ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಆಸಿಸ್ ಪ್ರಕಟಿಸಿದ ಬಾಂಗ್ಲಾ, ವಿಂಡೀಸ್ ವಿರುದ್ಧದ ಸರಣಿಯಿಂದ ಹಿಂದೆ ಸರಿದ 7 ಐಪಿಎಲ್ ಸ್ಟಾರ್‌ಗಳು

7 stars withdrawn from Australias upcoming tour to West Indies and Bangladesh

ಆಸ್ಟ್ರೇಲಿಯಾ ಕ್ರಿಕೆಟ್ ತಂಡ ಮುಂದಿನ ಕೆಲ ತಿಂಗಳು ವೆಸ್ಟ್ ಇಂಡೀಸ್ ಹಾಗೂ ಬಾಂಗ್ಲಾದೇಶಕ್ಕೆ ಪ್ರವಾಸಕ್ಕೆ ತೆರಳಲಿದೆ. ಆದರೆ ಈ ಸರಣಿಯಿಂದ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಕೆಲ ಪ್ರಮುಖ ಸ್ಟಾರ್ ಆಟಗಾರರು ಹೊರಗುಳಿಯಲಿದ್ದಾರೆ. ಈ ಎರಡು ದೇಶಗಳ ಪ್ರವಾಸಕ್ಕಾಗಿ ಕ್ರಿಕೆಟ್ ಆಸ್ಟ್ರೇಲಿಯಾ ತನ್ನ ತಂಡವನ್ನು ಪ್ರಕಟಿಸಿದೆ.

ಕ್ರಿಕೆಟ್ ಆಸ್ಟ್ರೇಲಿಯಾ ವೆಸ್ಟ್ ಇಂಡೀಸ್ ಹಾಗೂ ಬಾಂಗ್ಲಾದೇಶ ಪ್ರವಾಸಕ್ಕಾಗಿ 18 ಆಟಗಾರರ ತಂಡವನ್ನು ಹೆಸರಿಸಿದೆ. ಈ ತಂಡದಲ್ಲಿ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಪ್ರಮುಖ 7 ಆಟಗಾರರು ಹೊರಗುಳಿದಿದ್ದಾರೆ. ಈ ಎಲ್ಲಾ ಆಟಗಾರರು ಬೇರೆ ಬೇರೆ ಕಾರಣಗಳನ್ನು ನೀಡಿ ಪ್ರವಾಸದಿಂದ ಹಿಂದಕ್ಕೆ ಸರಿದಿದ್ದು ಅವುಗಳನ್ನು ಮಂಡಳಿ ಒಪ್ಪಿಕೊಂಡಿದೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ತಿಳಿಸಿದೆ.

WTC ಫೈನಲ್‌ಗೆ ಭಾರತ ತಂಡದಲ್ಲಿ ಸ್ಥಾನ ಪಡೆದುಕೊಳ್ಳದ 5 ಪ್ರಮುಖ ಆಟಗಾರರಿವರು!WTC ಫೈನಲ್‌ಗೆ ಭಾರತ ತಂಡದಲ್ಲಿ ಸ್ಥಾನ ಪಡೆದುಕೊಳ್ಳದ 5 ಪ್ರಮುಖ ಆಟಗಾರರಿವರು!

ಪ್ಯಾಟ್ ಕಮ್ಮಿನ್ಸ್, ಗ್ಲೆನ್ ಮ್ಯಾಕ್ಸ್‌ವೆಲ್, ಡೇವಿಡ್ ವಾರ್ನರ್, ಸ್ಟೀವ್ ಸ್ಮಿತ್, ಮಾರ್ಕಸ್ ಸ್ಟೋಯ್ನಿಸ್, ಜೇ ರಿಚರ್ಡ್ಸನ್ ಮತ್ತು ಕೇನ್ ರಿಚರ್ಡ್ಸನ್ ಆಸ್ಟ್ರೇಲಿಯಾದ ಈ ಪ್ರವಾಸದಿಂದ ಹೊರಗುಳಿದಿರುವ ಐಪಿಎಲ್‌ನ ಸ್ಟಾರ್ ಆಟಗಾರರಾಗಿದ್ದಾರೆ. ಇದರಲ್ಲಿ ಸ್ಟೀವ್ ಸ್ಮಿತ್ ಮೊಣಕೈ ಗಾಯದ ಕಾರಣದಿಂದ ಪ್ರವಾಸವನ್ನು ತಪ್ಪಿಸಿಕೊಂಡಿದ್ದಾರೆ.

ಬೇಸರ ವ್ಯಕ್ತಪಡಿಸಿದ ಆಯ್ಕೆಗಾರರು

ಬೇಸರ ವ್ಯಕ್ತಪಡಿಸಿದ ಆಯ್ಕೆಗಾರರು

ಬುಧವಾರ ಈ ಪ್ರವಾಸಕ್ಕೆ ತೆರಳುವ ಆಸ್ಟ್ರೇಲಿಯಾ ತಂಡದ ಸದಸ್ಯರ ಹೆಸರನ್ನು ಘೋಷಿಸಿದ ನಂತರ ಮುಖ್ಯ ಆಯ್ಕೆಗಾರ ಟ್ರೆವರ್ ಹಾನ್ಸ್ ಪ್ರತಿಕ್ರಿಯೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಅವರು ಪೂರ್ಣ ಸಾಮರ್ಥ್ಯದ ತಂಡವನ್ನು ಆಯ್ಕೆ ಮಾಡಲು ಸಾಧ್ಯವಾಗದಕ್ಕೆ ಬೇಸರವನ್ನು ವ್ಯಕ್ತಪಡಿಸಿದ್ದಾರೆ.

ಐಪಿಎಲ್‌ನಿಂದ ಮರಳಿದ್ದ ಆಟಗಾರರು

ಐಪಿಎಲ್‌ನಿಂದ ಮರಳಿದ್ದ ಆಟಗಾರರು

ಈ ಏಳು ಮಂದಿ ಆಟಗಾರರು ಐಪಿಎಲ್‌ನಲ್ಲಿ ಪಾಲ್ಗೊಂಡಿದ್ದು ಕಳೆದ ತಿಂಗಳಷ್ಟೇ ತವರಿಗೆ ಮರಳಿದ್ದರು. ಆಸ್ಟ್ರೇಲಿಯಾದಲ್ಲಿ ಕೊರೊನಾವೈರಸ್ ಹಿನ್ನೆಲೆಯಲ್ಲಿ ಕಠಿಣ ನಿಯಮಗಳು ಇದ್ದ ಕಾರಣ ಐಪಿಎಲ್ ಟೂರ್ನಿಯನ್ನು ಬಿಸಿಸಿಐ ರದ್ದುಗೊಳಿಸುವ ನಿರ್ಧಾರ ಪ್ರಕಟಿಸಿದ ನಂತರ ಆಸಿಸ್ ಆಟಗಾರರು ನೇರವಾಗಿ ಆಸಿಸ್‌ಗೆ ತೆರಳಲು ಸಾಧ್ಯವಾಗದೆ ಮಾಲ್ಡೀವ್ಸ್‌ನಲ್ಲಿ ಕ್ವಾರಂಟೈನ್ ಪೂರೈಸಿ ನಂತರ ತವರಿಗೆ ಮರಳಿದ್ದರು. ಕೆಲ ವರದಿಗಳ ಪ್ರಕಾರ ಮುಂದಿನ ಕೆಲ ತಿಂಗಳುಗಳು ಬಯೋಬಬಲ್‌ನಲ್ಲಿ ಮುಂದುವರಿಬೇಕಾದ ಕಾರಣದಿಂದಾಗಿ ಈ ಆಟಗಾರರು ಸರಣಿಯಿಂದ ಹಿಂದಕ್ಕೆ ಸರಿದಿದ್ದಾರೆ ಎನ್ನಲಾಗುತ್ತಿದೆ.

ವೆಸ್ಟ್ ಇಂಡೀಸ್ ಹಾಗೂ ಬಾಂಗ್ಲಾ ವಿರುದ್ಧ ಸರಣಿ

ವೆಸ್ಟ್ ಇಂಡೀಸ್ ಹಾಗೂ ಬಾಂಗ್ಲಾ ವಿರುದ್ಧ ಸರಣಿ

ಮುಂದಿನ ತಿಂಗಳು ಆಸ್ಟ್ರೇಲಿಯಾ ವೆಸ್ಟ್ ಇಂಡೀಸ್ ವಿರುದ್ಧ ಐದು ಪಂದ್ಯಗಳ ಟಿ20 ಸರಣಿ ಹಾಗೂ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಭಾಗಿಯಾಗಲಿದೆ. ಅದಾದ ನಂತರ ಆಗಸ್ಟ್ ತಿಂಗಳಿನಲ್ಲಿ ಬಾಂಗ್ಲಾದೇಶಕ್ಕೆ ತೆರಳಿ ಅಲ್ಲಿ 5 ಪಂದ್ಯಗಳ ಟಿ20 ಸರಣಿಯಲ್ಲಿ ಪಾಲ್ಗೊಳ್ಳಲಿದೆ. ಈ ತಂಡವನ್ನು ಆರೋನ್ ಫಿಂಚ್ ಮುನ್ನಡೆಸಲಿದ್ದಾರೆ.

ಆಸ್ಟ್ರೇಲಿಯಾ ತಂಡ ಹೀಗಿದೆ

ಆಸ್ಟ್ರೇಲಿಯಾ ತಂಡ ಹೀಗಿದೆ

ಆರೋನ್ ಫಿಂಚ್ (ನಾಯಕ), ಆಷ್ಟನ್ ಅಗರ್, ವೆಸ್ ಅಗರ್, ಜೇಸನ್ ಬೆಹ್ರೆಂಡೋರ್ಫ್, ಅಲೆಕ್ಸ್ ಕ್ಯಾರಿ, ಡಾನ್ ಕ್ರಿಶ್ಚಿಯನ್, ಜೋಶ್ ಹ್ಯಾಜಲ್‌ವುಡ್, ಮೊಯಿಸಿಸ್ ಹೆನ್ರಿಕ್ಸ್, ಮಿಚೆಲ್ ಮಾರ್ಷ್, ಬೆನ್ ಮೆಕ್‌ಡರ್ಮೊಟ್, ರಿಲೆ ಮೆರೆಡಿತ್, ಜೋಶ್ ಫಿಲಿಪ್, ಮಿಚೆಲ್ ಸ್ಟಾರ್ಕ್, ಮಿಚೆಲ್ ಸ್ವೆಪ್ಸನ್, ಆಷ್ಟನ್ ಟರ್ನರ್ , ಆಂಡ್ರ್ಯೂ ಟೈ, ಮ್ಯಾಥ್ಯೂ ವೇಡ್, ಆಡಮ್ ಜಂಪಾ.

Story first published: Wednesday, June 16, 2021, 14:28 [IST]
Other articles published on Jun 16, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X