ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಬ್ಯಾನ್ ಬಳಿಕ ಬಲಿಷ್ಠ ಕಮ್‌ಬ್ಯಾಕ್ ಮಾಡಿದ ಜನಪ್ರಿಯ 5 ಕ್ರಿಕೆಟಿಗರು

5 Top Cricketers Who Made Strong Comebacks After Getting Banned

ಬೆಂಗಳೂರು: ಬದುಕಿನಲ್ಲಿ ಎರಡನೇ ಅವಕಾಶ ಇದ್ದೇ ಇರುತ್ತದೆ ಎಂದು ಸಾಮಾನ್ಯವಾಗಿ ಎಲ್ಲರೂ ಹೇಳುತ್ತಿರುತ್ತಾರೆ. ಮನುಷ್ಯನಾದವನು ಬದುಕಿನಲ್ಲಿ ತಪ್ಪು ಮಾಡಿಯೇ ಮಾಡಿರುತ್ತಾನೆ. ತಪ್ಪು ಮನ್ನಿಸಿ ಅವಕಾಶವಿತ್ತರೆ ತಪ್ಪು ಮಾಡಿದ ಅದೇ ವ್ಯಕ್ತಿ ದೊಡ್ಡ ಸಾಧಕನಾಗಿ ಬೆಳೆಯಬಲ್ಲ ಸಾಧ್ಯತೆಯಿರುತ್ತದೆ. ಕ್ರಿಕೆಟ್‌ನಲ್ಲೂ ಇಂಥದ್ದೇ ನಡೆದಿದೆ. ಬುಕ್ಕಿಗಳನ್ನು ಸಂಪರ್ಕಿಸಿ ಇಲ್ಲವೆ ಅನೈತಿಕ ದಾರಿಯಿಂದ ಪಂದ್ಯ ಗೆದ್ದು ನಿಷೇಧಕ್ಕೀಡಾಗಿ, ಎರಡನೇ ಅವಕಾಶವನ್ನು ಸರಿಯಾಗಿ ಬಳಸಿ ಬೆಳೆದು ನಿಂತ ಅನೇಕ ಕ್ರಿಕೆಟಿಗರ ಕತೆಗಳಿವೆ.

3ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ನಡೆಯೋದು ವಿದೇಶದಲ್ಲಿ?!3ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ನಡೆಯೋದು ವಿದೇಶದಲ್ಲಿ?!

ಕ್ರಿಕೆಟಿಗರು ಎಸಗುವ ತಪ್ಪನ್ನು ಅವಲಂಭಿಸಿ ಅವರಿಗೆ ನಿಷೇಧ ಶಿಕ್ಷೆ ವಿಧಿಲಾಗುತ್ತದೆ. ಅಂದರೆ ನಿಷೇಧದ ಕಾಲಾವಧಿ ನಿರ್ಧರಿಸಲಾಗುತ್ತದೆ. ಆದರೆ ನಿಷೇಧದ ಕಾಲಾವಧಿ ಮುಗಿಸಿ ಮತ್ತೆ ಕ್ರಿಕೆಟ್‌ನಲ್ಲಿ ತೊಡಗಿ ಗಮನ ಸೆಳೆದ ಬಹಳಷ್ಟು ಕ್ರಿಕೆಟಿಗರ ಸ್ಫೂರ್ತಿಯ ನಿದರ್ಶನಗಳಿವೆ.

'ಆತ್ಮಹತ್ಯೆಗೆ ಯೋಚಿಸಿದ್ದೆ': ತೀವ್ರ ಖಿನ್ನತೆಗೆ ಒಳಗಾಗಿದ್ದ ಸಂದರ್ಭ ನೆನೆದ ಉತ್ತಪ್ಪ'ಆತ್ಮಹತ್ಯೆಗೆ ಯೋಚಿಸಿದ್ದೆ': ತೀವ್ರ ಖಿನ್ನತೆಗೆ ಒಳಗಾಗಿದ್ದ ಸಂದರ್ಭ ನೆನೆದ ಉತ್ತಪ್ಪ

ನಿಷೇಧದ ಬಳಿಕ ಸ್ಟ್ರಾಂಗ್ ಕಮ್‌ಬ್ಯಾಕ್‌ ಮಾಡಿದ ಜನಪ್ರಿಯ 5 ಕ್ರಿಕೆಟಿಗರ ಪಟ್ಟಿ ಇಲ್ಲಿದೆ. ಈ ಪಟ್ಟಿಯಲ್ಲಿರುವ ಹೆಸರು, ಮಾಹಿತಿ ಪಾಸಿಟಿವ್ ಥಿಂಕರ್ಸ್‌ಗೆ ಸ್ಫೂರ್ತಿಯೂ ತುಂಬುತ್ತದೆ.

1. ಶೇನ್ ವಾರ್ನ್

1. ಶೇನ್ ವಾರ್ನ್

ಆಸ್ಟ್ರೇಲಿಯಾದ ಸ್ಪಿನ್ ದಂತಕತೆ ಶೇನ್ ವಾರ್ನ್ 2003ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ 12 ತಿಂಗಳ ಕಾಲ ಅಂದರೆ ಒಂದು ವರ್ಷದ ನಿಷೇಧ ಶಿಕ್ಷೆಗೆ ಗುರಿಯಾಗಿದ್ದರು. ಲೆಗ್ ಸ್ಪಿನ್ನರ್ ವಾರ್ನ್ ನಿಷೇಧಿತ ಔಷಧ ಸೇವಿಸಿ ಸಿಕ್ಕಿಬಿದ್ದಿದ್ದರು. ಹೀಗಾಗಿ ಆಸ್ಟ್ರೇಲಿಯಾ ಕ್ರಿಕೆಟ್ ಬೋರ್ಡ್ ಒಂದು ವರ್ಷದ ನಿಷೇಧಕ್ಕೆ ಸಮ್ಮತಿಸಿತ್ತು. ಒಂದು ವರ್ಷದ ನಿಷೇಧ ಮುಗಿಸಿ ವಾಪಸ್ ಕ್ರಿಕೆಟ್ ಅಂಗಳಕ್ಕೆ ಬಂದ ವಾರ್ನ್, ಅದ್ಭುತ ಪ್ರದರ್ಶನ ನೀಡಿದದ್ದರು. 2007ರಲ್ಲಿ ಕಡೇಯ ಟೆಸ್ಟ್ ಪಂದ್ಯವನ್ನಾಡಿರುವ ವಾರ್ನ್ 273 ಟೆಸ್ಟ್ ಇನ್ನಿಂಗ್ಸ್‌ಗಳಲ್ಲಿ 708 ವಿಕೆಟ್‌, 191 ಏಕದಿನ ಇನ್ನಿಂಗ್ಸ್‌ಗಳಲ್ಲಿ 293 ವಿಕೆಟ್‌ ದಾಖಲೆ ಹೊಂದಿದ್ದಾರೆ.

2. ಮರ್ಲಾನ್ ಸ್ಯಾಮುಯೆಲ್ಸ್

2. ಮರ್ಲಾನ್ ಸ್ಯಾಮುಯೆಲ್ಸ್

ಆಸೀಸ್ ಸ್ಪಿನ್ನರ್ ಶೇನ್ ವಾರ್ನ್‌ಗೆ ಬದ್ಧ ಪ್ರತಿಸ್ಪರ್ಧಿಯಾಗಿದ್ದ ವೆಸ್ಟ್ ಇಂಡೀಸ್ ಆಟಗಾರ ಮರ್ಲಾನ್ ಸ್ಯಾಮುಯೆಲ್ಸ್ 2008ರಲ್ಲಿ 2 ವರ್ಷಗಳ ನಿಷೇಧಕ್ಕೆ ಗುರಿಯಾಗಿದ್ದರು. ಬೌಲಿಂಗ್ ಶೈಲಿ ಸರಿಯಿಲ್ಲವೆಂದು ಸ್ಯಾಮುಯೆಲ್ಸ್ ಅವರನ್ನು ಕ್ರಿಕೆಟ್‌ ಮೈದಾನದಿಂದ ದೂರ ಇಡಲಾಯ್ತು. ಆ ಬಳಿಕ ಬೌಲಿಂಗ್ ಶೈಲಿ ಸರಿಪಡಿಸಿಕೊಂಡು ಮತ್ತೆ ಮೈದಾನಕ್ಕಿಳಿದ ಮರ್ಲಾನ್ ವಿಂಡೀಸ್ ತಂಡದಲ್ಲಿ ಮಿನುಗಿದ್ದರು. ವಿಶೇಷವೆಂದರೆ ವಿಂಡೀಸ್ ತಂಡದ ಟಿ20 ವಿಶ್ವಕಪ್ ಜಯದಲ್ಲಿ ಸ್ಯಾಮುಯೆಲ್ಸ್ ಪ್ರಮುಖ ಪಾತ್ರ ವಹಿಸಿದ್ದರು.

3. ಶೋಯೆಬ್ ಅಖ್ತರ್

3. ಶೋಯೆಬ್ ಅಖ್ತರ್

ರಾವಲ್ಪಿಂಡಿ ಎಕ್ಸ್‌ಪ್ರೆಸ್ ಶೋಯೆಬ್ ಅಖ್ತರ್ ಪಾಕಿಸ್ತಾನ ಕ್ರಿಕೆಟ್ ಬೋರ್ಡ್‌ನಿಂದ 5 ವರ್ಷಗಳ ಸುದೀರ್ಘ ನಿಷೇಧಕ್ಕೆ ಗುರಿಯಾಗಿದ್ದರು. ಪಿಸಿಬಿಯನ್ನು ಸಾರ್ವಜನಿಕವಾಗಿ ಟೀಕಿಸಿದ್ದಕ್ಕಾಗಿ ಅಖ್ತರ್ ಪಿಸಿಬಿ ಕೆಂಗಣ್ಣಿಗೆ ಗುರಿಯಾಗಿದ್ದರು. ಅಖ್ತರ್ ಮುಖಕ್ಕೆ ಹೊಡೆದವರ ಹಾಗೆ ಮಾತನಾಡುವವರು ಅನ್ನೋದು ಬಹುಶಃ ಎಲ್ಲರಿಗೂ ಗೊತ್ತಿರಬಹುದು. ಇದು ಪಿಸಿಬಿ ಅಸಮಾಧಾನಕ್ಕೆ ಕಾರಣವಾಗಿತ್ತು. ಇದಕ್ಕೆ ಎರಡು ವರ್ಷಕ್ಕೆ ಮುಂಚೆ ಅಖ್ತರ್ ಉದ್ದೀಪನ ಮದ್ದು ಸೇವಿಸಿ ವಿವಾದ ಬೇರೆ ಸೃಷ್ಟಿಸಿಕೊಂಡಿದ್ದರು. ಏನೇ ಇರಲಿ, ನಿಷೇಧ ಮುಗಿಸಿ ಪಾಕ್ ತಂಡಕ್ಕೆ ವಾಪಸ್ಸಾಗಿದ್ದ ಅಖ್ತರ್ 2011ರಲ್ಲಿ ವಿಶ್ವಕಪ್ ನಲ್ಲಿ ಆಡಿದ್ದರು.

4. ಡೇವಿಡ್ ವಾರ್ನರ್

4. ಡೇವಿಡ್ ವಾರ್ನರ್

ಇದು ಆಸ್ಟ್ರೇಲಿಯಾ ಕ್ರಿಕೆಟ್‌ಗೆ ಕಪ್ಪುಚುಕ್ಕೆಯಾಗಿ ಪರಿಣಮಿಸಿದ್ದ ಘಟನೆ. 2018ರಲ್ಲಿ ದಕ್ಷಿಣ ಆಫ್ರಿಕಾಕ್ಕೆ ಪ್ರವಾಸ ಕೈಗೊಂಡಿದ್ದ ಆಸ್ಟ್ರೇಲಿಯಾ ತಂಡ ಅಲ್ಲಿ ಟೆಸ್ಟ್ ಸರಣಿ ಆಡುವಾಗ ಡೇವಿಡ್ ವಾರ್ನರ್, ಆಗ ತಂಡದ ನಾಯಕನಾಗಿದ್ದ ಸ್ಟೀವ್ ಸ್ಮಿತ್ ಮತ್ತು ಕ್ಯಮರಾನ್ ಬ್ಯಾನ್‌ಕ್ರಾಫ್ಟ್‌, ಸ್ಯಾಂಡ್ ಪೇಪರ್ ಬಳಸಿ ಚೆಂಡು ವಿರೂಪಗೊಳಿಸಿ ಸಿಕ್ಕಿಬಿದ್ದಿದ್ದರು. ಡೇವಿಡ್ ವಾರ್ನರ್‌ 1 ವರ್ಷದ ನಿಷೇಧಕ್ಕೆ ಗುರಿಯಾಗಿದ್ದರು. 2019ರಲ್ಲಿ ನಿಷೇಧ ಮುಗಿಸಿ ಮೊದಲು ಐಪಿಎಲ್‌ನಲ್ಲಿ ಆಡಿದ ವಾರ್ನರ್ 2019ರಲ್ಲಿ ಇಂಗ್ಲೆಂಡ್‌ನಲ್ಲಿ ನಡೆದಿದ್ದ ವಿಶ್ವಕಪ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು. ಈಗಲೂ ವಾರ್ನರ್ ಉತ್ತಮ ಫಾರ್ಮ್‌ನಲ್ಲಿದ್ದಾರೆ.

5. ಸ್ಟೀವ್ ಸ್ಮಿತ್

5. ಸ್ಟೀವ್ ಸ್ಮಿತ್

ಮೊದಲೇ ಹೇಳಿದಂತೆ ಡೇವಿಡ್ ವಾರ್ನರ್ ನಿಷೇಧಕ್ಕೀಡಾಗಿದ್ದ ಅದೇ ಪ್ರಕರಣದ ಪಾಲುದಾರ ಸ್ಟೀವ್ ಸ್ಮಿತ್. ಆವತ್ತು ಬಾಲ್ ಟ್ಯಾಂಪರಿಂಗ್ ನಡೆಸಿದ್ದಕ್ಕಾಗಿ ಡೇವಿಡ್ ಮತ್ತು ಸ್ಮಿತ್‌ಗೆ ಒಂದು ವರ್ಷ ನಿಷೇಧ ವಿಧಿಸಲಾಗಿದ್ದರೆ, ಕ್ಯಮರಾನ್ ಬ್ಯಾನ್‌ಕ್ರಾಫ್ಟ್‌ಗೆ 9 ತಿಂಗಳ ಬ್ಯಾನ್ ಹೇರಲಾಗಿತ್ತು. ನಿಷೇಧ ಮುಗಿಸಿ ಐಪಿಎಲ್‌ನಲ್ಲೇ ಮತ್ತೆ ಮೊದಲ ಪಂದ್ಯವಾಡಿದ್ದ ಸ್ಮಿತ್ ಕೂಡ ಐಸಿಸಿ ವಿಶ್ವಕಪ್ 2019ರಲ್ಲಿ ಆಸ್ಟ್ರೇಲಿಯಾ ತಂಡಕ್ಕೆ ಬಲ ತುಂಬಿದ್ದರು. ವಿಶೇಷವೆಂದರೆ ಬ್ಯಾನ್‌ಗೆ ಮುನ್ನ ಟೆಸ್ಟ್ ರ್ಯಾಂಕಿಂಗ್‌ನಲ್ಲಿ ಸ್ಮಿತ್ ನಂ.1 ಸ್ಥಾನದಲ್ಲಿದ್ದರು, ಬ್ಯಾನ್ ಬಳಿಕ ವಿರಾಟ್ ಕೊಹ್ಲಿ ನಂ.1 ಸ್ಥಾನ ಆವರಿಸಿಕೊಂಡಿದ್ದರು. ಬ್ಯಾನ್ ಮುಗಿಸಿ ವಾಪಸ್ಸಾದ ಸ್ಮಿತ್, ಕೊಹ್ಲಿಯನ್ನು ಕೆಳಗಿಳಿಸಿ ಸದ್ಯ ನಂ.1 ಪಟ್ಟ ಅಲಂಕರಿಸಿದ್ದಾರೆ.

Story first published: Thursday, June 4, 2020, 20:24 [IST]
Other articles published on Jun 4, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X