ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ ಹರಾಜು: ಈ ಐವರು ಆರ್‌ಸಿಬಿಯಲ್ಲಿದ್ದರೆ ಈ ಸಲ ಕಪ್ ನಮ್ದೇ!!

IPL 2020 Auction: 5 players RCB could look to sign ahead of the season | Oneindia Kannada
5-players-rcb-could-look-to-sign-ahead-of-the-season

ಐಪಿಎಲ್‌ನ ಕಳೆದ ಹನ್ನೆರಡು ಟೂರ್ನಿಗಳಲ್ಲಿ ಕಪ್‌ ಗೆಲ್ಲಲಾಗದ ತಂಡಗಳಲ್ಲಿ ಆರ್‌ಸಿಬಿ ಪ್ರಮುಖವಾದದ್ದು. ಅತ್ಯುತ್ತಮ ತಂಡ ಇದ್ದರೂ ಒಮ್ಮೆಯೂ ಚಾಂಪಿಯನ್ ಆಗಲು ಸಾಧ್ಯವಾಗಿಲ್ಲ. ಈ ಕೊರತೆಯನ್ನು ಈ ಬಾರಿಯಾದರೂ ಆರ್ ಸಿ ಬಿ ನೀಗಿಸುತ್ತಾ ಅನ್ನೋದಿಕ್ಕೆ ಇನ್ನೂ ನಾಲ್ಕೈದು ತಿಂಗಳು ಕಾಯಲೇ ಬೇಕಿದೆ. ಆದರೆ ಅದಕ್ಕೂ ಮುನ್ನ ಈ ತಿಂಗಳ ಮಧ್ಯದಲ್ಲಿ ನಡೆಯುವ ಹರಾಜು ಪ್ರಕ್ರಿಯೆ ಬಹಳ ಮುಖ್ಯವಾಗಿದೆ.

ಆರ್‌ಸಿಬಿ ಈ ಬಾರಿಯ ಹರಾಜಿಗೂ ಮುನ್ನ ತನ್ನ ತಂಡ 12 ಆಟಗಾರರನ್ನು ರೀಟೈನ್ ಮಾಡಿಕೊಂಡಿದೆ. ಅದರಲ್ಲಿ ಎ ಬಿ ಡಿವಿಲಿಯರ್ಸ್ ಮತ್ತು ಮೊಯಿನ್ ಅಲಿ ಮಾತ್ರವೇ ವಿದೇಶಿ ಅಟಗಾರರಾಗಿದ್ದಾರೆ. ಕೋಚಿಂಗ್ ವಿಭಾಗವನ್ನೂ ಸಂಪೂರ್ಣ ಪರಿಷ್ಕರಿಸಿರುವ ಆರ್‌ಸಿಬಿ ಮೈಕ್ ಹೆಸ್ಸನ್ ಮತ್ತು ಸೈಮನ್ ಕ್ಯಾಟಿಚ್ ಅವರನ್ನು ಸೇರ್ಪಡೆಗೊಳಿಸಿದೆ.

ಹನ್ನೆರಡು ಆವೃತ್ತಿಯಲ್ಲೂ ಆರ್‌ಸಿಬಿ ತಂಡವಾಗಿ ಬಲಿಷ್ಠವಾಗಿಯೇ ಇತ್ತು. ಆದರೆ ಗೆಲ್ಲಲೇ ಬೇಕಾದ ಪಂದ್ಯಗಳಲ್ಲಿ ಪ್ರಮುಖ ಆಟಗಾರರೇ ಕೈ ಕೊಟ್ಟು ಸೋಲಿನ ಹಾದಿ ಹಿಡಿಯುವುದು ಆರ್‌ಸಿಬಿಯ ಹುಟ್ಟುಗುಣದಂತಾಗಿದೆ. ಹೀಗಾಗಿ ಈ ಬಾರಿಯ ಹರಾಜಿನಲ್ಲಿ ಅರ್‌ಸಿಬಿ ಎಡವಿರವ ವಿಭಾಗಗಳತ್ತ ಚಿತ್ತನೆಟ್ಟು ಒಂದಷ್ಟು ಆಟಗಾರನ್ನು ತಂಡಕ್ಕೆ ಸೇರ್ಪಡೆಗೊಳಿಸುವ ಪ್ರಯತ್ನ ಮಾಡಲೇ ಬೇಕಿದೆ.

ಸದ್ಯ ಆರ್‌ಸಿಬಿಯ ಸ್ಥಿತಿಗೆ ಸಕ್ತಿ ತುಂಬಲು ಒಂದಷ್ಟು ಆಟಗಾರರ ಅಗತ್ಯ ತಂಡಕ್ಕಿದೆ. ಆ ಆಟಗಾರರನ್ನು ಮುಂದಿನ ಹರಾಜು ಪ್ರಕ್ರಿಯೆಯಲ್ಲಿ ಖರೀದಿಸಿದರೆ ತಂಡ ಮತ್ತಷ್ಟು ಬಲಿಷ್ಟವಾಗುವುದರಲ್ಲಿ ಅನುಮಾನವಿಲ್ಲ. ಅಂತಾ ಐವರು ಆಟಗಾರರು ಯಾರು ಅನ್ನೋದನ್ನು ನೋಡೋಣ:

# 1. ರೇಮನ್ ರೈಫರ್:

# 1. ರೇಮನ್ ರೈಫರ್:

ಅಷ್ಟೇನು ಪರಿಚಿತನಲ್ಲದ ಆಟಗಾರ ರೈಮನ್ ರೈಫರ್. ಆದರೆ ಈತನ ಸಾಮರ್ಥ್ಯ ಏನು ಅನ್ನೋದನ್ನು 'ಕೆರೇಬಿಯನ್ ಪ್ರೀಮಿಯರ್ ಲೀಗ್‌'(ಸಿಪಿಎಲ್)ನಲ್ಲಿ ಈತ ತೋರಿಸಿದ್ದಾನೆ. ಈ ವರ್ಷ ಬಾರ್ಬಡೋಸ್ ಟ್ರಿನಿಡಾಡ್ ತಂಡ ಸಿಪಿಎಲ್‌ನಲ್ಲಿ ಗೆದ್ದು ಚಾಂಪಿಯನ್ ಪಟ್ಟಕ್ಕೇರಲು ಈತ ಪ್ರಮುಖ ಕಾರಣ. ಲೋ ಸ್ಕೋರಿಂಗ್ ಮ್ಯಾಚ್‌ನಲ್ಲಿ ಎದುರಾಳಿಯನ್ನು ಕೂಡ ಕಡಿಮೆ ಮೊತ್ತಕ್ಕೆ ಕಟ್ದಟಿಹಾಕುವ ಚಾಕಚಕ್ಯತೆ ರೈಫರ್‌ಗಿದೆ. ಅಷ್ಟೇನು ವೇಗದಿಂದ ಬಾಲ್ ಮಾಡದಿದ್ದರೂ ನಿಖರತೆ ಮತ್ತು ವೈವಿದ್ಯತೆ ಎದುರಾಳಿಯನ್ನು ಕಟ್ಟಿಹಾಕುವಂತೆ ಮಾಡುತ್ತದೆ. ಈ ಆಟಗಾರ ಆರ್ ಸಿ ಬಿ ಬೌಲಿಂಗ್ ವಿಭಾಗಕ್ಕೆ ಶಕ್ತಿ ತುಂಬುವುದರಲ್ಲಿ ಅನುಮಾನವಿಲ್ಲ.

#2. ರಾಬಿನ್ ಉತ್ತಪ್ಪ:

#2. ರಾಬಿನ್ ಉತ್ತಪ್ಪ:

ಆರ್‌ಸಿಬಿಯ ಮಾಜಿ ಆಟಗಾರ ರಾಬಿನ್ ಉತ್ತಪ್ಪ ತುಂಬಾ ಚಿರಪರಿಚಿತ ಆಟಗಾರ. ಕಳೆದ ಹಲವು ಸೀಸನ್‌ನಲ್ಲಿ ಕೊಲ್ಕತ್ತಾ ತಂಡವನ್ನು ಪ್ರತಿನಿಧಿಸಿದ್ದ ಉತ್ತಪ್ಪ ಕೊಲ್ಕತ್ತಾ ಒಂದು ಬಾರಿ ಐಪಿಎಲ್‌ ಚಾಂಪಿಯನ್‌ ಆಗಲು ಪ್ರಮುಖ ಕಾರಣರಾಗಿದ್ದರು. 2007ರ ವಿಶ್ವಕೊ್ ಗೆದ್ದ ಟೀಮ್ ಇಂಡಿಯಾ ತಂಡದ ಭಾಗವಾಗಿದ್ದರು. ಕಳೆದ 12 ಆವೃತ್ತಿಯಲ್ಲಿ ಭಾಗಿಯಾಗಿರುವ ಉತ್ತಪ್ಪ ಒಟ್ಟಾರೆ 4086 ರನ್ ಕಲೆ ಹಾಕಿದ್ದಾರೆ.
ಈ ಬಾರಿ ಹರಾಜು ಪ್ರಕ್ರಿಯೆಯಲ್ಲಿ ಭಾಗಿಯಾಗಲಿದ್ದಾರೆ. ಅನುಭವಿ ಆಗಿರುವ ಉತ್ತಪ್ಪ ಕೊಹ್ಲಿ ಮತ್ತು ಎಬಿಡಿ ಮೇಲಿರುವ ಒತ್ತಡವನ್ನು ಕಡಿಮೆ ಮಾಡಲಿದ್ದಾರೆ. ಕನ್ನಡಿಗನೂ ಆಗಿರುವ ಕಾರಣ ಅಭಿಮಾನಿಗಳ ಬೇಡಿಕೆಯ ಆಟಗಾರನೂ ಆಗಿದ್ದಾರೆ ಉತ್ತಪ್ಪ.

#3. ರೋಹನ್ ಖದಮ್

#3. ರೋಹನ್ ಖದಮ್

ಕರ್ನಾಟಕ ತಂಡದ ಪ್ರತಿಭಾನ್ವಿತ ಆಟಗಾರ ರೋಹನ್ ಖದಮ್ ಪ್ರದರ್ಶನ ಎಲ್ಲರ ಗಮನಸೆಳೆಯುವಂತಿದೆ. ಕಳೆದ ಬಾರಿಯ ಸೈಯ್ಯದ್ ಮುಷ್ಟತಾಕ್ ಅಲಿ ಟ್ರೋಫಿಯಲ್ಲಿ ಅತಿಹೆಚ್ಚು ಸ್ಕೋರ್ ಗಳಿಸಿದ ಆಟಗಾರನಾಗಿದ್ದಾರೆ. 53.40 ಸರಾಸರಿಯಲ್ಲಿ 536 ಗಳಿಸಿದ್ದರು ರೋಹನ್. ಕೆಪಿಎಲ್‌ನಲ್ಲೂ ಉತ್ತಮ ರನ್ ಕಲೆಹಾಕಿದ ದಾಖಲೆ ಹೊಂದಿದ್ದಾರೆ. ಮಧ್ಯಮ ಕ್ರಮಾಂಕಕ್ಕೆ ಹೇಳಿಮಾಡಿಸಿದಂತಿರುವ ಈ ಕ್ರಿಕೆಟಿಗ ಸಂದರ್ಭಕ್ಕೆ ತಕ್ಕಂತೆ ಆಟವನ್ನು ಪ್ರದರ್ಶಿಸುವ ಕಲೆ ಹೊಂದಿದ್ದಾರೆ. ಆರ್‌ಸಿಬಿಯ ನಂಬರ್ 5 ಸ್ಥಾನಕ್ಕೆ ಖದಂ ಸೂಕ್ತವಾದ ಆಟಗಾರ.

#4: ಜೇ ರಿಚರ್ಡ್ಸನ್:

#4: ಜೇ ರಿಚರ್ಡ್ಸನ್:

ಆಸ್ಟ್ರೇಲಿಯಾದ ಯುವ ವೇಗಿ ಜೇ ರಿಚರ್ಡ್ಸನ್ ಆರ್‌ಸಿಬಿ ಕಣ್ಣಿಡಬೇಕಾದ ಮತ್ತೋರ್ವ ಯುವ ಆಟಗಾರ. 140 ಕಿ.ಮೀ ವೇಗದಲ್ಲಿ ಬೌಲಿಂಗ್ ಮಾಡುವ ಸಾಮರ್ಥ್ಯವಿರುವ ರಿಚರ್ಡ್ಸನ್ ಕಳೆದ ವಿಶ್ವಕಪ್‌ಗೂ ಮುನ್ನ ಗಮನಸೆಳೆದಿದ್ದ. ಆದರೆ ಬಳಿಕ ಗಾಯಕ್ಕೊಳಗಾಗಿ ತಂಡದಿಂದ ಹೊರಗುಳಿಯಬೇಕಾಗಿ ಬಂತು. ಆಸ್ಟ್ರೇಲಿಯಾದ ದೇಸಿ ಕ್ರಿಕೆಟ್‌ನಲ್ಲಿ ಮತ್ತೆ ಚಮತ್ಕಾರ ಮಾಡುತ್ತಿರುವ ಜೇ ಯಾವ ಕ್ಷಣದಲ್ಲಾದರೂ ಆಸ್ಟ್ರೇಲಿಯಾ ತಂಡಕ್ಕೆ ಸೇರ್ಪಡೆಯಾಗಬಹುದು.

#5. ಜಾಸನ್ ಹೋಲ್ಡರ್:

#5. ಜಾಸನ್ ಹೋಲ್ಡರ್:

ಇತ್ತೀಚಿನ ದಿನಗಳಲ್ಲಿ ಭಾರೀ ಸುಧಾರಣೆ ಮಾಡಿಕೊಂಡಿರುವ ವೆಸ್ಟ್‌ಇಂಡೀಸ್‌ನ ಪ್ರತಿಭಾನ್ವಿತ ಆಟಗಾರ ಜಾಸನ್ ಹೋಲ್ಡರ್. ತನ್ನ ಎತ್ತರವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ಚತುರತೆ ಹೋಲ್ಡರ್‌ಗಿದೆ. ಕಳೆದ ವಿಶ್ಕಪ್‌ನಲ್ಲಿ ಹೋಲ್ಡರ್‌ ಬೌಲಿಂಗ್ 70 ಮತ್ತು 80ರ ದಶಕದಲ್ಲಿ ವಿಂಡಿಸ್‌ ಆಳುತ್ತಿದ್ದ ಬೌಲರ್‌ಗಳನ್ನು ನೆನಪಿಸುವಂತಿತ್ತು. ಫಿನಿಷರ್ ಆಗಿಯೂ ತಂಡಕ್ಕೆ ನೆರವಾಗಬಲ್ಲ ಸಾಮರ್ಥ್ಯ ಹೋಲ್ಡರ್‌ಗಿದೆ. ಆರ್‌ಸಿಬಿ ಹೋಲ್ಡರ್‌ನ್ನು ತೆಕ್ಕೆಗೆ ಹಾಕಿಕೊಂಡಲ್ಲಿ ಉತ್ತಮ ಆಲ್ರೌಂಡರ್ ಆಗಿ ತಂಡಕ್ಕೆ ಸಹಕಾರಿಯಾಗಲಿದ್ದಾರೆ.

Story first published: Sunday, December 1, 2019, 19:41 [IST]
Other articles published on Dec 1, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X