ಬೌಲರ್ ಆಗಿ ವೃತ್ತಿ ಆರಂಭಿಸಿ ಬ್ಯಾಟ್ಸ್‌ಮನ್‌ ಆಗಿ ಮಿಂಚಿದ ಫೇಮಸ್ ಕ್ರಿಕೆಟರ್ಸ್

5 Cricketers Who Started career As Bowlers But shined As Batsmen

ಬೆಂಗಳೂರು: ಈ ಬದುಕೊಂಥರಾ ವಿಚಿತ್ರ ಸಂಭಾವ್ಯತೆಗಳ ಸಂಚಯ. ನಮ್ಮ ಅವಿರತ ಶ್ರಮ, ಗೆಲ್ಲುವ ಹಠ ನಮ್ಮನ್ನು ಚಂದದದ ಬದುಕಿನತ್ತ ಕೊಂಡೊಯ್ಯುತ್ತದೆ ಅನ್ನೋದು ನಿಜ. ಹಾಗಂತ ಸುಳಿವೇ ಇಲ್ಲದೆ ನಮ್ಮ ಬದುಕು ಬದಲಾಗಬಲ್ಲದು, ಬದುಕೇ ನಮ್ಮನ್ನು ಇನ್ನೊಂದು ಮಗ್ಗುಲಿಗೆ ಕೊಂಡೊಯ್ದು ನಿಲ್ಲಿಸಲೂಬಹುದು. ಕ್ರಿಕೆಟ್‌ನಲ್ಲಿ ಇಂಥದ್ದೇ ಕುತೂಹಲಕಾರಿ ಕತೆಗಳಿವೆ. ಏನೋ ಆಗುವಾಸೆಯಲ್ಲಿ ಕ್ರಿಕೆಟ್‌ ವೃತ್ತಿ ಬದುಕು ಆರಂಭಿಸಿದ ಒಂದಿಷ್ಟು ಕ್ರಿಕೆಟಿಗರು ವೃತ್ತಿ ಬದುಕಿನಲ್ಲಿ ಯಶಸ್ಸು ಕಂಡಿದ್ದು ಮಾತ್ರ ಇನ್ನೊಂದರಲ್ಲಿ.

ಕ್ರಿಕೆಟ್‌ ಪ್ರಿಯರನ್ನೇ ಅಚ್ಚರಿಗೊಳಿಸುವ ಬಲು ಅಪರೂಪದ 5 ದಾಖಲೆಗಳಿವು!

ಯುವ ಕ್ರಿಕೆಟಿಗರಲ್ಲಿ ತಮ್ಮ ಸ್ವಂತ ಆಟಕ್ಕಿಂತ ದಿಗ್ಗಜರನ್ನು ಮಾದರಿಯಾಗಿ ನೋಡಿ ಅನುಸರಿಸುವ ಆಟಗಾರರೇ ಹೆಚ್ಚು. ಆದರೆ ಬೌಲರ್ ಆಗಿ ಕ್ರಿಕೆಟ್‌ ಮೈದಾನಕ್ಕಿಳಿದು ಬ್ಯಾಟ್ಸ್‌ಮನ್‌ ಆಗಿ ಮಿನುಗಿದ ಅನೇಕ ಕ್ರಿಕೆಟ್‌ ದಂತಕತೆಗಳಿದ್ದಾರೆ ಅನ್ನೋದು ಹೆಚ್ಚಿನ ಯುವ ಆಟಗಾರರಿಗೆ ಗೊತ್ತಿರಲಿಕ್ಕಿಲ್ಲ.

ಸುಲಭಕ್ಕೆ ನಂಬಲಾಗದ ಕ್ರಿಕೆಟ್‌ ಇತಿಹಾಸದ 6 ಅದ್ಭುತ ದಾಖಲೆಗಳು!

ಬೌಲರ್‌ ಆಗಿ ವೃತ್ತಿ ಬದುಕು ಆರಂಭಿಸಿ ಅತ್ಯುತ್ತಮ ಬ್ಯಾಟ್ಸ್‌ಮನ್ ಆಗಿ ಗಮನ ಸೆಳೆದ ಟಾಪ್ 5 ಫೇಮಸ್ ಕ್ರಿಕೆಟಿಗರ ಪಟ್ಟಿ ಇಲ್ಲಿದೆ.

5. ಕ್ಯಾಮೆರಾನ್ ವೈಟ್

5. ಕ್ಯಾಮೆರಾನ್ ವೈಟ್

ಬ್ರಾಡ್‌ ಹಾಗ್ ಟೆಸ್ಟ್‌ ಕ್ರಿಕೆಟ್‌ನಿಂದ ನಿವೃತ್ತರಾದಾಗ ಕ್ಯಾಮೆರಾನ್ ವೈಟ್ ಉದಯೋನ್ಮುಖ ಲೆಗ್ ಸ್ಪಿನ್ನರ್ ಆಗಿ ಆಸ್ಟ್ರೇಲಿಯಾ ಕ್ರಿಕೆಟ್‌ ತಂಡಕ್ಕೆ ಎಂಟ್ರಿ ಕೊಟ್ಟರು. ಭಾರತಕ್ಕೆ ಆಸ್ಟ್ರೇಲಿಯಾ ಪ್ರವಾಸ ಬಂದಿದ್ದಾಗ ವೈಟ್, ಆಸ್ಟ್ರೇಲಿಯಾದ ಪ್ರಮುಖ ಬೌಲರ್‌ಗಳ ಬಣದಲ್ಲಿದ್ದರು. ಸಾಲದ್ದಕ್ಕೆ ಮೊದಲ ಬಾರಿಗೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ವಿಕೆಟ್‌ ಕೂಡ ಲಭಿಸಿದ್ದರಿಂದ ವೈಟ್‌ ವೃತ್ತಿ ಬದುಕಿಗೆ ಉತ್ತಮ ಆರಂಭ ಸಿಕ್ಕಂತಾಗಿತ್ತು. ಆದರೆ ಟೂರ್‌ನಲ್ಲಿ ಕ್ಯಮೆರಾನ್ ವೈಫಲ್ಯ ಅನುಭವಿಸಿದರು. ಅನಂತರ ಅವರಿಗೆ ಹೆಚ್ಚಿನ ಅವಕಾಶಗಳು ಲಭಿಸಲಿಲ್ಲ. ಹೀಗಾಗಿ ವೈಟ್‌ ಬ್ಯಾಟಿಂಗ್‌ನತ್ತ ಮುಖಮಾಡಿದರು. ಅಭ್ಯಾಸ ನಡೆಸಿದರು. ಈಗ ಲಿಮಿಟೆಡ್ ಓವರ್‌ನಲ್ಲಿ ವೈಟ್ ಆಸ್ಟ್ರೇಲಿಯಾದ ಬ್ಯಾಟಿಂಗ್‌ ಆಲ್ ರೌಂಡರ್‌ಗಳಲ್ಲಿ ಗುರುತಿಸಿಕೊಂಡಿದ್ದಾರೆ. 91 ಏಕದಿನ ಪಂದ್ಯಗಳಲ್ಲಿ 2072 ರನ್, 47 ಟಿ20ಐ ಪಂದ್ಯಗಳಲ್ಲಿ 984 ರನ್ ಗಳಿಸಿದ್ದಾರೆ.

4. ರವಿ ಶಾಸ್ತ್ರಿ

4. ರವಿ ಶಾಸ್ತ್ರಿ

ಈಗ ಟೀಮ್ ಇಂಡಿಯಾದ ಮುಖ್ಯ ಕೋಚ್ ಆಗಿರುವ ರವಿ ಶಾಸ್ತ್ರಿ ಅವರನ್ನು ಜನ ಬೆಸ್ಟ್ ಪ್ಲೇಯರ್ ಆಗಿ, ಕಾಮೆಂಟೇಟರ್ ಆಗಿ ನೆನಪಿಸಿಕೊಳ್ಳುತ್ತಾರೆ. ಮುಂಬೈ ತಂಡಕ್ಕೆ ಶಾಸ್ತ್ರಿ ಪಾದಾರ್ಪಣೆ ಮಾಡುವಾಗ ಅವರಿಗಿನ್ನು 17ರ ಹರೆಯ. ಹೀಗಾಗಿಯೇ ರವಿ ಮುಂಬೈಯಲ್ಲಿ ಅತೀ ಕಿರಿಯ ಆಟಗಾರನಾಗಿ ಗುರುತಿಸಿಕೊಂಡಿದ್ದರು. ಶಾಸ್ತ್ರಿ ಆಟ ಆರಂಭಿಸಿದ್ದು ಲೆಫ್ಟ್ ಆರ್ಮ್ ಸ್ಪಿನ್ನರ್ ಆಗಿ. ಆಗ ರವಿ 10ನೇ ಬ್ಯಾಟಿಂಗ್‌ ಆರ್ಡರ್‌ನಲ್ಲಿ ಬರುತ್ತಿದ್ದರು. ಬಳಿಕ ರವಿ ಬ್ಯಾಟಿಂಗ್ ಅಭ್ಯಾಸ ನಡೆಸಿದರು; 18 ತಿಂಗಳ ನಂತರ ಶಾಸ್ತ್ರಿ ಟೀಮ್ ಇಂಡಿಯಾದ ಆರಂಭಿಕ ಬ್ಯಾಟ್ಸ್‌ಮನ್ ಎನಿಸಿದರು. ಶಾಸ್ತ್ರಿ 80 ಟೆಸ್ಟ್ ಪಂದ್ಯಗಳಲ್ಲಿ 3830 ರನ್, 11 ಶತಕ ಬಾರಿಸಿದ್ದಾರೆ. 150 ಏಕದಿನ ಪಂದ್ಯಗಳಲ್ಲಿ 3108 ರನ್, 4 ಶತಕಗಳನ್ನು ಬಾರಿಸಿದ್ದಾರೆ.

3. ಶೋಯೆಬ್ ಮಲಿಕ್

3. ಶೋಯೆಬ್ ಮಲಿಕ್

ಪಾಕಿಸ್ತಾನ ಕ್ರಿಕೆಟ್‌ ತಂಡದ ಪರ 1ರಿಂದ 10ನೇ ಬ್ಯಾಟಿಂಗ್ ಕ್ರಮಾಂಕದವರೆಗೂ ಆಡಿದ ಅನುಭವವಿರುವವರೆಂದರೆ ಅದು ಶೋಯೆಬ್ ಮಲಿಕ್. 17 ವರ್ಷದವರಿದ್ದಾಗ ಮಲಿಕ್ ಟೆಸ್ಟ್ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು. ಆಗ ಚತುರ ಆಫ್‌ ಸ್ಪಿನ್ನರ್ ಆಗಿದ್ದ ಮಲಿಕ್ ತಮ್ಮ ದೂಸ್ರಾ ಎಸೆದಿಂದ ಬ್ಯಾಟ್ಸ್‌ಮನ್‌ಗಳನ್ನು ವಂಚಿಸುತ್ತಿದ್ದರು. ಅನಂತರ ಬ್ಯಾಟಿಂಗ್ ಕಡೆಗೆ ಹೆಚ್ಚು ಗಮನ ಹರಿಸಿದ ಶೋಯೆಬ್, ಬ್ಯಾಟಿಂಗ್‌ನಲ್ಲಿ ಮಿಂಚತೊಡಗಿದರು. 35 ಟೆಸ್ಟ್‌ ಪಂದ್ಯಗಳಲ್ಲಿ 1898 ರನ್, 3 ಶತಕ, 287 ಏಕದಿನ ಪಂದ್ಯಗಳಲ್ಲಿ 7534 ರನ್, 9 ಶತಕ, 113 ಟಿ20ಐ ಪಂದ್ಯಗಳಲ್ಲಿ ಮಲಿಕ್ 2321 ರನ್ ದಾಖಲೆ ಹೊಂದಿದ್ದಾರೆ.

2. ಸನತ್ ಜಯಸೂರ್ಯ

2. ಸನತ್ ಜಯಸೂರ್ಯ

ಕ್ರಿಕೆಟ್‌ ಇತಿಹಾಸದಲ್ಲಿ ಅಪಾಯಕಾರಿ ಬ್ಯಾಟ್ಸ್‌ಮನ್‌ಗಳಲ್ಲಿ ಗುರುತಿಸಿಕೊಂಡವರು ಶ್ರೀಲಂಕಾದ ಸನತ್ ಜಯಸೂರ್ಯ. ಆದರೆ ಅಚ್ಚರಿಯೆಂದರೆ ಜಯಸೂರ್ಯ ಬ್ಯಾಟ್ಸ್‌ಮನ್‌ ಆಗಿ ತಂಡಕ್ಕೆ ಎಂಟ್ರಿ ಕೊಟ್ಟಿರಲಿಲ್ಲ. ಬೌಲರ್‌ ಆಗಿ ಜಯಸೂರ್ಯ ಅವರು ಶ್ರೀಲಂಕಾ ತಂಡದ ಬಲವಾಗಿದ್ದರು. 1989ರಿಂದ 1995ರ ವರೆಗೆ ಸನತ್ ಏಕದಿನದಲ್ಲಿ ವರ್ಷಕ್ಕೆ 30ರ ಸರಾಸರಿ ಕೂಡ ನಿಭಾಯಿಸಲು ವಿಫಲರಾದರು. ಅನಂತರ 1996ರ ವಿಶ್ವಕಪ್ ಜಯಸೂರ್ಯ ವೃತ್ತಿ ಬದುಕಿಗೆ ಟರ್ನಿಂಗ್ ಪಾಯಿಂಟ್ ಎನಿಸಿತು. ಜಯಸೂರ್ಯ ತನ್ನ ವೃತ್ತಿ ಬದುಕಿನಲ್ಲಿ 42 ಶತಕಗಳನ್ನು ಸೇರಿಸಿ, 21000 ರನ್ ಗಳಿಸಿದ್ದಾರೆ.

1. ಸ್ಟೀವ್ ಸ್ಮಿತ್

1. ಸ್ಟೀವ್ ಸ್ಮಿತ್

ಆಸ್ಟ್ರೇಲಿಯಾದ ಬೆಸ್ಟ್ ಬ್ಯಾಟ್ಸ್‌ಮನ್ ಸ್ಟೀವ್ ಸ್ಮಿತ್ ವೃತ್ತಿ ಬದುಕು ಆರಂಭಿಸಿದ್ದು ಸ್ಪಿನ್ ಬೌಲರ್ ಆಗಿ. ಆಗ ಆಸೀಸ್ ಗ್ರೇಟ್ ಸ್ಪಿನ್ನರ್ ಶೇನ್ ವಾರ್ನ್‌ಗೆ ಸ್ಟೀವ್ ಸ್ಪಿನ್ ಕೊಂಚ ಹೋಲಿಕೆಯಾಗುತ್ತಿತ್ತು. ಆದರೆ ಈಗ ಸ್ಮಿತ್ ಅವರನ್ನು ಡಾನ್ ಬ್ರಾಡ್ಮನ್‌ಗೆ ಹೋಲಿಸಲಾಗುತ್ತದೆ. ಸ್ಮಿತ್‌ಗೆ ಆಸೀಸ್‌ನ ಕೆಲ ಕ್ರಿಕೆಟ್ ಪಂಡಿತರು ಬ್ಯಾಟಿಂಗ್‌ನಲ್ಲಿ ಅದೃಷ್ಟ ಪರೀಕ್ಷಿಸಲು ಸಲಹೆ ನೀಡಿದರಂತೆ. ಸ್ಟೀವ್ ಅದರಂತೆ ಶ್ರಮವಹಿಸಿ ಬ್ಯಾಟಿಂಗ್ ತಂತ್ರಗಾರಿಕೆಗಳನ್ನು ಸುಧಾರಿಸಿಕೊಂಡರು. ಈಗ ಸ್ಮಿತ್ 73 ಟೆಸ್ಟ್‌ ಪಂದ್ಯಗಳಲ್ಲಿ 62.84ರ ಸರಾಸರಿಯಲ್ಲಿ 7227 ರನ್ ಗಳಿಸಿದ್ದಾರೆ. ಅಲ್ಲದೆ ಟೆಸ್ಟ್ ಕ್ರಿಕೆಟ್‌ನಲ್ಲಿ ನಂ.1 ಸ್ಥಾನದಲ್ಲಿದ್ದ ವಿರಾಟ್ ಕೊಹ್ಲಿಯನ್ನು ಕೆಳಗಿಳಿಸಿರುವ ಸ್ಮಿತ್, ತಾನು ಮತ್ತೆ ಅಗ್ರ ಸ್ಥಾನ ಆವರಿಸಿಕೊಂಡಿದ್ದಾರೆ. 125 ಏಕದಿನ ಪಂದ್ಯಗಳಲ್ಲಿ ಸ್ಮಿತ್ 4162 ರನ್ ಗಳಿಸಿದ್ದಾರೆ.

For Quick Alerts
ALLOW NOTIFICATIONS
For Daily Alerts

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Wednesday, June 3, 2020, 13:06 [IST]
Other articles published on Jun 3, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Mykhel sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Mykhel website. However, you can change your cookie settings at any time. Learn more