ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟೆಸ್ಟ್ ಮ್ಯಾಚ್ ಸೆಂಟರ್‌ಗಳಾಗಲು ಬೆಸ್ಟ್ 5 ಸ್ಟೇಡಿಯಂಗಳು ಇವು!

5 Venues that could become permanent Test centres in India

ಬೆಂಗಳೂರು, ನವೆಂಬರ್ 1: ಇತ್ತೀಚೆಗಷ್ಟೆ ಮುಕ್ತಾಯಗೊಂಡ ಸೌತ್ ಆಫ್ರಿಕಾ ಹಾಗೂ ಭಾರತ ದೇಶಗಳ ನಡುವಿನ 3 ಪಂದ್ಯಗಳ ಟೆಸ್ಟ್ ಕ್ರಿಕೆಟ್ ಸರಣಿಯನ್ನು ಭಾರತ ಕೈವಶ ಮಾಡಿಕೊಂಡಿದ್ದು ಕ್ರೀಡಾಪ್ರೇಮಿಗಳಿಗೆ ಎಲ್ಲಿಲ್ಲದ ಖುಷಿ ತಂದಿದ್ದು ಸಹಜವೇ ಆಗಿದೆ. ರಾಂಚಿಯಲ್ಲಿ ನಡೆದ ಟೆಸ್ಟ್ ಸರಣಿ ಗೆದ್ದು ಬೀಗಿದ ಭಾರತ ಟೆಸ್ಟ್ ಕ್ರಿಕೆಟ್ ರ್‍ಯಾಂಕಿಂಗ್‌ನಲ್ಲಿ ನಂ.1 ಪಟ್ಟಕ್ಕೇರಿದ್ದು ಸಹ ಭಾರತೀಯರಿಗೆ ಹೆಮ್ಮೆಯ ವಿಷಯ. ಇನ್ನು ಸರಣಿಯ ಅಂತ್ಯದ ಸಮಯದಲ್ಲಿ ಕ್ಯಾಪ್ಟನ್ ವಿರಾಟ್ ಕೊಹ್ಲಿ ಹೇಳಿದ ಒಂದು ಮಾತು ಕೂಡ ಬಹಳ ಮುಖ್ಯವಾಗಿದೆ.

ಪಿಂಕ್‌ ಬಾಲ್‌ ಟೆಸ್ಟ್‌ನಲ್ಲಿ ಟೀಮ್ ಇಂಡಿಯಾ ವಿರುದ್ಧ ಬಾಂಗ್ಲಾದೇಶ ಗೆಲ್ಲುತ್ತಾ?!ಪಿಂಕ್‌ ಬಾಲ್‌ ಟೆಸ್ಟ್‌ನಲ್ಲಿ ಟೀಮ್ ಇಂಡಿಯಾ ವಿರುದ್ಧ ಬಾಂಗ್ಲಾದೇಶ ಗೆಲ್ಲುತ್ತಾ?!

'ಹೌದು, ಭಾರತದಲ್ಲಿ ಟೆಸ್ಟ್ ಆಡುವ 5 ಶಾಶ್ವತ ಸ್ಥಳಗಳನ್ನು ಗುರುತಿಸಲೇಬೇಕಿದೆ. ಈ ಬಗ್ಗೆ ಕಳೆದ ಹಲವಾರು ದಿನಗಳಿಂದ ನಾವು ಚರ್ಚಿಸುತ್ತಿದ್ದೇವೆ' ಎಂದು ಕೊಹ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದರು.

'ಭಾರತದ ಆಯ್ಕೆ ಸಮಿತಿಯವರು ವಿಶ್ವಕಪ್‌ ವೇಳೆ ಅನುಷ್ಕಾಗೆ ಟೀ ತರುತ್ತಿದ್ದರು''ಭಾರತದ ಆಯ್ಕೆ ಸಮಿತಿಯವರು ವಿಶ್ವಕಪ್‌ ವೇಳೆ ಅನುಷ್ಕಾಗೆ ಟೀ ತರುತ್ತಿದ್ದರು'

ಸೌತ್ ಆಫ್ರಿಕಾ ವಿರುದ್ಧದ ಸರಣಿಯ ಪಂದ್ಯಗಳು ನಡೆದ ವಿಶಾಖಪಟ್ಟಣ, ಪುಣೆ ಹಾಗೂ ರಾಂಚಿಗಳಲ್ಲಿ ಪ್ರೇಕ್ಷಕರ ಸಂಖ್ಯೆ ತೀರಾ ಕನಿಷ್ಠವಿತ್ತು. ಈ ಹಿನ್ನೆಲೆಯಲ್ಲಿ ನಾವೂ ಸಹ ಆಸ್ಟ್ರೇಲಿಯಾ, ಇಂಗ್ಲೆಂಡ್, ಸೌತ್ ಆಫ್ರಿಕಾ ಹಾಗೂ ಇತರ ದೇಶಗಳ ಮಾದರಿಯಲ್ಲಿ ಟೆಸ್ಟ್ ಮ್ಯಾಚ್ ಸೆಂಟರ್‌ಗಳನ್ನು ಗುರುತಿಸುವ ಅವಶ್ಯಕತೆ ಇದೆ ಎಂಬ ಮಾತನ್ನು ಕ್ಯಾಪ್ಟನ್ ಕೊಹ್ಲಿ ಹೇಳಿದ್ದಾರೆ ಎಂಬುದು ಸ್ಪಷ್ಟ.

ದೇವಧರ್ ಟ್ರೋಫಿ: ಭಾರತ 'ಬಿ'ಗೆ ಗೆಲುವು ತಂದ ಗಾಯಕ್ವಾಡ್, ಅಪರಾಜಿತ್ದೇವಧರ್ ಟ್ರೋಫಿ: ಭಾರತ 'ಬಿ'ಗೆ ಗೆಲುವು ತಂದ ಗಾಯಕ್ವಾಡ್, ಅಪರಾಜಿತ್

ಆಸ್ಟ್ರೇಲಿಯಾ, ಇಂಗ್ಲೆಂಡ್ ಮತ್ತು ಸೌಥ್ ಆಫ್ರಿಕಾಗಳಲ್ಲಿರುವ ಟೆಸ್ಟ್ ಮ್ಯಾಚ್ ಕೇಂದ್ರಗಳಲ್ಲಿ ಪ್ರತಿವರ್ಷ ಟೆಸ್ಟ್ ಪಂದ್ಯಗಳು ನಿಶ್ಚಿತವಾಗಿ ನಡೆಯುತ್ತವೆ. ಲಾರ್ಡ್ಸ್ ಬಗ್ಗೆ ಹೇಳುವುದಾದರೆ ಇಲ್ಲಿ ಪ್ರತಿವರ್ಷ ಬೇಸಿಗೆಯಲ್ಲಿ ನಿಶ್ಚಿತವಾಗಿ ಒಂದು ಟೆಸ್ಟ್ ಆಡಲ್ಪಡುತ್ತದೆ. ಇನ್ನು ಆಸ್ಟ್ರೇಲಿಯಾದ ಎಂಸಿಜಿ ಹಾಗೂ ಸೌಥ್ ಆಫ್ರಿಕಾ ಡರ್ಬನ್‌ದಲ್ಲಿನ ಕಿಂಗ್ಸಮೇಡ್‌ನಲ್ಲಿ ಬಾಕ್ಸಿಂಗ್ ಡೇ ಟೆಸ್ಟ್ ಮತ್ತು ಆಸ್ಟ್ರೇಲಿಯಾದ ಎಸ್‌ಸಿಜಿ ಹಾಗೂ ಕೇಪ್‌ಟೌನ್‌ನ ನ್ಯೂಲ್ಯಾಂಡ್‌ನಲ್ಲಿ ಹೊಸ ವರ್ಷದ ಟೆಸ್ಟ್ ಪಂದ್ಯಗಳು ನಿಶ್ಚಿತವಾಗಿ ನಡೆಯುತ್ತವೆ.

ಭಾರತ vs ಬಾಂಗ್ಲಾ: ಪಂದ್ಯಗಳ ದಿನಾಂಕ, ಸಮಯ, ಸಂಪೂರ್ಣ ಮಾಹಿತಿಭಾರತ vs ಬಾಂಗ್ಲಾ: ಪಂದ್ಯಗಳ ದಿನಾಂಕ, ಸಮಯ, ಸಂಪೂರ್ಣ ಮಾಹಿತಿ

ಇದೇ ಮಾದರಿಯಲ್ಲಿ ಭಾರತದಲ್ಲಿಯೂ 5 ಶಾಶ್ವತ ಟೆಸ್ಟ್ ಮ್ಯಾಚ್ ಸ್ಥಳಗಳನ್ನು ಗುರುತಿಸಬೇಕೆಂಬ ಬೇಡಿಕೆ ಇದೆ. ಹಾಗಾದರೆ ಭಾರತದಲ್ಲಿ ಟೆಸ್ಟ್ ಮ್ಯಾಚ್ ಆಡಲು ಅತ್ಯಂತ ಸೂಕ್ತ ಸ್ಥಳಗಳು ಯಾವುವು? ಯಾವ 5 ಕ್ರೀಡಾಂಗಣಗಳು ಈ ಪಟ್ಟಿಯಲ್ಲಿ ಸ್ಥಾನ ಪಡೆಯಬಹುದು ಎಂಬುದನ್ನು ನೋಡೋಣ.

1. ಈಡನ್ ಗಾರ್ಡನ್ಸ್, ಕೋಲ್ಕತ್ತಾ

1. ಈಡನ್ ಗಾರ್ಡನ್ಸ್, ಕೋಲ್ಕತ್ತಾ

ಕೋಲ್ಕತ್ತಾದ ಈಡನ್ ಗಾರ್ಡನ್ ಮೈದಾನ ಭಾರತದ ಅತಿ ಪುರಾತನ ಟೆಸ್ಟ್ ಆಡುವ ಕ್ರೀಡಾಂಗಣವೊಂದಾಗಿದೆ. ಭಾರತದ ನೆಲದಲ್ಲಿ ನಡೆದ ಎರಡನೇ ಟೆಸ್ಟ್ ಇದೇ ಕ್ರೀಡಾಂಗಣದಲ್ಲಿ ನಡೆದಿತ್ತು ಎಂಬುದು ಈ ಮೈದಾನದ ಹೆಗ್ಗಳಿಕೆಯಾಗಿದೆ. ಬಾಂಬೆ ಜಿಮ್ಖಾನಾ ಮೈದಾನದಲ್ಲಿ ಮೊದಲ ಟೆಸ್ಟ್ ನಡೆದಿದ್ದು ಚರಿತ್ರಾರ್ಹ. ಹೀಗಾಗಿ 1934 ರಿಂದಲೇ ಟೆಸ್ಟ್ ಮ್ಯಾಚ್ ಆಡಲ್ಪಡುತ್ತಿರುವ ಕೋಲ್ಕತಾದ ಈಡರ್ನ ಗಾರ್ಡನ್ ಮೈದಾನ ಶಾಶ್ವತ ಟೆಸ್ಟ್ ಮ್ಯಾಚ್ ಕ್ರೀಡಾಂಗಣವಾಗುವ ಎಲ್ಲ ಅರ್ಹತೆಗಳನ್ನು ಪಡೆದಿದೆ.
ಈಡನ್ ಗಾರ್ಡನ್‌ನಲ್ಲಿ ಈವರೆಗೆ ಒಟ್ಟು 41 ಟೆಸ್ಟ್ ಪಂದ್ಯಗಳನ್ನು ಆಡಲಾಗಿದ್ದು, 2000ದ ನಂತರ ಇಲ್ಲಿ ಆಡಲಾದ ಬಹುತೇಕ ಪಂದ್ಯಗಳಲ್ಲಿ ಭಾರತ ಗೆದ್ದಿದೆ. ಅಲ್ಲದೆ ಇಲ್ಲಿನ ಪಂದ್ಯಗಳನ್ನು ನೋಡಲು ಲಕ್ಷಾಂತರ ಸಂಖ್ಯೆಯಲ್ಲಿ ಕ್ರೀಡಾಭಿಮಾನಿಗಳು ಆಗಮಿಸುವುದು ಮತ್ತೊಂದು ವೈಶಿಷ್ಟ್ಯವಾಗಿದೆ.

2. ವಾಂಖೇಡೆ ಸ್ಟೇಡಿಯಂ, ಮುಂಬೈ

2. ವಾಂಖೇಡೆ ಸ್ಟೇಡಿಯಂ, ಮುಂಬೈ

ಮುಂಬೈ ಅನ್ನು ಭಾರತದ ಕ್ರಿಕೆಟ್ ಕಾಶಿ ಎಂದು ನಿಸ್ಸಂದೇಹವಾಗಿ ಹೇಳಬಹುದು. ದೇಶದ ಬಹುತೇಕ ಕ್ರಿಕೆಟ್ ಕಾರ್ಯಗಳು ಇಲ್ಲಿಂದಲೇ ನಿಯಂತ್ರಿಸಲ್ಪಡುತ್ತವೆ ಎಂಬುದು ಗಮನಾರ್ಹ. ಹೀಗಾಗಿ ಶಾಶ್ವತ ಟೆಸ್ಟ್ ಕ್ರಿಕೆಟ್ ಸೆಂಟರ್ ಆಗಲು ವಾಂಖೇಡೆ ಸ್ಟೇಡಿಯಂ ಎಲ್ಲ ಅರ್ಹತೆಗಳನ್ನು ಪಡೆದಿದೆ ಎನ್ನಬಹುದು.
1974 ರಲ್ಲಿ ಆರಂಭವಾದ ಈ ಕ್ರೀಡಾಂಗಣದಲ್ಲಿ ಮೊದಲ ಟೆಸ್ಟ್ ನಡೆದಿದ್ದು 1975 ರಲ್ಲಿ. ಸುಮಾರು 45 ಸಾವಿರದಷ್ಟು ಪ್ರೇಕ್ಷಕರು ಕುಳಿತುಕೊಳ್ಳಬಹುದಾದಷ್ಟು ದೊಡ್ಡದಾದ ಈ ಸ್ಟೇಡಿಯಂನಲ್ಲಿ ಸೇರುವ ಪ್ರೇಕ್ಷಕರು, ಅತ್ಯಂತ ಹೆಚ್ಚು ಗದ್ದಲ ಚೀರಾಟ ಮಾಡುತ್ತ ಆಟಗಾರರನ್ನು ಹುರಿದುಂಬಿಸುವುದು ಹೆಸರುವಾಸಿಯಾಗಿದೆ. ಇಲ್ಲಿನ ಪ್ರೇಕ್ಷಕರು ತವರಿನ ಆಟಗಾರರನ್ನು ಯಾವಾಗಲೂ ಹುರಿದುಂಬಿಸುವುದು ಸತ್ಯವಾದರೂ, ಉತ್ತಮ ಕ್ರಿಕೆಟ್ ಯಾರೇ ಆಡಿದರೂ ಅದನ್ನು ಮೆಚ್ಚುವ ಗುಣ ಇವರದ್ದು.

3. ಫಿರೋಜ್ ಶಾ ಕೋಟ್ಲಾ, ದೆಹಲಿ

3. ಫಿರೋಜ್ ಶಾ ಕೋಟ್ಲಾ, ದೆಹಲಿ

ಇತ್ತೀಚಿನ ವರ್ಷಗಳಲ್ಲಿ ಬಹಳಷ್ಟು ಸಂಖ್ಯೆಯ ಪಂದ್ಯಗಳು ಇಲ್ಲಿ ಆಡಲ್ಪಟ್ಟಿಲ್ಲವಾದರೂ ಇನ್ನೂ ಅನೇಕ ಕಾರಣಗಳಿಂದ ಈ ಕ್ರೀಡಾಂಗಣ ಸುದ್ದಿಯಲ್ಲಿದೆ. ಭಾರತದ ಮಾಜಿ ಹಣಕಾಸು ಮಂತ್ರಿ ಹಾಗೂ ಡಿಡಿಸಿಎ ಅಧ್ಯಕ್ಷರಾಗಿದ್ದ ದಿ. ಅರುಣ ಜೈಟ್ಲಿ ಅವರ ನಿಧನಾನಂತರ ಫಿರೋಜ್ ಶಾ ಕೋಟ್ಲಾ ಮೈದಾನಕ್ಕೆ ಅರುಣ ಜೈಟ್ಲಿ ಸ್ಟೇಡಿಯಂ ಎಂದು ಮರುನಾಮಕರಣ ಮಾಡಲಾಗಿದೆ. ಅಲ್ಲದೆ ಈ ಸ್ಟೇಡಿಯಂನಲ್ಲಿ ವಿರಾಟ್ ಕೊಹ್ಲಿ ಹೆಸರಿನಲ್ಲಿ ಒಂದು ಸ್ಟ್ಯಾಂಡ್ ಸಹ ಇದೆ.
ಭಾರತದ ಕ್ರಿಕೆಟ್ ಇತಿಹಾಸದ ಹಲವಾರು ಸ್ಮರಣೀಯ ಕ್ಷಣಗಳಿಗೆ ಫಿರೋಜ್ ಶಾ ಕೋಟ್ಲಾ ಸಾಕ್ಷಿಯಾಗಿ ನಿಂತಿದೆ. ಅದರಲ್ಲೂ ಟೆಸ್ಟ್ ಕ್ರಿಕೆಟ್‌ನ ಅಪೂರ್ವ ಘಟನಾವಳಿಗಳಿಗೆ ಈ ಮೈದಾನ ಜೀವಂತ ಸಾಕ್ಷಿಯಾಗಿದೆ. ಡಾನ್ ಬ್ರಾಡ್ಮನ್ ಅವರ 29 ಟೆಸ್ಟ್ ಶತಕಗಳ ಸಾಧನೆಯನ್ನು ಸುನೀಲ್ ಗಾವಸ್ಕರ್ ಸರಿಗಟ್ಟಿದ್ದು ಇದೇ ಮೈದಾನದಲ್ಲಿ. ಗಾವಸ್ಕರ್ ಅವರ 34 ಟೆಸ್ಟ್ ಸಾಧನೆಯನ್ನು ಸಚಿನ್ ತೆಂಡೂಲ್ಕರ್ ಮೀರಿಸಿದ್ದು ಇಲ್ಲಿಯೇ. ಪಾಕಿಸ್ತಾನ ವಿರುದ್ಧ 10 ವಿಕೆಟ್ ಕಿತ್ತು ಅನಿಲ್ ಕುಂಬ್ಲೆ ಸಾಧನೆ ಮಾಡಿದ್ದು ಇದೇ ಕೋಟ್ಲಾ ಮೈದಾನದಲ್ಲಿ.

4. ಚಿನ್ನಸ್ವಾಮಿ ಸ್ಟೇಡಿಯಂ, ಬೆಂಗಳೂರು

4. ಚಿನ್ನಸ್ವಾಮಿ ಸ್ಟೇಡಿಯಂ, ಬೆಂಗಳೂರು

ಬೆಂಗಳೂರಿನ ಎಂ. ಚಿನ್ನಸ್ವಾಮಿ ಸ್ಟೇಡಿಯಂ ಭಾರತದ ಅತಿ ಜನಪ್ರಿಯ ಕ್ರಿಕೆಟ್ ಸ್ಟೇಡಿಯಂಗಳಲ್ಲೊಂದಾಗಿದೆ. 40 ಸಾವಿರ ಆಸನ ವ್ಯವಸ್ಥೆ ಹೊಂದಿರುವ ಈ ಕ್ರೀಡಾಂಗಣ ಅಂತಾರಾಷ್ಟ್ರೀಯ ಪಂದ್ಯಗಳ ಸಮಯದಲ್ಲಿ ಜಾಮ್ ಪ್ಯಾಕ್ ಆಗಿರುತ್ತದೆ. ಇತ್ತೀಚಿನ ವರ್ಷಗಳಲ್ಲಿ ಹಲವಾರು ಅಂತಾರಾಷ್ಟ್ರೀಯ ಪಂದ್ಯಗಳಿಗೆ ಈ ಸ್ಟೇಡಿಯಂ ಸಾಕ್ಷಿಯಾಗಿದೆ.
ಐತಿಹಾಸಿಕ ಭಾರತ-ಅಫ್ಘಾನಿಸ್ತಾನ ಟೆಸ್ಟ್ ಪಂದ್ಯ ನಡೆದಿದ್ದು, 2017 ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತದ ಅಭೂತಪೂರ್ವ ಟೆಸ್ಟ್ ಸಾಧನೆ ಆಗಿದ್ದು ಇದೇ ಕ್ರೀಡಾಂಗಣದಲ್ಲಿ. ಇನ್ನು 2013 ರಲ್ಲಿ ರೋಹಿತ್ ಶರ್ಮಾ ತಮ್ಮ ಮೊದಲ ಒನ್ ಡೇ ಡಬಲ್ ಸೆಂಚುರಿ ಬಾರಿಸಿದ್ದು ಇದೇ ಪಿಚ್‌ನಲ್ಲಿ. ಒಟ್ಟಾರೆಯಾಗಿ ನೋಡಿದರೆ ಆಟಗಾರರಿಗೆ ಹಾಗೂ ಪ್ರೇಕ್ಷಕರು ಇಬ್ಬರಿಗೂ ಅತ್ಯುತ್ತಮ ಕ್ರೀಡಾಂಗಣ ಇದಾಗಿದೆ.

5. ರಾಜೀವ್‌ ಗಾಂಧಿ ಇಂಟರ್‌ ನ್ಯಾಷನಲ್ ಸ್ಟೇಡಿಯಂ, ಹೈದರಾಬಾದ್

5. ರಾಜೀವ್‌ ಗಾಂಧಿ ಇಂಟರ್‌ ನ್ಯಾಷನಲ್ ಸ್ಟೇಡಿಯಂ, ಹೈದರಾಬಾದ್

ಹೈದರಾಬಾದಿನ ರಾಜೀವ ಗಾಂಧಿ ಸ್ಟೇಡಿಯಂ ಹೆಸರು ಹೇಳಿದ್ದು ಕೆಲವರಿಗೆ ಆಶ್ಚರ್ಯ ಮೂಡಿಸಬಹುದು. ಚೆನ್ನೈನ ಎಂ.ಎ. ಚಿದಂಬರಂ ಸ್ಟೇಡಿಯಂ ಹಾಗೂ ಮೊಹಾಲಿಯ ಐಎಸ್ ಬಿಂದ್ರಾ ಸ್ಟೇಡಿಯಂಗಳಿಗಿಂತಲೂ ಹೆಚ್ಚಿನ ಹೆಗ್ಗಳಿಕೆ ಇದಕ್ಕಿದೆಯಾ ಎಂದು ನೀವು ಕೇಳಬಹುದು. ಹೌದು... ಪ್ರತಿಯೊಂದು ಮ್ಯಾಚ್ ನಡೆದಾಗ ಇಲ್ಲಿ ಸೇರುವ ಅತಿ ಹೆಚ್ಚು ಪ್ರೇಕ್ಷಕರ ಸಂಖ್ಯೆಯೇ ಈ ಸ್ಟೇಡಿಯಂನ ವೈಶಿಷ್ಟ್ಯ.
ಕ್ಯಾಪ್ಟನ್ ವಿರಾಟ್ ಕೊಹ್ಲಿ ಸಹ ಅನೇಕ ಬಾರಿ ಇಲ್ಲಿನ ಪ್ರೇಕ್ಷಕರ ಸಂಖ್ಯೆ ನೋಡಿ ಫಿದಾ ಆಗಿದ್ದಾರೆ, ಹಾಗಂತ ಹೇಳಿಕೊಂಡಿದ್ದಾರೆ ಕೂಡ. 2017ರಲ್ಲಿ ನಡೆದ ಟೆಸ್ಟ್ ಮ್ಯಾಚ್‌ನಲ್ಲಿ ಇಲ್ಲಿ ನೆರೆದ ಪ್ರೇಕ್ಷಕರ ಸಂಖ್ಯೆಗೆ, ಅವರ ಅಭಿಮಾನಕ್ಕೆ ಕೊಹ್ಲಿ ಕ್ಲೀನ್ ಬೋಲ್ಡ್ ಆಗಿದ್ದರು. ಏನೇ ಆದರೂ ಹೈದರಾಬಾದ್ ಟೆಸ್ಟ್ ಕ್ರಿಕೆಟ್‌ಗೆ ಒನ್ ಆಫ್ ದ ಬೆಸ್ಟ್ ಸೆಂಟರ್ ಎಂದು ಹೇಳಲು ಯಾವುದೇ ಅಡ್ಡಿ ಇಲ್ಲ.

Story first published: Friday, November 1, 2019, 0:55 [IST]
Other articles published on Nov 1, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X