ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ ದೇಶದ ಪರ ಯುವರಾಜ್ ಸಿಂಗ್ ಆರ್ಭಟಿಸಿದ್ದು ಇದೇ ದಿನ!

6,6,6,6,6,6: 12 years of Yuvraj Singh’s six sixes in an over in T20 World Cup

ಬೆಂಗಳೂರು, ಸೆಪ್ಟೆಂಬರ್ 19: 12 ವರ್ಷಗಳಿಗೆ ಹಿಂದೆ ಸರಿಯಾಗಿ ಇದೇ ಸೆಪ್ಟೆಂಬರ್ 19ರಂದು ಟೀಮ್ ಇಂಡಿಯಾ ಮಾಜಿ ಸ್ಫೋಟಕ ಬ್ಯಾಟ್ಸ್‌ಮನ್ ಯುವರಾಜ್ ಸಿಂಗ್ ಓವರ್‌ ಒಂದರಲ್ಲಿ ಆರು ಸಿಕ್ಸ್ ಚಚ್ಚಿ ವಿಶ್ವವನ್ನು ನಿಬ್ಬೆರಗಾಗಿಸಿದ್ದರು. 2007ರ ಟಿ20 ವರ್ಲ್ಡ್‌ಕಪ್‌ನಲ್ಲಿ ಸಿಕ್ಸರ್ ಕಿಂಗ್ ಯುವಿ ಈ ದಾಖಲೆ ನಿರ್ಮಿಸಿದ್ದರು.

ರೋಹಿತ್ ಶರ್ಮಾ ಹಿಂದಿಕ್ಕಿ ಟಿ20ಐ ವಿಶ್ವದಾಖಲೆ ನಿರ್ಮಿಸಿದ ಕಿಂಗ್ ಕೊಹ್ಲಿ!ರೋಹಿತ್ ಶರ್ಮಾ ಹಿಂದಿಕ್ಕಿ ಟಿ20ಐ ವಿಶ್ವದಾಖಲೆ ನಿರ್ಮಿಸಿದ ಕಿಂಗ್ ಕೊಹ್ಲಿ!

2007ರ ಸೆಪ್ಟೆಂಬರ್ 19ರಂದು ದಕ್ಷಿಣ ಆಫ್ರಿಕಾದ ಡರ್ಬನ್‌ನಲ್ಲಿ ನಡೆದಿದ್ದ ಪಂದ್ಯವದು. ಐಸಿಸಿ ವರ್ಲ್ಡ್ ಟಿ20 21ನೇ ಈ ಪಂದ್ಯದಲ್ಲಿ ಇಂಗ್ಲೆಂಡ್ ಮತ್ತು ಭಾರತ ಮುಖಾಮುಖಿಯಾಗಿದ್ದವು. ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದ್ದ ಭಾರತ ಪರ ಆವತ್ತು ಯುವಿ ಓವರ್ ಒಂದರಲ್ಲಿ ಸತತ ಆರು ಸಿಕ್ಸ್‌ ಚಚ್ಚಿದ್ದರು.

ತನ್ನ 'ಕುಟುಂಬದ ರಹಸ್ಯ ದುರಂತ' ವರದಿಗೆ ಕಿಡಿ ಕಾರಿದ ಬೆನ್ ಸ್ಟೋಕ್ಸ್!ತನ್ನ 'ಕುಟುಂಬದ ರಹಸ್ಯ ದುರಂತ' ವರದಿಗೆ ಕಿಡಿ ಕಾರಿದ ಬೆನ್ ಸ್ಟೋಕ್ಸ್!

ಆ ಬ್ಯಾಟಿಂಗ್‌ನಿಂದಾಗಿ ಯಾವುದೇ ಕ್ರಿಕೆಟ್‌ ಮಾದರಿಯಲ್ಲಿ ಓವರ್‌ ಒಂದರಲ್ಲಿ 6 ಸಿಕ್ಸ್‌ ಬಾರಿಸಿದ ಮೊದಲ ಭಾರತೀಯ ಮತ್ತು ಈವರೆಗೂ ಒಬ್ಬನೇ ಒಬ್ಬ ಭಾರತೀಯ ಆಟಗಾರನಾಗಿ ಯುವರಾಜ್ ಗುರುತಿಸಿಕೊಂಡಿದ್ದಾರೆ.

ಗಂಭೀರ್, ಸೆಹ್ವಾಗ್ ಅರ್ಧ ಶತಕ

ಗಂಭೀರ್, ಸೆಹ್ವಾಗ್ ಅರ್ಧ ಶತಕ

ಅಂದಿನ ಪಂದ್ಯದಲ್ಲಿ ಬ್ಯಾಟಿಂಗ್‌ ಆಯ್ದುಕೊಂಡಿದ್ದ ಭಾರತ ಪರ ಆರಂಭಿಕ ಆಟಗಾರರಾದ ಗೌತಮ್ ಗಂಭೀರ್ ಮತ್ತು ವೀರೇಂದ್ರ ಸೆಹ್ವಾಗ್ ಅರ್ಧ ಶತಕ ಬಾರಿಸಿದ್ದರು. ಗಂಭೀರ್ 58, ಸೆಹ್ವಾಗ್ 68, ರಾಬಿನ್ ಉತ್ತಪ್ಪ 6, ಎಂಎಸ್ ಧೋನಿ 10 ರನ್ ಸೇರಿಸಿದ್ದರು.

ಸ್ಟುವರ್ಟ್ ಬ್ರಾಡ್‌ ಬಲಿಪಶು

ಸ್ಟುವರ್ಟ್ ಬ್ರಾಡ್‌ ಬಲಿಪಶು

ಆದಿನ ಯುವರಾಜ್‌ ಸಿಂಗ್‌ ಸ್ಫೋಟಕ ಬ್ಯಾಟಿಂಗ್‌ಗೆ ಬಲಿಪಶುವಾಗಿದ್ದು ಇಂಗ್ಲೆಂಡ್ ಮಾರಕ ವೇಗಿ ಸ್ಟುವರ್ಟ್ ಬ್ರಾಡ್. ಭಾರತದ ಇನ್ನಿಂಗ್ಸ್‌ನಲ್ಲಿ 5ನೇ ಕ್ರಮಾಂಕದಲ್ಲಿ ಯುವಿ ಬ್ಯಾಟಿಂಗ್ ಎತ್ತಿಕೊಂಡಿದ್ದರು. 19ನೇ ಓವರ್‌ನಲ್ಲಿ ಬ್ರಾಡ್‌ ಅವರ ಆರೂ ಎಸೆತಗಳನ್ನು ಯುವಿ ಸಿಕ್ಸ್ ಲೈನ್‌ಗೆ ಅಟ್ಟಿದ್ದರು.

ವೇಗದ ಹಾಫ್ ಸೆಂಚುರಿ

ಯುವರಾಜ್ ಸಿಂಗ್ ಸ್ಫೋಟಕ ಬ್ಯಾಟಿಂಗ್‌ ನೆರವಿನಿಂದಲೇ ಈ ಪಂದ್ಯವನ್ನು ಭಾರತ 18 ರನ್‌ಗಳಿಂದ ಗೆದ್ದಿತ್ತು. ಯುವಿ ಕೇವಲ 16 ಎಸೆತಗಳಿಗೆ 58 ರನ್ ಚಚ್ಚಿದ್ದರು. ಆ ನಂತರ ಆ್ಯಂಡ್ರ್ಯೂ ಫ್ಲಿಂಟಾಫ್ (19.5) ಓವರ್‌ನಲ್ಲಿ ನಾಯಕ ಪೌಲ್ ಕಾಲಿಂಗ್‌ವುಡ್‌ಗೆ ಕ್ಯಾಚಿತ್ತು ನಿರ್ಗಮಿಸಿದ್ದರು.

ಬಿಸಿಸಿಐ ಸ್ಮರಣೆ

ಮೊದಲು ಬ್ಯಾಟಿಂಗ್ ಮಾಡಿದ್ದ ಎಂಎಸ್ ಧೋನಿ ಪಡೆ 20 ಓವರ್‌ಗೆ 4 ವಿಕೆಟ್ ಕಳೆದು 218 ರನ್ ಮಾಡಿತ್ತು. ಇಂಗ್ಲೆಂಡ್‌ 20 ಓವರ್‌ಗೆ 6 ವಿಕೆಟ್‌ ಕಳೆದು 200 ರನ್ ಬಾರಿಸಿ ಶರಣಾಗಿತ್ತು. ಕ್ರಿಕೆಟ್‌ ರಂಗದ ಆ ಅಪರೂಪದ ದಿನವನ್ನು ಸ್ಮಿರಿಸಿಕೊಂಡು ಬಿಸಿಸಿಐ ಟ್ವೀಟ್ ಮಾಡಿದೆ.

Story first published: Thursday, September 19, 2019, 22:35 [IST]
Other articles published on Sep 19, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X