ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

56-57 ಆಟಗಾರರನ್ನ ಆಡಿಸಿದ್ರಿ, ಆದ್ರೆ ನಿಮಗೆ 1 ಉತ್ತಮ ತಂಡ ರಚಿಸಲು ಸಾಧ್ಯವಾಗ್ಲಿಲ್ಲ: ಟೀಂ ಇಂಡಿಯಾ ವಿರುದ್ಧ ಲತೀಫ್ ವಾಗ್ದಾಳಿ!

Rashid latif

ಟಿ20 ವಿಶ್ವಕಪ್‌ಗಾಗಿ ಭಾರತ ಕ್ರಿಕೆಟ್ ತಂಡ ಈಗಾಗಲೇ ಆಸ್ಟ್ರೇಲಿಯಾಕ್ಕೆ ಪ್ರಯಾಣ ಬೆಳೆಸಿದೆ. ತವರಿನಲ್ಲಿ ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾವನ್ನು ಸೋಲಿಸಿ ಸರಣಿ ಗೆದ್ದ ಭಾರತ ಕಾಂಗರೂ ನಾಡಿಗೆ ಕಾಲಿಟ್ಟಿದೆ. ಟಿ20 ವಿಶ್ವಕಪ್‌ಗೂ ಮುನ್ನ ಭಾರತ ನಾಲ್ಕು ಅಭ್ಯಾಸ ಪಂದ್ಯಗಳನ್ನು ಆಡುತ್ತಿದೆ.

ದಕ್ಷಿಣ ಆಫ್ರಿಕಾ ಟಿ20 ಸರಣಿಯನ್ನ ಜಯಿಸಿದ ಭಾರತ 2-1 ಅಂತರದಲ್ಲಿ ಸರಣಿಯನ್ನ ವಶಪಡಿಸಿಕೊಂಡಿತು. ಆದ್ರೆ ಹೋಳ್ಕರ್ ಸ್ಟೇಡಿಯಂನಲ್ಲಿ ನಡೆದ ಅಂತಿಮ ಟಿ20 ಪಂದ್ಯದಲ್ಲಿ ಹೀನಾಯ ಸೋಲು ಕಾಣುವ ಮೂಲಕ ಟೀಂ ಇಂಡಿಯಾ ಟೀಕೆಗೆ ಗುರಿಯಾಯಿತು.

ಪ್ರಸ್ತುತ ಭಾರತಕ್ಕೆ ಇಂಜ್ಯುರಿ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಸ್ಟಾರ್ ವೇಗಿಗಳಾದ ಜಸ್ಪ್ರೀತ್ ಬುಮ್ರಾ ಮತ್ತು ದೀಪಕ್ ಹೂಡಾ ಗಾಯದಿಂದ ಹೊರಗಿದ್ರೆ, ಮೊಹಮ್ಮದ್ ಶಮಿ ಕೂಡ ಫಿಟ್ನೆಸ್ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಹೀಗಾಗಿ ಟೀಂ ಇಂಡಿಯಾ 14 ಆಟಗಾರರನ್ನ ಒಳಗೊಂಡ ತಂಡದೊಂದಿಗೆ ಆಸ್ಟ್ರೇಲಿಯಾಗೆ ತೆರಳಿದೆ.

ಅಷ್ಟೊಂದು ಪ್ರಯತ್ನ ಪಟ್ಟರೂ, ಉತ್ತಮ ತಂಡವನ್ನ ರಚಿಸಲಿಲ್ಲ: ರಶೀದ್ ಲತೀಫ್ ಲೇವಡಿ

ಅಷ್ಟೊಂದು ಪ್ರಯತ್ನ ಪಟ್ಟರೂ, ಉತ್ತಮ ತಂಡವನ್ನ ರಚಿಸಲಿಲ್ಲ: ರಶೀದ್ ಲತೀಫ್ ಲೇವಡಿ

ಪಾಕಿಸ್ತಾನದ ಮಾಜಿ ಆಟಗಾರ ರಶೀದ್ ಲತೀಫ್ ಟೀಂ ಇಂಡಿಯಾ ಮ್ಯಾನೇಜ್‌ಮೆಂಟ್ ಅನ್ನು ಲೇವಡಿ ಮಾಡಿದ್ದಾರೆ. ವಿಶ್ವಕಪ್‌ಗೂ ಮುನ್ನ ಸಾಕಷ್ಟು ಪ್ರಯತ್ನ ಮಾಡಿ ಭಾರತಕ್ಕೆ ಹಲವು ಆಟಗಾರರನ್ನ ಆಡಿಸಿದ್ರಿ, ಆದ್ರೆ ಅಷ್ಟು ಪ್ರಯತ್ನಿಸಿದರೂ ಉತ್ತಮ ತಂಡವನ್ನು ರಚಿಸಲು ಸಾಧ್ಯವಾಗಿಲ್ಲ ಎಂದು ಲೇವಡಿ ಮಾಡಿದ್ದಾರೆ.

''ಭಾರತ ಪ್ರಮುಖ ಆಟಗಾರರನ್ನು ಇಟ್ಟುಕೊಂಡು ತಂಡದಲ್ಲಿ ನಿರಂತರ ಬದಲಾವಣೆ ಮಾಡಿದೆ. 56 ಮತ್ತು 57 ಆಟಗಾರರನ್ನು ಪ್ರಯತ್ನಿಸಿದರೂ, ಅತ್ಯುತ್ತಮ 15 ಜನರ ತಂಡವನ್ನು ಕಂಡುಹಿಡಿಯಲಾಗಲಿಲ್ಲ. ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ವಿಭಿನ್ನವಾಗಿ ಯೋಜಿಸುತ್ತವೆ. ಹೀಗಾಗಿ ಅವರು ಪಾಕಿಸ್ತಾನಕ್ಕೆ ಬರುತ್ತಿದ್ದಾರೆ'' ಎಂದು ಲತೀಫ್ ಹೇಳಿದ್ದಾರೆ.

ಥಾಯ್ಲೆಂಡ್‌ ಎದುರು ಸೋತ ಪಾಕಿಸ್ತಾನ ಮಹಿಳಾ ಕ್ರಿಕೆಟ್ ತಂಡ: ಟ್ವಿಟ್ಟರ್‌ನಲ್ಲಿ ಭಾರೀ ಟ್ರೋಲ್

ಇಂಜ್ಯುರಿ ತಡೆಯಲು ಸಾಧ್ಯವಾಗಲಿಲ್ಲ!

ಇಂಜ್ಯುರಿ ತಡೆಯಲು ಸಾಧ್ಯವಾಗಲಿಲ್ಲ!

ಕೋಚ್ ರಾಹುಲ್ ದ್ರಾವಿಡ್ ನೇತೃತ್ವದಲ್ಲಿ ಭಾರತ ಉತ್ತಮ ತಯಾರಿ ನಡೆಸಿದೆ. ಪರಿಗಣಿಸಬಹುದಾದ ಹೆಚ್ಚಿನ ಆಟಗಾರರನ್ನು ಪರಿಗಣಿಸಿ ಆಡಲು ಅವಕಾಶ ನೀಡಲಾಯಿತು. ಆದರೆ ಆಟಗಾರರ ಕೆಲಸದ ಹೊರೆಯನ್ನು ನಿಖರವಾಗಿ ನಿಯಂತ್ರಿಸಲು ಸಾಧ್ಯವಾಗಲಿಲ್ಲ ಮತ್ತು ಗಾಯಗಳನ್ನು ತಡೆಯಲು ಸಾಧ್ಯವಾಗಲಿಲ್ಲ. ಹೀಗಾಗಿ ಟಿ20 ವಿಶ್ವಕಪ್‌ಗೂ ಮುನ್ನ ಭಾರತ ಹಲವು ನಿರ್ಣಾಯಕ ಆಟಗಾರರನ್ನು ಕಳೆದುಕೊಂಡಿತು.

ರವೀಂದ್ರ ಜಡೇಜಾ ಕೂಡ ಗಾಯದ ಸಮಸ್ಯೆಯಿಂದ ಈ ವರ್ಷದ ಟಿ20 ವಿಶ್ವಕಪ್ ಆಡುತ್ತಿಲ್ಲ. ಪ್ರವಾಸದ ವೇಳೆ ಸ್ವತಃ ಜಡೇಜಾ ಗಾಯಗೊಂಡಿದ್ದಾರೆ. ಆಟಗಾರರು ಪ್ರಮುಖ ಟೂರ್ನಿಗೆ ಪ್ರಾಮುಖ್ಯತೆ ನೀಡದೆ, ಫಿಟ್ನೆಸ್‌ ಕಡೆಗೆ ಗಮನ ಹರಿಸದೆ ಮುನ್ನಡೆದಿರುವುದು, ಭಾರತಕ್ಕೆ ಹಿನ್ನಡೆಯಾಗಿ ಪರಿಣಮಿಸಿದೆ.

ಟಿ20 ಪಂದ್ಯದಲ್ಲಿ ದ್ವಿಶತಕ ಸಿಡಿಸಿದ ವೆಸ್ಟ್ ಇಂಡೀಸ್ ಓಪನರ್, 77 ಎಸೆತಗಳಲ್ಲಿ ಅಜೇಯ 205 ರನ್!

ಕೋಚ್ ರಾಹುಲ್ ದ್ರಾವಿಡ್‌ಗೆ ಸವಾಲು

ಕೋಚ್ ರಾಹುಲ್ ದ್ರಾವಿಡ್‌ಗೆ ಸವಾಲು

ಕೋಚ್ ರಾಹುಲ್ ದ್ರಾವಿಡ್ ಮತ್ತು ನಾಯಕ ರೋಹಿತ್ ಶರ್ಮಾ ಅವರಿಗೆ ಇದು ಅತ್ಯಂತ ಮಹತ್ವದ ಟೂರ್ನಿಯಾಗಿದೆ. ಈ ಮೂಲಕ ಏಷ್ಯಾಕಪ್ ನಲ್ಲಿ ಭಾರತಕ್ಕೆ ಮುಖಭಂಗವಾಗಿದೆ. ಭಾರತವು ಪಾಕಿಸ್ತಾನ ಮತ್ತು ಶ್ರೀಲಂಕಾ ವಿರುದ್ಧ ಸೋಲನ್ನ ಅನುಭವಿಸಿತು. ತಂಡದ ಶಕ್ತಿ ಬಲಿಷ್ಠವಾಗಿದ್ದರೂ ಭಾರತಕ್ಕೆ ಅದರೊಂದಿಗೆ ಪ್ರದರ್ಶನ ನೀಡಲು ಸಾಧ್ಯವಿಲ್ಲ ಎಂಬುದು ಸತ್ಯ. ಬೌಲಿಂಗ್‌ನಲ್ಲಿ ಭಾರತಕ್ಕೆ ಸಾಕಷ್ಟು ಚಿಂತೆಗಳಿವೆ. ಬುಮ್ರಾ ಅನುಪಸ್ಥಿತಿಯಲ್ಲಿ ಭಾರತದ ಬೌಲಿಂಗ್ ಲೈನ್ ಅಪ್ ಅತ್ಯಂತ ದುರ್ಬಲವಾಗಿದೆ.

ಭಾರತವೂ ಫೇವರಿಟ್ ಆಗಿದೆ

ಭಾರತವೂ ಫೇವರಿಟ್ ಆಗಿದೆ

ವಿರಾಟ್ ಕೊಹ್ಲಿ, ಕೆಎಲ್ ರಾಹುಲ್, ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್, ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್ ಸೇರಿದಂತೆ ಅನೇಕ ಅನುಭವಿ ಆಟಗಾರರು ಭಾರತವನ್ನು ಪ್ರತಿನಿಧಿಸುತ್ತಿದ್ದ, ಬಹುತೇಕರು ಆಸ್ಟ್ರೇಲಿಯಾದಲ್ಲಿ ಆಡಿದ ಅನುಭವ ಹೊಂದಿದ್ದಾರೆ. ಟೀಂ ಇಂಡಿಯಾ ಇಂಜ್ಯುರಿಯ ಸಮಸ್ಯೆಯ ನಡುವೆಯು ಫೇವರಿಟ್ ತಂಡಗಳಲ್ಲಿ ಒಂದಾಗಿದೆ.

ಟೀಂ ಇಂಡಿಯಾ ವಿಶ್ವಕಪ್ ಸ್ಕ್ವಾಡ್‌ ಈ ಕೆಳಗಿದೆ
ರೋಹಿತ್ ಶರ್ಮಾ (ನಾಯಕ), ಕೆ.ಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಬ್ ಪಂತ್, ದಿನೇಶ್ ಕಾರ್ತಿಕ್, ಹಾರ್ದಿಕ್ ಪಾಂಡ್ಯ, ಆರ್ ಅಶ್ವಿನ್, ಯುಜವೇಂದ್ರ ಚಾಹಲ್, ಅಕ್ಷರ್ ಪಟೇಲ್, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಅರ್ಷದೀಪ್ ಸಿಂಗ್

ಸ್ಟ್ಯಾಂಡ್‌ಬೈ ಆಟಗಾರರು: ಮೊಹಮ್ಮದ್ ಶಮಿ, ಶ್ರೇಯಸ್ ಅಯ್ಯರ್, ರವಿ ಬಿಷ್ಣೋಯ್, ದೀಪಕ್ ಚಹಾರ್

Story first published: Thursday, October 6, 2022, 20:29 [IST]
Other articles published on Oct 6, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X