ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ನ್ಯೂಜಿಲೆಂಡ್ ವಿರುದ್ಧ ಸರಣಿ: ಪಾಕ್ ತಂಡದ 6 ಆಟಗಾರರಿಗೆ ಕೊರೊನಾ ವೈರಸ್ ದೃಢ

 6 members of the Pakistan squad in New Zealand have been tested positive for COVID-19

ಪಾಕಿಸ್ತಾನ ಕ್ರಿಕೆಟ್ ತಂಡ ಮತ್ತೆ ಕೊರೊನಾ ವೈರಸ್‌ನ ದಾಳಿಗೆ ತುತ್ತಾಗಿದೆ. ನ್ಯೂಜಿಲೆಂಡ್ ವಿರುದ್ಧ ಸರಣಿಯನ್ನಾಡಲು ಕೀವಿಸ್ ನೆಲಕ್ಕೆ ಕಾಲಿಟ್ಟ ಪಾಕಿಸ್ತಾನ ತಂಡದ ಆಟಗಾರರ ಕೊರನಾ ಪರೀಕ್ಷೆಯನ್ನು ನಡೆಸಲಾಗಿದೆ. ಇದರಲ್ಲಿ ಆರು ಆಟಗಾರರ ಪರೀಕ್ಷೆಯಲ್ಲಿ ಪಾಸಿಟಿವ್ ವರದಿ ಬಂದಿದೆ ಎಂಬುದನ್ನು ನ್ಯೂಜಿಲೆಂಡ್ ಕ್ರಿಕೆಟ್ ಖಚಿತಪಡಿಸಿದೆ.

ಕೊರೋನಾ ವೈರಸ್ ದೃಢಪಟ್ಟ ಆರು ಆಟಗಾರರನ್ನು ಪ್ರತ್ಯೇಕವಾಗಿ ಇರಿಸಲಾಗಿದೆ. ಕ್ರೈಸ್ಟ್‌ಚರ್ಚ್‌ಗೆ ಬಂದಿಳಿದಿರುವ ಪಾಕಿಸ್ತಾನ ತಂಡದ ಸದಸ್ಯರಲ್ಲಿ ಆರು ಆಟಗಾರರನ್ನು ಕ್ವಾರಂಟೈನ್‌ನಲ್ಲಿ ಇರಿಸಲಾಗಿದೆ. ಉಳಿದ ಆಟಗಾರರು ಕೂಡ ಪ್ರತ್ಯೇಕವಾಗಿದ್ದು ಕ್ವಾಂಟೈನ್ ಅವಧಿಯಲ್ಲಿ ತರಬೇತಿ ಪಡೆಯಲು ಇದ್ದ ವಿನಾಯಿತಿಯನ್ನು ರದ್ದುಗೊಳಿಸಲಾಗಿದೆ ಎಂದು ನ್ಯೂಜಿಲೆಂಡ್ ಕ್ರಿಕೆಟ್ ತಿಳಿಸಿದೆ.

"ಇದು ಪಾಕಿಸ್ತಾನ ತಂಡಕ್ಕೆ ನಿರಾಶಾದಾಯಕವಾಗಿದ್ದರೂ, ಪರೀಕ್ಷಾ ಫಲಿತಾಂಶಗಳು ಮತ್ತು ಕೈಗೊಂಡ ಕ್ರಮಗಳು ಪೂರಕವಾಗಿದ್ದು ಸರ್ಕಾರಿ ವ್ಯವಸ್ಥೆಯು ಸೂಕ್ತರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ವ್ಯಕ್ತಪಡಿಸುತ್ತದೆ "ಎಂದು ನ್ಯೂಜಿಲೆಂಡ್ ಕ್ರಿಕೆಟ್ ಹೇಳಿಕೆಯಲ್ಲಿ ತಿಳಿಸಿದೆ.

ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಾಧ್ಯಮ ಹಕ್ಕುಗಳನ್ನು ಪಡೆದ ಸ್ಟಾರ್ ಇಂಡಿಯಾದಕ್ಷಿಣ ಆಫ್ರಿಕಾ ಕ್ರಿಕೆಟ್ ಮಾಧ್ಯಮ ಹಕ್ಕುಗಳನ್ನು ಪಡೆದ ಸ್ಟಾರ್ ಇಂಡಿಯಾ

ಒಆಕಿಸ್ತಾನ ಕ್ರಿಕೆಟ್ ತಂಡದ ಎಲ್ಲಾ ಸದಸ್ಯರು ನ್ಯೂಜಿಲೆಂಡ್‌ಗೆ ಪ್ರವಾಸ ತೆರಳುವ ಮುನ್ನ ನಾಲ್ಕು ಬಾರಿ ಕೋವಿಡ್ ಪರೀಕ್ಷೆಗೆ ಒಳಗಾಗಿದ್ದರು. ಈ ನಾಲ್ಕು ಪರೀಕ್ಷೆಯಲ್ಲಿ ನೆಗೆಟಿವ್ ಬಂದ ಬಳಿಕ ನ್ಯೂಜಿಲೆಂಡ್‌ಗೆ ಪ್ರವಾಸ ಕೈಗೊಳ್ಳಲಾಗಿತ್ತು. ಹಾಗಿದ್ದರೂ ಪಾಕ್ ಆಟಗಾರರಲ್ಲಿ ಕೋವಿಡ್ ಪತ್ತೆಯಾಗಿದೆ. ಇದಕ್ಕೂ ಮುನ್ನ ಕಳೆದ ಜುಲೈನಲ್ಲಿ ಇಂಗ್ಲೆಂಡ್ ಪ್ರವಾಸಕ್ಕೆ ತೆರಳುವ ಮುನ್ನವೂ ಕೆಲ ಆಟಗಾರರು ಈ ವೈರಸ್‌ಗೆ ತುತ್ತಾಗಿದ್ದರು.

ನ್ಯೂಜಿಲಂಡ್ ವಿರುದ್ಧ ಪಾಕಿಸ್ತಾನ 3 ಟಿ20 ಪಂದ್ಯಗಳ ಸರಣಿ ಹಾಗೂ 2 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಪಾಲ್ಗೊಳ್ಳಲಿದೆ. ಡಿಸೆಂಬರ್ 20ರಿಂದ ಸರಣಿ ಆರಂಭವಾಗಲಿದೆ. ಆದರೆ ಕೊರೊನಾ ವೈಸರ್‌ ತಂಡದ ಆಟಗಾರರಲ್ಲಿ ಪತ್ತೆಯಾಗಿರುವುದು ಪಾಕ್ ಪಾಳಯವನ್ನು ಆತಂಕಕ್ಕೆ ದೂಡಿದೆ.

Story first published: Thursday, November 26, 2020, 11:05 [IST]
Other articles published on Nov 26, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X