ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

''ನೀವು ತೋರಿಸಿದ ದಾರಿಯಿಂದ, ನಾನು ಇಲ್ಲಿಗೆ ಬಂದು ತಲುಪಿದ್ದೇನೆ'': ನಿತೀಶ್ ರಾಣಾ ಸಂದೇಶ

A Fan Boy Moment For Nitish Rana: Emotional Message To Gautam Gambhir

ಇಂದು ಟೀಮ್ ಇಂಡಿಯಾ ಮಾಜಿ ಓಪನರ್ ಹಾಗೂ ಐಪಿಎಲ್‌ನಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್‌ ತಂಡದ ನಾಯಕನಾಗಿ ಯಶಸ್ವಿಯಾಗಿದ್ದ ಗೌತಮ್‌ ಗಂಭೀರ್‌ ಹುಟ್ಟು ಹಬ್ಬದ ದಿನ. ಗೌತಿ ಇಂದು 39ನೇ ವಸಂತಕ್ಕೆ ಕಾಲಿಟ್ಟಿದ್ದು, ಲಕ್ಷಾಂತರ ಸಂಖ್ಯೆಯಲ್ಲಿ ಅಭಿಮಾನಿಗಳು ಸೇರಿದಂತೆ ಅನೇಕ ಕ್ರಿಕೆಟ್ ದಿಗ್ಗಜರು ಗಂಭೀರ್‌ಗೆ ಶುಭಾಶಯ ಕೋರಿದ್ದಾರೆ.

ಟೀಮ್ ಇಂಡಿಯಾ 2007ರ ಟಿ20 ವಿಶ್ವಕಪ್ ಹಾಗೂ 2011 ಐಸಿಸಿ ಏಕದಿನ ಕಪ್‌ ಗೆಲ್ಲಲು ಪ್ರಮುಖ ಕಾರಣವಾಗಿದ್ದ ಗೌತಮ್‌ ಗಂಭೀರ್ ಓರ್ವ ಬಿಗ್ ಮ್ಯಾಚ್ ಪ್ಲೇಯರ್ ಆಗಿದ್ದವರು. ಸ್ಥಿರ ಪ್ರದರ್ಶನದ ಜೊತೆಗೆ ಆಕ್ರಮಣಕಾರಿ ಆಟ ಹಾಗೂ ಸ್ಪಿನ್ನರ್‌ಗಳನ್ನು ಸಲೀಸಾಗಿ ಎದುರಿಸುವ ಸಾಮರ್ಥ್ಯ ಹೊಂದಿದ್ದ ಪ್ಲೇಯರ್.

ಗಂಭೀರ್‌ಗೆ ಕುಲ್‌ದೀಪ್ ಯಾದವ್ ಬರ್ತ್‌ಡೇ ಸಂದೇಶ: ದಿನೇಶ್ ಕಾರ್ತಿಕ್‌ಗೆ ಟಾಂಗ್ ಕೊಟ್ರಾ?ಗಂಭೀರ್‌ಗೆ ಕುಲ್‌ದೀಪ್ ಯಾದವ್ ಬರ್ತ್‌ಡೇ ಸಂದೇಶ: ದಿನೇಶ್ ಕಾರ್ತಿಕ್‌ಗೆ ಟಾಂಗ್ ಕೊಟ್ರಾ?

ಈ ಎಡಗೈ ಬ್ಯಾಟ್ಸ್‌ಮನ್‌ ಟೀಮ್ ಇಂಡಿಯಾದಲ್ಲಿ ತೋರಿರುವ ಪ್ರದರ್ಶನ ಅನೇಕ ಯುವಕರಿಗೆ ಸ್ಫೂರ್ತಿ ನೀಡಿದೆ. ಐಪಿಎಲ್‌ನಲ್ಲೂ ಎರಡು ಬಾರಿ ಕೊಲ್ಕತ್ತಾ ನೈಟ್‌ ರೈಡರ್ಸ್ ತಂಡವನ್ನ ಚಾಂಪಿಯನ್ ಪಟ್ಟಕ್ಕೇರಿಸಿದ ಕೀರ್ತಿ ಇವರಿಗಿದೆ. ಆಟಗಾರನಾಗಿ , ನಾಯಕನಾಗಿ ಗೌತಮ್ ಗಂಭೀರ್ ಯಶಸ್ವಿಯಾಗಿದ್ದು, ರಾಜಕೀಯ ಜೀವನ ಪ್ರಾರಂಭಿಸಿ ಸಂಸದ ಕೂಡ ಆಗಿದ್ದಾರೆ.

ಗೌತಮ್ ಗಂಭೀರ್ ಗರಡಿಯಲ್ಲಿ ಬೆಳೆದ ನಿತೀಶ್ ರಾಣಾ ಕೆಕೆಆರ್ ಮಾಜಿ ನಾಯಕ ಹಾಗೂ ತನ್ನ ಫೇವರಿಟ್ ಕ್ರಿಕೆಟರ್ ಗೌತಮ್ ಗಂಭೀರ್‌ಗೆ ಹುಟ್ಟು ಹಬ್ಬದ ಶುಭಾಶಯ ತಿಳಿಸಿದ್ದು, ಭಾವನಾತ್ಮಕ ಸಂದೇಶ ನೀಡಿದ್ದಾರೆ.

ತನ್ನ ಟ್ವಿಟರ್ ಖಾತೆಯಲ್ಲಿ ಮೊದಲನೇ ದಿನದಿಂದ ನಾನು ನಿಮಗೆ ಅಭಿಮಾನಿ ಎಂಬ ಟ್ಯಾಗ್ ಲೈನ್‌ನೊಂದಿಗೆ ಟ್ವೀಟ್ ಮಾಡಿರುವ ರಾಣಾ ''ಹುಟ್ಟು ಹಬ್ಬದ ಶುಭಾಶಯಗಳು @ಗೌತಮ್ ಗಂಭೀರ್ ಅಣ್ಣ. ನಾನು ಇಂದು ಇಲ್ಲಿಯವರೆಗೆ ತಲುಪಲು ನೀವು ತೋರಿಸಿದ ದಾರಿ ಕಾರಣ, ಧನ್ಯವಾದಗಳು'' ಎಂದು ನಿತೀಶ್ ಸಂದೇಶ ನೀಡಿದ್ದಾರೆ. ಜೊತೆಗೆ ಗೌತಮ್ ಗಂಭೀರ್ ಜೊತೆಗಿನ ತಮ್ಮ ಚಿಕ್ಕಂದಿನ ಫೋಟೋವೊಂದನ್ನ ಹರಿಬಿಟ್ಟಿದ್ದಾರೆ.

ನಿತಿಶ್ ರಾಣಾಗೂ ಮೊದಲು ಕೆಕೆಆರ್‌ನ ಮತ್ತೋರ್ವ ಆಟಗಾರ ಸ್ಪಿನ್ನರ್ ಕುಲ್‌ದೀಪ್ ಯಾದವ್ ಕೂಡ ಟ್ವೀಟ್ ಮಾಡಿ ಗಂಭೀರ್‌ಗೆ ವಿಶ್ ಮಾಡಿದ್ದರು.

''"ಯಾವಾಗಲೂ ನನ್ನ ಮೇಲೆ ಅಪಾರ ನಂಬಿಕೆಯನ್ನು ತೋರಿಸಿದ ಮತ್ತು ನನಗೆ ಆಟದ ಬಗ್ಗೆ ತುಂಬಾ ಕಲಿಸಿದವರಿಗೆ ಜನ್ಮದಿನದ ಶುಭಾಶಯಗಳು @ ಗೌತಮ್‌ಗಂಭೀರ್ ಭಾಯ್. ದೇವರು ನಿಮ್ಮನ್ನು ಆಶೀರ್ವದಿಸಲಿ. " ಎಂದು ಕುಲ್‌ದೀಪ್ ಯಾದವ್ ಟ್ವೀಟ್ ಮಾಡಿದ್ದಾರೆ.

Story first published: Thursday, October 15, 2020, 10:20 [IST]
Other articles published on Oct 15, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X