ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಪುರುಷರನ್ನೂ ಮೀರಿಸಿ ವಿಶ್ವ ಕ್ರಿಕೆಟ್‌ನಲ್ಲಿ ಮಹಿಳಾ ಕ್ರಿಕೆಟರ್‌ಗಳು ದಾಖಲಿಸಿದ 5 ಶ್ರೇಷ್ಠ ದಾಖಲೆಗಳು

5 Most Remarkable Records Set By Women Cricketers

ಟೆನ್ನಿಸ್ ಹೊರತುಪಡಿಸಿದರೆ ಕ್ರೀಡಾ ಲೋಕದಲ್ಲಿ ಮಹಿಳಾ ಕ್ರೀಡೆಗಳಿಗೆ ಮನ್ನಣೆ ಸಿಗುವುದು ತುಂಬಾ ಕಡಿಮೆ. ಕ್ರಿಕೆಟ್ ವಿಚಾರದಲ್ಲೂ ಇದು ಹೊರತಾಗಿಲ್ಲ. ವಿಶ್ವ ಕ್ರೀಡಾ ಲೋಕದಲ್ಲಿ ಕ್ರಿಕೆಟ್ ಪ್ರಮುಖ ಆಟವಾಗಿ ಗುರುತಿಸಿಕೊಂಡಿದ್ದರೂ ಮಹಿಳೆಯರ ಕ್ರಿಕೆಟ್ ಜನಪ್ರಿಯತೆಯಲ್ಲಿ ತುಂಬಾ ಹಿಂದಿದೆ.

ಕ್ರಿಕೆಟ್ ಪ್ರಮುಖ ಕ್ರೀಡೆಯಾಗಿರುವ ಭಾರತ, ಇಂಗ್ಲೆಂಡ್ ಆಸ್ಟ್ರೇಲಿಯಾದಂತಾ ದೇಶದಲ್ಲೇ ಇತ್ತೀಚಿನ ದಿನಗಳಲ್ಲಿ ಮಹಿಳಾ ಕ್ರಿಕೆಟ್ ನಿಧಾನಕ್ಕೆ ಜನಪ್ರಿಯತೆ ಪಡೆದುಕೊಳ್ಳುತ್ತಿದೆಯಷ್ಟೇ. 1934ರಷ್ಟು ಹಿಂದೆಯೇ ಮಹಿಳಾ ಟೆಸ್ಟ್ ಕ್ರಿಕೆಟ್ ಆರಂಭವಾದರೂ ಅದಕ್ಕೆ ಸಿಗಬೇಕಾದ ಮನ್ನಣೆ ಸಿಗಲೇ ಇಲ್ಲ.

ಮುಲ್ತಾನ್‌ ಟೆಸ್ಟ್‌ನಲ್ಲಿ ಸಚಿನ್ 194 ರನ್ ಗಳಿಸಿದ್ದಾಗ ದ್ರಾವಿಡ್ ಡಿಕ್ಲೇರ್ ಕೊಟ್ಟಿದ್ದೇಕೆ ಗೊತ್ತಾ!?ಮುಲ್ತಾನ್‌ ಟೆಸ್ಟ್‌ನಲ್ಲಿ ಸಚಿನ್ 194 ರನ್ ಗಳಿಸಿದ್ದಾಗ ದ್ರಾವಿಡ್ ಡಿಕ್ಲೇರ್ ಕೊಟ್ಟಿದ್ದೇಕೆ ಗೊತ್ತಾ!?

ಹಾಗಿದ್ದರೂ ಕ್ರಿಕೆಟ್‌ನಲ್ಲಿ ಮಹಿಳಾ ಕ್ರಿಕೆಟರ್‌ಗಳು ಕೆಲ ಮಹತ್ತರ ಸಾಧನೆಯನ್ನು ಮಾಡಿದ್ದಾರೆ. ವಿಶ್ವ ಕ್ರಿಕೆಟ್‌ನಲ್ಲಿ ಪುರುಷ ಕ್ರಿಕೆಟಿಗರೂ ಸಾಧಿಸಲಾಗದ ಕೆಲ ಸಾಧನೆಗಳು ಮಹಿಳಾ ಕ್ರಿಕೆಟಿಗರ ಹೆಸರಿನಲ್ಲಿದೆ. ಅಂತಾ ಐದು ದಾಖಲೆಗಳು ಇಲ್ಲಿದೆ.

ಶತಕ ದಾಖಲಿಸಿದ ಅತಿ ಕಿರಿಯ ಕ್ರಿಕೆಟರ್

ಶತಕ ದಾಖಲಿಸಿದ ಅತಿ ಕಿರಿಯ ಕ್ರಿಕೆಟರ್

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಕಿರಿಯ ವಯಸ್ಸಿನಲ್ಲಿ ಶತಕ ದಾಖಲಿಸಿದ ದಾಖಲೆ ಪಾಕಿಸ್ತಾನದ ಆಲ್‌ರೌಂಡರ್ ಶಾಹಿದ್ ಅಫ್ರಿದಿ ಹೆಸರಿನಲ್ಲಿತ್ತು. 1996ರಲ್ಲಿ ಶಾಹಿದ್ ಅಫ್ರಿದಿ ಶ್ರೀಲಂಕಾ ವಿರುದ್ಧ 16 ವರ್ಷ 217ದಿನದಲ್ಲಿ ಈ ದಾಖಲೆಯನ್ನು ಮಾಡಿದ್ದರು. ಆದರೆ ಈ ದಾಖಲೆಯನ್ನು ಪುಡಿಗಟ್ಟಿದ್ದು ಭಾರತ ಮಹಿಳಾ ಕ್ರಿಕೆಟ್‌ನ ಮಾಜಿ ನಾಯಕಿ ಮಿಥಾಲಿ ರಾಜ್. 1999ರಲ್ಲಿ ಮಿಥಾಲಿ 16ವಯಸ್ಸಿನ 205ನೇ ದಿನದಂದು ಐರ್ಲೆಂಡ್ ವಿರುದ್ಧ ಶತಕ ದಾಖಲಿಸಿ ಈ ದಾಲೆಯನ್ನು ತಮ್ಮ ಹೆಸರಿನಲ್ಲಿ ಬರೆದುಕೊಂಡರು. 20 ವರ್ಷ ಕಳೆದರೂ ಈ ದಾಖಲೆಯನ್ನು ಯಾರಿಂದಲೂ ಮುರಿಯಲು ಸಾಧ್ಯವಾಗಿಲ್ಲ.

ದ್ವಿಶತಕ ಸಿಡಿಸಿದ ಅತಿ ಕಿರಿಯ ಆಟಗಾರ್ತಿ

ದ್ವಿಶತಕ ಸಿಡಿಸಿದ ಅತಿ ಕಿರಿಯ ಆಟಗಾರ್ತಿ

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲ ದ್ವಿಶತಕ ಸಿಡಿಸಿದ ಕಿರಿಯ ಕ್ರಿಕೆಟರ್ ದಾಖಲೆಯೂ ಮಹಿಳಾ ಆಟಗಾರ್ತಿಯ ಹೆಸರಿನಲ್ಲೇ ಇದೆ. ನ್ಯೂಜಿಲೆಂಡ್‌ ಮಹಿಳಾ ಕ್ರಿಕೆಟ್ ತಂಡದ ಬ್ಯಾಟರ್ ಆಗಿರುವ ಅಮೆಲಿಯಾ ಕೆರ್ ಈ ದಾಖಲೆಯನ್ನು ಹೊಂದಿರುವ ಆಟಗಾರ್ತಿ. 2018ರಲ್ಲಿ ಡೆನ್ಮಾರ್ಕ್ ವಿರುದ್ಧದ ಪಂದ್ಯದಲ್ಲಿ ಅಮೆಲಿಯಾ 145 ಎಸೆತಗಳಲ್ಲಿ 232 ರನ್ ಗಳಿಸಿದ್ದರು. ಆಗ ಅಮೆಲಿಯಾ ವಯಸ್ಸು 17 ವರ್ಷ.

ಏಕದಿನ ಪಂದ್ಯ ಆಡಿದ ಹಿರಿಯ ಕ್ರಿಕೆಟರ್

ಏಕದಿನ ಪಂದ್ಯ ಆಡಿದ ಹಿರಿಯ ಕ್ರಿಕೆಟರ್

ವೆಸ್ಟ್ ಇಂಡೀಸ್‌ನ ಮಾಜಿ ವಿಕೆಟ್ ಕೀಪರ್ ಸ್ಟೀಫನಿ ಪವರ್ ಅಂತಾರಾಷ್ಟ್ರೀಯ ಏಕದಿನ ಪಂದ್ಯವನ್ನು ಆಡಿದ ಅತ್ಯಂತ ಹಿರಿಯ ಕ್ರಿಕೆಟರ್ ಎಂಬ ದಾಖಲೆಯನ್ನು ಹೊಂದಿದ್ದಾರೆ. ಸ್ಟೀಫನಿ ಪವರ್ ತಮ್ಮ ಕೊನೆಯ ಏಕದಿನ ಪಂದ್ಯವನ್ನು 47ನೇ ವಯಸ್ಸಿನ 257ನೇ ದಿನದಂದು ಆಡಿ ಈ ದಾಖಲೆಯನ್ನು ತಮ್ಮ ಹೆಸರಿನಲ್ಲಿ ಬರೆದುಕೊಂಡಿದ್ದಾರೆ. ಈಗ ಅವರಿಗೆ 63 ವರ್ಷ ವಯಸ್ಸು.

ಟಿ20ಯಲ್ಲಿ ನಿರಂತರ ಅತಿ ಹೆಚ್ಚು ಪಂದ್ಯದಲ್ಲಿ ಕನಿಷ್ಠ ಒಂದು ವಿಕೆಟ್ ದಾಖಲೆ

ಟಿ20ಯಲ್ಲಿ ನಿರಂತರ ಅತಿ ಹೆಚ್ಚು ಪಂದ್ಯದಲ್ಲಿ ಕನಿಷ್ಠ ಒಂದು ವಿಕೆಟ್ ದಾಖಲೆ

ಮಹಿಳಾ ಕ್ರಿಕೆಟರ್ ಹೆಸರಿನಲ್ಲಿರುವ ಮತ್ತೊಂದು ಅತ್ಯಂತ ವಿಶಿಷ್ಠ ದಾಖಲೆಯಿದು. ಈ ದಾಖಲೆಯೂ ಭಾರತೀಯ ಆಟಗಾರ್ತಿಯ ಹೆಸರಿನಲ್ಲೇ ಇದೆ. ಭಾರತ ಕ್ರಿಕೆಟ್ ತಂಡದ ಪ್ರಮುಖ ಸ್ಪಿನ್ನರ್ ಆಗಿರುವ ರಾಧಾ ಯಾದವ್ ಸತತ 24 ಪಂದ್ಯಗಳಲ್ಲಿ ಕನಿಷ್ಠ ಒಂದು ವಿಕೆಟ್ ಪಡೆದ ದಾಖಲೆಯನ್ನು ಹೊಂದಿದ್ದಾರೆ.

ಇನ್ನಿಂಗ್ಸ್‌ನಲ್ಲಿ ಅತಿ ಹೆಚ್ಚು ಪ್ರತಿಶತ ರನ್

ಇನ್ನಿಂಗ್ಸ್‌ನಲ್ಲಿ ಅತಿ ಹೆಚ್ಚು ಪ್ರತಿಶತ ರನ್

ಎನಿಡ್ ಬೇಕ್‌ವೆಲ್ ವಿಶ್ವ ಕ್ರಿಕೆಟ್‌ನ ವಿಶಿಷ್ಠ ದಾಖಲೆಯೊಂದನ್ನು ತಮ್ಮ ಹೆಸರಿನಲ್ಲಿ ಬರೆದುಕೊಂಡಿದ್ದಾರೆ. ಇಂಗ್ಲೆಂಡ್‌ ಕ್ರಿಕೆಟ್‌ನ ಈ ಆಟಗಾರ್ತಿ ಇನ್ನಿಂಗ್ಸ್‌ವೊಂದರಲ್ಲಿ ಅತಿ ಹೆಚ್ಚು ಪ್ರತಿಶತ ರ್ ಹೊಂದಿದ ದಾಖಲೆಯನ್ನು ಹೊಂದಿದ್ದಾರೆ. ತಮ್ಮ ತಂಡ ಇನ್ನಿಂಗ್ಸ್‌ವೊಂದರಲ್ಲಿ 164 ರನ್ ಗಳಿಸಿದ್ದಾಗ ಎನಿಡ್ ಬೇಕ್‌ವೆಲ್ ಒಬ್ಬರೇ 112 ರನ್ ಗಳಿಸಿದ್ದರು. ಆ ಇನ್ನಿಂಗ್ಸ್‌ನ 68.29 ರನ್‌ಗಳನ್ನು ಈಕೆ ಒಬ್ಬರೇ ಗಳಿಸಿದ್ದರು. ಇದು ಇನ್ನೂ ದಾಖಲೆಯಾಗಿಯೇ ಉಳಿದುಕೊಂಡಿದೆ.

Story first published: Friday, July 10, 2020, 13:52 [IST]
Other articles published on Jul 10, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X