ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

'ಧೋನಿ ನನ್ನ ಫಸ್ಟ್ ಲವ್' ಅಂತಿದ್ದಾಳೆ ಈ ಹುಡ್ಗಿ!

A fan told as Dhini is my first love

ಚೆನ್ನೈ, ಮೇ 6: ಒಂದು ಕಾಲದಲ್ಲಿ ಚೆಲುವಿನ ಚಿತ್ತಾರ ಕನ್ನಡ ಚಿತ್ರ ನೋಡಿ ಇದ್ದಬದ್ದ ಹುಡ್ಗೀರೆಲ್ಲಾ ಗೋಲ್ಡನ್ ಸ್ಟಾರ್ ಗಣೇಶ್ ಬೇಕು, ಗಣೇಶ್ ನೇ ನನ್ ಲವ್ವರ್ರು ಅಂತೆಲ್ಲ ಸದ್ದು ಮಾಡಿದ್ದನ್ನು ನೀವು ನೋಡಿರ್ಬೋದು. ಅದು ಬಿಟ್ಟರೆ ಮೈಕಲ್ ಜಾಕ್ಸನ್, ಜಸ್ಟಿನ್ ಬೀಬರ್ ನಂಥ ಅನೇಕ ಸ್ಟಾರ್ ಗಳಿಗೆ ಲೇಡಿ ಫ್ಯಾನ್ ಯಥೇಚ್ಚವಾಗಿದ್ದಿದ್ದನ್ನು ನೋಡಿದ್ದೆವು. ಈಗ ಆ ಹಾದಿಯಲ್ಲಿ ಮಹೇಂದ್ರ ಸಿಂಗ್ ಧೋನಿ ಇದ್ದಾರೆ. ಧೋನಿಯನ್ನು ಸಿಕ್ಕಾಪಟ್ಟೆ ಪ್ರೀತ್ಸೋ ಹುಡ್ಗೀರ ಡೊಡ್ಡ ದಂಡೇ ಇದೆ.

ಧೋನಿಯ ಅಪ್ಪಟ ಅಭಿಮಾನಿಯೊಬ್ಬಳು ಧೋನಿಯನ್ನು ಮೆಚ್ಚಿಕೊಂಡು ಪೋಸ್ಟರ್ ಪ್ರದರ್ಶಿಸಿದ್ದಾಳೆ. ಧೋನಿ ಮೇಲಿರುವ ತನ್ನ ಪ್ರೀತಿಯ ಬಗ್ಗೆ ಭಾವೀ ಗಂಡನಿಗೊಂದು ಸಂದೇಶವಿದೆ ಆ ಪೋಸ್ಟರ್ ನಲ್ಲಿ.

ಭಾವೀ ಗಂಡನಿಗೆ ಸಂದೇಶ
'ನನ್ನ ಪ್ರೀತಿಯ ಭಾವೀ ಗಂಡನೆ. ನನ್ನೊಂದಿಗೆ ನೀನು ಖುಷಿಯಾಗಿ ಇರಲು ಬಯಸುತ್ತೀಯಾದರೆ ನೀನು ಯಾವತ್ತಿಗೂ ನನ್ನ ಪ್ರೀತಿಯನ್ನು ನಿನ್ನ ಮತ್ತು ಧೋನಿಯ ಮಧ್ಯೆ ಹೋಲಿಸಿಕೊಳ್ಳಬೇಡ. ಯಾಕೆಂದರೆ ಧೋನಿ ನನ್ನ ಫಸ್ಟ್ ಲವ್. ನನ್ನ ಕೊನೆ ಉಸಿರಿರುವವರೆಗೂ ನಾನು ಧೋನಿಯನ್ನು ಪ್ರೀತಿಸುತ್ತಿರುತ್ತೇನೆ' ಎಂದು ಹುಡುಗಿಯೊಬ್ಬಳು ಪ್ರದರ್ಶಿಸಿರುವ ಪೋಸ್ಟರ್ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಸದ್ದು ಮಾಡುತ್ತಿದೆ.

ಈಕೆ ಮಾತ್ರವಲ್ಲ, ಫೇಸ್ಬುಕ್ ಇನ್ಸ್ಟಾಗ್ರಾಮ್ ಟ್ವಿಟರ್ ಗಳಲ್ಲಿ ಧೋನಿಯನ್ನು ಮೆಚ್ಚಿಕೊಂಡಿರುವ ಇಂಥ ಸಾವಿರಾರು ಹುಚ್ಚು ಹುಡುಗಿ ಅಭಿಮಾನಿಗಳು ಸಿಕ್ಕುತ್ತಾರೆ. ಟ್ವಿಟರ್ ನಲ್ಲಂತೂ ಎಂಎಸ್ ಧೋನಿ ಫ್ಯಾನ್ಸ್ ನಂಥ ಪೇಜ್ ಗಳಿಗೆ ಹೋಗಿಬಿಟ್ಟರೆ ಅಲ್ಲಿ ಕೂಲ್ ಕ್ಯಾಪ್ಟನ್ ನ ಹಚ್ಚಿಕೊಂಡಿರುವ, ಮೆಚ್ಚಿಕೊಂಡಿರುವ ಹಲವಾರು ಪೋಸ್ಟರ್ ಗಳು ಸಿಗುತ್ತವೆ.

'ತಲಾ' ಅಂದ್ರೇನು?
ಕ್ರಿಕೆಟ್ ಮೈದಾನದಲ್ಲೀಗ ಅದರಲ್ಲೂ ಚೆನ್ನೈ ತಂಡಕ್ಕೆ ಪಂದ್ಯವಿದ್ದಾಗ 'ತಲಾಧೋನಿ ತಲಾಧೋನಿ' ಅನ್ನೋ ಸದ್ದೇ ಹೆಚ್ಚಾಗಿ ಕೇಳುತ್ತಿರುತ್ತೆ. ಈ ತಲಾ ಅಂದರೆ ತಮಿಳು ಅರ್ಥದಲ್ಲಿ ತಲೆ. ತಲೆ ದೇಹದ ಭಾಗಗಳಲ್ಲಿ ಅತೀ ಪ್ರಮುಖವಾದುದಲ್ಲವೆ? ಧೋನಿಯೂ ಅಷ್ಟೇ ಪ್ರೀತಿಪಾತ್ರರು, ಮಹತ್ವದ ವ್ಯಕ್ತಿ ಎನ್ನುವುದನ್ನು ತಮಿಳಿಗರ ಭಾವನೆ. ಅಲ್ಲದೆ ತಮಿಳಿನಲ್ಲಿ ನಾಯಕ ಅರ್ಥ ಕೊಡುವ ತಲೈವಾ ಪದದ ಸಕ್ಷಿಪ್ತವೂ ಹೌದು 'ತಲಾ'.

ಈ ನಡುವೆ ಹುಡುಗೀರು ಧೋನಿಯನ್ನು ಹೆಚ್ಚು ಹಚ್ಚಿಕೊಳ್ಳುತ್ತಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಆಗೀಗ ವ್ಯಕ್ತವಾಗುತ್ತಲೇ ಇವೆ. ಇದಕ್ಕೆ ಧೋನಿಯ ಪ್ರತಿಭೆ, ಸಾಧನೆ, ಸರಳತೆ, ವ್ಯಕ್ತಿತ್ವ ಎಲ್ಲವೂ ಹೌದು.

Story first published: Sunday, May 6, 2018, 16:01 [IST]
Other articles published on May 6, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X