ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಧೋನಿ ಕುರಿತಾಗಿ 'U' ಟರ್ನ್ ಹೊಡೆದ ಗಂಭೀರ್: ಮಾಹಿ ಪರವಾಗಿ ಇರ್ತೀನಿ ಎಂದ ಗೌತಮ್

Gautam gambhir

ಮಹೇಂದ್ರ ಸಿಂಗ್‌ ಧೋನಿ ಅಂದ್ರೆ ಸಾಕು ಅತ್ಯಂತ ತೀಕ್ಷ್ಣವಾಗಿ, ಹರಿತವಾಗಿ ಕಾಮೆಂಟ್‌ಗಳನ್ನ ನೀಡುತ್ತಿದ್ದ ಟೀಂ ಇಂಡಿಯಾ ಮಾಜಿ ಆಟಗಾರ ಗೌತಮ್ ಗಂಭೀರ್ ದಿಢೀರ್ ಯೂ ಟರ್ನ್ ಹೊಡೆದಿದ್ದಾರೆ. ಟೀಂ ಇಂಡಿಯಾ ಮಾಜಿ ನಾಯಕ ಧೋನಿ ಪರವಾಗಿ ಹೇಳಿಕೆಗಳ ಮೂಲಕ ಸುದ್ದಿಯಾಗಿದ್ದಾರೆ.

ಟೀಂ ಇಂಡಿಯಾದ ಮಾಜಿ ಬ್ಯಾಟರ್ ಗಂಭೀರ್ ತಮ್ಮ ಸಹ ಆಟಗಾರ, ಲೆಜೆಂಡ್ ಧೋನಿ ಕುರಿತಾಗಿ ಸಾಕಷ್ಟು ಪರಸ್ಪರ ಗೌರವವನ್ನ ಹೊಂದಿದ್ದಾರೆ ಮತ್ತು ಭಾರತದ ಮಾಜಿ ನಾಯಕನಿಗೆ ಅತ್ಯವಿರುವಾಗ ಅವರೊಂದಿಗೆ ನಿಲ್ಲುವುದರಲ್ಲಿ ತಾನು ಮೊದಲಿಗನಾಗಿರುತ್ತೇನೆ ಎಂದು ಹೇಳಿದ್ದಾರೆ.

ಯೂಟ್ಯೂಬ್ ಚಾನೆಲ್‌ನಲ್ಲಿ ಧೋನಿ ಕುರಿತು ಹೊಗಳಿದ ಗೌತಿ

ಯೂಟ್ಯೂಬ್ ಚಾನೆಲ್‌ನಲ್ಲಿ ಧೋನಿ ಕುರಿತು ಹೊಗಳಿದ ಗೌತಿ

ಎಂ.ಎಸ್ ಧೋನಿ ಕಂಡ್ರೆ, ಗೌತಮ್ ಗಂಭೀರ್‌ಗೆ ಏಕೆ ಆಗುವುದಿಲ್ಲ ಎಂದು ಜನರು ಭಾವಿಸುತ್ತಾರೆ ಎಂದು ಕ್ರೀಡಾ ಪತ್ರಕರ್ತ ಜತಿನ್ ಸಪ್ರು ಕೇಳಿದ ಪ್ರಶ್ನೆಗೆ ಉತ್ತರಿಸಿರುವ ಗೌತಮ್ ಗಂಭೀರ್ ಇದೊಂದು ಸುಳ್ಳು ಸುದ್ದಿ, ತನಗೆ ಧೋನಿ ಕುರಿತಾಗಿ ಸಾಕಷ್ಟು ಪರಸ್ಪರ ಗೌರವವಿದೆ. ಧೋನಿ ಭಾರತ ಕ್ರಿಕೆಟ್‌ಗೆ ಏನೆಲ್ಲಾ ಕೊಡುಗೆ ನೀಡಿದ್ದಾರೆ ಎಂದು ತಿಳಿದಿದೆ ಎಂದಿದ್ದಾರೆ.

138 ಕೋಟಿ ಜನರ ಮುಂದೆ ಹೇಳಬಲ್ಲೇ, ಧೋನಿ ಮೇಲೆ ನನಗೆ ದ್ವೇಷವಿಲ್ಲ!

138 ಕೋಟಿ ಜನರ ಮುಂದೆ ಹೇಳಬಲ್ಲೇ, ಧೋನಿ ಮೇಲೆ ನನಗೆ ದ್ವೇಷವಿಲ್ಲ!

"ಇದು ಅಸಂಬದ್ಧ, ನೋಡಿ ನನಗೆ ಅವರ ಬಗ್ಗೆ ತುಂಬಾ ಪರಸ್ಪರ ಗೌರವವಿದೆ ಮತ್ತು ಅದು ಯಾವಾಗಲೂ ಇರುತ್ತದೆ . ನಾನು ಈಗಾಗಲೇ ಲೈವ್‌ನಲ್ಲಿ ಹೇಳಿದ್ದೇನೆ, ಮತ್ತು ನಿಮ್ಮ ಚಾನೆಲ್‌ನಲ್ಲೂ ಹೇಳಬಲ್ಲೇ, ನಾನು ಅದನ್ನು 138 ಕೋಟಿ ಜನರ ಮುಂದೆ ಎಲ್ಲಿ ಬೇಕಾದರೂ ಹೇಳಬಲ್ಲೆ, ಎಂದಾದರೂ ಅಗತ್ಯವಿದ್ದರೆ, ಅವರಿಗೆ ಎಂದಿಗೂ ಅಗತ್ಯಬರಲ್ಲ ಎಂದು ನಾನು ಭಾವಿಸುತ್ತೇನೆ, ಜೀವನದಲ್ಲಿ ಎಂದಾದರೂ ಅಗತ್ಯವಿದ್ದಲ್ಲಿ, ನಾನು ಅವರ ಮುಂದೆ ನಿಲ್ಲುವವರಲ್ಲಿ ಮೊದಲಿಗನಾಗುತ್ತೇನೆ. ಏಕೆಂದರೆ ಭಾರತೀಯ ಕ್ರಿಕೆಟ್‌ಗಾಗಿ ಅವರು ಏನು ಮಾಡಿದ್ದಾರೆ ಎಂದು ತಿಳಿದಿದೆ'' ಎಂದು ಗೌತಮ್ ಗಂಭೀರ ಹೇಳಿದ್ದಾರೆ.

ಬೇರೆ ತಂಡವಾಗಿದ್ರೆ, ನನ್ನನ್ನು ತಂಡದಿಂದ ಕೈ ಬಿಡುತ್ತಿದ್ರು, ಕೊಹ್ಲಿ ನಂಬಿಕೆ ಇಟ್ಟು ರೀಟೈನ್ ಮಾಡಿದ್ರು: ಮೊಹಮ್ಮದ್ ಸಿರಾಜ್

ಧೋನಿ 3ನೇ ಕ್ರಮಾಂಕದಲ್ಲಿ ಆಡಿದ್ದರೆ, ಎಲ್ಲಾ ದಾಖಲೆಗಳನ್ನ ಮುರಿಯುತ್ತಿದ್ರು!

ಧೋನಿ 3ನೇ ಕ್ರಮಾಂಕದಲ್ಲಿ ಆಡಿದ್ದರೆ, ಎಲ್ಲಾ ದಾಖಲೆಗಳನ್ನ ಮುರಿಯುತ್ತಿದ್ರು!

ಮಹೇಂದ್ರ ಸಿಂಗ್ ಧೋನಿ ಮೂರನೇ ಕ್ರಮಾಂಕದಲ್ಲಿ ಉತ್ತಮ ಬ್ಯಾಟಿಂಗ್ ರೆಕಾರ್ಡ್‌ ಹೊಂದಿದ್ದರು, ಅವರು ಅದೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮುಂದುವರಿಸಿದ್ರೆ, ಎಲ್ಲಾ ದಾಖಲೆಗಳನ್ನ ಮುರಿದುಬಿಡುತ್ತಿದ್ದರು. ಆದ್ರೆ ಅವರು ಯುವ ಆಟಗಾರರಿಗೆ ಅವಕಾಶ ನೀಡಿದರು ಎಂದಿದ್ದಾರೆ.

"ನನಗೆ ಆತ ಯಾವ ರೀತಿಯ ಕ್ರಿಕೆಟಿಗ ಎಂಬುದರ ಬಗ್ಗೆ ತುಂಬಾ ಪರಸ್ಪರ ಗೌರವವನ್ನು ಹೊಂದಿದ್ದೇನೆ ಮತ್ತು ನಾನು ಅದನ್ನು ಮತ್ತೆ ಹೇಳಿದ್ದೇನೆ, ನಾನು ಅದನ್ನು ಮತ್ತೊಮ್ಮೆ ಹೇಳಬಲ್ಲೆ. ಅವರು ನಂ.3 ರಲ್ಲಿ ಬ್ಯಾಟ್ ಮಾಡಿದ್ದರೆ ಅವರು ಎಲ್ಲಾ ದಾಖಲೆಗಳನ್ನು ಮುರಿಯುತ್ತಿದ್ದರು, ಜನರು. ನಂ.3 ನಲ್ಲಿ ಶ್ರೇಷ್ಠರ ಬಗ್ಗೆ ಮಾತನಾಡುತ್ತಾರೆ. ಆದ್ರೆ ಅವರು ವೈಟ್-ಬಾಲ್ ಕ್ರಿಕೆಟ್‌ನಲ್ಲಿ ಎಲ್ಲವನ್ನೂ ಮುರಿದುಬಿಡುತ್ತಿದ್ದರು'' ಎಂದು ಗೌತಿ ಹೇಳಿದ್ದಾರೆ.

IPL 2022: ಸೀಸನ್ ಆರಂಭಿಕ ಪಂದ್ಯಗಳಿಗೆ ಅಲಭ್ಯರಾಗಿರುವ ಪ್ಲೇಯರ್ಸ್

KL Rahul ಅವರನ್ನು ತಂಡದವರೇ ತುಳಿಯುತ್ತಿದ್ದರು | Oneindia Kannada
ಧೋನಿ ನಾಯಕತ್ವದಲ್ಲಿ ಹೆಚ್ಚು ಕಾಲ ಉಪನಾಯಕನಾಗಿದ್ದೆ!

ಧೋನಿ ನಾಯಕತ್ವದಲ್ಲಿ ಹೆಚ್ಚು ಕಾಲ ಉಪನಾಯಕನಾಗಿದ್ದೆ!

ಇದೇ ವೇಳೆ ಧೋನಿ ನಾಯಕತ್ವದಲ್ಲಿ ಹೆಚ್ಚು ಕಾಲ ಉಪನಾಯಕನಾಗಿದ್ದರ ಕುರಿತಾಗಿ ಗಂಭೀರ್ ನೆನಪಿಸಿದ್ದಾರೆ.

"ನಾವು ವಿಭಿನ್ನ ಅಭಿಪ್ರಾಯಗಳನ್ನು ಹೊಂದಿರಬಹುದು, ವಿಭಿನ್ನ ರೀತಿಯಲ್ಲಿ ಆಟವನ್ನು ನೋಡಬಹುದು ಎಂದು ನೀವು ಭಾವಿಸಬಹುದು. ಏಕೆಂದರೆ ನಾನು ನನ್ನ ಸ್ವಂತ ಅಭಿಪ್ರಾಯಗಳನ್ನು ಹೊಂದಿದ್ದೇನೆ, ಅವರು ತಮ್ಮದೇ ಆದ ಅಭಿಪ್ರಾಯಗಳನ್ನು ಹೊಂದಿದ್ದಾರೆ. ಅವರು ನಾಯಕನಾಗಿದ್ದಾಗ ನಾನು ವಾಸ್ತವವಾಗಿ ದೀರ್ಘಾವಧಿಯ ಉಪನಾಯಕನಾಗಿದ್ದೆ'' ಎಂದು ಧೋನಿ ಜೊತೆಗಿನ ಒಡನಾಟವನ್ನ ಗೌತಮ್ ಗಂಭೀರ್ ತಿಳಿಸಿದ್ದಾರೆ.

ಜನರ ಅಭಿಪ್ರಾಯದಲ್ಲಿ ನಾನು ಹಾಗೂ ಧೋನಿ ನಡುವೆ ಒಮ್ಮತವಿರಲಿಲ್ಲ ಎಂದು ಭಾವಿಸುತ್ತಾರೆ. ಆದ್ರೆ ಆತನ ಕುರಿತು ಸಾಕಷ್ಟು ಗೌರವವಿದೆ ಎಂದು ಮಾಜಿ ಬ್ಯಾಟರ್ ಗೌತಮ್ ಗಂಭೀರ್ ಹೇಳಿದ್ದಾರೆ.

Story first published: Saturday, March 19, 2022, 13:20 [IST]
Other articles published on Mar 19, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X