ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟೆಸ್ಟ್ ಕ್ರಿಕೆಟ್‌ನ ಪದಾರ್ಪಣೆ ಮತ್ತು ವಿದಾಯ ಪಂದ್ಯ ಎರಡರಲ್ಲೂ ಶತಕ ಸಿಡಿಸಿದ ವಿಶೇಷ ಆಟಗಾರರು

5 Cricketers Who Hit Centuries in Their Debut and Final Test

ಕ್ರಿಕೆಟ್‌ನಲ್ಲಿ ಶತಕಗಳ ಸಾಧನೆಗೆ ವಿಶೇಷ ಗೌರವ ಇದೆ. ಆದರೆ ವೃತ್ತಿ ಜೀವನದ ಮೊದಲ ಪಂದ್ಯದಲ್ಲೇ ಶತಕ ಗಳಿಸಲು ಎಲ್ಲರಿಂದಲೂ ಸಾಧ್ಯವಿಲ್ಲ. ಕೆಲವೇ ಕೆಲ ಆಟಗಾರರು ಈ ಸಾಧನೆಯನ್ನು ಮಾಡಿರುತ್ತಾರೆ. ಆದರೆ ಇನ್ನೂ ಕೆಲ ಆಟಗಾರರು ಇದಕ್ಕಿಂತಲೂ ವಿಶೇಷ ಸಾಧನೆಯನ್ನು ಮಾಡಿದ್ದಾರೆ.

ತಮ್ಮ ಮೊದಲ ಪಂದ್ಯದಲ್ಲಿ ಶತಕ ಸಿಡಿಸುವುದರ ಜೊತೆಗೆ ತಮ್ಮ ಅಂತಿಮ ಪಂದ್ಯದಲ್ಲೂ ಶತಕವನ್ನು ಸಿಡಿಸಿದ್ದಾರೆ. ಈ ಮೂಲಕ ಕ್ರಿಕೆಟ್‌ನಲ್ಲಿ ವಿಶೇಷ ಆಟಗಾರರು ಎನಿಸಿದ್ದಾರೆ. ಇಂತಾ ಕೆಲವೇ ಕೆಲ ಆಟಗಾರರು ಮಾತ್ರ ಕ್ರಿಕೆಟ್ ಇತಿಹಾಸದಲ್ಲಿ ಕಾಣಸಿಗುತ್ತಾರೆ. ಇದರಲ್ಲಿ ಒಬ್ಬ ಭಾರತೀಯ ಆಟಗಾರ ಕೂಡ ಇದ್ದಾರೆ ಎಂಬುದು ಮತ್ತೊಂದು ವಿಶೇಷ.

ನೀವು ಇಂದಿಗೂ ನಿಜವೆಂದು ನಂಬಿರುವ ಕ್ರಿಕೆಟ್ ಲೋಕದ 3 ಅತಿ ದೊಡ್ಡ ಸುಳ್ಳುಗಳುನೀವು ಇಂದಿಗೂ ನಿಜವೆಂದು ನಂಬಿರುವ ಕ್ರಿಕೆಟ್ ಲೋಕದ 3 ಅತಿ ದೊಡ್ಡ ಸುಳ್ಳುಗಳು

ಹಾಗಾದರೆ ಕ್ರಿಕೆಟ್ ಇತಿಹಾಸದಲ್ಲಿ ಅತ್ಯಂತ ಅಪರೂಪದ ಈ ದಾಖಲೆಯಗಳನ್ನು ಮಾಡಿದ ಆಟಗಾರರು ಯಾರು ಎಂಬುದನ್ನು ಮುಂದೆ ಓದಿ..

ಆಲೆಸ್ಟರ್ ಕುಕ್, ಇಂಗ್ಲೆಂಡ್

ಆಲೆಸ್ಟರ್ ಕುಕ್, ಇಂಗ್ಲೆಂಡ್

ಇಂಗ್ಲೆಂಡ್ ಕ್ರಿಕೆಟ್ ಕಂಡ ಪ್ರತಿಭಾನ್ವಿತ ಕ್ರಿಕೆಟಿಗ ಆಲೆಸ್ಟರ್ ಕುಕ್. ಇವರು ತಮ್ಮ ಪ್ರಪ್ರಥಮ ಅಂತಾರಾಷ್ಟ್ರೀಯ ಟೆಸ್ಟ್ ಹಾಗೂ ಕೊನೆಯ ಟೆಸ್ಟ್ ಪಂದ್ಯವನ್ನು ಭಾರತದ ವಿರುದ್ದವೇ ಆಡಿದ್ದರು. 2006ರಲ್ಲಿ ತಮ್ಮ ಪದಾರ್ಪಣಾ ಪಂದ್ಯದಲ್ಲಿ ಮೊದಲ ಪಂದ್ಯದಲ್ಲಿ ಶತಕವನ್ನು ಸಿಡಿಸುವ ಮೂಲಕ ಮಿಂಚಿದ್ದರು ಅಲೆಸ್ಟರ್ ಕುಕ್. 2018ರಲ್ಲಿ ತಮ್ಮ ಅಂತಿಮ ಟೆಸ್ಟ್ ಪಂದ್ಯದಲ್ಲೂ ಕುಕ್ ಶತಕವನ್ನು ಗಳಿಸಿದರು. ಲಂಡನ್‌ನ ಓವಲ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಕುಕ್ 147 ರನ್ ಗಳಿಸಿ ವಿದಾಯವನ್ನು ಹೇಳಿದರು.

ಮೊಹಮದ್ ಅಜರುದ್ದೀನ್, ಭಾರತ

ಮೊಹಮದ್ ಅಜರುದ್ದೀನ್, ಭಾರತ

ಭಾರತದ ಮಾಝಿ ನಾಯಕ ಮೊಹಮದ್ ಅಜರುದ್ದೀನ್ ಕೂಡ ಈ ಸಾಧನೆಯನ್ನು ಮಾಡಿದ ಆಟಗಾರ ಎನಿಸಿದ್ದಾರೆ. 1984ರಲ್ಲಿ ಕೊಲ್ಕತ್ತಾದ ಈಡನ್ ಗಾರ್ಡನ್ ಮೈದಾನದಲ್ಲಿ ತಮ್ಮ ಮೊದಲ ಟೆಸ್ಟ್ ಪಂದ್ಯವನ್ನು ಅಜರುದ್ದೀನ್ ಆಡಿದರು.ಇಂಗ್ಲೆಂಡ್ ವಿರುದ್ಧದ ಈ ಪಂದ್ಯದಲ್ಲಿ ಅಜರುದ್ದೀನ್ ಶತಕವನ್ನು ಸಿಡಿಸಿ ಮಿಂಚಿದ್ದರು. 2000ನೇ ಇಸವಿಯಲ್ಲಿ ಅಜರುದ್ದೀನ್ ಟೆಸ್ಟ್ ಕ್ರಿಕೆಟ್ ಕೆರಿಯರ್‌ನ ಅಂತಿಮ ಪಂದ್ಯವನ್ನು ಬೆಂಗಳೂರಿನಲ್ಲಿ ಆಡಿದ್ದರು. ದಕ್ಷಿಣ ಆಫ್ರಿಕಾ ವಿರುದ್ಧ ಬೆಂಗಳೂರಿನಲ್ಲಿ ನಡೆದ ಪಂದ್ಯದಲ್ಲಿ ಅಜರುದ್ದೀನ್ ಶತಕದ ಸಾಧನೆಯನ್ನು ಮಾಡಿದ್ದರು. ಆದರೆ ಇದು ಅವರ ಅಂತಿಮ ಟೆಸ್ಟ್ ಪಂದ್ಯವಾಗುತ್ತದೆ ಎಂದು ಯಾರೂ ಊಹಿಸಿರಲಿಲ್ಲ. ಬಳಿಕ ಮ್ಯಾಚ್ ಫಿಕ್ಸಿಂಗ್ ಪ್ರಕರಣದಲ್ಲಿ ಸಿಲುಕಿದ ಅವರು ಮುಂದೆ ಯಾವತ್ತೂ ಭಾರತ ತಂಡವನ್ನು ಪ್ರತಿನಿಧಿಸಲಿಲ್ಲ.

ರೆಗ್ಗೀ ಡಫ್, ಆಸ್ಟ್ರೇಲಿಯಾ

ರೆಗ್ಗೀ ಡಫ್, ಆಸ್ಟ್ರೇಲಿಯಾ

ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ತಂಡಗಳು ಮಾತ್ರವೇ ಪ್ರಮುಖವಾಗಿ ಕ್ರಿಕೆಡ್ ಆಡುತ್ತಿದ್ದ ಕಾಲದಲ್ಲಿ ರೆಗ್ಗೀ ಡಫ್ ಈ ಸಾಧನೆಯನ್ನು ಮಾಡಿದ್ದಾರೆ. 1902 ರಿಂದ 1905 ಮಧ್ಯೆ 22 ಟೆಸ್ಟ್ ಪಂದ್ಯಗಳನ್ನು ಇವರು ಆಡಿದ್ದಾರೆ. ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಶತಕ ಸಿಡಿಸಿದ್ದ ರೆಗ್ಗೀ ಡಫ್ ತಮ್ಮ ಕೊನಿಯ ಪಂದ್ಯದಲ್ಲೂ ಶತಕವನ್ನು ಸಿಡಿಸಿದ್ದರು.

ಬಿಲ್ ಫೋನ್ಸ್‌ಫೋರ್ಡ್, ಆಸ್ಟ್ರೇಲಿಯಾ

ಬಿಲ್ ಫೋನ್ಸ್‌ಫೋರ್ಡ್, ಆಸ್ಟ್ರೇಲಿಯಾ

ಆಸ್ಟ್ರೇಲಿಯಾ ಕ್ರಿಕೆಟ್ ತಂಡವನ್ನು ಬಿಲ್ ಫೋನ್ಸ್‌ಪೋರ್ಡ್ 1924ರಲ್ಲಿ ಪ್ರತಿನಿಧಿಸಿದ್ದರು. ಇವರು ಕೂಡ ತಮ್ಮ ಮೊದಲ ಪಂದ್ಯವನ್ನು ಇಂಗ್ಲೆಂಡ್ ವಿರುದ್ಧವೇ ಆಡಿದ್ದರು. ಮೊದಲ ಪಂದ್ಯದಲ್ಲಿ ಶತಕವನ್ನು ಸಿಡಿದ್ದರು. ಆದರೆ ಈ ಪಟ್ಟಿಯಲ್ಲಿರುವ ಉಳಿದೆಲ್ಲಾ ಆಟಗಾರರ ಸಾಧನೆಗಂತ ಭಿನ್ನವಾಗಿ ಫೋನ್ಸ್‌ಫೋರ್ಡ್ ಕೊನೆಯ ಪಂದ್ಯದಲ್ಲಿ ದ್ವಿಶತಕದ ಸಾಧನೆಯನ್ನಯ ಮಾಡಿದ್ದಾರೆ. 1934ರಲ್ಲಿ ಕೊನೆಯ ಟೆಸ್ಟ್ ಒಂದ್ಯವನ್ನು ಕೂಡ ಇವರು ಇಂಗ್ಲೆಂಡ್ ವಿರುದ್ಧವೇ ಆಡಿದ್ದರು.

ಗ್ರೇಗ್ ಚಾಪೆಲ್, ಆಸ್ಟ್ರೇಲಿಯಾ

ಗ್ರೇಗ್ ಚಾಪೆಲ್, ಆಸ್ಟ್ರೇಲಿಯಾ

ಆಸ್ಟ್ರೇಲಿಯಾದ ಮಾಜಿ ನಾಯಕ ಗ್ರೇಗ್ ಚಾಪೆಲ್ ಕೂಡ ಈ ಅಪರೂಪದ ಸಾಧನೆಯನ್ನು ಮಾಡಿದ ಆಟಗಾರ ಎನಿಸಿದ್ದಾರೆ. ಆಸ್ಟ್ರೇಲಿಯಾ ಕ್ರಿಕೆಟ್‌ನ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳಲ್ಲಿ ಗ್ರೇಗ್ ಚಾಪೆಲ್ ಕೂಡ ಒಬ್ಬರು. ಬಳಿಕ ಕೋಚ್ ಆಗಿ ಕರ್ತವ್ಯ ನಿರ್ವಹಿಸಿದ್ದ ಇವರು ಇಲ್ಲಿ ಮಾತ್ರ ಅತ್ಯಂತ ವಿವಾದಾತ್ಮಕ ವ್ಯಕ್ತಿ ಎನಿಸಿದ್ದರು. ಇಂಗ್ಲೆಂಡ್ ವಿರುದ್ಧ ಮೊದಲ ಟೆಸ್ಟ್ ಪಂದ್ಯವನ್ನು ಮಾಡಿದ್ದ ಚಾಪೆಲ್ ಶತಕವನ್ನು ಸಿಡಿಸಿದ್ದರು. ಕೊನೆಯ ಪಂದ್ಯವನ್ನು ಪಾಕಿಸ್ತಾದ ವಿರುದ್ಧ ಆಡಿದ್ದ ಚಾಪೆಲ್ ಅಲ್ಲೂ ಶತಕವನ್ನು ಸಿಡಿಸಿ ವಿದಾಯ ಹೇಳಿದ್ದರು.

Story first published: Thursday, May 28, 2020, 9:19 [IST]
Other articles published on May 28, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X