೋ ಅಂತ ನೀವು ಜಾಲತಾಣದಲ್ಲಿ ಹುಡುಕಾಡಿ ಖಾತರಿ ಮಾಡಿಕೊಂಡು ಚಕಿತಗೊಳ್ಳುವಂತ 5 ಅಪರೂಪದ ಕ್ರಿಕೆಟ್ ದಾಖಲೆಗಳು ಇಲ್ಲಿವೆ ನೋಡಿ.

1. ಬೌಲರ್‌ಗಿಂತ ಬ್ಯಾಟ್ಸ್‌ಮನ್‌ಗೆ ಅಧಿಕ ವಿಕೆಟ್

1. ಬೌಲರ್‌ಗಿಂತ ಬ್ಯಾಟ್ಸ್‌ಮನ್‌ಗೆ ಅಧಿಕ ವಿಕೆಟ್

ಆಸ್ಟ್ರೇಲಿಯಾದ ಸ್ಪಿನ್ ಮಾಂತ್ರಿಕ, ಬೌಲಿಂಗ್‌ಗಾಗಿ ಅಪಾರ ದಾಖಲೆಗಳನ್ನು ಹೊಂದಿರುವ ಶೇನ್ ವಾರ್ನ್‌ಗಿಂತ ಶ್ರೀಲಂಕಾ ಬ್ಯಾಟ್ಸ್‌ಮನ್ ಸನತ್ ಜಯಸೂರ್ಯ ಹೆಚ್ಚು ವಿಕೆಟ್‌ ದಾಖಲೆ ಹೊಂದಿದ್ದಾರೆ ಎಂದರೆ ನಂಬುತ್ತೀರಾ? ಏಕದಿನ ಕ್ರಿಕೆಟ್‌ನಲ್ಲಿ ಶೇನ್ ವಾರ್ನ್ 293 ವಿಕೆಟ್‌ ಪಡೆದಿದ್ದರೆ, ಲಂಕಾ ಆರಂಭಿಕ ಬ್ಯಾಟ್ಸ್‌ಮನ್ ಜಯಸೂರ್ಯ 323 ವಿಕೆಟ್‌ ಮುರಿದಿದ್ದಾರೆ.

2. ಸಚಿನ್, ಗಂಗೂಲಿಗಿಂತ ಅಕ್ರಮ್ ರನ್ ಹೆಚ್ಚು

2. ಸಚಿನ್, ಗಂಗೂಲಿಗಿಂತ ಅಕ್ರಮ್ ರನ್ ಹೆಚ್ಚು

8ನೇ ಬ್ಯಾಟಿಂಗ್ ಕ್ರಮಾಂಕದಲ್ಲಿ ಬರುವ ಬ್ಯಾಟ್ಸ್‌ಮನ್ ಒಬ್ಬ ಎಷ್ಟು ರನ್ ಗಳಿಸಬಹುದು ಹೇಳಿ? ಪಾಕಿಸ್ತಾನದ ಎಡಗೈ ವೇಗಿ ವಾಸಿಮ್ ಅಕ್ರಮ್ ಆವತ್ತು ಎಲ್ಲರನ್ನೂ ದಂಗುಬಡಿಸಿದ್ದರು. ಜಿಂಬಾಬ್ವೆ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಅಕ್ರಮ್ ಅಜೇಯ 257 ರನ್ ಬಾರಿಸಿದ್ದರು. ಗಮ್ಮತ್ತೆಂದರೆ ಟೆಸ್ಟ್‌ ಕ್ರಿಕೆಟ್‌ನಲ್ಲಿ ಸಚಿನ್ ಬಾರಿಸಿದ ವೈಯಕ್ತಿಕ ಅತ್ಯಧಿಕ ರನ್ 248, ಗಂಗೂಲಿಯದ್ದು 239, ದಕ್ಷಿಣ ಆಫ್ರಿಕಾ ಬ್ಯಾಟ್ಸ್‌ಮನ್ ಜಾಕ್ ಕ್ಯಾಲೀಸ್ ಅವರದ್ದು 224 ರನ್!.

3. ಕೊನೇ ಟೆಸ್ಟ್‌ನಲ್ಲಿ ದ್ವಿಶತಕದಾಟ

3. ಕೊನೇ ಟೆಸ್ಟ್‌ನಲ್ಲಿ ದ್ವಿಶತಕದಾಟ

ವೃತ್ತಿ ಬದುಕಿನ ಕೊನೇ ಟೆಸ್ಟ್ ಪಂದ್ಯದಲ್ಲಿ ದ್ವಿಶತಕ ದಾಖಲೆ ಹೆಚ್ಚು ಬ್ಯಾಟ್ಸ್‌ಮನ್‌ಗಳ ಹೆಸರಿನಲ್ಲಿಲ್ಲ. ಯಾಕೆಂದರೆ ಬದುಕಿನ ಕೊನೇ ಪಂದ್ಯದಲ್ಲಿ ಒತ್ತಡ, ಮಾನಸಿಕ ತಳಮಳ, ಉತ್ಸಾಹ ಎಲ್ಲವೂ ಜೊತೆ ಜೊತೆಯಲ್ಲಿರುತ್ತದೆ. ಆದರೆ ವೃತ್ತಿ ಬದುಕಿನ ಕೊನೇ ಟೆಸ್ಟ್‌ ಪಂದ್ಯದಲ್ಲಿ ದ್ವಿಶತಕ ಬಾರಿಸಿದ ನಾಲ್ಕೇ ನಾಲ್ಕು ಬ್ಯಾಟ್ಸ್‌ಮನ್‌ಗಳಲ್ಲಿ ಆಸ್ಟ್ರೇಲಿಯಾದ ಜೇಸನ್ ಗಿಲ್ಲೆಸ್ಪಿ ಕೂಡ ಒಬ್ಬರಾಗಿದ್ದಾರೆ. 2006ರಲ್ಲಿ ಬಾಂಗ್ಲಾದೇಶ-ಆಸ್ಟ್ರೇಲಿಯಾ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಗಿಲೆಸ್ಪಿ ಮೊದಲ ಇನ್ನಿಂಗ್ಸ್‌ನಲ್ಲಿ 201 ರನ್ ಬಾರಿಸಿದ್ದರು. ವಿಶೇಷವೆಂದರೆ ಬೌಲರ್‌ ಆಗಿರುವ ಗಿಲೆಸ್ಪಿ ತನ್ನ ವೃತ್ತಿ ಬದುಕಿನ ಮೊದಲ ಮತ್ತು ಕೊನೆಯ ದ್ವಿಶತಕ ಆವತ್ತೇ ಬಾರಿಸಿದ್ದರು. ಪಂದ್ಯದಲ್ಲಿ ಆಸ್ಟ್ರೇಲಿಯಾ ಇನ್ನಿಂಗ್ಸ್‌ ಸಹಿತ 80 ರನ್ ಜಯ ಗಳಿಸಿತ್ತು.

4. ಅತೀವೇಗದ ಏಕದಿನ ಅರ್ಧ ಶತಕ ದಾಖಲೆ

4. ಅತೀವೇಗದ ಏಕದಿನ ಅರ್ಧ ಶತಕ ದಾಖಲೆ

ಭಾರತದವರನ್ನೇ ತೆಗೆದುಕೊಂಡರೆ ಸಿಕ್ಸ್‌ ಮೇಲೆ ಸಿಕ್ಸ್‌ ಬಾರಿಸುವ ಹಿಟ್‌ಮ್ಯಾನ್‌ ರೋಹಿತ್ ಶರ್ಮಾ, ಸಿಕ್ಸರ್ ಕಿಂಗ್ ಯುವರಾಜ್ ಸಿಂಗ್, ರನ್ ಮೆಷೀನ್ ವಿರಾಟ್ ಕೊಹ್ಲಿ, ಹೆಲಿಕಾಪ್ಟರ್ ಶಾಟ್‌ನ ಧೋನಿ ಬ್ಯಾಟಿಂಗ್‌ ಬಗ್ಗೆ ಹೆಚ್ಚಿನವರಿಗೆ ಗೊತ್ತು. ಆದರೆ ಏಕದಿನ ಕ್ರಿಕೆಟ್‌ನಲ್ಲಿ ಅತೀ ವೇಗದ ಅರ್ಧ ಶತಕ ಬಾರಿಸಿದ ಭಾರತೀಯನೆಂಬ ದಾಖಲೆ ಅಜಿತ್ ಅಗರ್ಕರ್ ಹೆಸರಿನಲ್ಲಿದೆ ಗೊತ್ತಾ? 2000ರಲ್ಲಿ ಜಿಂಬಾಬ್ವೆ ವಿರುದ್ಧ ಅಗರ್ಕರ್ ಕೇವಲ 21 ಎಸೆತಗಳಲ್ಲಿ 50 ರನ್ ಪೂರೈಸಿ ಈ ದಾಖಲೆ ನಿರ್ಮಿಸಿದ್ದರು.

5. ಅರ್ಜೆಂಟಿಗ ಶಾಹಿದ್ ಅಫ್ರಿದಿ

5. ಅರ್ಜೆಂಟಿಗ ಶಾಹಿದ್ ಅಫ್ರಿದಿ

ಪಾಕಿಸ್ತಾನದ ಆಲ್ ರೌಂಡರ್ ಶಾಹಿದ್ ಅಫ್ರಿದಿ ಬಿರುಸಿನ ಬ್ಯಾಟಿಂಗ್‌ಗಾಗಿಯೇ ಹೆಸರಾದವರು. ಅಫ್ರಿದಿಗೆ 'ಬೂಮ್ ಬೂಮ್ ಅಫ್ರಿದಿ' ಅನ್ನೋ ಹೆಸರಿದೆ. 27 ಟೆಸ್ಟ್‌ಗಳಲ್ಲಿ 1716 ರನ್, 398 ಏಕದಿನ ಪಂದ್ಯಗಳಲ್ಲಿ 8064 ರನ್, 99 ಟಿ20 ಪಂದ್ಯಗಳಲ್ಲಿ 1416 ರನ್ ದಾಖಲೆ ಅಫ್ರಿದಿ ಹೊಂದಿದ್ದಾರೆ. ಅಚ್ಚರಿಯೆಂದರೆ ಅಫ್ರಿದಿ ತನ್ನ ವೃತ್ತಿ ಬದುಕಿನಲ್ಲಿ ಯಾವತ್ತೂ ಇನ್ನಿಂಗ್ಸ್‌ ಒಂದರಲ್ಲಿ 100ಕ್ಕೂ ಹೆಚ್ಚು ಎಸೆತಗಳನ್ನು ಎದುರಿಸಿಲ್ಲ. ಅಷ್ಟು ಅರ್ಜೆಂಟರ್ಜೆಂಟಾಗಿ ಇನ್ನಿಂಗ್ಸ್‌ ಮುಗಿಸಿ ಹೋಗುತ್ತಿದ್ದರು ಅಫ್ರಿದಿ.

Story first published: Monday, June 1, 2020, 16:59 [IST]
Other articles published on Jun 1, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X