ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಏಕದಿನ ನಾಯಕತ್ವವನ್ನೂ ಬಿಟ್ಟುಕೊಡುವಂತೆ ಕೇಳಿದ್ರು ಶಾಸ್ತ್ರಿ; ಕೋಚ್ ಮಾತಿಗೆ ಕೊಹ್ಲಿ ಹೇಳಿದ್ದಿಷ್ಟು

A BCCI official revealed Ravi Shastris suggestion about Virat Kohli’s step down as India’s captain
6 ತಿಂಗಳ ಹಿಂದೆ ನಾಯಕತ್ವ ಬಿಡು ಎಂದು ಕೋಚ್ ಹೇಳಿದ್ದಕ್ಕೆ ವಿರಾಟ್ ಹೇಳಿದ್ದೇನು? | Oneindia Kannada

ಸದ್ಯ ಕ್ರಿಕೆಟ್ ಜಗತ್ತಿನಲ್ಲಿ ಅತಿ ಹೆಚ್ಚಾಗಿ ಚರ್ಚೆಯಾಗುತ್ತಿರುವ ವಿಷಯವೆಂದರೆ ಅದು ವಿರಾಟ್ ಕೊಹ್ಲಿ ನಾಯಕತ್ವವನ್ನು ತ್ಯಜಿಸಲು ನಿರ್ಧರಿಸಿರುವುದು. ಹೌದು ಪ್ರಸ್ತುತ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಆರಂಭವಾಗುವ ಕೆಲ ದಿನಗಳ ಮುನ್ನ ಸಾಮಾಜಿಕ ಜಾಲತಾಣದ ಮೂಲಕ ಮುಂಬರಲಿರುವ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿ ಮುಗಿದ ನಂತರ ಟೀಂ ಇಂಡಿಯಾ ಟಿ ಟ್ವೆಂಟಿ ನಾಯಕತ್ವದಿಂದ ಕೆಳಗಿಳಿಯಲಿದ್ದೇನೆ ಎಂಬ ನಿರ್ಣಯವನ್ನು ವಿರಾಟ್ ಕೊಹ್ಲಿ ಪ್ರಕಟಿಸಿದ್ದರು.

ಐಪಿಎಲ್ ಟ್ರೋಫಿ ಗೆಲ್ಲಬಹುದಾದ 2 ತಂಡಗಳನ್ನು ಹೆಸರಿಸಿದ ಸೆಹ್ವಾಗ್; ಬಲಿಷ್ಠ ತಂಡದ ಹೆಸರೇ ಇಲ್ಲ!ಐಪಿಎಲ್ ಟ್ರೋಫಿ ಗೆಲ್ಲಬಹುದಾದ 2 ತಂಡಗಳನ್ನು ಹೆಸರಿಸಿದ ಸೆಹ್ವಾಗ್; ಬಲಿಷ್ಠ ತಂಡದ ಹೆಸರೇ ಇಲ್ಲ!

ಹೌದು, ಹಲವಾರು ತಿಂಗಳುಗಳ ಹಿಂದಿನಿಂದಲೂ ವಿರಾಟ್ ಕೊಹ್ಲಿ ಟೀಮ್ ಇಂಡಿಯಾ ನಾಯಕತ್ವವನ್ನು ತ್ಯಜಿಸಲಿದ್ದು ರೋಹಿತ್ ಶರ್ಮಾ ನೂತನ ನಾಯಕನಾಗಿ ನೇಮಕಗೊಳ್ಳಲಿದ್ದಾರೆ ಎಂಬ ಸುದ್ದಿ ದೊಡ್ಡ ಮಟ್ಟದಲ್ಲಿ ಆಗಾಗ ಕೇಳಿಬರುತ್ತಿತ್ತು. ಕೊಹ್ಲಿ ಟಿ ಟ್ವೆಂಟಿ ನಾಯಕತ್ವದಿಂದ ಕೆಳಗಿಳಿಯುವುದಾಗಿ ಘೋಷಣೆ ಮಾಡುವ ಕೆಲ ದಿನಗಳ ಹಿಂದೆಯೂ ಕೂಡ ಈ ಸುದ್ದಿ ದೊಡ್ಡಮಟ್ಟದಲ್ಲಿ ಹರಿದಾಡಿತ್ತು. ಆದರೆ ಈ ಸುದ್ದಿಯ ಕುರಿತು ಪ್ರತಿಕ್ರಿಯಿಸಿದ ಬಿಸಿಸಿಐ ನಾಯಕತ್ವವನ್ನು ಬದಲಾವಣೆ ಮಾಡುವ ಯಾವುದೇ ರೀತಿಯ ಚರ್ಚೆಗಳು ನಡೆಯುತ್ತಿಲ್ಲ ಇದೊಂದು ಸುಳ್ಳು ಸುದ್ದಿಯಷ್ಟೆ ಎಂದು ತಳ್ಳಿ ಹಾಕಿತ್ತು.

ತಂಡದಲ್ಲಿ ಬೇರೆ ಒಳ್ಳೊಳ್ಳೆ ಆಟಗಾರರಿದ್ದಾರೆ; ಕೊಹ್ಲಿ ನಾಯಕತ್ವ ತ್ಯಜಿಸುತ್ತಿರುವುದರ ಬಗ್ಗೆ ಸುದೀಪ್ ಮಾತುತಂಡದಲ್ಲಿ ಬೇರೆ ಒಳ್ಳೊಳ್ಳೆ ಆಟಗಾರರಿದ್ದಾರೆ; ಕೊಹ್ಲಿ ನಾಯಕತ್ವ ತ್ಯಜಿಸುತ್ತಿರುವುದರ ಬಗ್ಗೆ ಸುದೀಪ್ ಮಾತು

ಹೀಗೆ ಬಿಸಿಸಿಐ ನಾಯಕತ್ವ ಬದಲಾವಣೆಯ ಚರ್ಚೆಯೇ ನಡೆದಿಲ್ಲ ಎಂದು ಹೇಳಿಕೆ ನೀಡಿದ ಕೆಲವೇ ದಿನಗಳ ಅಂತರದಲ್ಲಿ ಮುಂಬರಲಿರುವ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿ ಮುಗಿದ ಬಳಿಕ ಭಾರತ ಟಿ ಟ್ವೆಂಟಿ ತಂಡದ ನಾಯಕ ಸ್ಥಾನದಿಂದ ಕೆಳಗಿಳಿಯುವುದಾಗಿ ಸ್ವತಃ ವಿರಾಟ್ ಕೊಹ್ಲಿಯವರೇ ಘೋಷಣೆ ಹೊರಡಿಸುವುದರ ಮೂಲಕ ಆಶ್ಚರ್ಯ ಮೂಡಿಸಿದ್ದರು. ಹೀಗೆ ವಿರಾಟ್ ಕೊಹ್ಲಿ ನಾಯಕತ್ವ ತ್ಯಜಿಸುತ್ತಿರುವುದರ ಕುರಿತು ಹಲವಾರು ಚರ್ಚೆಗಳು ಮತ್ತು ಅಭಿಪ್ರಾಯಗಳು ಹರಿದಾಡುತ್ತಿದ್ದು ಇದೀಗ ಬಿಸಿಸಿಐನ ಅಧಿಕಾರಿಯೊಬ್ಬರು ಈ ಕುರಿತಾಗಿ ಟೀಮ್ ಇಂಡಿಯಾ ಒಳಗೆ ನಡೆದ ಕೆಲ ಸಂಗತಿಗಳನ್ನು ಈ ಕೆಳಕಂಡಂತೆ ಬಿಚ್ಚಿಟ್ಟಿದ್ದಾರೆ.

ಏಕದಿನ ಮತ್ತು ಟಿ ಟ್ವೆಂಟಿ ಎರಡೂ ತಂಡಗಳ ನಾಯಕತ್ವ ಬಿಡುವಂತೆ ಕೊಹ್ಲಿಗೆ ಸಲಹೆ ನೀಡಿದ್ರು ರವಿಶಾಸ್ತ್ರಿ

ಏಕದಿನ ಮತ್ತು ಟಿ ಟ್ವೆಂಟಿ ಎರಡೂ ತಂಡಗಳ ನಾಯಕತ್ವ ಬಿಡುವಂತೆ ಕೊಹ್ಲಿಗೆ ಸಲಹೆ ನೀಡಿದ್ರು ರವಿಶಾಸ್ತ್ರಿ

ಕೊಹ್ಲಿ ನಾಯಕತ್ವ ತ್ಯಜಿಸುತ್ತಿರುವುದರ ಕುರಿತಾಗಿ ಮಾತನಾಡಿರುವ ಬಿಸಿಸಿಐನ ಅಧಿಕಾರಿಯೊಬ್ಬರು ಈ ಕುರಿತಾಗಿ ಆಶ್ಚರ್ಯಕರವಾದ ಸಂಗತಿಯೊಂದನ್ನು ಬಿಚ್ಚಿಟ್ಟಿದ್ದಾರೆ. ವಿರಾಟ್ ಕೊಹ್ಲಿ ಜತೆ 6 ತಿಂಗಳ ಹಿಂದೆಯೇ ನಾಯಕತ್ವ ಬಿಟ್ಟುಕೊಡುವುದರ ಕುರಿತಾಗಿ ಟೀಮ್ ಇಂಡಿಯಾದ ಹೆಡ್ ಕೋಚ್ ರವಿಶಾಸ್ತ್ರಿ ಚರ್ಚೆ ನಡೆಸಿದ್ದರಂತೆ. ಹೌದು, 6 ತಿಂಗಳುಗಳ ಹಿಂದೆಯೇ ಏಕದಿನ ಮತ್ತು ಟಿ ಟ್ವೆಂಟಿ ಎರಡೂ ತಂಡಗಳ ನಾಯಕತ್ವದಿಂದ ಹಿಂದೆ ಸರಿಯುವಂತೆ ವಿರಾಟ್ ಕೊಹ್ಲಿಗೆ ರವಿಶಾಸ್ತ್ರಿ ಸಲಹೆಯನ್ನು ನೀಡಿದ್ದರು ಎಂಬ ಆಶ್ಚರ್ಯಕರ ಸಂಗತಿಯನ್ನು ಇದೀಗ ಬಿಸಿಸಿಐ ಅಧಿಕಾರಿಯೊಬ್ಬರು ಬಿಚ್ಚಿಟ್ಟಿದ್ದಾರೆ.

ರವಿಶಾಸ್ತ್ರಿ ಸಲಹೆಗೆ ವಿರಾಟ್ ಕೊಹ್ಲಿ ಪ್ರತಿಕ್ರಿಯೆ

ರವಿಶಾಸ್ತ್ರಿ ಸಲಹೆಗೆ ವಿರಾಟ್ ಕೊಹ್ಲಿ ಪ್ರತಿಕ್ರಿಯೆ

ಹೀಗೆ ಏಕದಿನ ಮತ್ತು ಟಿ ಟ್ವೆಂಟಿ ಎರಡರ ನಾಯಕತ್ವದಿಂದಲೂ ಹಿಂದೆ ಸರಿಯುವಂತೆ ವಿರಾಟ್ ಕೊಹ್ಲಿಗೆ ರವಿಶಾಸ್ತ್ರಿ ನೀಡಿದ್ದ ಸಲಹೆಯನ್ನು ವಿರಾಟ್ ಕೊಹ್ಲಿ ನಿರಾಕರಿಸಿದ್ದರಂತೆ. 6 ತಿಂಗಳ ಹಿಂದೆ ರವಿಶಾಸ್ತ್ರಿ ನೀಡಿದ್ದ ಸಲಹೆಗೆ ಒಪ್ಪದೇ ಇದ್ದ ವಿರಾಟ್ ಕೊಹ್ಲಿ ಇದೀಗ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯ ಬಳಿಕ ಕೇವಲ ಭಾರತ ಟಿ ಟ್ವೆಂಟಿ ತಂಡದ ನಾಯಕ ಸ್ಥಾನಕ್ಕೆ ಮಾತ್ರ ರಾಜೀನಾಮೆ ಸಲ್ಲಿಸಲು ನಿರ್ಧಾರ ಮಾಡಿದ್ದಾರೆ. ಆದರೆ ಭಾರತ ಏಕದಿನ ತಂಡ ಮತ್ತು ಭಾರತ ಟೆಸ್ಟ್ ತಂಡದ ನಾಯಕನಾಗಿ ಮುಂದುವರಿಯುವುದಾಗಿ ವಿರಾಟ್ ಕೊಹ್ಲಿ ಘೋಷಣೆ ಮಾಡುವುದರ ಮೂಲಕ ರವಿಶಾಸ್ತ್ರಿ ನೀಡಿದ್ದ ಸಲಹೆಯನ್ನು ಪಾಲಿಸದೇ ನಿರಾಕರಿಸಿದ್ದಾರೆ.

ಆಸ್ಟ್ರೇಲಿಯಾ ಪ್ರವಾಸದ ಬಳಿಕ ಶುರುವಾಗಿತ್ತು ನಾಯಕತ್ವ ಬದಲಾವಣೆ ವಿಚಾರ

ಆಸ್ಟ್ರೇಲಿಯಾ ಪ್ರವಾಸದ ಬಳಿಕ ಶುರುವಾಗಿತ್ತು ನಾಯಕತ್ವ ಬದಲಾವಣೆ ವಿಚಾರ

ವಿರಾಟ್ ಕೊಹ್ಲಿ ನಾಯಕತ್ವ ಸ್ಥಾನದಿಂದ ಕೆಳಗಿಳಿಯಲಿದ್ದಾರೆ ಎಂಬ ಚರ್ಚೆ ಮತ್ತು ಸುದ್ದಿಗಳು ಶುರುವಾದದ್ದು ಟೀಮ್ ಇಂಡಿಯಾ ಆಸ್ಟ್ರೇಲಿಯಾ ಪ್ರವಾಸವನ್ನು ಕೈಗೊಂಡು ವಿರಾಟ್ ಕೊಹ್ಲಿ ವೈಯಕ್ತಿಕ ಕಾರಣಗಳಿಂದ ಒಂದು ಟೆಸ್ಟ್ ಪಂದ್ಯ ಮುಗಿದ ನಂತರ ಭಾರತಕ್ಕೆ ವಾಪಸ್ಸಾದ ಮೇಲೆ. ಹೌದು ಈ ಹಿಂದೆ ಟೀಮ್ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಗಾಗಿ ಆಸ್ಟ್ರೇಲಿಯಾ ಪ್ರವಾಸವನ್ನು ಕೈಗೊಂಡಿತ್ತು, ಈ ಸರಣಿಯಲ್ಲಿ ಮೊದಲನೇ ಪಂದ್ಯವನ್ನು ಸೋತ ನಂತರ ವಿರಾಟ್ ಕೊಹ್ಲಿ ವೈಯಕ್ತಿಕ ಕಾರಣದಿಂದ ಭಾರತಕ್ಕೆ ವಾಪಸಾಗಿದ್ದರು. ಈ ಸಂದರ್ಭದಲ್ಲಿ ಅಜಿಂಕ್ಯ ರಹಾನೆ ನಾಯಕ ಸ್ಥಾನವನ್ನು ವಹಿಸಿಕೊಂಡು ಆಸ್ಟ್ರೇಲಿಯಾ ನೆಲದಲ್ಲಿ ಸರಣಿಯನ್ನು ಗೆದ್ದರು. ಇದಾದ ಬಳಿಕ ವಿರಾಟ್ ಕೊಹ್ಲಿ ನಾಯಕ ಸ್ಥಾನವನ್ನು ಇತರರಿಗೆ ಬಿಟ್ಟುಕೊಟ್ಟು ತಮ್ಮ ಬ್ಯಾಟಿಂಗ್ ಮೇಲೆ ಹೆಚ್ಚಿನ ಗಮನ ಹರಿಸುವಂತೆ ರವಿಶಾಸ್ತ್ರಿ ಸಲಹೆ ನೀಡಿದ್ದರು, ಆದರೆ ವಿರಾಟ್ ಕೊಹ್ಲಿ ಆ ಸಲಹೆಯನ್ನು ಒಪ್ಪಲಿಲ್ಲ ಎಂಬ ಸಂಗತಿಯನ್ನು ಕೂಡ ಬಿಸಿಸಿಐ ಅಧಿಕಾರಿಯೊಬ್ಬರು ಬಿಚ್ಚಿಟ್ಟಿದ್ದಾರೆ.

Story first published: Thursday, September 23, 2021, 15:07 [IST]
Other articles published on Sep 23, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X