ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟಿ20 ಅಭ್ಯಾಸ ಪಂದ್ಯದಲ್ಲಿ ಗೋಲ್ಡನ್ ಡಕೌಟ್ ಆದ ಸಂಜು ಸ್ಯಾಮ್ಸನ್‌ಗೆ ಭಾರೀ ಹಿನ್ನಡೆ

Sanju samson

ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಗೆ ಆರಂಭಕ್ಕೂ ಮುನ್ನ ನಡೆದ ಅಭ್ಯಾಸ ಪಂದ್ಯದಲ್ಲಿ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಸಂಜು ಸ್ಯಾಮ್ಸನ್ ನಿರಾಸೆ ಮೂಡಿಸಿದ್ದಾರೆ. ನಾರ್ಥಾಪ್ಟಂನ್‌ಶೈರ್‌ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಗೋಲ್ಡನ್ ಡಕೌಟ್ ಆಗಿದ್ದಾರೆ.

ಐರ್ಲೆಂಡ್ ವಿರುದ್ಧದ ಎರಡನೇ ಟಿ20ಯಲ್ಲಿ ಅರ್ಧಶತಕ ಬಾರಿಸುವ ಮೂಲಕ ಟೀಂ ಇಂಡಿಯಾ ಪ್ಲೇಯಿಂಗ್‌ ಇಲೆವೆನ್‌ನಲ್ಲಿ ಸ್ಥಾನ ಪಡೆದಿದ್ದ ಸಂಜು, ಡರ್ಬಿಶೈರ್ ವಿರುದ್ಧ ಮೊದಲ ಅಭ್ಯಾಸ ಪಂದ್ಯದಲ್ಲೂ 38 ರನ್ ಗಳಿಸಿ ಮಿಂಚಿದ್ದರು. ಆದ್ರೆ ಎರಡನೇ ಅಭ್ಯಾಸ ಪಂದ್ಯದಲ್ಲಿಯೂ ಮಿಂಚಲು ವಿಫಲರಾಗಿದ್ದಾರೆ. ಅದ್ರಲ್ಲೋ ಮೊದಲ ಎಸೆತದಲ್ಲೇ ಶೂನ್ಯಕ್ಕೆ ಔಟಾಗುವ ಮೂಲಕ ಸ್ಥಿರ ಪ್ರದರ್ಶನ ಕೊರತೆಯನ್ನು ಮತ್ತೊಮ್ಮೆ ಪ್ರದರ್ಶಿಸಿದ್ದಾರೆ. ಈ ಮೂಲಕ ಇಂಗ್ಲೆಂಡ್ ವಿರುದ್ಧದ ಮೊದಲ ಟಿ20ಯಲ್ಲಿ ಸಂಜು ಆಡುವ 11ರಲ್ಲಿ ಸ್ಥಾನ ನಿರೀಕ್ಷೆಗಳು ಹುಸಿಯಾಗಿವೆ.

ಟಿ20 ವಿಶ್ವಕಪ್‌ನಲ್ಲಿ ಸಂಜು ಸ್ಥಾನ ಪಡೆಯುವುದು ಕಠಿಣ!

ಟಿ20 ವಿಶ್ವಕಪ್‌ನಲ್ಲಿ ಸಂಜು ಸ್ಥಾನ ಪಡೆಯುವುದು ಕಠಿಣ!

ಟಿ20 ವಿಶ್ವಕಪ್‌ನಲ್ಲೂ ಸಂಜು ಅವರನ್ನು ಭಾರತ ಪರಿಗಣಿಸುವ ಸಾಧ್ಯತೆಗಳಿದ್ದವು, ಆದರೆ ನಿರ್ಣಾಯಕ ಅವಕಾಶವನ್ನು ಕಳೆದುಕೊಂಡ ನಂತರ ಭಾರತ ತಂಡದಲ್ಲಿ ಅವಕಾಶ ಪಡೆಯುವುದು ಕಠಿಣ ಎಂದು ಹೇಳಬಹುದು. ಸಂಜು ಅವರನ್ನು ಬೆಂಬಲಿಸುವ ಅನೇಕ ಅಭಿಮಾನಿಗಳಿದ್ದರೂ ಸಹ ಈ ರೀತಿಯ ನಿರಾಶಾದಾಯಕ ಪ್ರದರ್ಶನವು ಅವರ ವಿರುದ್ಧ ಸಾಕಷ್ಟು ಟೀಕೆಗೆ ಕಾರಣವಾಗಿದೆ. ಸ್ಥಿರ ಪ್ರದರ್ಶನ ನೀಡಲು ಸ್ಯಾಮ್ಸನ್ ವಿಫಲರಾಗಿದ್ದಾರೆ.

ಕೊಹ್ಲಿ ಸ್ಲೆಡ್ಜಿಂಗ್: ನನ್ನ ಹಾಗೂ ವಿರಾಟ್ ನಡುವೆ ಯಾವುದೇ ಒಳಜಗಳವಿಲ್ಲ: ಜಾನಿ ಬೈಸ್ಟ್ರೋವ್

ಸಿಕ್ಕ ಅವಕಾಶದಲ್ಲಿ ಮಿಂಚಲು ಸಂಜು ವಿಫಲ

ಸಿಕ್ಕ ಅವಕಾಶದಲ್ಲಿ ಮಿಂಚಲು ಸಂಜು ವಿಫಲ

ಬ್ಯಾಕ್ ಫುಟ್‌ನಲ್ಲಿ ಸ್ಪಿನ್ ಮತ್ತು ಪೇಸ್‌ ಬೌಲಿಂಗ್‌ಗೆ ದೊಡ್ಡ ಹೊಡೆತಗಳನ್ನು ಆಡಬಲ್ಲ ಅಪರೂಪದ ಆಟಗಾರರಲ್ಲಿ ಸಂಜು ಒಬ್ಬರು. ಆದ್ದರಿಂದ, ಭಾರತ ತಂಡದ ನಾಯಕ ರೋಹಿತ್ ಶರ್ಮಾ ಈ ಹಿಂದೆ ಸಂಜು ವಿಶ್ವಕಪ್ ಯೋಜನೆಗಳ ಭಾಗವಾಗಿದ್ದಾರೆ ಎಂಬ ಸುಳಿವು ನೀಡಿದ್ದರು. ಆದರೆ ಸಿಕ್ಕ ಅವಕಾಶಗಳಲ್ಲಿ ಹೆಚ್ಚಿನ ಪ್ರಭಾವ ಬೀರಲು ವಿಫಲರಾದ ಕಾರಣ ಈತನಿಗೆ ಮತ್ತೆ ಭಾರತ ತಂಡದ ಬಾಗಿಲು ಯಾವಾಗ ತೆರೆಯುತ್ತದೆ ಎಂದು ಹೇಳಲು ಸಾಧ್ಯವಿಲ್ಲ.

ವಿಕೆಟ್ ಕೀಪರ್ ಸ್ಥಾನಕ್ಕಿದೆ ಭಾರೀ ಸ್ಪರ್ಧೆ

ವಿಕೆಟ್ ಕೀಪರ್ ಸ್ಥಾನಕ್ಕಿದೆ ಭಾರೀ ಸ್ಪರ್ಧೆ

ರಾಜಸ್ಥಾನ್ ರಾಯಲ್ಸ್ ತಂಡದ ನಾಯಕನಾಗಿ ಮಿಂಚಿದ್ದ ಸಂಜು ವಿಕೆಟ್ ಕೀಪರ್ ಬ್ಯಾಟ್ಸ್ ಮನ್. ದಿನೇಶ್ ಕಾರ್ತಿಕ್, ಕೆ.ಎಲ್ ರಾಹುಲ್ ಮತ್ತು ಇಶಾನ್ ಕಿಶನ್ ಅವರು ಟಿ20 ವಿಶ್ವಕಪ್‌ಗೆ ವಿಕೆಟ್‌ಕೀಪರ್‌ಗಳಾಗಿ ಭಾರತ ತಂಡದಲ್ಲಿದ್ದು, ಸಂಜುಗೆ ಈ ಸ್ಥಾನದಲ್ಲಿ ಅವಕಾಶ ಪಡೆಯುವುದು ಕಠಿಣವಾಗಿರುತ್ತದೆ. ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್ ಆಗಿರುವುದು ಕೂಡ ಸಂಜುಗೆ ಹಿನ್ನಡೆಯಾಗಿದೆ.

ಈ ಹಿಂದೆ ರಿಷಭ್ ಪಂತ್ ಸತತವಾಗಿ ನಿರಾಸೆ ಮೂಡಿಸಿದಾಗ ರಿಷಭ್‌ನ ಅರ್ಧ ಅವಕಾಶವನ್ನಾದರೂ ಸಂಜುಗೆ ನೀಡಬೇಕು ಎಂದು ಹಲವರು ಒತ್ತಾಯಿಸಿದ್ದರು. ಐರ್ಲೆಂಡ್ ಪ್ರವಾಸದಲ್ಲಿ ಮಿಂಚಿದ ನಂತರ ಸಂಜು ಅವರಿಗೆ ಹೆಚ್ಚಿನ ಅವಕಾಶಗಳು ಸಿಗುತ್ತವೆ ಎಂದು ನಿರೀಕ್ಷಿಸಲಾಗಿತ್ತು, ಆದರೆ ನಿರ್ಣಾಯಕ ಸಮಯದಲ್ಲಿ ಗೋಲ್ಡನ್ ಡಕ್‌ ಔಟ್‌ನೊಂದಿಗೆ ಅವರಿಗೆ ಸ್ಪರ್ಧೆ ಕಠಿಣವಾಗಿವೆ.

ಇಂಗ್ಲೆಂಡ್‌ ವಿರುದ್ಧ ಭಾರತದ ಬೌಲರ್‌ಗಳ ಗೆಲುವಿನ ರಹಸ್ಯ ಬಿಚ್ಚಿಟ್ಟ ಮೊಹಮ್ಮದ್ ಸಿರಾಜ್

ಬ್ಯಾಟಿಂಗ್‌ನಲ್ಲಿ ಕುಸಿದ ಭಾರತ, ಹರ್ಷಲ್ ಪಟೇಲ್ ಅಬ್ಬರ

ಬ್ಯಾಟಿಂಗ್‌ನಲ್ಲಿ ಕುಸಿದ ಭಾರತ, ಹರ್ಷಲ್ ಪಟೇಲ್ ಅಬ್ಬರ

ನಾರ್ಥಾಂಪ್ಟನ್ ಶೈರ್ ವಿರುದ್ಧ ಭಾರತ ಬ್ಯಾಟಿಂಗ್ ಕುಸಿತ ಎದುರಿಸಿತು. ಭಾರತ ನಾಲ್ಕು ಓವರ್‌ಗಳಲ್ಲಿ 13 ರನ್ ಗಳಿಸುವಷ್ಟರಲ್ಲಿ ಮೂರು ವಿಕೆಟ್ ಕಳೆದುಕೊಂಡಿತು. ಸಂಜು ಸ್ಯಾಮ್ಸನ್ (0), ರಾಹುಲ್ ತ್ರಿಪಾಠಿ (7) ಮತ್ತು ಸೂರ್ಯಕುಮಾರ್ ಯಾದವ್ (0) ಔಟಾದರು.

ರಾಹುಲ್ ತ್ರಿಪಾಠಿ ಅವರಿಗೆ ಭಾರತಕ್ಕೆ ಪದಾರ್ಪಣೆ ಮಾಡುವ ಅವಕಾಶ ನೀಡಲಾಯಿತು. ಆದ್ರೆ ತ್ರಿಪಾಠಿ 11 ಎಸೆತಗಳಲ್ಲಿ 1 ಬೌಂಡರಿ ಗಳಿಸಿದರೂ ದೊಡ್ಡ ಸ್ಕೋರ್ ಗಳಿಸಲು ಸಾಧ್ಯವಾಗಲಿಲ್ಲ. ಐರ್ಲೆಂಡ್ ಪ್ರವಾಸದ ನಂತರ, ಸೂರ್ಯಕುಮಾರ್ ಅಭ್ಯಾಸದಲ್ಲೂ ಶೂನ್ಯಕ್ಕೆ ಔಟಾಗಿದ್ದಾರೆ. ಗಾಯದ ನಂತರ ಸೂರ್ಯ ಫಾರ್ಮ್‌ಗೆ ಮರಳಲು ಸಾಧ್ಯವಾಗಲಿಲ್ಲ. ಕೊನೆಯಲ್ಲಿ ಕಾರ್ತಿಕ್ 34, ಹರ್ಷಲ್ ಪಟೇಲ್ 36 ಎಸೆತಗಳಲ್ಲಿ 54 ರನ್ ಸಿಡಿಸಿದರ ಪರಿಣಾಮವಾಗಿ ತಂಡವು ಹೋರಾಟದ ಮೊತ್ತ ದಾಖಲಿಸಿತು. 8 ವಿಕೆಟ್ ನಷ್ಟಕ್ಕೆ 149 ರನ್ ಕಲೆಹಾಕಿತು

ಈ ಗುರಿ ನಾರ್ಥಾಂಪ್ಟನ್ ಶೈರ್ 139 ರನ್‌ಗಳಿಗೆ ಆಲೌಟ್ ಆಗುವ ಮೂಲಕ 10ರನ್‌ಗಳಿಂದ ಸೋಲನ್ನ ಒಪ್ಪಿಕೊಂಡಿತು. ಬ್ಯಾಟಿಂಗ್‌ನಲ್ಲಿ ಮಿಂಚಿದ್ದ ಹರ್ಷಲ್ ಪಟೇಲ್ ಬೌಲಿಂಗ್‌ನಲ್ಲಿ ಎರಡು ವಿಕೆಟ್ ಉರುಳಿಸಿದರು.

Story first published: Monday, July 4, 2022, 16:50 [IST]
Other articles published on Jul 4, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X