ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿರಾಟ್ ಕೊಹ್ಲಿಯಿಂದ ಮುರಿಯಲು ಸಾಧ್ಯವೇ ಇಲ್ಲದ 5 ದಾಖಲೆಗಳು

5 Records Virat Kohli Can Never Break

ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ದಾಖಲೆಗಳ ಮೇಲೆ ದಾಖಲೆಗಳನ್ನು ಬರೆಯುತ್ತಿರುವ ಆಟಗಾರ. ಕ್ರಿಕೆಟ್‌ನಲ್ಲಿ ಸಚಿನ್ ತೆಂಡೂಲ್ಕರ್ ದಾಖಲಿಸಿದ ಅನೇಕ ದಾಖಲೆಗಳನ್ನು ವಿರಾಟ್ ಕೊಹ್ಲಿ ತಮ್ಮ ಹೆಸರಿನಲ್ಲಿ ಬರೆದುಕೊಂಡಿದ್ದಾರೆ. ಪ್ರತಿ ಪಂದ್ಯದಲ್ಲೂ ಕೊಹ್ಲಿ ಒಂದಲ್ಲಾ ಒಂದು ದಾಖಲೆಯನ್ನು ತಮ್ಮ ಹೆಸರಿನಲ್ಲಿ ಬರೆಯುತ್ತಿದ್ದಾರೆ.

ವಿಶ್ವ ಕ್ರಿಕೆಟ್‌ನ ದೇವರು ಎನಿಸಿಕೊಂಡ ಸಚಿನ್ ತೆಂಡೂಲ್ಕರ್ ಬರೆದ ಅಸಾಧ್ಯ ಎಂಬಂತಾ ಕೆಲ ದಾಖಲೆಗಳ ಸನಿಹಕ್ಕೆ ವಿರಾಟ್ ಕೊಹ್ಲಿ ಬಂದಿ ನಿಂತಿದ್ದಾರೆ. ಹಾಗಿದ್ದರೂ ವಿಶ್ವ ಕ್ರಿಕೆಟ್‌ನಲ್ಲಿ ದಾಖಲಾಗಿರುವ ಕೆಲ ರೆಕಾರ್ಡ್‌ಗಳನ್ನು ವಿರಾಟ್ ಕೊಹ್ಲಿ ಕೈಯ್ಯಲ್ಲಿ ಮುರಿಯಲು ಸಾಧ್ಯವೇ ಇಲ್ಲ.

ಕೊಹ್ಲಿಯ ನಂತರ ನಾಯಕತ್ವ ರೋಹಿತ್‌ಗೆ ಅಲ್ಲಕೊಹ್ಲಿಯ ನಂತರ ನಾಯಕತ್ವ ರೋಹಿತ್‌ಗೆ ಅಲ್ಲ

ವಿರಾಟ್ ಕೊಹ್ಲಿ ಕೈಯ್ಯಲ್ಲಿ ಮುರಿಯಲು ಸಾಧ್ಯವೇ ಇಲ್ಲದಂತಾ 5 ದಾಖಲೆಗಳು ಯಾವುದು ಅನ್ನುವ ವರದಿಯನ್ನು ನಿಮ್ಮ ಮುಂದಿಡುತ್ತಿದ್ದೇವೆ. ಮುಂದೆ ಓದಿ

#5. ಏಕದಿನದಲ್ಲಿ 18426 ರನ್

#5. ಏಕದಿನದಲ್ಲಿ 18426 ರನ್

ವಿಶ್ವ ಕ್ರಿಕೆಟ್‌ನಲ್ಲಿ ವಿರಾಟ್ ಕೊಹ್ಲಿ ಮತ್ತು ಸಚಿನ್ ತೆಂಡೂಲ್ಕರ್ ಆಟವನ್ನು ಹೋಲಿಸಲಾಗುತ್ತಿದೆ. ಇಬ್ಬರೂ ತಂಡದ ಅತ್ಯಂತ ಪ್ರಮುಖ ಬ್ಯಾಟ್ಸ್‌ಮನ್‌ಗಳು. ಏಕದಿನದಲ್ಲಿ ವಿರಾಟ್ ಕೊಹ್ಲಿ ಸಚಿನ್ ತೆಂಡೂಲ್ಕರ್ ಶತಕದ ದಾಖಲೆಯನ್ನು ಮುರಿಯುವ ಭರವಸೆಯನ್ನು ನೀಡಿದ್ದಾರೆ. ಕೇವಲ 6 ಶತಕಗಳಿಂದಷ್ಟೇ ಕೊಹ್ಲಿ ಸಚಿನ್‌ಗಿಂತ ಹಿಂದಿದ್ದಾರೆ. ಆದರೆ ಏಕದಿನದಲ್ಲಿ ಸಚಿನ್ ತೆಂಡೂಲ್ಕರ್ 18426 ರನ್ ದಾಖಲಿಸಿದ್ದು ಈ ಬೃಹತ್ ರನ್ ಬೆನ್ನತ್ತಲು ವಿರಾಟ್ ಕೈಯ್ಯಲ್ಲಿ ಸಾಧ್ಯವಿಲ್ಲ. ಇನ್ನೂ ಕೆಲ ವರ್ಷ ಈ ದಾಖಲೆ ಮಾತ್ರ ಅತ್ಯಂತ ಸುರಕ್ಷಿತವಾಗಿರುವುದರಲ್ಲಿ ಅನುಮಾನವಿಲ್ಲ.

#4. ಟೆಸ್ಟ್‌ನಲ್ಲಿ ಒಂದು ಇನ್ನಿಂಗ್ಸ್‌ನಲ್ಲಿ 400*

#4. ಟೆಸ್ಟ್‌ನಲ್ಲಿ ಒಂದು ಇನ್ನಿಂಗ್ಸ್‌ನಲ್ಲಿ 400*

ಕ್ರಿಕೆಟ್‌ನ ಮತ್ತೋರ್ವ ದಂತಕತೆ ಬ್ರ್ಯಾನ್ ಲಾರಾ. ಸಚಿನ್ ತೆಂಡೂಲ್ಕರ್ ರೀತಿಯಲ್ಲೇ ಬ್ರ್ಯಾನ್ ಲಾರಾ ಕೂಡ ಅನೇಕ ದಾಖಲೆಗಳನ್ನು ತಮ್ಮ ಹೆಸರಿನಲ್ಲಿ ಬರೆದುಕೊಂಡಿದ್ದಾರೆ. ಅದರಲ್ಲಿ ಒಂದು ಇನ್ನಿಂಗ್ಸ್‌ನಲ್ಲಿ ಔಟಾಗದೆ ಗಳಿಸಿದ 400 ರನ್ ವಿಶಿಷ್ಟ ದಾಖಲೆ. ಈ ದಾಖಲೆಯನ್ನು ವಿರಾಟ್ ಕೊಹ್ಲಿಯಿಂದ ಮುರಿಯಲು ಸಾಧ್ಯವಿಲ್ಲ.

#3. ಏಕದಿನ ಇನ್ನಿಂಗ್ಸ್‌ನಲ್ಲಿ 264 ರನ್

#3. ಏಕದಿನ ಇನ್ನಿಂಗ್ಸ್‌ನಲ್ಲಿ 264 ರನ್

ಟೀಮ್ ಇಂಡಿಯಾದ ಮತ್ತೋರ್ವ ಪ್ರತಿಭಾನ್ವಿತ ಅನುಭವಿ ಆಟಗಾರ ರೋಹಿತ್ ಶರ್ಮಾ. ಏಕದಿನ ಇನ್ನಿಂಗ್ಸ್‌ ಒಂದರಲ್ಲಿ ರೋಹಿತ್ ಶರ್ಮಾ 264 ರನ್‌ಗಳನ್ನು ಗಳಿಸಿದ್ದಾರೆ. ಏಕದಿನ ಇತಿಹಾಸದಲ್ಲಿ ದಾಖಲಾಗಿರುವ ದಾಖಲೆಯ ರನ್ ಇದಾಗಿದೆ. ಈ ದಾಖಲೆಯನ್ನು ವಿರಾಟ್ ಕೊಹ್ಲಿ ಕೈಯ್ಯಲ್ಲಿ ,ಉರಿಯಲು ಸಾಧ್ಯವೇ ಇಲ್ಲ.ಇದಕ್ಕೆ ಕಾರಣವೂ ಇದೆ. ವಿರಾಟ್ ಕೊಹ್ಲಿ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿಯುತ್ತಾರೆ. ಇಂತಾ ಇನ್ನಿಂಗ್ಸ್‌ಗಳು ಬರಬೇಕಾದರೆ ಆರಂಭದಿಂದಲೂ ಬ್ಯಾಟ್ಸ್‌ಮನ್ ಕ್ರೀಸ್‌ನಲ್ಲಿ ಇರಬೇಕಾಗುತ್ತದೆ. ಹೀಗಾಗಿ ಈ ದಾಖಲೆಯನ್ನು ಮುರಿಯುವುದು ಕೂಡ ಅಸಾಧ್ಯವೇ ಆಗಿದೆ.

#2. ಟೆಸ್ಟ್‌ನಲ್ಲಿ 15,921

#2. ಟೆಸ್ಟ್‌ನಲ್ಲಿ 15,921

ಟೆಸ್ಟ್‌ನಲ್ಲಿ ಸಚಿನ್ ತೆಂಡೂಲ್ಕರ್ ಗಳಿಸಿರುವ 15921 ರನ್‌ಗಳನ್ನು ತಲುಪುವುದು ಕೂಡ ಕೊಹ್ಲಿಯಿಂದ ಸಾಧ್ಯವಾಗದ ಮಾತು. ಸಚಿನ್ ತೆಂಡೂಲ್ಕರ್ ಟೆಸ್ಟ್‌ ಕ್ರಿಕೆಟ್‌ನಲ್ಲಿ ಬೃಹತ್‌ ರನ್‌ಗಳನ್ನು ಕಲೆಹಾಕಿದ್ದಾರೆ. 86 ಟೆಸ್ಟ್ ಪಂದ್ಯಗಳನ್ನಾಡಿರುವ ವಿರಾಟ್ ಕೊಹ್ಲಿ ಸದ್ಯ 7240 ರನ್ ಗಳಿಸಿದ್ದಾರೆ. ಉಳಿದಿರುವ ಕೆರಿಯರ್‌ನಲ್ಲಿ ಕೊಹ್ಲಿ ಈಗ ಗಳಿಸಿರುವ ರನ್‌ಗಳಿಗಿಂತಲೂ ಹೆಚ್ಚು ರನ್ ಬಾರಿಸಬೇಕಾಗುತ್ತದೆ.

#1. 200 ಅಂತಾರಾಷ್ಟ್ರೀಯ ಟೆಸ್ಟ್ ಪಂದ್ಯಗಳು

#1. 200 ಅಂತಾರಾಷ್ಟ್ರೀಯ ಟೆಸ್ಟ್ ಪಂದ್ಯಗಳು

ವಿರಾಟ್ ಕೊಹ್ಲಿಯಿಂದ ಮುರಿಯಲು ಸಾಧ್ಯವೇ ಇಲ್ಲದ ಮತ್ತೊಂದು ದಾಖಲೆಯೂ ಸಚಿನ್ ತೆಂಡೂಲ್ಕರ್ ಹೆಸರಿನಲ್ಲೇ ಇದೆ. ಅದು ಟೆಸ್ಟ್‌ನಲ್ಲಿ 200 ಪಂದ್ಯಗಳನ್ನು ಆಡುವುದು. ವಿರಾಟ್ ಕೊಹ್ಲಿ ಈವರೆಗೆ 86 ಟೆಸ್ಟ್ ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. ವಿರಾಟ್ ಪಾಲಿಗೆ ಈ ಸಂಖ್ಯೆ ಸಾಕಷ್ಟು ದೂರವಿದೆ. ಮೂರೂ ಫಾರ್ಮೆಟ್‌ಗಳಲ್ಲಿ ಆಡುತ್ತಿರುವ ಕೊಹ್ಲಿ ಟೆಸ್ಟ್‌ನಲ್ಲಿ ಇನ್ನೂರು ಪಂದ್ಯಗಳನ್ನು ಪ್ರತಿನಿಧಿಸುವುದು ಅಸಾಧ್ಯವೇ ಆಗಿದೆ.

Story first published: Thursday, March 26, 2020, 17:24 [IST]
Other articles published on Mar 26, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X