ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟಿ20 ವಿಶ್ವಕಪ್ ಇತಿಹಾಸದಲ್ಲಿರುವ 5 ಅತೀ ಕೆಟ್ಟ ಬೌಲಿಂಗ್ ದಾಖಲೆಗಳು!

5 Worst Bowling Spells In T20 World Cup History

ಬೆಂಗಳೂರು: ಟಿ20 ವಿಶ್ವಕಪ್ ಅಂತಾರಾಷ್ಟ್ರೀಯ ಟಿ20 ಟೂರ್ನಿಗಳಲ್ಲೇ ಅದ್ದೂರಿ ಟೂರ್ನಿ. ಈ ಪಂದ್ಯದ ವೇಳೆ ವಿಶ್ವದ ಬಹುತೇಕ ಎಲ್ಲಾ ಕ್ರಿಕೆಟ್‌ ರಾಷ್ಟ್ರಗಳು ಒಂದೆಡೆ ಸೇರುತ್ತವೆ. ಈ ಮಾದರಿಯಲ್ಲಿ ಹೊಸ ರಾಷ್ಟ್ರಗಳನ್ನು ಸೇರ್ಪಡೆಗೊಳಿಸುವತ್ತ ಐಸಿಸಿ ಯತ್ನಿಸುತ್ತಿದೆ. ಓಮನ್, ನೇಪಾಳ, ಹಾಂಗ್‌ಕಾಂಗ್, ಪಪುವಾ ನ್ಯೂಗಿನಿಯಾ, ಜಪಾನ್, ನೈಜೀರಿಯಾ ಇನ್ನಿತರ ರಾಷ್ಟ್ರಗಳೂ ಈ ಚುಟುಕು ಕ್ರಿಕೆಟ್ ಮಾದರಿಯತ್ತ ಆಸಕ್ತಿ ತೋರಿಸುತ್ತಿವೆ. ಬಲಿಷ್ಠ ರಾಷ್ಟ್ರಗಳು, ಹೊಸ ರಾಷ್ಟ್ರಗಳ ಪಾಲ್ಗೊಳ್ಳುವಿಕೆ ಟಿ20ಯಲ್ಲಿ ವಿಭಿನ್ನ ದಾಖಲೆಗಳ ಸೃಷ್ಟಿಗೂ ಕಾಣವಾಗಿದ್ದಿದೆ.

ಆಸೀಸ್-ಭಾರತ ಸೇರಿಸಿ ಫಿಂಚ್ ಪ್ರಕಟಿಸಿದ ತಂಡದಲ್ಲಿ ಸಚಿನ್, ರೋಹಿತ್ ಇಲ್ಲ!ಆಸೀಸ್-ಭಾರತ ಸೇರಿಸಿ ಫಿಂಚ್ ಪ್ರಕಟಿಸಿದ ತಂಡದಲ್ಲಿ ಸಚಿನ್, ರೋಹಿತ್ ಇಲ್ಲ!

ಅಂದ್ಹಾಗೆ, ಟಿ20 ಕ್ರಿಕೆಟ್‌ನಲ್ಲಿ ಬ್ಯಾಟ್ಸ್‌ಮನ್‌ಗಳು ಮಾತ್ರ ಬೌಲರ್‌ಗಳಿಗೆ ಕನಿಕರವೇ ತೋರಿಸಲ್ಲ. ಏಕದಿನ ಕ್ರಿಕೆಟ್‌ನಲ್ಲಿ 10 ಓವರ್‌ನಲ್ಲಿ ಕೊಡುವ ರನ್‌ಗಿಂತಲು ಹೆಚ್ಚೇ ರನ್, ಟಿ20ಯಲ್ಲಿ ಬರೀ 4 ಓವರ್‌ಗಳಲ್ಲಿ ಬೌಲರ್‌ಗಳು ಕೊಡಬೇಕಾಗಬಹುದು.

ಜಾತಿ ನಿಂದನೆ ವಿವಾದ: ಭಾವನಾತ್ಮಕ ಸಂದೇಶದ ಮೂಲಕ ಯುವಿ ಸ್ಪಷ್ಟನೆಜಾತಿ ನಿಂದನೆ ವಿವಾದ: ಭಾವನಾತ್ಮಕ ಸಂದೇಶದ ಮೂಲಕ ಯುವಿ ಸ್ಪಷ್ಟನೆ

ಟಿ20 ವಿಶ್ವಕಪ್‌ ಇತಿಹಾಸದಲ್ಲಿ ಅತೀ ಕೆಟ್ಟ ಬೌಲಿಂಗ್‌ ದಾಖಲೆಯಿರುವ 5 ಬೌಲರ್‌ಗಳ ಮಾಹಿತಿ ಇಲ್ಲಿದೆ.

1. ಎನ್‌ಸಿ ಒಡಿಯಾಂಬೊ

1. ಎನ್‌ಸಿ ಒಡಿಯಾಂಬೊ

ಟಿ20 ವಿಶ್ವಕಪ್ ಉದ್ಘಾಟನಾ ಪಂದ್ಯ ದಕ್ಷಿಣ ಆಫ್ರಿಕಾದಲ್ಲಿ ನಡೆದಿತ್ತು. ಸಿ ಗ್ರೂಪ್‌ನಲ್ಲಿ ಕೀನ್ಯ, ನ್ಯೂಜಿಲೆಂಡ್, ಶ್ರೀಲಂಕಾ ತಂಡಗಳಿದ್ದವು. ಗ್ರೂಪ್ ಹಂತದ ಮುಖಾಮುಖಿಯಲ್ಲಿ ಶ್ರೀಲಂಕಾ-ಕೀನ್ಯಾ ತಂಡಗಳು ಕಾದಾಡಿದ್ದವು. ಶ್ರೀಲಂಕಾ ಕೀನ್ಯಾ ವಿರುದ್ಧ 260/6 ಟೋಟಲ್ ಕಲೆ ಹಾಕಿತ್ತು. ಇದು ಈಗಲೂ ವಿಶ್ವಕಪ್ ಟಿ20ಯಲ್ಲಿ ಅತ್ಯಧಿಕ ಟೋಟಲ್ ಆಗಿ ಗುರುತಿಸಲ್ಪಟ್ಟಿದೆ. ಈ ವೇಳೆ ನಾಲ್ಕು ಓವರ್ ಎಸೆದಿದ್ದ ಕೀನ್ಯಾದ ಎನ್‌ಸಿ ಒಡಿಯಾಂಬೊ ಒಂದೂ ವಿಕೆಟ್ ಮುರಿಯದೆ 57 ರನ್ ನೀಡಿ ಕೆಟ್ಟ ದಾಖಲೆ ನಿರ್ಮಿಸಿದ್ದರು.

2. ಸ್ಟುವರ್ಟ್ ಬ್ರಾಡ್

2. ಸ್ಟುವರ್ಟ್ ಬ್ರಾಡ್

ಈ ಪಂದ್ಯ ಭಾರತದ ಬಹುತೇಕ ಕ್ರಿಕೆಟ್‌ ಪ್ರೇಮಿಗಳಿಗೆ ನೆನಪಿಗೆ ಬಂದೇ ಬರುತ್ತದೆ. ಯಾಕೆಂದರೆ 2007ರ ಟಿ20 ವಿಶ್ವಕಪ್‌ನಲ್ಲಿ ಬ್ರಾಡ್‌ ಕೈಯಲ್ಲಿ ಈ ಕೆಟ್ಟ ದಾಖಲೆ ಬರೆಯಿಸಿದ್ದು ಭಾರತದ ಯುವರಾಜ್ ಸಿಂಗ್. ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಯುವರಾಜ್, ಸ್ಟುವರ್ಟ್ ಬ್ರಾಡ್‌ ಓವರ್‌ನಲ್ಲಿ ಪ್ರತೀ ಬಾಲ್‌ಗೂ ಸಿಕ್ಸ್ ಚಚ್ಚಿದ್ದರು. ಆವತ್ತು ಬ್ರಾಡ್ 15ರ ಎಕಾನಮಿಯಲ್ಲಿ 0/60 ಕೆಟ್ಟ ಬೌಲಿಂಗ್ ಫಿಗರ್ ದಾಖಲಿಸಿದ್ದರು.

3. ಎಲ್ಎಂ ಒನ್ಯಾಂಗೊ

3. ಎಲ್ಎಂ ಒನ್ಯಾಂಗೊ

ಕೀನ್ಯಾದ ಮತ್ತೊಬ್ಬ ಬೌಲರ್ ಎಲ್ಎಂ ಒನ್ಯಾಂಗೊ ಕೂಡ ಶ್ರೀಲಂಕಾ ವಿರುದ್ಧ 61 ರನ್ ನೀಡಿ ಕೆಟ್ಟ ದಾಖಲೆ ನಿರ್ಮಿಸಿದ್ದರು. 2007ರ ವಿಶ್ವಕಪ್‌ನಲ್ಲಿ ಕೀನ್ಯ ಬೌಲರ್ ಮತ್ತೊಂದು ಬೇಡದ ದಾಖಲೆ ನಿರ್ಮಿಸಿದ್ದರು. ಆ ಪಂದ್ಯದಲ್ಲಿ ಸನತ್ ಜಯಸೂರ್ಯ 88 ರನ್ ಗಳಿಸಿದ್ದರೆ, ಮಹೇಲ ಜಯವರ್ದನೆ ಕೇವಲ 27 ಎಸೆತಗಳಿಗೆ 65 ರನ್ ಸಿಡಿಸಿದ್ದರು. ಜೆಹನ್ ಮುಬಾರಕ್ ಕೂಡ 13 ಎಸೆತಗಳಲ್ಲಿ ಅಜೇಯ 46 ರನ್ ಗಳಿಸಿದ್ದರು.

4. ಮಶ್ರಾಫೆ ಮೊರ್ತಾಝ

4. ಮಶ್ರಾಫೆ ಮೊರ್ತಾಝ

2014ರ ಟಿ20 ವಿಶ್ವಕಪ್, ಬಾಂಗ್ಲಾದೇಶದಲ್ಲಿ ನಡೆದಿತ್ತು. ಈ ಟೂರ್ನಿಯ ಬಾಂಗ್ಲಾ-ಪಾಕಿಸ್ತಾನ ಮುಖಾಮುಖಿಯಲ್ಲಿ ಬಾಂಗ್ಲಾ ಬೌಲರ್ ಮಶ್ರಾಫೆ ಮೊರ್ತಾಝ ಕೆಟ್ಟ ಬೌಲಿಂಗ್ ದಾಖಲೆ ನಿರ್ಮಿಸಿದ್ದರು. ಧಾಕಾದಲ್ಲಿ ನಡೆದಿದ್ದ ಈ ಪಂದ್ಯದಲ್ಲಿ ಅಹ್ಮದ್ ಶಹಜಾದ್ ಮತ್ತು ಶಾಹಿದ್ ಅಫ್ರಿದಿ ಸ್ಫೋಟಕ ಬ್ಯಾಟಿಂಗ್ ನಡೆಸಿದ್ದರು. ಶಹಜಾದ್ ಶತಕ ಬಾರಿಸಿದ್ದರೆ, ಅಫ್ರಿದಿ 9 ಎಸೆತಗಳಿಗೆ 22 ರನ್ ಬಾರಿಸಿದ್ದರು. ಅಂದು ಮೊರ್ತಾಝ 0/63 ಬೌಲಿಂಗ್ ಫಿಗರ್ ತೋರಿಕೊಂಡಿದ್ದರು.

5. ಸನತ್ ಜಯಸೂರ್ಯ

5. ಸನತ್ ಜಯಸೂರ್ಯ

ಶ್ರೀಲಂಕಾ ಬ್ಯಾಟಿಂಗ್ ದಿಗ್ಗಜ ಸನತ್ ಜಯಸೂರ್ಯ ಹೆಸರಿನಲ್ಲಿ ಬೌಲಿಂಗ್‌ನ ಕೆಟ್ಟ ದಾಖಲೆಯಿದೆ. 2007ರಲ್ಲಿ ನಡೆದಿದ್ದ ಟಿ20 ವಿಶ್ವಕಪ್ ಪಂದ್ಯದಲ್ಲಿ ಜಯಸೂರ್ಯ, ಪಾಕಿಸ್ತಾನ ವಿರುದ್ಧ ವಿಕೆಟ್ ಮುರಿಯದೆ 64 ರನ್ ನೀಡಿದ್ದರು. 4 ಓವರ್‌ ಎಸೆದಿದ್ದ ಎಡಗೈ ಸ್ಪಿನ್ನರ್ ಜಯಸೂರ್ಯ 64 ರನ್ ನೀಡಿದ್ದರು. ಜೋಹಾನ್ಸ್‌ಬರ್ಗ್‌ನಲ್ಲಿ ನಡೆದಿದ್ದ ಪಂದ್ಯದಲ್ಲಿ ಪಾಕಿಸ್ತಾನ ಬ್ಯಾಟ್ಸ್‌ಮನ್‌ಗಳಾದ ಶೋಯೆಬ್ ಮಲಿಕ್, ಮಿಸ್ಬಾ ಉಲ್ ಹಕ್, ಯೂನಿಸ್ ಖಾನ್ ಸ್ಫೋಟಕ ಬ್ಯಾಟಿಂಗ್ ನಡೆಸಿದ್ದರು.

Story first published: Saturday, June 6, 2020, 15:41 [IST]
Other articles published on Jun 6, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X