ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

85ರ ಹರೆಯದಲ್ಲಿ ನಿವೃತ್ತಿ ಘೋಷಿಸಿದ 7000 ವಿಕೆಟ್‌ಗಳ ಸರದಾರ ಸೆಸಿಲ್!

7000 wickets in 60-yr career, West Indies fast bowler announces retirement at 85

ಕಿಂಗ್ಸ್‌ಟೌನ್, ಆಗಸ್ಟ್ 28: ವೆಸ್ಟ್ ಇಂಡೀಸ್ ಕ್ರಿಕೆಟ್ ದಿಗ್ಗಜರಾದ ವಿವಿಯನ್ ರಿಚರ್ಡ್ಸ್, ಗ್ಯಾರಿ ಸೋಬರ್ಸ್ ಮತ್ತು ಫ್ರಾಂಕ್ ವೊರೆಲ್ ಅವರಂತವರ ಸಾಲಿನಲ್ಲಿ ಸೆಸಿಲ್ ರೈಟ್ ಹೆಸರು ಬಹುಶಃ ಕೇಳಿ ಬಂದಿರಲಿಕ್ಕಿಲ್ಲ. ಆದರೆ ಸುದೀರ್ಘ ವೃತ್ತಿ ಬದುಕು ಮತ್ತು ವಿಕೆಟ್‌ ಸಾಧನೆಗಾಗಿ ಸೆಸಿಲ್ ಈ ದೈತ್ಯರನ್ನೆಲ್ಲಾ ಮೀರಿಸಿಬಿಡುತ್ತಾರೆ.

ICC Test Rankingನಲ್ಲಿ ಎತ್ತರಕ್ಕೇರಿದ ಆ್ಯಷಸ್ ಹೀರೋ ಬೆನ್ ಸ್ಟೋಕ್ಸ್!ICC Test Rankingನಲ್ಲಿ ಎತ್ತರಕ್ಕೇರಿದ ಆ್ಯಷಸ್ ಹೀರೋ ಬೆನ್ ಸ್ಟೋಕ್ಸ್!

ಈಗ 85ರ ಹರಯದವರಾಗಿರುವ ವೇಗಿ ಸೆಸಿಲ್ ರೈಟ್ ಇನ್ನು ಎರಡು ವಾರಗಳಲ್ಲಿ ಕ್ರಿಕೆಟ್‌ ವೃತ್ತಿ ಬದುಕಿನಿಂದ ನಿವೃತ್ತಿ ಹೊಂದುತ್ತಿರುವುದಾಗಿ ಘೋಷಿಸಿದ್ದಾರೆ. ಸುಮಾರು 60 ವರ್ಷಗಳ ದೀರ್ಘ ವೃತ್ತಿ ಜೀವನದಲ್ಲಿ ರೈಟ್ ಬರೋಬ್ಬರಿ 7,000 ವಿಕೆಟ್‌ಗಳನ್ನು ಪಡೆದಿದ್ದಾರೆ.

ಆರಂಭಿಕ ದಿನಗಳಲ್ಲಿ ಜಮೈಕಾ ಪ್ರತಿನಿಧಿಸಿ ಬಾರ್ಬಡೋಸ್, ಸೋಬರ್ಸ್ ಮತ್ತು ವೆಸ್ ಹಾಲ್ ವಿರುದ್ಧ ಆಡಿದ್ದ ಸೆಸಿಲ್ ರೈಟ್ ಅವರು ವಿವ್ ರಿಚರ್ಡ್ಸ್ ಮತ್ತು ಜೋಯಲ್ ಗಾರ್ನರ್ ಜೊತೆಯೂ ಆಡಿದ್ದರು. ಒಂದು ಹಂತದಲ್ಲಿ ರೈಟ್ ಐದು ಸೀಸನ್‌ಗಳಲ್ಲಿ ಪ್ರತೀ 27 ಚೆಂಡಿಗೆ ಒಂದೊಂದರಂತೆ ಬರೋಬ್ಬರಿ 538 ವಿಕೆಟ್‌ಗಳನ್ನು ಪಡೆದ ದಾಖಲೆಯೂ ಮಾಡಿದ್ದರು.

ಕೆಪಿಎಲ್: ಬಿಜಾಪುರ್ ಎದುರು ಸೋತರೂ ಪ್ಲೇ ಆಫ್ ಪ್ರವೇಶಿಸಿದ ಶಿವಮೊಗ್ಗ!ಕೆಪಿಎಲ್: ಬಿಜಾಪುರ್ ಎದುರು ಸೋತರೂ ಪ್ಲೇ ಆಫ್ ಪ್ರವೇಶಿಸಿದ ಶಿವಮೊಗ್ಗ!

ಮೊದಲೇ ಹೇಳಿದಂತೆ ಆರಂಭದಲ್ಲಿ ಜಮೈಕಾ ಪರ ಆಡಿದ್ದ ರೈಟ್ 1959 ಇಂಗ್ಲೆಂಡ್‌ಗೆ ತೆರಳಿ ಅಲ್ಲಿ ಸೆಂಟ್ರಲ್ ಲಂಕಾಷೈರ್ ಲೀಗ್‌ನಲ್ಲಿ ಕ್ರಾಂಪ್ಟನ್ ಕ್ರಿಕೆಟ್ ಕ್ಲಬ್ ಪರ ವೃತ್ತಿ ಜೀವನವನ್ನು ಶುರು ಮಾಡಿದ್ದರು. ಸೆಪ್ಟೆಂಬರ್‌ 7ರಂದು ಪೆನ್ನೈನ್ ಲೀಗ್‌ನಲ್ಲಿ ಅಪ್ಪರ್‌ಮಿಲ್‌ ಪರ ಸ್ಪ್ರಿಂಗ್‌ಹೆಡ್ ವಿರುದ್ಧದ ಪಂದ್ಯದಲ್ಲಿ ಸೆಸಿಲ್ ನಿವೃತ್ತಿ ಘೋಷಿಸಲಿದ್ದಾರೆ.

Story first published: Wednesday, August 28, 2019, 15:40 [IST]
Other articles published on Aug 28, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X