ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

WTC ಫೈನಲ್‌ಗೆ ಭಾರತ ತಂಡದಲ್ಲಿ ಸ್ಥಾನ ಪಡೆದುಕೊಳ್ಳದ 5 ಪ್ರಮುಖ ಆಟಗಾರರಿವರು!

5 players who failed to make the cut for World Test Championship final vs New Zealand

ಲಂಡನ್: ಐಸಿಸಿ ವರ್ಲ್ಡ್ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ಗೆ ಇನ್ನು ಕೆಲವೇ ದಿನಗಳಷ್ಟೇ ಬಾಕಿ ಉಳಿದಿವೆ. ಜೂನ್ 18ರಿಂದ 22ರವರೆಗೆ ಇಂಗ್ಲೆಂಡ್‌ನ ಸೌತಾಂಪ್ಟನ್‌ನಲ್ಲಿರುವ ಏಜಸ್ ಬೌಲ್ ಸ್ಟೇಡಿಯಂನಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ಮಧ್ಯೆ ಕುತೂಹಲಕಾರಿ ಪಂದ್ಯ ನಡೆಯಲಿದೆ. ಭಾರತೀಯ ಕಾಲಮಾನ 3.30 PMಗೆ ಪಂದ್ಯ ಆರಂಭಗೊಳ್ಳಲಿದೆ. ಪಂದ್ಯಕ್ಕಾಗಿ ಅಂತಿಮ 15 ಜನರ ತಂಡಗಳನ್ನು ಎರಡೂ ದೇಶಗಳೂ ಪ್ರಕಟಿಸಿವೆ.

ಸ್ಪಾಟ್‌ ಫಿಕ್ಸಿಂಗ್ ಆರೋಪಿ ಅಂಕಿತ್ ಚೌವಾಣ್ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ರೆಡಿ!ಸ್ಪಾಟ್‌ ಫಿಕ್ಸಿಂಗ್ ಆರೋಪಿ ಅಂಕಿತ್ ಚೌವಾಣ್ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ರೆಡಿ!

ಜೂನ್ 15ರ ಮಂಗಳವಾರ ನ್ಯೂಜಿಲೆಂಡ್ ಕ್ರಿಕೆಟ್ ಬೋರ್ಡ್ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್‌ಗೆ 15 ಜನರ ತಂಡ ಪ್ರಕಟಿಸಿತ್ತು. ಅದೇ ದಿನ ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) ಕೂಡ 15 ಜನರ ತಂಡ ಪ್ರಕಟಿಸಿದೆ. ಈ ತಂಡದಲ್ಲಿ ಪ್ರಮುಖ 5 ಆಟಗಾರರು ಕಾಣಿಸಿಕೊಂಡಿಲ್ಲ.

15 ಮಂದಿಯ ನ್ಯೂಜಿಲೆಂಡ್ ತಂಡ

15 ಮಂದಿಯ ನ್ಯೂಜಿಲೆಂಡ್ ತಂಡ

ಕೇನ್ ವಿಲಿಯಮ್ಸನ್ (ಸಿ), ಟಾಮ್ ಬ್ಲಂಡೆಲ್, ಟ್ರೆಂಟ್ ಬೌಲ್ಟ್, ಡೆವೊನ್ ಕಾನ್ವೇ, ಕಾಲಿನ್ ಡಿ ಗ್ರ್ಯಾಂಡ್‌ಹೋಮ್, ಮ್ಯಾಟ್ ಹೆನ್ರಿ, ಕೈಲ್ ಜೇಮಿಸನ್, ಟಾಮ್ ಲ್ಯಾಥಮ್, ಹೆನ್ರಿ ನಿಕೋಲ್ಸ್, ಅಜಾಜ್ ಪಟೇಲ್, ಟಿಮ್ ಸೌಥಿ, ರಾಸ್ ಟೇಲರ್, ನೀಲ್ ವ್ಯಾಗ್ನರ್, ಬಿಜೆ ವಾಟ್ಲಿಂಗ್, ವಿಲ್ ಯಂಗ್.

15 ಜನರ ಟೀಮ್ ಇಂಡಿಯಾ

15 ಜನರ ಟೀಮ್ ಇಂಡಿಯಾ

ರೋಹಿತ್ ಶರ್ಮಾ, ಶುಬ್ಮನ್ ಗಿಲ್, ಚೇತೇಶ್ವರ್ ಪೂಜಾರ, ವಿರಾಟ್ ಕೊಹ್ಲಿ (ನಾಯಕ), ಅಜಿಂಕ್ಯ ರಹಾನೆ (ಉಪನಾಯಕ), ಹನುಮ ವಿಹಾರಿ, ರಿಷಭ್ ಪಂತ್ (ವಿಕೆಟ್ ಕೀಪರ್), ವೃದ್ಧಿಮಾನ್ ಸಾಹ (ವಿಕೆ), ಆರ್ ಅಶ್ವಿನ್, ರವೀಂದ್ರ ಜಡೇಜಾ, ಜಸ್ಪ್ರೀತ್ ಬೂಮ್ರಾ, ಇಶಾಂತ್ ಶರ್ಮಾ, ಮೊಹಮ್ಮದ್ ಶಮಿ, ಉಮೇಶ್ ಯಾದವ್, ಮೊಹಮ್ಮದ್ ಸಿರಾಜ್.

ಕನ್ನಡಿಗರ ಕಡೆಗಣನೆ

ಕನ್ನಡಿಗರ ಕಡೆಗಣನೆ

ಟೆಸ್ಟ್‌ ಚಾಂಪಿಯನ್‌ಶಿಪ್‌ಗೆ ಪ್ರಕಟಿಸಲಾದ 15 ಜನರ ತಂಡದಲ್ಲಿ ಕನ್ನಡಿಗರಾದ ಕೆಎಲ್ ರಾಹುಲ್ ಮತ್ತು ಮಯಾಂಕ್ ಅಗರ್ವಾಲ್‌ಗೆ ಸ್ಥಾನವೇ ಸಿಗದಿದ್ದುದು ಕನ್ನಡಿಗರಿಗೆ ಬೇಸರ ಮೂಡಿಸಿದೆ. ನಿರಾಶಾದಾಯಕ ಪ್ರದರ್ಶನಕ್ಕಾಗಿ ರಾಹುಲ್ ಅವರನ್ನು 2018-19ರಲ್ಲಿ ತಂಡದಿಂದ ಕೈ ಬಿಡಲಾಗಿತ್ತು. ಆವತ್ತಿನಿಂದ ರಾಹುಲ್ ರೆಡ್‌ಬಾಲ್‌ ಕ್ರಿಕೆಟ್ ಆಡಿಲ್ಲ. ಹೀಗಾಗಿ ಟೆಸ್ಟ್‌ ಚಾಂಪಿಯನ್‌ಶಿಪ್‌ನಲ್ಲಿ ರಾಹುಲ್ ಅವರನ್ನು ಪರಿಗಣಿಸಿಲ್ಲ. ಟಾಪ್ ಆರ್ಡರ್‌ನಲ್ಲಿ ರೋಹಿತ್ ಶರ್ಮಾ ಮತ್ತು ಶುಬ್ಮನ್ ಗಿಲ್ ಆಡುತ್ತಿರುವುದರಿಂದ ಮಯಾಂಕ್‌ಗೂ ಸ್ಥಾನ ಲಭಿಸಿಲ್ಲ.

ಸ್ಥಾನ ಪಡೆದುಕೊಳ್ಳದ ಆಟಗಾರರು

ಸ್ಥಾನ ಪಡೆದುಕೊಳ್ಳದ ಆಟಗಾರರು

* ಕೆಎಲ್ ರಾಹುಲ್, ಆರಂಭಿಕ ಬ್ಯಾಟ್ಸ್‌ಮನ್‌, ವಿಕೆಟ್ ಕೀಪರ್
* ಶಾರ್ದೂಲ್ ಠಾಕೂರ್, ಬೌಲಿಂಗ್ ಆಲ್‌ ರೌಂಡರ್, ವೇಗದ ಬೌಲರ್
* ವಾಷಿಂಗ್ಟನ್ ಸುಂದರ್, ಬೌಲಿಂಗ್ ಆಲ್ ರೌಂಡರ್, ಸ್ಪಿನ್ನರ್
* ಅಕ್ಷರ್ ಪಟೇಲ್, ಬೌಲಿಂಗ್ ಆಲ್ ರೌಂಡರ್, ಸ್ಪಿನ್ನರ್
* ಮಯಾಂಕ್ ಅಗರ್ವಾಲ್, ಆರಂಭಿಕ ಬ್ಯಾಟ್ಸ್‌ಮನ್

Story first published: Wednesday, June 16, 2021, 13:46 [IST]
Other articles published on Jun 16, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X