ಟಿ20ಐನಲ್ಲಿ ಒಂದೂ ಅರ್ಧ ಶತಕ ಬಾರಿಸದ ಸೂಪರ್‌ಸ್ಟಾರ್‌ಗಳು ಇವರು!

ಕ್ರಿಕೆಟ್‌ನ ಅತ್ಯಂತ ಪ್ರಖ್ಯಾತಿಯನ್ನು ಪಡೆದ ಮಾದರಿಯೆಂದರೆ ಅದು ಟಿ20 ಕ್ರಿಕೆಟ್. ಈ ಚುಟುಕು ಮಾದರಿ ಉಳಿದ ಮಾದರಿಗಳಿಗೆ ಹೋಲಿಸಿದರೆ ಬೇಗನೆ ಫಲಿತಾಂಶವನ್ನು ಪಡೆಯುವುದಲ್ಲದೆ ಅಭಿಮಾನಿಗಳಿಗೆ ಹೆಚ್ಚಿನ ರೋಚಕತೆಯ ಅನುಭವವನ್ನು ನೀಡುತ್ತದೆ. ಹೀಗಾಗಿ ಆಟಗಾರರು ಕೂಡ ಸದಾ ಹೊಸತನವನ್ನು ನೀಡಲು ಬಯಸುತ್ತಾರೆ. ಹೊಸ ರೀತಿಯ ಹೊಡೆತಗಳು ಬೌಲಿಂಗ್‌ನಲ್ಲಿ ವಿಭಿನ್ನತೆ, ಫಿಲ್ಡಿಂಗ್‌ನಲ್ಲಿ ಮತ್ತಷ್ಟು ಚುರುಕುತನ ಟಿ20 ಮಾದರಿಯಿಂದಾಗಿ ಕಾಣಬಹುದಾಗಿದೆ.

ಈ ಮಾದರಿಯಲ್ಲಿ ಸ್ಪೋಟಕವಾಗಿ ಆಡಬಲ್ಲ ಸಾಮರ್ಥ್ಯವನ್ನು ಹೊಂದಿದವರು ಹೆಚ್ಚು ಜನಪ್ರಿಯತೆಯನ್ನು ಪಡೆಯುತ್ತಾರೆ. ಈ ಮೂಲಕ ಸ್ಟಾರ್‌ಗಳಾಗಿ ಮರೆಯುತ್ತಾರೆ. ಆದರೆ ಅಚ್ಚರಿಯ ಸಂಗತಿಯೆಂದರೆ ಕ್ರಿಕೆಟ್‌ನಲ್ಲಿ ಸೂಪರ್ ಸ್ಟಾರ್‌ಗಳು ಎನಿಸಿದ ಕೆಲ ದಾಂಡಿಗರು ಅಂತಾರಾಷ್ಟ್ರೀಯ ಟಿ20 ಮಾದರಿಯಲ್ಲಿ ಒಂದೇ ಒಂದು ಅರ್ಧಶತಕವನ್ನು ಸಿಡಿಸುವಲ್ಲಿ ವಿಫಲರಾಗಿದ್ದಾರೆ.

ಮಿಥಾಲಿ ರಾಜ್, ಆರ್‌ ಅಶ್ವಿನ್ ಹೆಸರು ರಾಜೀವ್ ಗಾಂಧಿ ಖೇಲ್ ರತ್ನಕ್ಕೆ ಶಿಫಾರಸುಮಿಥಾಲಿ ರಾಜ್, ಆರ್‌ ಅಶ್ವಿನ್ ಹೆಸರು ರಾಜೀವ್ ಗಾಂಧಿ ಖೇಲ್ ರತ್ನಕ್ಕೆ ಶಿಫಾರಸು

ಹಾಗಾದರೆ ಅಂತಾರಾಷ್ಟ್ರೀಯ ಟಿ20 ಮಾದರಿಯಲ್ಲಿ ಅರ್ಧಶತಕವನ್ನು ಬಾರಿಸಲು ವಿಫಲರಾದ ಸೂಪರ್ ಸ್ಟಾರ್‌ಗಳು ಯಾರು? ಈ ಹೆಸರುಗಳನ್ನು ನೋಡಿದರೆ ಖಂಡಿತಾ ನಿಮಗೆ ಅಚ್ಚರಿಯಾಗಲಿದೆ. ಮುಂದೆ ಓದಿ

ಹಾರ್ದಿಕ್ ಪಾಂಡ್ಯ

ಹಾರ್ದಿಕ್ ಪಾಂಡ್ಯ

ಟೀಮ್ ಇಂಡಿಯಾದ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಪ್ರಸಕ್ತ ಕಾಲದ ಅತ್ಯುತ್ತಮ ಆಲ್‌ರೌಂಡರ್‌ಗಳಲ್ಲಿ ಒಬ್ಬರು ಎನಿಸಿದ್ದಾರೆ. ಬ್ಯಾಟಿಂಗ್ ಬೌಲಿಂಗ್ ಹಾಗೂ ಫಿಲ್ಡಿಂಗ್ ಮೂಲಕ ಪಂದ್ಯವನ್ನು ತಮ್ಮ ತಂಡದ ಪರವಾಗಿ ತಿರುಗಿಸಬಲ್ಲ ಸಾಮರ್ಥ್ಯ ಈ ಕ್ರಿಕೆಟಿಗನಿಗೆ ಇದೆ. ಕಳೆದ ಆಸ್ಟ್ರೇಲಿಯಾ ಪ್ರವಾಸದಲ್ಲಿ ಹಾರ್ದಿಕ್ ಪಾಂಡ್ಯಾ ಭಾರತದ ಪರವಾಗಿ ಅದ್ಭುತವಾದ ಪ್ರದರ್ಶನವನನ್ಉ ನೀಡಿದ್ದಾರೆ. ಆದರೆ ಈವರೆಗೆ ಅಂತಾರಾಷ್ಟ್ರೀಯ ಟಿ20 ಮಾದರಿಯಲ್ಲಿ ಒಂದೇ ಒಂದು ಅರ್ಧ ಶತಕವನ್ನು ಬಾರಿಸಲು ಹಾರ್ದಿಕ್ ಪಾಂಡ್ಯಗೆ ಸಾಧ್ಯವಾಗಿಲ್ಲ. ಪಾಂಡ್ಯ ಟಿ20Iನ ಹೈಯೆಸ್ಟ್ ಸ್ಕೋರ್ 47* ಆಗಿದೆ.

ಆಂಡ್ರೆ ರಸ್ಸೆಲ್

ಆಂಡ್ರೆ ರಸ್ಸೆಲ್

ಈ ಪಟ್ಟಿಯಲ್ಲಿ ಕಾಣಿಸುಕೊಳ್ಳುವ ಮತ್ತೋರ್ವ ಸ್ಟಾರ್ ಆಟಗಾರ ಎಂದರೆ ಅದು ಆಂಡ್ರೆ ರಸ್ಸೆಲ್. ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡದ ಮ್ಯಾಚ್ ವಿನ್ನರ್ ಎನಿಸಿರುವ ಈ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ರೀತಿಯಲ್ಲಿಯೇ ಪಂದ್ಯದ ಫಲಿತಾಂಶವನ್ನು ಏಕಾಂಗಿಯಾಗಿ ಬದಲಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಐಪಿಎಲ್‌ನಲ್ಲಿ ಕೆಕೆಆರ್ ಪರವಾಗಿ ಆಡುತ್ತಿರುವ ಇವರು ಸಾಕಷ್ಟು ಮ್ಯಾಚ್ ವಿನ್ನಿಂಗ್ ಪ್ರದರ್ಶನವನ್ನು ನೀಡಿದ್ದಾರೆ. ಅಲ್ಲಿ ಕೆಲ ಬಾರಿ ಅರ್ಧಶತಕದ ಸಾಧನೆಯನ್ನೂ ಮಾಡಿದ್ದಾರೆ. ಆದರೆ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಆಂಡ್ರೆ ರಸ್ಸೆಲ್‌ಗೆ ಈ ಸಾಧನೆಯನ್ನು ಒಂದು ಬಾರಿಯೂ ಮಾಡಲು ಸಾಧ್ಯವಾಗಿಲ್ಲ. 41 ಟಿ20I ಇನ್ನಿಂಗ್ಸ್‌ಗಳನ್ನು ಆಡಿರುವ ರಸ್ಸೆಲ್ 540 ರನ್‌ಗಳನ್ನು ಬಾರಿಸಿದ್ದಾರೆ. ಅವರ ಹೈಯೆಸ್ಟ್ ಸ್ಕೋರ್ 47 ರನ್.

ಬೆನ್ ಸ್ಟೋಕ್ಸ್

ಬೆನ್ ಸ್ಟೋಕ್ಸ್

ಈ ಪಟ್ಟಿಯಲ್ಲಿ ಕಾಣಿಸಿಕೊಳ್ಳುವ ಮತ್ತಷ್ಟು ಅಚ್ಚರಿಯ ಹೆಸರೆಂದರೆ ಇಂಗ್ಲೆಂಡ್‌ ಆಲ್‌ರೌಂಡರ್ ಬೆನ್ ಸ್ಟೋಕ್ಸ್ ಹೆಸರು. ಚುಟುಕು ಮಾದರಿಯ ಕ್ರಿಕೆಟ್‌ನಲ್ಲಿ ಇಂಗ್ಲೆಂಡ್ ಪರವಾಗಿ ಈ ಸ್ಟಾರ್ ಆಟಗಾರ ಒಂದು ಅರ್ಧ ಶತಕವನ್ನು ಬಾರಿಸಿಲ್ಲ ಎಂಬುದು ಆಶ್ಚರ್ಯ ಎನಿಸಿದರೂ ಸತ್ಯ. ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಬೆನ್ ಸ್ಟೋಕ್ಸ್ 47 ರನ್‌ಗಿಂತ ಹೆಚ್ಚಿನ ಸ್ಕೋರ್ ಮಾಡಿಲ್ಲ.

ದಿನೇಶ್ ಕಾರ್ತಿಕ್

ದಿನೇಶ್ ಕಾರ್ತಿಕ್

ಸೀಮಿತ ಓವರ್‌ಗಳಲ್ಲಿ ಭಾರತದ ಪರವಾಗಿ ಅತ್ಯುತ್ತಮ ಫಿನಿಷರ್‌ಗಳಲ್ಲಿ ದಿನೇಶ್ ಕಾರ್ತಿಕ್ ಕೂಡ ಒಬ್ಬರು ಎಂದು ಖ್ಯಾತಿ ಗಳಿಸಿದ್ದಾರೆ. ಬಾಂಗ್ಲಾದೇಶ ವಿರುದ್ಧದ ನಿದಾಹಸ್ ಟ್ರೋಫಿಯಲ್ಲಿ ನೀಡಿದ ಶ್ರೆಷ್ಠ ಪ್ರದರ್ಶನ ದಿನೇಶ್ ಕಾರ್ತಿಕ್ ಅವರನ್ನು ಮತ್ತಷ್ಟು ಜನಪ್ರಿಯವಾಗಿಸಿತ್ತು. ಭಾರತ ತಂಡ ಆಡಿದ ಪ್ರಪ್ರಥಮ ಅಂತಾರಾಷ್ಟ್ರೀಯ ಟಿ20 ಪಂದ್ಯದಲ್ಲಿ ಆಡುವ ಬಳಗದಲ್ಲಿದ್ದರು ದಿನೇಶ್ ಕಾರ್ತಿಕ್. 2006ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ಈ ಪಂದ್ಯವನ್ನು ಆಡಿತ್ತು. ಈವರೆಗೆ ದಿನೇಶ್ ಕಾರ್ತಿಕ್ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ 399 ರನ್‌ಗಳಿಸಿದ್ದಾರೆ. ಅವರ ಹೈಯೆಸ್ಟ್ ಸ್ಕೋರ್ 48 ರನ್.

ಕ್ರಿಸ್ ಲಿನ್

ಕ್ರಿಸ್ ಲಿನ್

ಮೇಲಿನ ಎಲ್ಲಾ ಬ್ಯಾಟ್ಸ್‌ಮನ್‌ಗಳು ಕೂಡ ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿಯುವ ಆಟಗಾರರಾಗಿದ್ದರೆ ಕ್ರಿಸ್ ಲಿನ್ ಮಾತ್ರ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್ ಆಗಿದ್ದರೂ ಒಂದೇ ಒಂದು ಅರ್ಧ ಶತಕವನ್ನು ಬಾರಿಸಲು ಸಾಧ್ಯವಾಗಿಲ್ಲ. ಆಸ್ಟ್ರೇಲಿಯಾದ ಈ ಕ್ರಿಕೆಟಿಗ ಚುಟುಕು ಕ್ರಿಕೆಟ್‌ನಲ್ಲಿ ಆಸಿಸ್ ತಂಡವನ್ನು 18 ಪಂದ್ಯಗಳಲ್ಲಿ ಪ್ರತಿನಿಧಿಸಿದ್ದಾರೆ. 19.40 ಸರಾಸರಿಯಲ್ಲಿ 291 ರನ್‌ಗಳನ್ನಷ್ಟೇ ಲಿನ್ ಬಾರಿಸಿದ್ದು ಇವರ ಅತ್ಯುತ್ತಮ ಸ್ಕೋರ್ 44 ರನ್.

ಐಸಿಸಿ ಟಿ20 ವಿಶ್ವಕಪ್ 2021 ಊಹಿಸು
Match 5 - October 19 2021, 03:30 PM
ಸ್ಕಾಟ್ಲೆಂಡ್
ಪಪುವಾ ನ್ಯೂ ಗಿನಿವಾ
Predict Now

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Wednesday, June 30, 2021, 17:01 [IST]
Other articles published on Jun 30, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X