ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್‌ 2022ರ ಹರಾಜಿನಲ್ಲಿ ಭಾರೀ ಮೊತ್ತಕ್ಕೆ ಬಿಡ್ ಆಗಲಿರುವ 8 ಭಾರತದ ಆಟಗಾರರು

ಐಪಿಎಲ್ 2021ರ ಸೀಸನ್‌ನಲ್ಲಿ ಹಲವು ರೋಚಕ ಪಂದ್ಯಗಳನ್ನು, ಗಮನಾರ್ಹ ಪ್ರದರ್ಶನಗಳನ್ನು ನಾವು ನೋಡಿದ್ದೇವೆ. ಅದರಲ್ಲೂ ದೇಶೀಯ ಆಟಗಾರರು ಮಿಂಚಿದ್ದನ್ನೂ ಮರೆಯುವ ಹಾಗಿಲ್ಲ. ಇನ್ನೇನು ಟಿ20 ವಿಶ್ವಕಪ್ ಮುಗಿದ ಬಳಿಕ ಐಪಿಎಲ್ 2022ರ ಸೀಸನ್ ಕಡೆಗೆ ಗಮನ ಕೇಂದ್ರೀಕೃತವಾಗಿರಲಿದೆ. ಅದಕ್ಕೂ ಮೊದಲು ಆಟಗಾರರ ಹರಾಜು ಪ್ರಕ್ರಿಯೆಯು ಸಾಕಷ್ಟು ಸದ್ದು ಮಾಡಲಿದೆ.

ಕಳೆದ ಸೀಸನ್‌ನಲ್ಲಿ ಹಲವಾರು ಭಾರತೀಯ ಆಟಗಾರರು ಉತ್ತಮ ಪ್ರದರ್ಶನ ನೀಡುವುದನ್ನು ನಾವು ನೋಡಿದ್ದೇವೆ. ಹೀಗಾಗಿ ಇವರು ದೊಡ್ಡ ಬಿಡ್‌ಗಳನ್ನು ಆಕರ್ಷಿಸುವ ಸಾಧ್ಯತೆ ಹೆಚ್ಚಿದೆ. ಹಾಗಾದರೆ ಮುಂಬರುವ ಮೆಗಾ ಹರಾಜಿನಲ್ಲಿ ದೊಡ್ಡ ಮೊತ್ತವನ್ನು ಪಡೆಯುವ ಭಾರತೀಯ ಆಟಗಾರರು ಯಾರು? ಏಕೆ ದೊಡ್ಡ ಮೊತ್ತಕ್ಕೆ ಹರಾಜಾಗಬಹುದು ಎಂಬುದನ್ನು ಕೆಳಗೆ ತಿಳಿಯಿರಿ.

ವೆಂಕಟೇಶ್ ಅಯ್ಯರ್

ವೆಂಕಟೇಶ್ ಅಯ್ಯರ್

ಐಪಿಎಲ್‌ನಲ್ಲಿ ಕೊಲ್ಕತ್ತಾ ನೈಟ್‌ ರೈಡರ್ಸ್ (ಕೆಕೆಆರ್‌) ತಂಡದ ಭಾಗವಾಗಿರುವ ವೆಂಕಟೇಶ್ ಅಯ್ಯರ್ ಉತ್ತಮ ಹಾಗೂ ಸ್ಫೋಟಕ ಆರಂಭ ನೀಡುವಲ್ಲಿ ಗಮನ ಸೆಳೆದಿದ್ದರು. ಸ್ಫೋಟಕ ಓಪನರ್ 10 ಇನ್ನಿಂಗ್ಸ್‌ಗಳಲ್ಲಿ 41.11 ಸರಾಸರಿಯಲ್ಲಿ ಬರೋಬ್ಬರಿ 370 ರನ್‌ಗಳನ್ನು ದಾಖಲಿಸಿದ್ರು. ಇವರ ಬ್ಯಾಟಿಂಗ್ ಸ್ಟ್ರೈಕ್‌ರೇಟ್ 128.42ರಷ್ಟಿದೆ. ಇದ್ರಲ್ಲಿ ನಾಲ್ಕು ಅರ್ಧಶತಕಗಳು ಸಹ ಸೇರಿವೆ.

ಪ್ರತಿ ತಂಡವೂ ಅವರಂತಹ ಸ್ಫೋಟಕ ಆರಂಭಿಕ ಆಟಗಾರನನ್ನು ಬಯಸುತ್ತದೆ. ಇದಲ್ಲದೆ, ಅವರು ಬೌಲ್ ಕೂಡ ಮಾಡಬಲ್ಲರು. ಹೀಗಾಗಿ ಮುಂದಿನ ಸೀಸನ್‌ನಲ್ಲಿ ದೊಡ್ಡ ಮೊತ್ತಕ್ಕೆ ಬಿಡ್ ಆಗಬಹುದು.

ರಾಹುಲ್ ತ್ರಿಪಾಠಿ ಆಟ

ರಾಹುಲ್ ತ್ರಿಪಾಠಿ ಆಟ

ರಾಹುಲ್ ತ್ರಿಪಾಠಿ ಓರ್ವ ಪ್ರತಿಭಾವಂತ ಆಟಗಾರ ಅನ್ನೋದನ್ನ ಕಳೆದ ಕೆಲವು ಸೀಸನ್‌ನಲ್ಲಿ ತೋರಿಸಿಕೊಟ್ಟಿದ್ದಾರೆ. ಐಪಿಎಲ್ 2021ರಲ್ಲಿ ಸ್ಥಿರ ಬ್ಯಾಟಿಂಗ್ ಪ್ರದರ್ಶನ ತೋರಿದ ತ್ರಿಪಾಠಿ ಫ್ರಾಂಚೈಸಿಗಳನ್ನು ಆಕರ್ಷಿಸುವ ಸಾಮರ್ಥ್ಯ ಹೊಂದಿದ್ದಾರೆ.

ಆಕ್ರಮಣಕಾರಿ ಬ್ಯಾಟಿಂಗ್ ಜೊತೆಗೆ ಸ್ಥಿರವಾದ ರನ್ ದಾಖಲಿಸುವ ಇವರು ಪರಿಸ್ಥಿತಿಯನ್ನು ಲೆಕ್ಕಿಸದೆ ವೇಗವಾಗಿ ರನ್ ಕಲೆಹಾಕಬಲ್ಲರು. ಅವರು ಐಪಿಎಲ್ 2021 ರಲ್ಲಿ 16 ಇನ್ನಿಂಗ್ಸ್‌ಗಳಲ್ಲಿ 397 ರನ್ ಗಳಿಸಿದರು. ಅವರ ಬ್ಯಾಟಿಂಗ್ ಸರಾಸರಿ ಮತ್ತು ಸ್ಟ್ರೈಕ್ ರೇಟ್ 28.35 ಮತ್ತು 140.28 ಆಗಿತ್ತು. ಈ ಹಂತದಲ್ಲಿ ಅವರು 2 ಅರ್ಧಶತಕಗಳನ್ನು ಗಳಿಸಿದರು. ಈತ ಕೂಡ ಮುಂದಿನ ಸೀಸನ್ ಹರಾಜು ಪ್ರಕ್ರಿಯೆಯಲ್ಲಿ ದೊಡ್ಡ ಮಟ್ಟಿನ ಬಿಡ್ ಆಗಬಹುದು.

ಬಾಬರ್ ಹಾಗೂ ಕೊಹ್ಲಿ ನಡುವಿನ ಹೋಲಿಕೆ ಸಲ್ಲದು: ಬಾಬರ್ ಅಜಮ್ ವ್ಯಕ್ತಿತ್ವ ಕೊಹ್ಲಿಗೆ ವಿರುದ್ಧವಾಗಿದೆ!

ದೇವದತ್ ಪಡಿಕ್ಕಲ್

ದೇವದತ್ ಪಡಿಕ್ಕಲ್

ದೇವದತ್ ಪಡಿಕ್ಕಲ್ ಅವರು ಕ್ರಿಕೆಟ್ ಜಗತ್ತಿನಲ್ಲಿ ಈಗಾಗಲೇ ಸಾಕಷ್ಟು ಖ್ಯಾತಿಯನ್ನು ಗಳಿಸಿದ್ದಾರೆ, 2020 ರಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಅವರ ಅದ್ಭುತ ಐಪಿಎಲ್ ಪ್ರದರ್ಶನ ನೀಡುತ್ತಿರುವ ಪಡಿಕ್ಕಲ್ ಕೂಡ ಮುಂದಿನ ಸೀಸನ್‌ನಲ್ಲಿ ದೊಡ್ಡ ಮಟ್ಟಿನ ಬಿಡ್‌ಗೆ ಕಾರಣವಾಗಬಹುದು.

ಈತ ಕೇವಲ 14 ಪಂದ್ಯಗಳಲ್ಲಿ 411 ರನ್ ಗಳಿಸಿದ್ದು, ರಾಜಸ್ಥಾನ್ ರಾಯಲ್ಸ್ ವಿರುದ್ಧ 101* ಬೆಸ್ಟ್ ಸ್ಕೋರ್ ಆಗಿದೆ. ಅವರ ಬ್ಯಾಟಿಂಗ್ ಸರಾಸರಿ ಮತ್ತು ಸ್ಟ್ರೈಕ್ ರೇಟ್ ಕ್ರಮವಾಗಿ 31.61 ಮತ್ತು 125.30 ಆಗಿದ್ದು, ಇದರಲ್ಲಿ ಐವತ್ತು ಹಾಗೂ ನೂರು ಸೇರಿದೆ. ತಂಡಗಳು ತಮ್ಮ ಭವಿಷ್ಯಕ್ಕಾಗಿ ಹೂಡಿಕೆ ಮಾಡಬಹುದಾದ ವ್ಯಕ್ತಿಯಾಗಿರುವುದರಿಂದ, ಪಡಿಕ್ಕಲ್ ಭಾರೀ ಮೊತ್ತದ ಬಿಡ್ಡಿಂಗ್ ನಿರೀಕ್ಷಿಸಬಹುದು.

ಅರ್ಷ್‌ದೀಪ್ ಸಿಂಗ್

ಅರ್ಷ್‌ದೀಪ್ ಸಿಂಗ್

ನ್ಯೂಜಿಲೆಂಡ್‌ನಲ್ಲಿ ನಡೆದ 2018 ರ U-19 ವಿಶ್ವಕಪ್‌ನಲ್ಲಿ ವಿಜಯಶಾಲಿಯಾದ ಭಾರತೀಯ ತಂಡಕ್ಕಾಗಿ ಅರ್ಷ್‌ದೀಪ್ ಭರ್ಜರಿ ಪ್ರದರ್ಶನದ ಮೂಲಕ ಬೆಳಕಿಗೆ ಬಂದರು. ವೇಗವಾಗಿ ಬೌಲಿಂಗ್ ಮಾಡುವ ಸಾಮರ್ಥ್ಯವು ಅವರ ಪ್ರಮುಖ ಶಕ್ತಿಯಾಗಿದ್ದು , ಅವರ 6'3 ಎತ್ತರವು ಖಂಡಿತವಾಗಿಯೂ ಅವರಿಗೆ ಸಹಾಯ ಮಾಡಿದೆ.

2020 ರ ಐಪಿಎಲ್ ಹರಾಜಿನಲ್ಲಿ ಪಂಜಾಬ್ ಕಿಂಗ್ಸ್‌ನಿಂದ ಆಯ್ಕೆಯಾದ ಅವರು ತಂಡಕ್ಕೆ ಪ್ರಭಾವಶಾಲಿ ಕೊಡುಗೆ ನೀಡಿದ್ದಾರೆ. 2021 ರ ಆವೃತ್ತಿಯಲ್ಲಿ, ಅವರು ತಮ್ಮ 12 ಪಂದ್ಯಗಳಲ್ಲಿ 8.27 ಎಕಾನಮಿಯಲ್ಲಿ ಒಟ್ಟು 18 ವಿಕೆಟ್‌ಗಳನ್ನು ಪಡೆದರು. ಡೆತ್‌ ಓವರ್‌ಗಳಲ್ಲೂ ಉತ್ತಮವಾಗಿ ಬೌಲ್ ಮಾಡಬಲ್ಲ ಅರ್ಷ್‌ದೀಪ್ ನಂತಹ ಬೌಲರ್ ಅನ್ನು ಇಟ್ಟುಕೊಂಡಲು ಪ್ರತಿ ತಂಡವು ಬಯಸುತ್ತದೆ.

ಇಂಗ್ಲೆಂಡ್ ವಿರುದ್ಧ ಸೇಡು ತೀರಿಸಿಕೊಂಡ ನ್ಯೂಜಿಲೆಂಡ್: ಸೆಮಿಫೈನಲ್‌ನ 5 ಇಂಟ್ರೆಸ್ಟಿಂಗ್ ವಿಷಯಗಳು ಇಲ್ಲಿವೆ

ಅವೇಶ್ ಖಾನ್

ಅವೇಶ್ ಖಾನ್

ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಗೆ ಆಯ್ಕೆಯಾಗಿರುವ ಅವೇಶ್ ಖಾನ್‌ ಪ್ರತಿಭಾವಂತ ಲಿಮಿಟೆಡ್ ಓವರ್ ಕ್ರಿಕೆಟ್ ಬೌಲರ್ ಆಗಿದ್ದಾನೆ. ಅವೇಶ್ ಖಾನ್ ಎಲ್ಲಾ ಕ್ರಿಕೆಟ್ ಅಭಿಮಾನಿಗಳು ಮತ್ತು ತಜ್ಞರಿಂದ ಪ್ರಶಂಸೆಯ ಮಾತುಗಳನ್ನು ಪಡೆದಿದ್ದಾರೆ. ಈಗಾಗಲೇ ಇವರನ್ನು ಭಾರತೀಯ ಕ್ರಿಕೆಟ್‌ನ ಮುಂದಿನ ದೊಡ್ಡ ಭವಿಷ್ಯ ಎಂದು ಹೇಳಲಾಗಿದೆ.

ಪವರ್‌ಪ್ಲೇ ಓವರ್‌ಗಳಲ್ಲಿ ಹಾಗೂ ಡೆತ್ ಓವರ್‌ಗಳಲ್ಲಿ ಅವರು ಸೆನ್ಸೇಷನಲ್ ಬೌಲಿಂಗ್ ಮಾಡುವ ಸಾಮರ್ಥ್ಯ ಹೊಂದಿರುವ ಅವೇಶ್ ಖಾನ್, ಐಪಿಎಲ್ 2021 ರಲ್ಲಿ ಎರಡನೇ ಅತಿ ಹೆಚ್ಚು ವಿಕೆಟ್ ಟೇಕರ್ ಆಗಿದ್ದರು. ಅವರು 7.37 ಎಕಾನಮಿಯಲ್ಲಿ 24 ವಿಕೆಟ್‌ಗಳನ್ನು ಪಡೆದರು.

ಹರ್ಷಲ್ ಪಟೇಲ್

ಹರ್ಷಲ್ ಪಟೇಲ್

ಐಪಿಎಲ್‌ 2021ರ ಸೀಸನ್‌ನಲ್ಲಿ ಹರ್ಷಲ್ ಪಟೇಲ್ 10.56 ಸ್ಟ್ರೈಕ್ ರೇಟ್‌ನಲ್ಲಿ 15 ಪಂದ್ಯಗಳಿಂದ 32 ವಿಕೆಟ್‌ಗಳನ್ನ ಕಬಳಿಸುವಲ್ಲಿ ಯಶಸ್ವಿಯಾಗಿದ್ದರು. ಈ ಮೂಲಕ 2013ರ ಐಪಿಎಲ್ ಸೀಸನ್‌ನಲ್ಲಿ ಡ್ವೇನ್ ಬ್ರಾವೋ ಗಳಿಸಿದ ಅತಿ ಹೆಚ್ಚು ವಿಕೆಟ್‌ಗಳ ದಾಖಲೆಗಳ ಸರಿಗಟ್ಟಲು ಸಾಧ್ಯವಾಯಿತು.

ಇಂತಹ ಅಮೋಘ ಫಾರ್ಮ್‌ನಲ್ಲಿರುವ ಬೌಲರ್ ಅನ್ನು ಟೀಮ್ ಇಂಡಿಯಾಕ್ಕೆ ಈಗಾಗಲೇ ಆಯ್ಕೆ ಮಾಡಲಾಗಿದ್ದು, ಮುಂಬರುವ ಸೀಸನ್‌ನಲ್ಲಿ ಮಿಂಚುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ಹರ್ಷಲ್ ಪಟೇಲ್ ಕೂಡ ಮುಂದಿನ ಸೀಸನ್ ಬಿಡ್ಡಿಂಗ್‌ನಲ್ಲಿ ದೊಡ್ಡ ಮೊತ್ತಕ್ಕೆ ಹರಾಜಾಗುವ ಸಾಧ್ಯತೆಯಿದೆ.

ಪೃಥ್ವಿ ಶಾ

ಪೃಥ್ವಿ ಶಾ

ಡೆಲ್ಲಿ ಕ್ಯಾಪಿಟಲ್ಸ್‌ನ ಸ್ಫೋಟಕ ಓಪನರ್ ಪೃಥ್ವಿ ಶಾ ಇತ್ತೀಚಿನ ಋತುವಿನಲ್ಲಿ ಅವರು ಟೀಕಾಕಾರರ ಬಾಯಿ ಮುಚ್ಚಿಸಿದರು. ಆರಂಭಿಕ ಆಟಗಾರ 15 ಪಂದ್ಯಗಳಲ್ಲಿ 479 ರನ್ ಗಳಿಸಿದರು. ಅವರ ಬ್ಯಾಟಿಂಗ್ ಸರಾಸರಿ ಮತ್ತು ಸ್ಟ್ರೈಕ್ ರೇಟ್ ಕ್ರಮವಾಗಿ 31.93 ಮತ್ತು 159.13 ಆಗಿತ್ತು. ಇದರಲ್ಲಿ 4 ಅರ್ಧಶತಕಗಳೂ ಸೇರಿವೆ.

ಐಪಿಎಲ್ 2021ರಲ್ಲಿ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ DC ಓಪನರ್ ಏಳನೇ ಸ್ಥಾನದಲ್ಲಿದ್ದರು. ಪವರ್‌ಪ್ಲೇ ಓವರ್‌ಗಳಲ್ಲಿ ಅವರ ಆಕ್ರಮಣಕಾರಿ ವಿಧಾನವು ಪ್ರತಿ ತಂಡಕ್ಕೂ ಅಗತ್ಯವಿರುವ ಸಂಗತಿಯಾಗಿದೆ. ಇದಲ್ಲದೆ, ಆತ ಇನ್ನೂ ಯುವ ಆಟಗಾರನಾಗಿರುವುದು ಬಿಡ್‌ ಹೆಚ್ಚಿಸಲಿದೆ.

ಯಶಸ್ವಿ ಜೈಸ್ವಾಲ್

ಯಶಸ್ವಿ ಜೈಸ್ವಾಲ್

ಯಶಸ್ವಿ ಜೈಸ್ವಾಲ್ ಪ್ರಸ್ತುತ ಯುವ ಕ್ರಿಕೆಟಿಗರಲ್ಲಿ ಒಬ್ಬರು. ಐಪಿಎಲ್ 2021ರಲ್ಲಿ ಉತ್ತಮ ಪ್ರದರ್ಶನ ತೋರಿದ ಯಂಗ್ ಟ್ಯಾಲೆಂಟ್ ಯಶಸ್ವಿ ಜೈಸ್ವಾಲ್ ರಾಜಸ್ತಾನ್ ರಾಯಲ್ಸ್ ಪರ 10 ಪಂದ್ಯಗಳಲ್ಲಿ 249ರನ್ ದಾಖಲಿಸಿದ್ರು. ಈತನ ಸ್ಟ್ರೈಕ್‌ರೇಟ್ 148.21 ರಲ್ಲಿ ಬ್ಯಾಟ್ ಬೀಸಿದ್ದು ಮೆಗಾ ಹರಾಜಿನಲ್ಲಿ ದೊಡ್ಡ ಮೊತ್ತಕ್ಕೆ ಬಿಡ್‌ ಆಗಬಹುದು.

David Warner ಹೀಗೆ ವಿಚಿತ್ರವಾಗಿ ನಡೆದುಕೊಂಡಿದ್ದೇಕೆ | Oneindia Kannada

Story first published: Thursday, November 11, 2021, 18:52 [IST]
Other articles published on Nov 11, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X