ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ ಇತಿಹಾಸದಲ್ಲಿ ಕೋಟಿ ಕೋಟಿ ಪಡೆದು ಕಳಪೆ ಪ್ರದರ್ಶನ ನೀಡಿದ 5 ಆರ್‌ಸಿಬಿ ಆಟಗಾರರು

5 Times RCB overspent on their players in IPL history

ಏಪ್ರಿಲ್ 9ರಂದು ಆರಂಭವಾಗಿದ್ದ 14ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಯಾವುದೇ ಅಡಚಣೆಗಳಿಲ್ಲದೆ 29 ಪಂದ್ಯಗಳನ್ನು ಯಶಸ್ವಿಯಾಗಿ ಪೂರೈಸಿತು. ಆದರೆ ಐಪಿಎಲ್ ಬಯೋಬಬಲ್ ಒಳಗಡೆ ಕೊರೊನಾ ಪ್ರವೇಶಿಸಿ ವಿವಿಧ ತಂಡಗಳ ಕೆಲ ಆಟಗಾರರು ಮತ್ತು ತರಬೇತುದಾರರಿಗೆ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಪ್ರಸ್ತುತ ಐಪಿಎಲ್ ಟೂರ್ನಿಯನ್ನು ಮುಂದೂಡಲಾಯಿತು. ಸದ್ಯ ಸೆಪ್ಟೆಂಬರ್ ತಿಂಗಳಿನಲ್ಲಿ ಯುಎಇಯಲ್ಲಿ ಈ ಬಾರಿ ಐಪಿಎಲ್ ಟೂರ್ನಿಯ ಉಳಿದ 31 ಪಂದ್ಯಗಳನ್ನು ನಡೆಸುವ ಸಾಧ್ಯತೆಗಳಿವೆ.

ಐಪಿಎಲ್ ಮುಂದುವರೆದಿದ್ದರೂ ನಾನು ಆಡುತ್ತಿರಲಿಲ್ಲ; ಸಮಸ್ಯೆ ಹಂಚಿಕೊಂಡ ಚಾಹಲ್ಐಪಿಎಲ್ ಮುಂದುವರೆದಿದ್ದರೂ ನಾನು ಆಡುತ್ತಿರಲಿಲ್ಲ; ಸಮಸ್ಯೆ ಹಂಚಿಕೊಂಡ ಚಾಹಲ್

ಪ್ರಸ್ತುತ ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್ ಇತಿಹಾಸದಲ್ಲಿಯೇ ಪಡೆದುಕೊಳ್ಳದಂತಹ ಉತ್ತಮ ಆರಂಭವನ್ನು ಪಡೆದುಕೊಂಡಿತು. ತಂಡದ ಪ್ರತಿಯೊಂದು ವಿಭಾಗವೂ ಉತ್ತಮ ಪ್ರದರ್ಶನ ತೋರಿದ ಕಾರಣ ಬೆಂಗಳೂರು ತಂಡ ಪ್ರಸ್ತುತ ಐಪಿಎಲ್ ಟೂರ್ನಿಯಲ್ಲಿ ಸಾಲು ಸಾಲು ಗೆಲುವುಗಳನ್ನು ಸಾಧಿಸಿ ಅಂಕಪಟ್ಟಿಯಲ್ಲಿ ಉತ್ತಮ ಸ್ಥಾನದಲ್ಲಿದೆ.

ಕೊಹ್ಲಿ 71ನೇ ಶತಕ ಬಾರಿಸುವುದರ ಕುರಿತು ಭವಿಷ್ಯ ನುಡಿದ ಸಲ್ಮಾನ್ ಬಟ್ಕೊಹ್ಲಿ 71ನೇ ಶತಕ ಬಾರಿಸುವುದರ ಕುರಿತು ಭವಿಷ್ಯ ನುಡಿದ ಸಲ್ಮಾನ್ ಬಟ್

ಹೀಗೆ ಪ್ರಸ್ತುತ ಟೂರ್ನಿಯಲ್ಲಿ ಉತ್ತಮ ಸ್ಥಾನದಲ್ಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ತನ್ನದೇ ಆದ ಹಲವು ವಿಶಿಷ್ಟ ದಾಖಲೆಗಳು ಮತ್ತು ಮೈಲಿಗಲ್ಲುಗಳನ್ನು ಹೊಂದಿದೆ. ತನ್ನ ಆಟಗಾರರಿಗೆ ಐಷಾರಾಮಿ ಸೌಲಭ್ಯಗಳನ್ನು ಒದಗಿಸುವ ಫ್ರಾಂಚೈಸಿಗಳಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಕೂಡ ಒಂದು. ಅದರಲ್ಲಿಯೂ ಹರಾಜಿನ ವೇಳೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೆಲವೊಂದಿಷ್ಟು ಆಟಗಾರರಿಗೆ ಮಿತಿ ಮೀರಿದ ಹಣವನ್ನು ಸುರಿದು ಖರೀದಿಸಿದ ಉದಾಹರಣೆಗಳು ಸಾಕಷ್ಟಿವೆ. ಈ ರೀತಿ ದೊಡ್ಡ ಮೊತ್ತ ಪಡೆದು ಆರ್‌ಸಿಬಿ ಸೇರಿದ ಆಟಗಾರರು ಉತ್ತಮ ಪ್ರದರ್ಶನ ತೋರಿದ್ದಕ್ಕಿಂತ ಕಳಪೆ ಪ್ರದರ್ಶನ ನೀಡಿದ್ದೇ ಹೆಚ್ಚು. ಐಪಿಎಲ್ ಇತಿಹಾಸದಲ್ಲಿ ಕೋಟಿ ಕೋಟಿ ಸಂಭಾವನೆ ಪಡೆದು ನೆಲಕಚ್ಚಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ 5 ಆಟಗಾರರ ಪಟ್ಟಿ ಈ ಕೆಳಕಂಡಂತಿದೆ ನೋಡಿ.

1. ಟೈಮಲ್ ಮಿಲ್ಸ್

1. ಟೈಮಲ್ ಮಿಲ್ಸ್

ಇತ್ತೀಚೆಗಷ್ಟೇ ಪಾಕಿಸ್ತಾನ್ ಸೂಪರ್ ಲೀಗ್‌ಗಿಂತ ಇಂಡಿಯನ್ ಪ್ರೀಮಿಯರ್ ಲೀಗ್ ಅತ್ಯುತ್ತಮ ಟೂರ್ನಿ ಎಂದು ಕೊಂಡಾಡಿದ್ದ ಇಂಗ್ಲೆಂಡ್ ಕ್ರಿಕೆಟಿಗ ಟೈಮಲ್ ಮಿಲ್ಸ್ 2017ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಆಯ್ಕೆಯಾಗಿದ್ದರು. ಆ ವರ್ಷದ ಹರಾಜಿನಲ್ಲಿ ಬರೋಬ್ಬರಿ 12 ಕೋಟಿಗೆ ಖರೀದಿಸಲ್ಪಟ್ಟಿದ್ದ ಟೈಮಲ್ ಮಿಲ್ಸ್ ಬೆಂಗಳೂರು ತಂಡದ ಪರ 5 ಪಂದ್ಯಗಳನ್ನಾಡಿ ಕೇವಲ 5 ವಿಕೆಟ್‍ಗಳನ್ನು ಪಡೆದುಕೊಂಡು ಕಳಪೆ ಪ್ರದರ್ಶನ ನೀಡಿದ್ದರು.

2. ಯುವರಾಜ್ ಸಿಂಗ್

2. ಯುವರಾಜ್ ಸಿಂಗ್

ಐಪಿಎಲ್ ಇತಿಹಾಸದಲ್ಲಿ ಉತ್ತಮ ಆಟವನ್ನು ಆಡಿದ್ದ ಕಾರಣಕ್ಕೆ ಯುವರಾಜ್ ಸಿಂಗ್ ದೊಡ್ಡ ಮಟ್ಟದ ಬೇಡಿಕೆಯನ್ನು ಹೊಂದಿದ್ದರು. ಈ ಕಾರಣದಿಂದಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಯುವರಾಜ್ ಸಿಂಗ್‌ರನ್ನು 14 ಕೋಟಿ ನೀಡುವುದರ ಮೂಲಕ 2014ರ ಐಪಿಎಲ್ ಹರಾಜಿನಲ್ಲಿ ಖರೀದಿಸಿತ್ತು. ಆ ಆವೃತ್ತಿಯಲ್ಲಿ ಯುವರಾಜ್ ಸಿಂಗ್ 376 ರನ್ ಗಳಿಸಿದರೂ ಕೂಡ 16 ಕೋಟಿಗೆ ತಕ್ಕನಾದ ಆಟವನ್ನು ಆಡಲಿಲ್ಲ.

3. ದಿನೇಶ್ ಕಾರ್ತಿಕ್

3. ದಿನೇಶ್ ಕಾರ್ತಿಕ್

ದಿನೇಶ್ ಕಾರ್ತಿಕ್ 2015ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪಾಲಾದರು. ಆ ವರ್ಷದ ಐಪಿಎಲ್ ಹರಾಜಿನಲ್ಲಿ 10.5 ಕೋಟಿಯ ದೊಡ್ಡ ಮೊತ್ತವನ್ನು ಬೆಂಗಳೂರು ತಂಡ ದಿನೇಶ್ ಕಾರ್ತಿಕ್ ಖರೀದಿಗೆ ಹೂಡಿತ್ತು. ಆದರೆ ನೀಡಿದಂತಹ ದೊಡ್ಡ ಮೊತ್ತಕ್ಕೆ ತಕ್ಕಂತ ಆಟ ದಿನೇಶ್ ಕಾರ್ತಿಕ್ ಬ್ಯಾಟ್‌ನಿಂದ ಬರಲಿಲ್ಲ. ಆ ಆವೃತ್ತಿಯಲ್ಲಿ ದಿನೇಶ್ ಕಾರ್ತಿಕ್ ಬೆಂಗಳೂರು ತಂಡದ ಪರ 141 ರನ್ ಬಾರಿಸಿ ಸಾಧಾರಣ ಆಟವನ್ನಾಡಿದರು.

4. ಕ್ರಿಸ್ ವೋಕ್ಸ್

4. ಕ್ರಿಸ್ ವೋಕ್ಸ್

2017ರಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ಪರ ಭರ್ಜರಿ ಪ್ರದರ್ಶನ ನೀಡಿದ್ದ ಆಲ್‌ರೌಂಡರ್ ಕ್ರಿಸ್ ವೋಕ್ಸ್ 17 ವಿಕೆಟ್ ಪಡೆದು ಮಿಂಚಿದ್ದರು. ಈ ಕಾರಣದಿಂದಲೇ 2018ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕ್ರಿಸ್ ವೋಕ್ಸ್‌ಗೆ 7.4 ಕೋಟಿ ನೀಡಿ ಖರೀದಿಸಿತ್ತು. ಆದರೆ ಆ ಆವೃತ್ತಿಯಲ್ಲಿ ಕ್ರಿಸ್ ವೋಕ್ಸ್ ಹೇಳಿಕೊಳ್ಳುವಂತಹ ಪ್ರದರ್ಶನ ನೀಡದೆ ನೆಲಕಚ್ಚಿದರು. ಹಾಗೂ ಮುಂದಿನ ಆವೃತ್ತಿಯಲ್ಲಿ ಕ್ರಿಸ್ ವೋಕ್ಸ್ ಯಾವ ತಂಡದಿಂದಲೂ ಖರೀದಿಸಲ್ಪಡಲಿಲ್ಲ.

5. ಸೌರಭ್ ತಿವಾರಿ

5. ಸೌರಭ್ ತಿವಾರಿ

2011ರ ಐಪಿಎಲ್ ಹರಾಜಿನಲ್ಲಿ ಅತಿಹೆಚ್ಚು ಮೊತ್ತಕ್ಕೆ ಖರೀದಿಸಲ್ಪಟ್ಟ ಆಟಗಾರ ಎಂದರೆ ಅದು ಸೌರಭ್ ತಿವಾರಿ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸೌರಭ್ ತಿವಾರಿಗೆ 16 ಲಕ್ಷ ಡಾಲರ್ ನೀಡಿ ಖರೀದಿಸಿತು. ಅದೇ ಆವೃತ್ತಿಯಲ್ಲಿ ಎಬಿ ಡಿವಿಲಿಯರ್ಸ್ 11 ಲಕ್ಷ ಡಾಲರ್‌ಗೆ ಖರೀದಿಸಲ್ಪಟ್ಟಿದ್ದರು. ಎಬಿಡಿಗಿಂತ ಹೆಚ್ಚು ಮೊತ್ತಕ್ಕೆ ಬೆಂಗಳೂರು ತಂಡದಿಂದ ಖರೀದಿಸಲ್ಪಟ್ಟ ಸೌರಭ್ ತಿವಾರಿ ಆರ್‌ಸಿಬಿ ಪರ 3 ಆವೃತ್ತಿಗಳನ್ನಾಡಿ ಕೇವಲ 487 ರನ್ ಗಳಿಸಿ ತೀರಾ ಕಳಪೆ ಪ್ರದರ್ಶನವನ್ನು ನೀಡಿದರು.

Story first published: Monday, May 24, 2021, 9:53 [IST]
Other articles published on May 24, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X