ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಶೂನ್ಯಕ್ಕೆ 6 ವಿಕೆಟ್ ಕಬಳಿಸಿದ ಸ್ಟಾರ್ ಕ್ರಿಕೆಟರ್ ನೇಪಾಳಿ ಅಂಜಲಿ!

 6 wickets, 0 runs: Nepal bowler Anjali Chand produces best-ever bowling figures in T20I history on debut in SAG 2019

ಪೋಖಾರಾ, ಡಿಸೆಂಬರ್ 03: ನೇಪಾಳದ ಪೊಖಾರಾದ ನಡೆದ ಮಹಿಳಾ ಟಿ20 ಪಂದ್ಯದಲ್ಲಿ ಸೋಮವಾರದಂದು ಅಂಜಲಿ ಚಾಂದ್ ಹೊಸ ಇತಿಹಾಸ ನಿರ್ಮಿಸಿದರು. ಮಾಲ್ಡಿವ್ಸ್ ಮಹಿಳಾ ಕ್ರಿಕೆಟ್ ತಂಡದ ವಿರುದ್ಧದ ಪಂದ್ಯದಲ್ಲಿ ಒಂದೇ ಒಂದು ರನ್ ನೀಡದೆ 6 ವಿಕೆಟ್ ಕಬಳಿಸಿ ಮಹಿಳಾ ಟಿ20 ಕ್ರಿಕೆಟ್ ನಲ್ಲಿ ಹೊಸ ದಾಖಲೆ ಬರೆದಿದ್ದಾರೆ. ಅಂತಾರಾಷ್ಟ್ರೀಯ ಪಂದ್ಯದಲ್ಲಿ ಈ ರೀತಿ ಸಾಧನೆ ಮಾಡಿದ ಮೊದಲ ಕ್ರಿಕೆಟರ್ ಎನಿಸಿಕೊಂಡಿದ್ದಾರೆ.

ಸೌತ್ ಏಷ್ಯನ್ ಗೇಮ್ಸ್ ಟೂರ್ನಿಯ ಮೊದಲ ಪಂದ್ಯದಲ್ಲಿ ಟಾಸ್ ಗೆದ್ದ ಮೊದಲು ಬ್ಯಾಟಿಂಗ್ ಮಾಡಿದ ಮಾಲ್ಡೀವ್ಸ್, 10.1 ಓವರ್ ಗೆ 16 ರನ್ ಗೆ ಆಲ್ ಔಟಾಗಿತ್ತು. ನಂತರ ನೇಪಾಳ ಈ ಪಂದ್ಯವನ್ನು 0.5 ಓವರ್ ಗಳಲ್ಲಿ 17ರನ್ ಗಳಿಸುವ ಮೂಲಕ 10 ವಿಕೆಟ್ ಗಳ ಜಯ ದಾಖಲಿಸಿತು. ಇದಕ್ಕೂ ಮುನ್ನ ಪಂದ್ಯದಲ್ಲಿ 2.1 ಓವರ್ ಬೌಲಿಂಗ್ ಮಾಡಿದ ಅಂಜಲಿ ಚಾಂದ್ 2 ಮೇಡನ್ ಸಹಿತ 6 ವಿಕೆಟ್ ಪಡೆದಿದ್ದಾರೆ.

ಅಂಜಲಿಗೂ ಮುನ್ನ ಮಲೇಷಿಯಾದ ಮಾಸ್ ಎಲಿಸಾ ಅವರು ಚೀನಾ ಮಹಿಳಾ ತಂಡದ ವಿರುದ್ಧ ಜನವರಿಯಲ್ಲಿ ನಡೆದ ಪಂದ್ಯದಲ್ಲಿ 4 ಓವರ್ ಗಳಲ್ಲಿ 3 ರನ್ನಿತ್ತು 6 ವಿಕೆಟ್ ಗಳಿಸಿದ ಸಾಧನೆ ಮಾಡಿದ್ದರು.

ಈಗ 24 ವರ್ಷ ವಯಸ್ಸಿನ ಅಂಜಲಿ 2.1 ಓವರ್ ಗಳಲ್ಲಿ 2 ಮೇಡನ್ ಒಂದು ರನ್ ನೀಡದೆ 6 ವಿಕೆಟ್ ಕಿತ್ತು ದಾಖಲೆ ಬರೆದಿದ್ದಾರೆ. ಅಂಜಲಿ ಜೊತೆಗೆ ಕರುಣಾ ಭಂಡಾರಿ 2/4 ಗಳಿಸಿದರೆ, ಇನ್ನಿಬ್ಬರು ರನೌಟ್ ಆದರು. ಮಾಲ್ಡೀವ್ಸ್ ಪರ ಇಬ್ಬರು ಎರಡಂಕಿ ಸ್ಕೋರ್ ಮಾಡಿದರೆ, 8 ಮಂದಿ ಆಟಗಾರ್ತಿಯರು ಶೂನ್ಯಕ್ಕೆ ಔಟಾದರು.

ರನ್ ಚೇಸ್ ನಲಿ ನೇಪಾಳದ ಆರಂಭಿಕ ಆಟಗಾರ್ತಿ ಕಾಜಲ್ ಶ್ರೇಷ್ಠ 13ರನ್ ಗಳಿಸಿ ಅಜೇಯರಾಗಿ ಉಳಿದರು. ಮಿಕ್ಕವು ಇತರೆ ರನ್(2 ವೈಡ್, 1 ಲೆಗ್ ಬೈ ಒಂದು ನೋಬಾಲ್) ಆಗಿ ಬಂದವು.

5 ಎಸೆತಗಳಲ್ಲಿ ಗೆಲುವು ಸಾಧಿಸಿದ ನೇಪಾಳ ತ್ವರಿತ ಗತಿಯಲ್ಲಿ ಪಂದ್ಯ ಗೆದ್ದ ದಾಖಲೆಯಿಂದ ಸ್ವಲ್ಪದರಲ್ಲಿ ವಂಚಿತವಾಯಿತು. ಜುಲೈ 2019ರಲ್ಲಿ Rwanda ಹಾಗೂ ತಾಂಜೇನಿಯಾ ತಂಡವು ಮಾಲಿ ತಂಡವನ್ನು 4 ಎಸೆತಗಳಲ್ಲಿ ಸೋಲಿಸಿದ್ದು ದಾಖಲೆಯಾಗಿ ಉಳಿದಿದೆ.

Story first published: Tuesday, December 3, 2019, 13:23 [IST]
Other articles published on Dec 3, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X