ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಈ 5 ಸ್ಟಾರ್ ಆಟಗಾರರು ಸುರೇಶ್ ರೈನಾ ನಾಯಕತ್ವದಡಿಯಲ್ಲಿ ಪದಾರ್ಪಣೆ ಮಾಡಿದ್ದು ಬಹುತೇಕರಿಗೆ ತಿಳಿದಿಲ್ಲ!

5 cricketers who were made international debut under Suresh Raina captaincy are star players now

ಟೀಮ್ ಇಂಡಿಯಾ ಸದ್ಯ ವಿಶ್ವ ಕ್ರಿಕೆಟ್‌ನಲ್ಲಿ ಪವರ್ ಹೌಸ್ ಎಂದೇ ಹೆಸರನ್ನು ಮಾಡಿದೆ. 1983ರಲ್ಲಿ ಕಪಿಲ್ ದೇವ್ ನಾಯಕತ್ವದಡಿಯಲ್ಲಿ ಚೊಚ್ಚಲ ವಿಶ್ವಕಪ್ ಎತ್ತಿ ಹಿಡಿದಾಗಿನಿಂದ ಭಾರತ ಹಲವಾರು ಬಲಿಷ್ಠ ನಾಯಕರನ್ನು ವಿಶ್ವ ಕ್ರಿಕೆಟ್‌ಗೆ ಪರಿಚಯಿಸಿದೆ. ಕಪಿಲ್ ದೇವ್, ಮೊಹಮ್ಮದ್ ಅಜರುದ್ದೀನ್, ಸುರೇಶ್ ರೈನಾ, ಎಂಎಸ್ ಧೋನಿ, ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ರೀತಿಯ ಯಶಸ್ವಿ ನಾಯಕರು ಟೀಮ್ ಇಂಡಿಯಾವನ್ನು ಮುನ್ನಡೆಸಿದ್ದಾರೆ.

100% ಸಕ್ಸಸ್: ನಾಯಕನಾಗಿ ಎಲ್ಲಾ ಸರಣಿಗಳನ್ನು ಗೆದ್ದ ರೋಹಿತ್ ಶರ್ಮಾ; ಇಲ್ಲಿದೆ ಆ ಎಲ್ಲಾ ಸರಣಿಗಳ ಪಟ್ಟಿ100% ಸಕ್ಸಸ್: ನಾಯಕನಾಗಿ ಎಲ್ಲಾ ಸರಣಿಗಳನ್ನು ಗೆದ್ದ ರೋಹಿತ್ ಶರ್ಮಾ; ಇಲ್ಲಿದೆ ಆ ಎಲ್ಲಾ ಸರಣಿಗಳ ಪಟ್ಟಿ

ಈ ಪೂರ್ಣಾವಧಿ ನಾಯಕರ ಅಲಭ್ಯತೆ ನಡುವೆ ತಂಡವನ್ನು ಕೆಲ ಆಟಗಾರರೂ ಸಹ ಮುನ್ನಡೆಸಿದ ಉದಾಹರಣೆಗಳಿವೆ. ಈ ಪೈಕಿ ಟೀಮ್ ಇಂಡಿಯಾದ ಮಾಜಿ ಆಟಗಾರ ಸುರೇಶ್ ರೈನಾ ಕೂಡ ಒಬ್ಬರು. ಹೌದು, ಸುರೇಶ್ ರೈನಾ ನಾಯಕತ್ವದಡಿಯಲ್ಲಿ ಟೀಮ್ ಇಂಡಿಯಾ ಒಟ್ಟು 3 ಟಿ ಟ್ವೆಂಟಿ ಸರಣಿ ಹಾಗೂ 12 ಏಕದಿನ ಪಂದ್ಯಗಳನ್ನಾಡಿದೆ. ಈ ಪೈಕಿ ಎಲ್ಲಾ ಮೂರು ಟಿ ಟ್ವೆಂಟಿ ಸರಣಿಗಳಲ್ಲಿಯೂ ಟೀಂ ಇಂಡಿಯಾ ಗೆದ್ದಿದೆ ಹಾಗೂ 12 ಏಕದಿನ ಪಂದ್ಯಗಳಲ್ಲಿ 6 ಪಂದ್ಯಗಳಲ್ಲಿ ಗೆದ್ದು, ಉಳಿದ 6 ಪಂದ್ಯಗಳಲ್ಲಿ ಸೋತಿದೆ. ಹೀಗೆ ಸುರೇಶ್ ರೈನಾ ಟೀಮ್ ಇಂಡಿಯಾನ್ನು ಮುನ್ನಡೆಸಿರುವ ಪಂದ್ಯಗಳಲ್ಲಿ ಐವರು ಸ್ಟಾರ್ ಆಟಗಾರರು ಪದಾರ್ಪಣೆ ಮಾಡಿರುವ ವಿಷಯ ಬಹುತೇಕರಿಗೆ ತಿಳಿದೇ ಇಲ್ಲ ಎನ್ನಬಹುದು.

1. ವಿರಾಟ್ ಕೊಹ್ಲಿ

1. ವಿರಾಟ್ ಕೊಹ್ಲಿ

ವಿರಾಟ್ ಕೊಹ್ಲಿ ಅಂತರರಾಷ್ಟ್ರೀಯ ಟಿ ಟ್ವೆಂಟಿ ಕ್ರಿಕೆಟ್‍ಗೆ ಪದಾರ್ಪಣೆ ಮಾಡಿದ್ದು ಸುರೇಶ್ ರೈನಾ ನಾಯಕತ್ವದಡಿಯಲ್ಲಿ ಎಂಬುದು ಬಹುತೇಕರಿಗೆ ತಿಳಿಯದ ವಿಷಯ ಎನ್ನಬಹುದು. 2010ರಲ್ಲಿ ಜಿಂಬಾಬ್ವೆ ವಿರುದ್ಧ ನಡೆದಿದ್ದ ಟಿ ಟ್ವೆಂಟಿ ಸರಣಿಯಲ್ಲಿ ಭಾರತ ತಂಡವನ್ನು ಸುರೇಶ್ ರೈನಾ ನಾಯಕನಾಗಿ ಮುನ್ನಡೆಸಿದ್ದರು. ಈ ಸರಣಿಯಲ್ಲಿ ವಿರಾಟ್ ಕೊಹ್ಲಿ ಟಿ ಟ್ವೆಂಟಿ ತಂಡದ ಕ್ಯಾಪ್ ಸ್ವೀಕರಿಸಿದ್ದರು.

2. ರವಿಚಂದ್ರನ್ ಅಶ್ವಿನ್

2. ರವಿಚಂದ್ರನ್ ಅಶ್ವಿನ್

ವಿರಾಟ್ ಕೊಹ್ಲಿ ಮತ್ತು ರವಿಚಂದ್ರನ್ ಅಶ್ವಿನ್ ಇಬ್ಬರೂ ಸಹ ಅಂತರರಾಷ್ಟ್ರೀಯ ಟಿ ಟ್ವೆಂಟಿ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದು ಒಂದೇ ಪಂದ್ಯದ ಮೂಲಕ. ರವಿಚಂದ್ರನ್ ಅಶ್ವಿನ್ ಕೂಡ 2010ರಲ್ಲಿ ಜಿಂಬಾಬ್ವೆ ವಿರುದ್ಧ ನಡೆದಿದ್ದ ಟಿ ಟ್ವೆಂಟಿ ಸರಣಿಯಲ್ಲಿ ಭಾರತದ ಪರ ಕಣಕ್ಕಿಳಿದು ಅಂತರರಾಷ್ಟ್ರೀಯ ಟಿ ಟ್ವೆಂಟಿ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಸದ್ಯ ಈ ಇಬ್ಬರೂ ಸಹ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸ್ಟಾರ್ ಆಟಗಾರರಾಗಿ ಮಿಂಚುತ್ತಿದ್ದಾರೆ.

3. ಅಮಿತ್ ಮಿಶ್ರಾ

3. ಅಮಿತ್ ಮಿಶ್ರಾ

ಕ್ರಿಕೆಟ್ ಜಗತ್ತು ಕಂಡ ಪ್ರಸಿದ್ಧ ಸ್ಪಿನ್ನರ್‌ಗಳಲ್ಲಿ ಅಮಿತ್ ಮಿಶ್ರಾ ಕೂಡ ಓರ್ವರು. ಅಮಿತ್ ಮಿಶ್ರಾ ಕೂಡ 2010ರಲ್ಲಿ ಟೀಮ್ ಇಂಡಿಯಾ ಮತ್ತು ಜಿಂಬಾಬ್ವೆ ನಡುವೆ ನಡೆದಿದ್ದ ಟಿ ಟ್ವೆಂಟಿ ಸರಣಿ ಮೂಲಕ ಅಂತರರಾಷ್ಟ್ರೀಯ ಟಿ ಟ್ವೆಂಟಿ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಗಾಯದ ಸಮಸ್ಯೆಯಿಂದಾಗಿ ಹೆಚ್ಚು ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅವಕಾಶ ಪಡೆದುಕೊಳ್ಳದ ಅಮಿತ್ ಮಿಶ್ರಾ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಅತಿಹೆಚ್ಚು ಯಶಸ್ಸು ಸಾಧಿಸಿದ ಸ್ಪಿನ್ನರ್ ಆಗಿದ್ದಾರೆ.

ಉಮೇಶ್ ಯಾದವ್

ಉಮೇಶ್ ಯಾದವ್

ಟೀಮ್ ಇಂಡಿಯಾದ ಯಶಸ್ವಿ ವೇಗಿಗಳಲ್ಲಿ ಓರ್ವನಾಗಿರುವ ಉಮೇಶ್ ಯಾದವ್ 2010ರಲ್ಲಿ ನಡೆದಿದ್ದ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಏಕದಿನ ಸರಣಿಯ ಮೂಲಕ ಸುರೇಶ್ ರೈನಾ ನಾಯಕತ್ವದಡಿಯಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ವಿರಾಟ್ ಕೊಹ್ಲಿ, ರವಿಚಂದ್ರನ್ ಅಶ್ವಿನ್ ಮತ್ತು ಅಮಿತ್ ಮಿಶ್ರಾ ಈ ಜಿಂಬಾಬ್ವೆ ವಿರುದ್ಧದ ಟಿ ಟ್ವೆಂಟಿ ಸರಣಿ ಮೂಲಕ ಅಂತರರಾಷ್ಟ್ರೀಯ ಟಿ ಟ್ವೆಂಟಿ ಸರಣಿಗೆ ಪದಾರ್ಪಣೆ ಮಾಡಿದರೆ, ಉಮೇಶ್ ಯಾದವ್ ಏಕದಿನ ಸರಣಿ ಮೂಲಕ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು.

ಗೆದ್ದ ಖುಷಿಗೆ ಹಿಟ್ ಮ್ಯಾನ್ ಮೇಲೆ ಶಾಂಪೇನ್ ಚಿಮ್ಮಿಸಿದ ವಿರಾಟ್!! ರೋಹಿತ್ ಮಾಡಿದ್ದೇನು? | *Cricket | OneIndia
5. ಅಕ್ಷರ್ ಪಟೇಲ್

5. ಅಕ್ಷರ್ ಪಟೇಲ್

2014ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಮುಕ್ತಾಯವಾದ ಬೆನ್ನಲ್ಲೇ ಸುರೇಶ್ ರೈನಾ ನಾಯಕತ್ವದ ಅಡಿಯಲ್ಲಿ ಟೀಂ ಇಂಡಿಯಾ ಬಾಂಗ್ಲಾದೇಶ ವಿರುದ್ಧ ಏಕದಿನ ಸರಣಿಯನ್ನು ಆಡಿತ್ತು. ಈ ಸರಣಿಯಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಅಕ್ಷರ್ ಪಟೇಲ್ ಕೂಡ ಅವಕಾಶ ಗಿಟ್ಟಿಸಿಕೊಂಡಿದ್ದರು. ಈ ಮೂಲಕ ಅಕ್ಷರ್ ಪಟೇಲ್ ಸುರೇಶ್ ರೈನಾ ನಾಯಕತ್ವದ ಅಡಿಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರು.

ಅಕ್ಷರ್ ಪಟೇಲ್ ಮತ್ತು ಉಮೇಶ್ ಯಾದವ್ ಸುರೇಶ್ ರೈನಾ ನಾಯಕತ್ವದಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರೆ, ವಿರಾಟ್ ಕೊಹ್ಲಿ, ರವಿಚಂದ್ರನ್ ಅಶ್ವಿನ್ ಮತ್ತು ಅಮಿತ್ ಮಿಶ್ರಾ ಅಂತರರಾಷ್ಟ್ರೀಯ ಟಿ ಟ್ವೆಂಟಿ ಮಾದರಿಗೆ ಸುರೇಶ್ ರೈನಾ ನಾಯಕತ್ವದಡಿಯಲ್ಲಿ ಪದಾರ್ಪಣೆ ಮಾಡಿದರು.

Story first published: Monday, July 18, 2022, 23:18 [IST]
Other articles published on Jul 18, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X