ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ರಾಜೀನಾಮೆ ಘೋಷಿಸಿ ಮತ್ತೆ ತಂಡ ಸೇರಿದ ಐವರು ಕ್ರಿಕೆಟಿಗರು ಇವರೇ!

5 players who announced the international retirement and joined the team again later

ಓರ್ವ ಕ್ರಿಕೆಟಿಗ ಅಂತರರಾಷ್ಟ್ರೀಯ ಕ್ರಿಕೆಟ್‍ ತಂಡವೊಂದರಲ್ಲಿ ಹೆಚ್ಚು ದಿನಗಳ ಕಾಲ ಉಳಿಯಬೇಕೆಂದರೆ ಆತನಿಗೆ ಅಗತ್ಯವಾಗಿ ಇರಬೇಕಾದ ಅಂಶಗಳೆಂದರೆ ಫಿಟ್‌ನೆಸ್ ಹಾಗೂ ಉತ್ತಮ ಪ್ರದರ್ಶನ.

ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಿಂದ ರವೀಂದ್ರ ಜಡೇಜಾ ಹೊರಗುಳಿದಿದ್ದು ಯಾಕೆ? ಇಲ್ಲಿದೆ ಕಾರಣಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಿಂದ ರವೀಂದ್ರ ಜಡೇಜಾ ಹೊರಗುಳಿದಿದ್ದು ಯಾಕೆ? ಇಲ್ಲಿದೆ ಕಾರಣ

ಈ ಅಂಶಗಳ ಜತೆಗೆ ತಂಡದ ನಾಯಕನ ಬೆಂಬಲ ಹಾಗೂ ಆಯ್ಕೆಗಾರರ ಬೆಂಬಲ ಕೂಡ ಆ ಕ್ರಿಕೆಟಿಗನಿಗೆ ಅತ್ಯಗತ್ಯವಾಗಿರುತ್ತದೆ. ಈ ಅಂಶಗಳಲ್ಲಿ ಯಾವುದೇ ಒಂದು ಅಂಶದ ಲೋಪವಿದ್ದರೂ ಸಹ ಆ ಆಟಗಾರ ಹೆಚ್ಚು ದಿನಗಳ ಕಾಲ ಅಂತರರಾಷ್ಟ್ರೀಯ ಕ್ರಿಕೆಟ್‍ನಲ್ಲಿ ಉಳಿಯಲಾಗುವುದಿಲ್ಲ ಎಂಬುದು ವಾಸ್ತವ.

IPL 2022: ಟೂರ್ನಿಯಲ್ಲಿ 3ನೇ ಬಾರಿ ಡಕ್ಔಟ್ ಆದ ಕೊಹ್ಲಿ; ಹೆಚ್ಚು ಬಾರಿ ಡಕ್ಔಟ್ ಆದ ನಾಲ್ವರು ಇವರೇ!IPL 2022: ಟೂರ್ನಿಯಲ್ಲಿ 3ನೇ ಬಾರಿ ಡಕ್ಔಟ್ ಆದ ಕೊಹ್ಲಿ; ಹೆಚ್ಚು ಬಾರಿ ಡಕ್ಔಟ್ ಆದ ನಾಲ್ವರು ಇವರೇ!

ಕೆಲ ಕ್ರಿಕೆಟಿಗರು ಉತ್ತಮ ಪ್ರದರ್ಶನ ನೀಡಿದರೂ ಸಹ ಕೆಲ ವೈಯಕ್ತಿಕ ಕಾರಣಗಳಿಗೆ ತಂಡದಿಂದ ಸ್ಥಾನವನ್ನು ಕಳೆದುಕೊಂಡು, ದುಡುಕಿ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ರಾಜೀನಾಮೆಯನ್ನು ಘೋಷಿಸಿದ ಹಲವಾರು ಉದಾಹರಣೆಗಳು ಇವೆ. ಹೀಗೆ ಒಮ್ಮೆ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ರಾಜೀನಾಮೆ ನೀಡಿದರೆ ಮತ್ತೆ ತಂಡ ಸೇರುವುದು ಸುಲಭದ ಮಾತಲ್ಲ. ಆದರೆ ಈ ಕೆಳಕಂಡ ಐವರು ಆಟಗಾರರು ಮಾತ್ರ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ರಾಜೀನಾಮೆ ನೀಡಿದ ನಂತರ ಮತ್ತೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪ್ರವೇಶ ಪಡೆದುಕೊಂಡು ಕಣಕ್ಕಿಳಿದಿದ್ದಾರೆ.

1. ಕೆವಿನ್ ಪೀಟರ್ಸನ್

1. ಕೆವಿನ್ ಪೀಟರ್ಸನ್

2004ರ ನವೆಂಬರ್‌ನಲ್ಲಿ ನಡೆದ ಜಿಂಬಾಬ್ವೆ ವಿರುದ್ಧದ ಏಕದಿನ ಪಂದ್ಯದ ಮೂಲಕ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಕೆವಿನ್ ಪೀಟರ್ಸನ್ ಕೆಲ ತಿಂಗಳುಗಳು ಕಳೆದ ನಂತರ ನಡೆದ 2005ರ ಆ್ಯಶಸ್ ಟೆಸ್ಟ್ ಸರಣಿಯ ಪ್ರಥಮ ಟೆಸ್ಟ್ ಪಂದ್ಯದ ಎರಡೂ ಇನ್ನಿಂಗ್ಸ್‌ನಲ್ಲಿಯೂ ಅರ್ಧ ಶತಕಗಳನ್ನು ಬಾರಿಸಿ ಎಲ್ಲರ ಗಮನವನ್ನು ಸೆಳೆದರು. ಹಾಗೂ ಈ ಸರಣಿಯ 10 ಇನ್ನಿಂಗ್ಸ್‌ನಲ್ಲಿ 473 ರನ್ ಕಲೆಹಾಕಿದ ಕೆವಿನ್ ಪೀಟರ್ಸನ್ ಸರಣಿಯಲ್ಲಿ ಅತಿ ಹೆಚ್ಚು ರನ್ ಕಲೆಹಾಕಿದ ಆಟಗಾರನಾಗಿ ಹೊರಹೊಮ್ಮಿದರು. 2010ರಲ್ಲಿ ನಡೆದ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ತಂಡದ ಪರ ಅತ್ಯಧಿಕ ರನ್ ಬಾರಿಸಿದ ಪೀಟರ್ಸನ್ ತಂಡ ಚೊಚ್ಚಲ ಟ್ರೋಫಿ ಗೆಲ್ಲುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದರು. ಇನ್ನು 2012ರಲ್ಲಿ ಟೆಕ್ಸ್ಟ್ ಮೆಸೇಜ್ ವಿವಾದಕ್ಕೆ ಒಳಗಾದ ಕೆವಿನ್ ಪೀಟರ್ಸನ್ ಸೀಮಿತ ಓವರ್ ಕ್ರಿಕೆಟ್‍ನಿಂದ ನಿವೃತ್ತಿ ಹೊಂದಿದರು. ಆದರೆ ಅದೇ ವರ್ಷದಲ್ಲಿ ಪೀಟರ್ಸನ್ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ಜತೆ ಒಪ್ಪಂದವೊಂದನ್ನು ಮಾಡಿಕೊಂಡು ಮತ್ತೆ ಅಂತರರಾಷ್ಟ್ರೀಯ ಕ್ರಿಕೆಟ್‌ ಆಡುವ ಅವಕಾಶ ಪಡೆದರು. 2014ರ ಆ್ಯಶಸ್ ಸರಣಿಯಲ್ಲಿ ಕೊನೆಯದಾಗಿ ಟೆಸ್ಟ್ ಆಡಿದ ಪೀಟರ್ಸನ್, 2018ರಲ್ಲಿ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದರು. ಒಟ್ಟಾರೆ 177 ಪಂದ್ಯಗಳನ್ನಾಡಿರುವ ಕೆವಿನ್ ಪೀಟರ್ಸನ್ 13000ಕ್ಕೂ ಹೆಚ್ಚು ರನ್ ಕಲೆ ಹಾಕಿದ್ದು, 32 ಶತಕ ಮತ್ತು 67 ಅರ್ಧಶತಕಗಳನ್ನು ಬಾರಿಸಿದ್ದಾರೆ.

2. ಭಾನುಕಾ ರಾಜಪಕ್ಸ

2. ಭಾನುಕಾ ರಾಜಪಕ್ಸ

ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಪಂಜಾಬ್ ಕಿಂಗ್ಸ್ ಪರ ಕಣಕ್ಕಿಳಿದಿರುವ ಶ್ರೀಲಂಕಾದ ಭಾನುಕ ರಾಜಪಕ್ಸ 2019ರಲ್ಲಿ ಅಂತರರಾಷ್ಟ್ರೀಯ ಟಿ ಟ್ವೆಂಟಿ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರು. ಹಾಗೂ 2021ರಲ್ಲಿ ತನ್ನ ಚೊಚ್ಚಲ ಅಂತರರಾಷ್ಟ್ರೀಯ ಏಕದಿನ ಪಂದ್ಯವನ್ನಾಡಿದ ಭಾನುಕ ರಾಜಪಕ್ಸ ಇದೇ ವರ್ಷದ ಜನವರಿ 3ರಂದು ನಿವೃತ್ತಿಯನ್ನು ಘೋಷಿಸಿದ್ದರು. ಆಯ್ಕೆಗಾರರು ಶ್ರೀಲಂಕಾ ತಂಡದಲ್ಲಿ ಸ್ಥಾನ ನೀಡದ ಕಾರಣ ಭಾನುಕ ರಾಜಪಕ್ಸ ಈ ನಿರ್ಧಾರವನ್ನು ತೆಗೆದುಕೊಂಡು ಎಲ್ಲರಲ್ಲಿಯೂ ಅಚ್ಚರಿ ಮೂಡಿಸಿದ್ದರು. ಆದರೆ ಹತ್ತು ದಿನಗಳು ಕಳೆದ ನಂತರ ಉಲ್ಟಾ ಹೊಡೆದ ಭಾನುಕಾ ರಾಜಪಕ್ಸ ರಾಜೀನಾಮೆ ವಾಪಸ್ ಪಡೆದರು.

3. ಶಾಹಿದ್ ಅಫ್ರಿದಿ

3. ಶಾಹಿದ್ ಅಫ್ರಿದಿ

1996ರಲ್ಲಿ ಜಿಂಬಾಬ್ವೆ ವಿರುದ್ಧ ನಡೆದಿದ್ದ ಏಕದಿನ ಪಂದ್ಯದ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಶಾಹಿದ್ ಅಫ್ರಿದಿ 2011ರ ವಿಶ್ವಕಪ್ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ಟೀಮ್ ಇಂಡಿಯಾ ವಿರುದ್ಧ ತಂಡ ಸೋತಿದ್ದಕ್ಕೆ ನಾಯಕತ್ವದಿಂದ ಕೆಳಗಿಳಿದರು ಹಾಗೂ ಇದರ ಬೆನ್ನಲ್ಲೇ ಶಾಹಿದ್ ಅಫ್ರಿದಿ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿಯನ್ನು ಸಹ ಘೋಷಿಸಿದರು. ಹೀಗೆ ಅಂತರರಾಷ್ಟ್ರೀಯ ಕ್ರಿಕೆಟ್‍ಗೆ ನಿವೃತ್ತಿಯನ್ನು ಘೋಷಿಸಿದ್ದ ಶಾಹಿದ್ ಅಫ್ರಿದಿ 5 ತಿಂಗಳುಗಳ ನಂತರ ನಡೆದ ಬಾಂಗ್ಲಾದೇಶ ಮತ್ತು ಶ್ರೀಲಂಕಾ ವಿರುದ್ಧದ ಸರಣಿಗಳಲ್ಲಿ ಕಣಕ್ಕಿಳಿಯುವ ಮೂಲಕ ಮತ್ತೆ ತಂಡ ಸೇರಿದ್ದರು.

4. ಕಾರ್ಲ್ ಹೂಪರ್

4. ಕಾರ್ಲ್ ಹೂಪರ್

ವೆಸ್ಟ್ ಇಂಡೀಸ್ ತಂಡದ ಮಾಜಿ ನಾಯಕ ಕಾರ್ಲ್ ಹೂಪರ್ ನ್ಯೂಜಿಲೆಂಡ್ ವಿರುದ್ಧ ನಡೆದಿದ್ದ ಏಕದಿನ ಪಂದ್ಯದ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು ಹಾಗೂ ಈ ಪಂದ್ಯದಲ್ಲಿ 79 ಎಸೆತಗಳಿಗೆ 48 ರನ್ ಕಲೆಹಾಕಿದ್ದ ಕಾರ್ಲ್ ಹೂಪರ್ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು. ಹಾಗೂ 1987ರಲ್ಲಿ ಭಾರತ ವಿರುದ್ಧ ನಡೆದ ಟೆಸ್ಟ್ ಪಂದ್ಯದ ಮೂಲಕ ತನ್ನ ಮೊದಲ ಟೆಸ್ಟ್ ಆಡಿದ ಕಾರ್ಲ್ ಹೂಪರ್ 57 ಎಸೆತಗಳಲ್ಲಿ 37 ರನ್ ಕಲೆಹಾಕಿ ಮಧ್ಯಮ ಕ್ರಮಾಂಕದಲ್ಲಿ ಮಿಂಚಿದ್ದರು. 1999ರ ವಿಶ್ವಕಪ್ ಟೂರ್ನಿಗೂ ಮುನ್ನ ಕೆಲ ದಿನಗಳ ಕಾಲ ವಿಶ್ರಾಂತಿಯನ್ನು ಕೇಳಿದ ಕಾರ್ಲ್ ಹೂಪರ್ ಅವರಿಗೆ ವೆಸ್ಟ್ ಇಂಡೀಸ್ ಕ್ರಿಕೆಟ್ ಬೋರ್ಡ್ ಅವಕಾಶವನ್ನು ನೀಡಲಿಲ್ಲ ಹಾಗೂ ಹೂಪರ್ ರಾಜಿನಾಮೆಯನ್ನು ಘೋಷಿಸಿದರು. ಆದರೆ 2001ರಲ್ಲಿ ಮರಳಿ ತಂಡ ಸೇರಿದ ಕಾರ್ಲ್ ಹೂಪರ್ 2003ರ ವಿಶ್ವಕಪ್ ಟೂರ್ನಿಯಲ್ಲಿ ನಾಯಕನಾಗಿ ತಂಡವನ್ನು ಮುನ್ನಡೆಸಿದ್ದರು.

5. ಬ್ರೆಂಡನ್ ಟೇಲರ್

5. ಬ್ರೆಂಡನ್ ಟೇಲರ್

2004ರಲ್ಲಿ ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ಏಕದಿನ ಹಾಗೂ ಟಿ ಟ್ವೆಂಟಿ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಜಿಂಬಾಬ್ವೆಯ ಬ್ರೆಂಡನ್ ಟೇಲರ್ ಹನ್ನೊಂದು ವರ್ಷಗಳ ಬಳಿಕ ಕೌಂಟಿ ಕ್ರಿಕೆಟ್ ಆಡುವ ಸಲುವಾಗಿ ಅಂತಾರಾಷ್ಟ್ರೀಯ ಕ್ರಿಕೆಟ್‍ಗೆ ವಿದಾಯ ಹೇಳಿದ್ದರು. ಹಾಗೂ 2017ರ ಸಮಯಕ್ಕೆ ತನ್ನ ಕೌಂಟಿ ಕ್ರಿಕೆಟ್ ಒಪ್ಪಂದ ಮುಕ್ತಾಯವಾದ ಕಾರಣ ಬ್ರೆಂಡನ್ ಟೇಲರ್ ಮರಳಿ ತಂಡಕ್ಕೆ ವಾಪಸಾದರು ಹಾಗೂ 2021ರವರೆಗೆ ಎಲ್ಲಾ ಮಾದರಿಯ ಕ್ರಿಕೆಟ್ ಆಡಿದರು.

Story first published: Monday, May 9, 2022, 17:37 [IST]
Other articles published on May 9, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X