ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮೊದಲ ODIನಲ್ಲೇ ಬ್ಯಾಟಿಂಗ್‌ನಲ್ಲಿ ಅಬ್ಬರಿಸಿದ ಟಾಪ್ 5 ಭಾರತೀಯರ ಪಟ್ಟಿಯಲ್ಲಿ ನಾಲ್ವರು ಕನ್ನಡಿಗರು!

5 Highest Individual Scores By Indian Batsmen On Odi Debut

ಕ್ರಿಕೆಟ್‌ನಲ್ಲ ಆಟಗಾರರಿಗೆ ತಮ್ಮ ಪದಾರ್ಪಣಾ ಪಂದ್ಯದಲ್ಲೇ ಅದ್ಭುತ ಪ್ರದರ್ಶನ ನೀಡಿ ಸ್ಮರಣೀಯವನ್ನಾಗಿಸಬೇಕು ಎಂಬುದು ಎಲ್ಲ ಕ್ರಿಕೆಟಿಗರ ಮನಸ್ಥಿತಿ ಆಗಿರುತ್ತದೆ. ಆದರೆ ಹೆಚ್ಚಿನ ಕ್ರಿಕೆಟಿಗರು ತಮ್ಮ ಮೊದಲ ಪಂದ್ಯದಲ್ಲಿ ಒತ್ತಡ ಹಾಗೂ ಗುಣಮಟ್ಟದ ಬೌಲಿಂಗ್ ಎದುರಿಸಲು ವಿಫಲರಾಗಿ ಬೇಗನೆ ವಿಕೆಟ್ ಒಪ್ಪಿಸಿಬಿಡುತ್ತಾರೆ.

ಆದರೆ ಕೆಲ ಕ್ರಿಕೆಟಿಗರು ಹಾಗಲ್ಲ. ತಮ್ಮ ಮೊದಲ ಅಂತಾರಾಷ್ಟ್ರೀಯ ಪ್ರದರ್ಶನದಲ್ಲಿ ಎಲ್ಲರ ಗಮನ ಸೆಳೆಯುವಂತಾ ಪ್ರದರ್ಶನವನ್ನು ನೀಡಿದ್ದಾರೆ. ಆ ಮೂಲಕ ತಮಗೆ ಮಾತ್ರವಲ್ಲದೆ ಕ್ರಿಕೆಟ್ ಅಭಿಮಾನಿಗಳಿಗೂ ಆ ಪಂದ್ಯವನ್ನು ಸ್ಮರಣೀಯವಾಗಿಸಿದ್ದಾರೆ. ಟೀಮ್ ಇಂಡಿಯಾದಲ್ಲಿ ಹೀಗೆ ಪದಾರ್ಪಣಾ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿದ ಐವರು ಕ್ರಿಕೆಟಿಗರ ಬಗ್ಗೆ ಈ ವರದಿಯಲ್ಲಿ ನೋಡೊಣ. ಹೆಮ್ಮೆಯ ವಿಷಯವೇನೆಂದರೆ ಈ ಐವರಲ್ಲಿ ಬರೊಬ್ಬರಿ ನಾಲ್ಕು ಆಟಗಾರರು ಕರ್ನಾಟಕದವರೇ ಆಗಿದ್ದಾರೆ.

ಟಾಪ್-5 ಮನೀಶ್ ಪಾಂಡೆ- 71 ರನ್

ಟಾಪ್-5 ಮನೀಶ್ ಪಾಂಡೆ- 71 ರನ್

ಪದಾರ್ಪಣಾ ಪಂದ್ಯದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಭಾರತೀಯ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿ ಕರ್ನಾಟಕದ ಆಟಗಾರ ಮನೀಶ್ ಪಾಂಡೆ ಇದ್ದಾರೆ. ಜಿಂಬಾಬ್ವೆ ವಿರುದ್ಧ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಕಣಕ್ಕಿಳಿದ ಪಾಂಡೆ ಆ ಪಂದ್ಯದಲ್ಲಿ 71 ರನ್ ಗಳಿಸಿ ಮಿಂಚಿದ್ದರು. ಸದ್ಯ ಅತ್ಯುತ್ತಮ ಫಾರ್ಮ್‌ನಲ್ಲಿರುವ ಪಾಂಡೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸಾಕಷ್ಟು ಭರವಸೆ ಮೂಡಿಸಿದ್ದಾರೆ.

ಟಾಪ್-4 ನವ್‌ಜೋತ್ ಸಿಂಗ್ ಸಿಧು-73 ರನ್

ಟಾಪ್-4 ನವ್‌ಜೋತ್ ಸಿಂಗ್ ಸಿಧು-73 ರನ್

ಈ ಪಟ್ಟಿಯಲ್ಲಿರುವ ಎರಡನೇ ಆಟಗಾರ ನವ್‌ಜೋತ್ ಸಿಂಗ್ ಸಿಧು. ಆಸ್ಟ್ರೇಲಿಯಾ ವಿರುದ್ಧ ಸಿಧು ತಮ್ಮ ಮೊದಲ ಅಂತಾರಾಷ್ಟ್ರೀಯ ಏಕದಿನ ಪಂದ್ಯವನ್ನು ಆಡಿದ್ದರು. ಆ ಪಂದ್ಯದಲ್ಲೇ ಸಿಧು ತಮ್ಮ ಆಗಮನವನ್ನು ಭರ್ಜರಿಯಾಗಿ ಸಾರಿದ್ದರು. ತಮ್ಮ ಮೊದಲ ಏಕದಿನ ಪಂದ್ಯದಲ್ಲಿ ಅವರು 73ರನ್ ಬಾರಿಸಿದ್ದಾರೆ. ಈ ಮೂಲಕ ಈ ಪಟ್ಟಿಯಲ್ಲಿರುವ ಏಕೈಕ ಕನ್ನಡೇತರ ಆಟಗಾರನಾಗಿದ್ದಾರೆ.

ಟಾಪ್-3 ಬೃಜೇಷ್ ಪಟೇಲ್-82 ರನ್

ಟಾಪ್-3 ಬೃಜೇಷ್ ಪಟೇಲ್-82 ರನ್

ಪದಾರ್ಪಣಾ ಪಟ್ಟಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಮೂರನೇ ಸ್ಥಾನವನ್ನು ಪಡೆದುಕೊಂಡ ಆಟಗಾರ ಬೃಜೇಷ್ ಪಟೇಲ್. 1974-1979 ಮಧ್ಯೆ ಭಾರತ ತಂಡವನ್ನು ಪ್ರತಿನಿಧಿಸಿದ್ದ ಬೃಜೇಷ್ ಪಟೇಲ್ ತಮ್ಮ ಆರಂಭಿಕ ಪಂದ್ಯದಲ್ಲೇ ಅಬ್ಬರಿಸಿದ್ದರು. ಮೊದಲ ಪಂದ್ಯದಲ್ಲಿ ಪಟೇಲ್ ಭರ್ಜರಿ 82 ರನ್ ದಾಖಲಿಸಿದ್ದರು.

ಟಾಪ್-2 ರಾಬಿನ್ ಉತ್ತಪ್ಪ-86

ಟಾಪ್-2 ರಾಬಿನ್ ಉತ್ತಪ್ಪ-86

ಟೀಮ್ ಇಂಡಿಯಾದಲ್ಲಿ ಸಾಕಷ್ಟು ಭರವಸೆ ಮೂಡಿಸಿದ್ದ ಆಟಗಾರ ರಾಬಿನ್ ಉತ್ತಪ್ಪ ತಮ್ಮ ಚೊಚ್ಚಲ ಪಂದ್ಯದಲ್ಲಿ ಅದ್ಭುತ ಪ್ರದರ್ಶನವನ್ನು ನೀಡಿ ಗಮನಸೆಳೆದರು. ಸ್ಪೋಟಕ ಬ್ಯಾಟಂಗ್ ನಡೆಸುವ ಸಾಮರ್ಥ್ಯ ಹೊಂದಿರುವ ಉತ್ತಪ್ಪ ಇಂಗ್ಲೆಂಡ್ ವಿರುದ್ಧ ತಮ್ಮ ಪದಾರ್ಪಣಾ ಪಂದ್ಯವನ್ನಾಡಿದ್ದರು. ಈ ಪಂದ್ಯದಲ್ಲಿ ಉತ್ತಪ್ಪ 86 ರನ್ ಗಳಿಸಿದ್ದರು. ಟ್ವಿ20 ವಿಶ್ವಕಪ್ ವಿಜೇತ ತಂಡದ ಸದಸ್ಯರೂ ಆಗಿದ್ದ ಉತ್ತಪ್ಪ ಬಳಿಕ ಯುವ ಆಟಗಾರರ ಪೈಪೋಟಿಯಿಂದಾಗಿ ಮಂಕಾಗಿ ತಂಡದಲ್ಲಿ ಸ್ಥಾನವನ್ನು ಕಳೆದುಕೊಂಡಿದ್ದಾರೆ.

ಟಾಪ್-1 ಕೆಎಲ್ ರಾಹುಲ್-100*

ಟಾಪ್-1 ಕೆಎಲ್ ರಾಹುಲ್-100*

ಈ ಪಟ್ಟಿಯಲ್ಲಿರುವ ಮೊದಲ ಆಟಗಾರ ಹಾಲಿ ಟೀಮ್ ಇಂಡಿಯಾ ಸದಸ್ಯ ಪ್ರಮುಖ ಬ್ಯಾಟ್ಸ್‌ಮನ್ ಆಗಿರುವ ಕೆಎಲ್ ರಾಹುಲ್. ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ನೀಡಿದ ಅದ್ಭುತ ಪ್ರದರ್ಶನದಿಂದ ಟೀಮ್ ಇಂಡಿಯಾಗೆ ಆಯ್ಕೆಯಾದ ರಾಹುಲ್ ತಮ್ಮ ಮೊದಲ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಭರ್ಜರಿ ಶತಕವನ್ನು ಸಿಡಿಸಿದ ಸಾಧನೆ ಮಾಡಿದ್ದಾರೆ. ಈ ಮೂಲಕ ಉಳಿದೆಲ್ಲಾ ಆಟಗಾರರಿಗಿಂತ ವಿಶೇಷವೆನಿಸಿದ್ದಾರೆ.

Story first published: Saturday, June 20, 2020, 10:23 [IST]
Other articles published on Jun 20, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X