ಕ್ರಿಕೆಟ್ ಇತಿಹಾಸದಲ್ಲಿ ಇಂದಿಗೂ ಉಳಿದಿರುವ 6 ಅಚ್ಚರಿಯ ದಾಖಲೆಗಳು!

ಬೆಂಗಳೂರು: ಕ್ರಿಕೆಟ್‌ ಯಾವತ್ತಿಗೂ ನಂಬರ್‌ಗಳ ಗೇಮ್. ಇಲ್ಲಿ ಪ್ರತೀ ಪಂದ್ಯ, ಇನ್ನಿಂಗ್ಸ್‌, ಪ್ರತೀ ಎಸೆತ, ಒಂದೊಂದು ಕ್ಷಣವೂ ಅಂಕಿ ಅಂಶಗಳಾಗಿ ಕ್ರಿಕೆಟ್ ಇತಿಹಾಸದಲ್ಲಿ ದಾಖಲಿಸಲ್ಪಡುತ್ತದೆ. ಇದರಲ್ಲಿ ಕೆಲವು ಅಂಕಿ ಅಂಶಗಳು ನಮ್ಮ ಪಾಲಿಗೆ ಅಸಾಮಾನ್ಯವಾಗಿ, ಮ್ಯಾಜಿಕಲ್‌ನಂತೆ, ಅತ್ಯದ್ಭುತವಾಗಿ ಕಾಣಿಸುತ್ತದೆ. ಅಂದ್ಹಾಗೆ, ಕ್ರಿಕೆಟ್‌ ಇತಿಹಾಸದಲ್ಲಿ ದಾಖಲಾಗಿರುವ ಈ ಅಂಕಿ ಅಂಶಗಳು ನಿಗದಿತ ಆಟಗಾರ ಅಥವಾ ತಂಡದ ಸಾಧನೆಗೂ ಕನ್ನಡಿ ಹಿಡಿಯುತ್ತವೆ.

2007ರ ವಿಶ್ವಕಪ್ ಪಂದ್ಯ ಸ್ಮರಿಸಿ ಭಾರತಕ್ಕೆ ಕುಟುಕಿದ ಮುಷ್ಫಿಕರ್ ರಹೀಮ್

ಸರ್ ಡಾನ್ ಬ್ರಾಡ್ಮನ್ ಅವರ 99.94 ಟೆಸ್ಟ್ ಸರಾಸರಿ, ಸಚಿನ್ ತೆಂಡೂಲ್ಕರ್ ಅವರ 34000 ಅಂತಾರಾಷ್ಟ್ರೀಯ ರನ್ ಮತ್ತು 100 ಅಂತಾರಾಷ್ಟ್ರೀಯ ಶತಕ, ಮುತ್ತಯ್ಯ ಮುರಳೀಧರನ್ ಅವರ 800 ಟೆಸ್ಟ್ ಕ್ರಿಕೆಟ್‌, ಎಬಿ ಡಿವಿಲಿಯರ್ಸ್‌ ಅವರ ಅತೀ ವೇಗದ 50, 100, 150 ರನ್‌ಗಳು ಇವೆಲ್ಲ ಜನಪ್ರಿಯ ದಾಖಲೆಗಳು.

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತ್ಯಧಿಕ ಸಿಕ್ಸ್ ದಾಖಲೆಯ 5 ಬ್ಯಾಟ್ಸ್‌ಮನ್‌ಗಳು

ಇವಲ್ಲದೆ ನಾವೀಗ ಮರೆತು ಹೋಗಿರುವ, ಸುಲಭಕ್ಕೆ ನಂಬಲಾಗದ ಅದ್ಭುತ ದಾಖಲೆಗಳು ಕ್ರಿಕೆಟ್‌ ಇತಿಹಾಸದಲ್ಲಿ ದಾಖಲಾಗಿವೆ. ಅವುಗಳಲ್ಲಿ ಟಾಪ್ 6 ದಾಖಲೆಗಳು ಇಲ್ಲಿವೆ.

#1. ಚಮಿಂಡ ವಾಸ್ ಹ್ಯಾಟ್ರಿಕ್

#1. ಚಮಿಂಡ ವಾಸ್ ಹ್ಯಾಟ್ರಿಕ್

ದಕ್ಷಿಣ ಆಫ್ರಿಕಾದ ಪೀಟರ್‌ಮರಿಟ್ಜ್‌ಬರ್ಗ್‌ನಲ್ಲಿ 2003ರಲ್ಲಿ ನಡೆದಿದ್ದ ವಿಶ್ವಕಪ್‌ನಲ್ಲಿ ಬಾಂಗ್ಲಾದೇಶ ಮತ್ತು ಶ್ರೀಲಂಕಾ ತಂಡಗಳು ಮುಖಾಮುಖಿಯಾಗಿದ್ದವು. ಆವತ್ತು ಟಾಸ್‌ ಗೆದ್ದಿದ್ದ ಶ್ರೀಲಂಕಾ ಬೌಲಿಂಗ್ ಆರಿಸಿತ್ತು. ಪಂದ್ಯದ ಆರಂಭಿಕ ಮೂರು ಎಸೆತಗಳಲ್ಲಿ ಚಮಿಂಡ ವಾಸ್ ಅವರು ಕ್ರಮವಾಗಿ ಹನ್ನನ್ ಸರ್ಕಾರ್, ಮೊಹಮ್ಮದ್ ಅಶ್ರಫುಲ್ ಮತ್ತು ಎಹ್ಸಾನ್-ಉಲ್-ಹಕ್ ವಿಕೆಟ್‌ಗಳನ್ನು ಕೆಡವಿ ಹ್ಯಾಟ್ರಿಕ್ ವಿಕೆಟ್ ದಾಖಲೆ ನಿರ್ಮಿಸಿದ್ದರು. ಅಂದರೆ ಪಂದ್ಯದ ಆರಂಭದಲ್ಲೇ ಹ್ಯಾಟ್ರಿಕ್ ವಿಕೆಟ್‌ ಲಭಿಸಿದ್ದು ಅದೇ ಮೊದಲು. ವಾಸ್ ಆವತ್ತು ಒಟ್ಟಿಗೆ 6 ವಿಕೆಟ್‌ ಪಡೆದಿದ್ದರು. ಪಂದ್ಯದಲ್ಲಿ ಶ್ರೀಲಂಕಾ 6 ವಿಕೆಟ್‌ಗಳ ಸುಲಭ ಜಯ ಜಯ ಗಳಿಸಿತ್ತು.

#2. 1 ರನ್‌ಗೆ 4 ವಿಕೆಟ್‌ಗಳು

#2. 1 ರನ್‌ಗೆ 4 ವಿಕೆಟ್‌ಗಳು

2015ರ ವಿಶ್ವಕಪ್‌ನಲ್ಲಿ ಪಾಕಿಸ್ತಾನ vs ವೆಸ್ಟ್ ಇಂಡೀಸ್ ಪಂದ್ಯದಲ್ಲಿ ಇಂಥದ್ದೊಂದು ಅಪರೂಪದ ದಾಖಲೆ ಸೃಷ್ಟಿಯಾಗಿತ್ತು. ಈ ಕೆಟ್ಟ ದಾಖಲೆ ನಿರ್ಮಿಸಿದ್ದು ಪಾಕಿಸ್ತಾನ. ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ವೆಸ್ಟ್ ಇಂಡೀಸ್ ತಂಡ 50 ಓವರ್‌ಗೆ 6 ವಿಕೆಟ್‌ ನಷ್ಟದಲ್ಲಿ 310 ರನ್ ಗಳಿಸಿತ್ತು. ಇನ್ನಿಂಗ್ಸ್‌ಗೆ ಇಳಿದ ಪಾಕಿಸ್ತಾನ ರನ್ ಗಳಿಸುವುದಕ್ಕೂ ಮುನ್ನವೇ ನಾಸಿರ್ ಜಮ್ಶದ್ ಔಟಾದರು, ಅದಾಗಿ ಅಹ್ಮದ್ ಶೆಹಝಾದ್ 1 ರನ್ ಗಳಿಸಿದ್ದಾಗ ಯೂನಿಸ್ ಖಾನ್ ವಿಕೆಟ್ ಒಪ್ಪಿಸಿದರು. ಮತ್ತೆ ಹ್ಯಾರಿಸ್ ಸೊಹೈಲ್ ಕ್ಯಾಚ್ ನೀಡಿದರು, ನಂತರ ಅಹ್ಮದ್ ಶೆಹಝಾದ್ ವಿಕೆಟ್‌ ಕೂಡ ಪತನಗೊಂಡಿತು. ಅಂದರೆ 3.1 ಓವರ್‌ ವರೆಗೆ ಆಡಿದ್ದ ಪಾಕ್ ಕೇವಲ 1 ರನ್ ಗಳಿಸಿ 4 ವಿಕೆಟ್‌ಗಳನ್ನು ಕಳೆದು ಮುಖಭಂಗ ಅನುಭವಿಸಿತ್ತು. ಪಂದ್ಯದಲ್ಲಿ 150 ರನ್‌ನಿಂದ ವಿಂಡೀಸ್ ಗೆದ್ದಿತ್ತು.

#3. ನಾಥನ್ ಲಿಯಾನ್

#3. ನಾಥನ್ ಲಿಯಾನ್

2011ರಲ್ಲಿ ದಕ್ಷಿಣ ಆಫ್ರಿಕಾಕ್ಕೆ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿದ್ದಾಗ ಈ ದಾಖಲೆ ನಿರ್ಮಾಣವಾಗಿತ್ತು. ಇತ್ತಂಡಗಳ ಮೊದಲ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಬೌಲರ್ ನಾಥನ್ ಲಿಯಾನ್ 11ನೇ ಕ್ರಮಾಂಕದಲ್ಲಿ ಇನ್ನಿಂಗ್ಸ್‌ನ ಹೆಚ್ಚು ರನ್ ಗಳಿಸಿದ್ದರು. ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಆಸ್ಟ್ರೇಲಿಯಾ 284-10 (75) ಸ್ಕೋರ್‌ ಮಾಡಿತ್ತು. ದಕ್ಷಿಣ ಆಫ್ರಿಕಾ ಮೊದಲ ಇನ್ನಿಂಗ್ಸ್‌ ಅನ್ನು 96-10 (24.3)ಕ್ಕೆ ಮುಗಿಸಿತ್ತು. 2ನೇ ಇನ್ನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾ ಪರ ಹೆಚ್ಚು ರನ್ ಗಳಿಸಿದ್ದು 11ನೇ ಬ್ಯಾಟಿಂಗ್ ಕ್ರಮಾಂಕದಲ್ಲಿ ಬಂದಿದ್ದ ನಾಥನ್ ಲಿಯಾನ್ ಮತ್ತು 9ನೇ ಕ್ರಮಾಂಕದಲ್ಲಿ ಬಂದಿದ್ದ ಪೀಟರ್ ಸಿಡ್ಲ್ ಇಬ್ಬರೇ. ಲಿಯಾನ್ 14 ರನ್ ಗಳಿಸಿದ್ದರೆ, ಸಿಡ್ಲ್‌ ಅಜೇಯ 12 ರನ್‌ ರನ್ ಗಳಿಸಿದ್ದರು. ಉಳಿದೆಲ್ಲರೂ 5ಕ್ಕೂ ಕೆಳಗೆ ವಿಕೆಟ್ ಒಪ್ಪಿಸಿದ್ದರು. ಆವತ್ತು ಆಸೀಸ್ 18 ಓವರ್‌ಗೆ ಎಲ್ಲಾ ವಿಕೆಟ್‌ ಕಳೆದು 47 ರನ್ ಕಲೆ ಹಾಕಿತ್ತು. ಪಂದ್ಯವನ್ನು ಆಫ್ರಿಕಾ 8 ವಿಕೆಟ್‌ಗಳಿಂದ ಗೆದ್ದಿತ್ತು.

#4. ಮುತ್ತಯ್ಯ ಮುರಳೀಧರನ್

#4. ಮುತ್ತಯ್ಯ ಮುರಳೀಧರನ್

ಶ್ರೀಲಂಕಾದ ಸ್ಪಿನ್ ಮಾಂತ್ರಿಕ ಮುತ್ತಯ್ಯ ಮುರಳೀಧರನ್ ಹೆಸರಿನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತೀ ಹೆಚ್ಚು ಬಾರಿ ಡಕ್ ಔಟ್ ಆದ ಕೆಟ್ಟ ದಾಖಲೆಯಿದೆ. ಟೆಸ್ಟ್‌ ಕ್ರಿಕೆಟ್‌ನಲ್ಲಿ 800 ವಿಕೆಟ್‌ ದಾಖಲೆಯ ಸರದಾರ ಟೆಸ್ಟ್‌ನಲ್ಲಿ 25 ಬಾರಿ, ಏಕದಿನದಲ್ಲಿ 33 ಬಾರಿ ಮತ್ತು ಟಿ20ಯಲ್ಲಿ 1 ಬಾರಿ ಡಕ್‌ ಔಟ್ ಆದ ದಾಖಲೆ ನಿರ್ಮಿಸಿದ್ದಾರೆ. ಮುರಳೀಧರನ್ ಅತ್ಯಧಿಕ ಟೆಸ್ಟ್ ರನ್ ಅಂದರೆ 67. ಇದು ಭಾರತ ವಿರುದ್ಧವೇ ಗಳಿಸಿದ್ದರು. ವಿಶೇಷವೆಂದರೆ ಮುತ್ತಯ್ಯ ಗಳಿಸಿದ ಟೆಸ್ಟ್‌ನ 67 ರನ್, ಕರ್ಟ್ನಿ ವಾಲ್ಷ್ (ವೆಸ್ಟ್ ಇಂಡೀಸ್), ಡ್ಯಾನಿ ಮಾರಿಸನ್ (ನ್ಯೂಜಿಲೆಂಡ್), ಗ್ಲೆನ್ ಮೆಗ್ರಾತ್ ( ಆಸ್ಟ್ರೇಲಿಯಾ) ಬ್ಯಾಟಿಂಗ್ ದಾಖಲೆಗಿಂತ ಚೆನ್ನಾಗಿದೆ.

#5. ರಾಹುಲ್ ದ್ರಾವಿಡ್

#5. ರಾಹುಲ್ ದ್ರಾವಿಡ್

ಟೆಸ್ಟ್‌ ಕ್ರಿಕೆಟ್‌ನಲ್ಲಿ ಅತ್ಯಧಿಕ ಎಸೆತಗಳನ್ನು ಎದುರಿಸಿದ ದಾಖಲೆ ಕನ್ನಡಿಗ, ಗ್ರೇಟ್ ವಾಲ್ ರಾಹುಲ್ ದ್ರಾವಿಡ್ ಹೆಸರಿನಲ್ಲಿದೆ. ದ್ರಾವಿಡ್, ಟೆಸ್ಟ್‌ನಲ್ಲಿ ಬರೋಬ್ಬರಿ 31258 ಎಸೆತಗಳನ್ನು ಎದುರಿಸಿದ್ದಾರೆ. ಕ್ರೀಸ್‌ನಲ್ಲಿ ಹೆಚ್ಚುಕಾಲ ನಿಲ್ಲುತ್ತಿದ್ದ ಆಪತ್ಭಾಂಧವ ದ್ರಾವಿಡ್ ಟೆಸ್ಟ್‌ನಲ್ಲಿ 88 ಬಾರಿ 100ಕ್ಕೂ ಹೆಚ್ಚು ಪಾರ್ಟ್ನರ್‌ಶಿಪ್‌ ದಾಖಲೆ ಹೊಂದಿದ್ದಾರೆ. ಅಲ್ಲದೆ ಸಚಿನ್ ತೆಂಡೂಲ್ಕರ್ ಜೊತೆಗೆ 6980 ರನ್ ಜೊತೆಯಾಟ ನೀಡಿದ ದಾಖಲೆಯೂ ರಾಹುಲ್ ಹೆಸರಿನಲ್ಲಿದೆ. 164 ಟೆಸ್ಟ್ ಪಂದ್ಯಗಳನ್ನಾಡಿರುವ ದ್ರಾವಿಡ್ 286 ಇನ್ನಿಂಗ್ಸ್‌ಗಳನ್ನು ಆಡಿದ್ದಾರೆ. ದ್ರಾವಿಡ್ ಪ್ರತೀ ಇನ್ನಿಂಗ್ಸ್‌ನಲ್ಲಿ ಎದುರಿಸಿದ ಎಸೆತಗಳ ಸರಾಸರಿ ತೆಗೆದರೆ 109 ಎಸೆತಗಳು ಸಿಗುತ್ತವೆ.

#6. ರಿಕಿ ಪಾಂಟಿಂಗ್

#6. ರಿಕಿ ಪಾಂಟಿಂಗ್

ಟೆಸ್ಟ್‌ ಇತಿಹಾಸದಲ್ಲಿ 100 ಗೆಲುವುಗಳನ್ನು ಕಂಡ ಏಕಮಾತ್ರ ಆಟಗಾರನೆಂಬ ದಾಖಲೆ ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ಹೆಸರಿನಲ್ಲಿದೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 25000ಕ್ಕೂ ಅಧಿಕ ರನ್ ಗಳಿಸಿರುವ ಪಾಂಟಿಂಗ್, ಎಲ್ಲಾ ಕ್ರಿಕೆಟ್‌ ಮಾದರಿಗಳಲ್ಲಿ ಸುಮಾರು 70 ಶತಕಗಳನ್ನು ಬಾರಿಸಿದ್ದಾರೆ. ಏಕದಿನದಲ್ಲೂ ಯಶಸ್ವಿ ನಾಯಕರೆನಿಸಿದ್ದ ರಿಕಿ ಪಾಂಟಿಂಗ್ ಅವರ ಜಯದ ಶೇ. ತೆಗೆದರೆ 71.7 ಬರುತ್ತದೆ. ಐಸಿಸಿ ವಿಶ್ವಕಪ್‌ನಲ್ಲಿ ಅತೀ ಹೆಚ್ಚು ಟ್ರೋಫಿಗಳನ್ನು ಗೆದ್ದ ನಾಯಕರಲ್ಲಿ ಪಾಂಟಿಂಗ್ ಮತ್ತು ವೆಸ್ಟ್ ಇಂಡೀಸ್‌ನ ಕ್ಲೈವ್ ಲಾಯ್ಡ್ ಬರುತ್ತಾರೆ. ಅಂತೂ ಟೆಸ್ಟ್‌ನಲ್ಲಿ 100 ಜಯಗಳನ್ನು ಕಂಡ ಆಟಗಾರನೆಂಬ ಹಿರಿಮೆ ಪಾಂಟಿಂಗ್ ಅವರದ್ದು. ಶ್ರೀಲಂಕಾ ವಿರುದ್ಧ ಗ್ಯಾಲೆಯಲ್ಲಿ 2011ರಲ್ಲಿ 100ನೇ ಟೆಸ್ಟ್ ಜಯ ಪಾಂಟಿಂಗ್‌ಗೆ ಲಭಿಸಿತ್ತು.

For Quick Alerts
ALLOW NOTIFICATIONS
For Daily Alerts

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Thursday, May 28, 2020, 11:59 [IST]
Other articles published on May 28, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X