ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸಿಕ್ಸರ್ ಕಿಂಗ್ ಯುವರಾಜ್ ಸಿಂಗ್ ಮಾಡಿದ 5 ಅಪರೂಪದ ದಾಖಲೆಗಳು!

5 Unique Records of Sixer King Yuvraj Singh

ಬೆಂಗಳೂರು, ಮಾರ್ಚ್ 23: ಕ್ರಿಕೆಟ್‌ ಜಗತ್ತಿನಲ್ಲಿ ಸಿಕ್ಸರ್ ಕಿಂಗ್, ಪಂಜಾಬ್‌ ಶೇರ್ ಎಂದು ಖ್ಯಾತರಾದವರು ಯುವರಾಜ್ ಸಿಂಗ್. ಸ್ಫೋಟಕ ಬ್ಯಾಟಿಂಗ್‌ಗಾಗಿಯೇ ಟೀಮ್ ಇಂಡಿಯಾದ ಶಕ್ತಿಯಾಗಿದ್ದ ಯುವಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಐಪಿಎಲ್‌ಗೆ ನಿವೃತ್ತಿ ಹೇಳಿದ್ದಾಗಿದೆ. 2007ರ ಟಿ20 ವಿಶ್ವಕಪ್ ಮತ್ತು 2011ರ ವಿಶ್ವ ಗೆದ್ದ ತಂಡದಲ್ಲಿದ್ದ ಯುವರಾಜ ಈಗ ಟೀಮ್ ಇಂಡಿಯಾದಲ್ಲೇ ಇಲ್ಲ ಅನ್ನೋದನ್ನು ಊಹಿಸಿಕೊಳ್ಳೋದೂ ಕಷ್ಟ ಅನ್ನಿಸುವ ಮಟ್ಟಿಗೆ ನಮ್ಮನ್ನು ಮನರಂಜಿಸಿದ್ದರು ಯುವಿ.

ವೀವ್ ರಿಚರ್ಡ್ಸ್ ಟು ವಿರಾಟ್ ಕೊಹ್ಲಿ: ಐಸಿಸಿ ಬೆಸ್ಟ್ 'ಪುಲ್‌ಶಾಟ್' ಪ್ರಶ್ನೆಗೆ ರೋಹಿತ್ ಅಸಮಾಧಾನವೀವ್ ರಿಚರ್ಡ್ಸ್ ಟು ವಿರಾಟ್ ಕೊಹ್ಲಿ: ಐಸಿಸಿ ಬೆಸ್ಟ್ 'ಪುಲ್‌ಶಾಟ್' ಪ್ರಶ್ನೆಗೆ ರೋಹಿತ್ ಅಸಮಾಧಾನ

ಯುವರಾಜ್ ಸಿಂಗ್ ಅಂದ ಕೂಡಲೆ ಇಂಗ್ಲೆಂಡ್‌ ವಿರುದ್ಧದ ಪಂದ್ಯದ ಓವರ್ ಒಂದರಲ್ಲಿ ಚಚ್ಚಿದ ಆರು ಸಿಕ್ಸರ್‌ಗಳೇ ನಮ್ಮೆಲ್ಲರ ಕಣ್ಣ ಮುಂದೆ ನಿಲ್ಲುತ್ತದೆ. ಆದರೆ ಯುವಿ ಕ್ರಿಕೆಟ್‌ ರಂಗದಲ್ಲಿ ಇನ್ನೂ ಅನೇಕ ದಾಖಲೆಗಳನ್ನು ಉಳಿಸಿದ್ದಾರೆ.

 ಐಪಿಎಲ್ ಇತಿಹಾಸದಲ್ಲಿ ಅತ್ಯಧಿಕ ರನ್ ದಾಖಲೆಯ 5 ವಿದೇಶಿ ಆಟಗಾರರಿವರು ಐಪಿಎಲ್ ಇತಿಹಾಸದಲ್ಲಿ ಅತ್ಯಧಿಕ ರನ್ ದಾಖಲೆಯ 5 ವಿದೇಶಿ ಆಟಗಾರರಿವರು

ಯುವಿ ಮಾಡಿರುವ ದಾಖಲೆಗಳಲ್ಲಿ ಐದು ಅಪರೂಪದ ದಾಖಲೆಗಳ ಸಣ್ಣ ಇಣುಕುನೋಟ ಇಲ್ಲಿದೆ.

1. 6 ಎಸೆತಗಳಿಗೆ 6 ಸಿಕ್ಸರ್

1. 6 ಎಸೆತಗಳಿಗೆ 6 ಸಿಕ್ಸರ್

ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಓವರ್ ಒಂದರಲ್ಲಿ ಅಷ್ಟೂ ಎಸೆತಗಳಿಗೆ ಸಿಕ್ಸ್ ಚಚ್ಚಿ ಚೊಚ್ಚಲ ಬಾರಿಗೆ ವಿಶ್ವದಾಖಲೆ ನಿರ್ಮಿಸಿದ್ದವರು ಯುವರಾಜ್ ಸಿಂಗ್. ಇಂಗ್ಲೆಂಡ್ ವಿರುದ್ಧ ಭಾರತದ 2007ರ ಸೆಪ್ಟೆಂಬರ್‌ನಲ್ಲಿ ನಡೆದಿದ್ದ ಪಂದ್ಯವಿದು. ಇಂಗ್ಲೆಂಡ್ ಆಟಗಾರ ಆ್ಯಂಡ್ರ್ಯೂ ಫ್ಲಿಂಟಫ್ ಯುವಿಯನ್ನು ಕೆಣಕಿದ್ದರು. ಮುಂದಿನ ಓವರ್ ಸ್ಟುವರ್ಟ್ ಬ್ರಾಡ್ ಅವರದ್ದಾಗಿತ್ತು. ಆ ಓವರ್‌ನಲ್ಲಿ ಯುವಿ ಎಲ್ಲಾ ಎಸೆತಗಳನ್ನೂ ಬೌಂಡರಿ ಲೈನ್ ನಿಂದ ಆಚೆಗೆ ಅಟ್ಟಿದ್ದರು.

2. ಅತೀ ವೆಗದ ಟಿ20 ಅರ್ಧ ಶತಕ

2. ಅತೀ ವೆಗದ ಟಿ20 ಅರ್ಧ ಶತಕ

ಯುವರಾಜ್‌ ಸಿಂಗ್ ಓವರ್‌ನ ಆರು ಎಸೆತಗಳಿಗೂ ಸಿಕ್ಸ್ ಬಾರಿಸಿದ ಅದೇ 2007ರ ಟಿ20 ವಿಶ್ವ ಪಂದ್ಯದಲ್ಲಿ ಮತ್ತೊಂದು ವಿಶ್ವದಾಖಲೆಯೂ ಸೃಷ್ಟಿಯಾಗಿತ್ತು. ಇಂಗ್ಲೆಂಡ್ ವಿರುದ್ಧದ ಅಂದಿನ ಪಂದ್ಯದಲ್ಲಿ ಯುವಿ ಕೇವಲ 12 ಎಸೆತಗಳಿಗೆ ಅರ್ಧ ಶತಕ ಪೂರೈಸಿದ್ದರು. ಅಂದು ಸಿಂಗ್ 16 ಎಸೆತಗಳಿಗೆ 58 ರನ್ ಬಾರಿಸಿದ್ದರು. ಇದರಲ್ಲಿ 7 ಸಿಕ್ಸ್‌ಗಳು ಸೇರಿದ್ದವು.

3. ಅತ್ಯಧಿಕ ಮ್ಯಾನ್ ಆಫ್‌ ದ ಮ್ಯಾಚ್

3. ಅತ್ಯಧಿಕ ಮ್ಯಾನ್ ಆಫ್‌ ದ ಮ್ಯಾಚ್

2011ರ ವಿಶ್ವಕಪ್‌ನಲ್ಲಿ ಯುವರಾಜ್‌ ಸಿಂಗ್ ಭರ್ಜರಿ ರನ್‌ಗಾಗಿ ಗಮನ ಸೆಳೆದಿದ್ದರು. ಬ್ಯಾಟಿಂಗ್, ಬೌಲಿಂಗ್ ಮತ್ತು ಮಿಂಚಿನ ವೇಗದ ಫೀಲ್ಡಿಂಗ್‌ಗಾಗಿಯೂ ಯುವಿ ಆ ವೇಳೆ ಗುರುತಿಸಿಕೊಂಡಿದ್ದರು. ಅದರಲ್ಲೂ ಆ ಟೂರ್ನಿಯ ಕ್ವಾರ್ಟರ್ ಫೈನಲ್‌ನಲ್ಲಿ ಯುವಿಯೇನಾದರೂ ವಿರೋಚಿತ ಆಟ ಪ್ರದರ್ಶಿಸದಿದ್ದರೆ ಭಾರತ ಅಂದು ಫೈನಲ್ ಪ್ರವೇಶಿಸೋದೇ ಕಷ್ಟವಿತ್ತು. ಅಂದಿನ ಟೂರ್ನಿಯಲ್ಲಿ ಯುವಿ ಒಟ್ಟಿಗೆ 4 ಪಂದ್ಯಶ್ರೇಷ್ಠ ಪ್ರಶಸ್ತಿಗಳನ್ನು ಗೆದ್ದಿದ್ದರು.

4. ಏಕದಿನವೊಂದರಲ್ಲಿ 50 ರನ್, 5 ವಿಕೆಟ್

4. ಏಕದಿನವೊಂದರಲ್ಲಿ 50 ರನ್, 5 ವಿಕೆಟ್

ಏಕದಿನ ಪಂದ್ಯವೊಂದಲ್ಲಿ ಅರ್ಧ ಶತಕ ಮತ್ತು 5 ವಿಕೆಟ್ ಪಡೆದ ವಿಶ್ವದ ಮೊದಲ ಆಟಗಾರ ಎಂಬ ಹೆಗ್ಗಳಿಕೆ ಯುವರಾಜ್ ಸಿಂಗ್ ಅವರದ್ದು. ಐಸಿಸಿ ವಿಶ್ವಕಪ್ 2011ರಲ್ಲಿ ಯುವರಾಜ್, ಐರ್ಲೆಂಡ್ ವಿರುದ್ಧ ಅರ್ಧ ಶತಕ ಬಾರಿಸಿ, ಐದು ವಿಕೆಟ್‌ಗಳನ್ನು ಮುರಿದಿದ್ದರು.

5. ವಿಶ್ವಕಪ್‌ ನಲ್ಲಿ ಅಪರೂಪದ ದಾಖಲೆ

5. ವಿಶ್ವಕಪ್‌ ನಲ್ಲಿ ಅಪರೂಪದ ದಾಖಲೆ

ವಿಶ್ವಕಪ್ ಟೂರ್ನಿಯೊಂದರಲ್ಲಿ 300 ರನ್ ಮತ್ತು 15 ವಿಕೆಟ್‌ಗಳನ್ನ ಪಡೆದ ವಿಶ್ವದ ಮೊದಲ ಆಟಗಾರ ಯುವರಾಜ್. 2011ರ ವಿಶ್ವಕಪ್‌ನಲ್ಲಿ ಯುವಿ ಈ ದಾಖಲೆ ಸೃಷ್ಟಿಸಿದ್ದರು. ಯುವರಾಜ್ ಅದ್ಭುತ ಪ್ರದರ್ಶನದಿಂದಲೇ ಆ ಟೂರ್ನಿಯಲ್ಲಿ ಎಂಎಸ್ ಧೋನಿ ನಾಯಕತ್ವದ ಭಾರತ ತಂಡ ವಿಶ್ವಕಪ್ ಗೆಲ್ಲಲು ಸಾಧ್ಯವಾಗಿತ್ತು.

Story first published: Monday, March 23, 2020, 14:01 [IST]
Other articles published on Mar 23, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X