ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಪಾಕಿಸ್ತಾನ ಇಂಗ್ಲೆಂಡ್‌ನ ಬಿ ಗ್ರೇಡ್ ತಂಡದ ವಿರುದ್ಧ ವೈಟ್‌ವಾಶ್ ಅನುಭವಿಸಿದೆ: ರಮೀಜ್ ರಾಜಾ ಕಿಡಿ

A B-Grade England team thrashes Pakistan: Raja Ramiz

ಇಂಗ್ಲೆಂಡ್ ವಿರುದ್ಧದ ಸೀಮಿತ ಓವರ್‌ಗಳ ಸರಣಿಯಲ್ಲಿ ಭಾಗವಹಿಸಿರುವ ಪಾಕಿಸ್ತಾನ ಏಕದಿನ ಸರಣಿಯಲ್ಲಿ 0-3 ಅಂತರದಿಂದ ಸೋಲು ಕಂಡಿದೆ. ಕೊರೊನಾವೈರಸ್‌ನ ಕಾರಣದಿಂದಾಗಿ ಇಂಗ್ಲೆಂಡ್ ಸಂಪೂರ್ಣ ಹೊಸ ತಂಡವನ್ನು ಕಣಕ್ಕಿಳಿಸಿತ್ತು. ಪಾಕ್ ವಿರುದ್ಧ ಆಡಿದ್ದ ಇಂಗ್ಲೆಂಡ್ ತಂಡದಲ್ಲಿ 9 ಮಂದಿ ಹೊಸ ಆಟಗಾರರೇ ಇದ್ದರು. ಹಾಗಿದ್ದರೂ ಪಾಕಿಸ್ತಾನ ಅತ್ಯಂತ ಕಳಪೆ ಪ್ರದರ್ಶನ ನೀಡಿರುವುದು ಪಾಕಿಸ್ತಾನ ಕ್ರಿಕೆಟ್ ತಂಡದ ವಿರುದ್ಧ ತೀವ್ರ ಟೀಕೆಗೆ ಕಾರಣವಾಗಿದೆ. ಮಾಜಿ ಕ್ರಿಕೆಟಿಗ ರಮೀಜ್ ರಾಜಾ ಕೂಡ ತಂಡದ ಈ ಪರಿಸ್ಥಿತಿಯ ಬಗ್ಗೆ ಕಟು ಮಾತುಗಳನ್ನು ಆಡಿದ್ದಾರೆ.

"ಇದು ಪಾಕಿಸ್ತಾನ ಕ್ರಿಕೆಟ್ ತಂಡಕ್ಕೆ ಹಾಗೂ ಕ್ರಿಕೆಟ್ ಪ್ರೇಮಿಗಳಿಗೆ ಅತ್ಯಂತ ಕಠಿಣವಾದ ದಿನವಾಗಿದೆ. ಈ ತಂಡ ಇಂಗ್ಲೆಂಡ್‌ನ ಬಿ ಗ್ರೇಡ್ ತಂಡದ ವಿರುದ್ಧ ವೈಟ್‌ವಾಶ್‌ಗೆ ಗುರಿಯಾಗಿದೆ. ನಾನು ಈ ಫಲಿತಾಂಶದಿಂದಾಗಿ ಆಶ್ಚರ್ಯಗೊಂಡಿಲ್ಲ. ಯಾಕೆಂದರೆ ಅದರ ನಿರೀಕ್ಷೆಯಲ್ಲಿದ್ದೆ" ಎಂದು ರಮೀಜ್ ರಾಜಾ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಮೊದಲ ಪಂದ್ಯದ ಸೋಲಿನಿಂದ ಆಘಾತ

ಮೊದಲ ಪಂದ್ಯದ ಸೋಲಿನಿಂದ ಆಘಾತ

"ಈ ತಂಡ ಮೊದಲ ಪಂದ್ಯದ ಸೋಲಿನ ಬಳಿಕ ಮಾನಸಿಕವಾಗಿ ಕುಸಿದುಹೋಗಿತ್ತು. ಯಾಕೆಂದರೆ ಕೇವಲ ಎರಡು ದಿನಗಳ ಅವಧಿಯಲ್ಲಿ ರಚಿಸಿದ ತಂಡದ ವಿರುದ್ಧ ಅವರು ಸೋಲು ಕಂಡಿದ್ದರು. ಆ ಸೋಲಿನ ಆಘಾತದಿಂದ ಅವರು ಹೊರಗೆ ಬರುವುದು ಸಾಧ್ಯವಿರಲಿಲ್ಲ" ಎಂದು ರಮೀಜ್ ರಾಜಾ ವಿಶ್ಲೇಷಣೆ ಮಾಡಿದ್ದಾರೆ.

ಒತ್ತಡದಿಂದ ತಪ್ಪುಗಳನ್ನು ದ್ವಿಗುಣಗೊಳಿಸುತ್ತಾರೆ

ಒತ್ತಡದಿಂದ ತಪ್ಪುಗಳನ್ನು ದ್ವಿಗುಣಗೊಳಿಸುತ್ತಾರೆ

"ಅವರು ಮೊದಲ ಪಂದ್ಯದಲ್ಲಿ ಸೋಲಿನ ಬಳಿಕ ಒತ್ತಡಕ್ಕೆ ಒಳಗಾದರು. ಇದರಿಂದಾಗಿ ತಪ್ಪುಗಳನ್ನು ಮಾಡುತ್ತಾ ಹೋದರು. ಇದು ಪಾಕಿಸ್ತಾನ ತಂಡದ ಕೆಟ್ಟ ಅಭ್ಯಾಸವಾಗಿದೆ. ಅವರು ತಪ್ಪುಗಳಿಂದ ಪಾಠ ಕಲಿಯುವುದಿಲ್ಲ. ಬದಲಾಗಿ ಒತ್ತಡದಿಂದಾಗಿ ತಪ್ಪನ್ನು ದ್ವಿಗುಣಗೊಳಿಸುತ್ತಾರೆ" ಎಂದು ರಮೀಜ್ ರಾಜಾ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಹೇಳಿಕೆ ನೀಡಿದ್ದಾರೆ.

ತಂಡದಲ್ಲಿ ಬದಲಾವಣೆಯಾಗಬೇಕು

ತಂಡದಲ್ಲಿ ಬದಲಾವಣೆಯಾಗಬೇಕು

ಇನ್ನು ಇದೇ ಸಂದರ್ಭದಲ್ಲಿ ಅವರು ಪಾಕಿಸ್ತಾನ ತಂಡದ ಮನಸ್ಥಿತಿಯನ್ನು ಬದಲಾಯಿಸುವ ಅಗತ್ಯವಿದೆ ಎಂದು ಹೇಳಿದ್ದಾರೆ. ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಂ ತಂಡದೊಳಗಿನ ವಾತಾವರಣವನ್ನು ಬದಲಾಯಿಸುವ ಪ್ರಯತ್ನ ಮಾಡಬೇಕು ಎಂದಿದ್ದಾರೆ. "ಇದು ಬದಲಾವಣೆಯ ಸಮಯ. ಅವರು ಮನಸ್ಥಿತಿಯನ್ನು ಬದಲಾಯಿಸುವ ಅಗತ್ಯವಿದೆ. ಹೊಸ ಪ್ರತಿಭೆಗಳೊಂದಿಗೆ ಪ್ರಯೋಗವನ್ನು ನಡೆಸಬೇಕು. ಪಾಕಿಸ್ತಾನ ಕ್ರಿಕೆಟ್‌ನ ಒಳಿತಿಗಾಗಿ ಮಹತ್ವದ ಬದಲಾವಣೆಗಳನ್ನು ಮಾಡುವ ಅಗತ್ಯವಿದೆ" ಎಂದಿದ್ದಾರೆ ರಮೀಜ್ ರಾಜಾ.

ರಾಹುಲ್ ದ್ರಾವಿಡ್ ಅವರ ಬಗ್ಗೆ ಸತ್ಯ ಬಾಯಿ ಬಿಟ್ಟ ಶಿಖರ್ ಧವನ್ | Oneindia Kannada
ಟಿ20 ಸರಣಿಗೆ ಪಾಕಿಸ್ತಾನ ಸಜ್ಜು

ಟಿ20 ಸರಣಿಗೆ ಪಾಕಿಸ್ತಾನ ಸಜ್ಜು

ಪಾಕಿಸ್ತಾನ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ವೈಟ್‌ವಾಶ್ ಅವಮಾನಕ್ಕೆ ತುತ್ತಾದ ಬಳಿಕ ಈಗ ಟಿ20 ಸರಣಿಗೆ ಸಜ್ಜಾಗುತ್ತಿದೆ. ಇದು ಕೂಡ ಮೂರು ಪಂದ್ಯಗಳ ಸರಣಿಯಾಗಿದ್ದು ಈ ಸರಣಿಗಾಗಿ ಇಂಗ್ಲೆಂಡ್ ಇಯಾನ್ ಮೋರ್ಗನ್ ನೇತೃತ್ವದ ಬಲಿಷ್ಠ ತಂಡವನ್ನು ಪ್ರಕಟಿಸಿದೆ. ಶುಕ್ರವಾರ ಈ ಸರಣಿಯ ಮೊದಲ ಪಂದ್ಯ ನಡೆಯಲಿದೆ.

Story first published: Wednesday, July 14, 2021, 21:58 [IST]
Other articles published on Jul 14, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X