WTC Final: ಭಾರತೀಯ ಆಟಗಾರರಿಗೆ ಅಂಕಗಳನ್ನು ನೀಡಿದ ಆಕಾಶ್ ಚೋಪ್ರ, ಅತಿ ಕಡಿಮೆ ಅಂಕಗಳಿಸಿದ ಸ್ಟಾರ್ ಕ್ರಿಕೆಟಿಗ

ಸೌಥಾಂಪ್ಟನ್‌ನಲ್ಲಿ ನಡೆದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ಭಾರತವನ್ನು ಮಣಿಸಿ ಚಾಂಪಿಯನ್ ಪಟ್ಟಕ್ಕೆರಿದೆ. ಈ ಐತಿಹಾಸಿಕ ಪಂದ್ಯದಲ್ಲಿ ಟೀಮ್ ಇಂಡಿಯಾ ವಿರುದ್ಧ ನ್ಯೂಜಿಲೆಂಡ್ ತಂಡ ಸಂಪೂರ್ಣ ಮೇಲುಗೈ ಸಾಧಿಸುವಲ್ಲಿ ಯಶಸ್ವಿಯಾಗಿತ್ತು. ಟೀಮ್ ಇಂಡಿಯಾ ಪರವಾಗಿ ಪ್ರಮುಖ ಆಟಗಾರರು ಉತ್ತಮ ಪ್ರದರ್ಶನ ನೀಡಲು ವಿಫಲವಾಗಿದ್ದು ತಂಡದ ಸೋಲಿಗೆ ಪ್ರಮುಖ ಕಾರಣವಾಗಿತ್ತು.

ಈ ಪಂದ್ಯದಲ್ಲಿ ನೀಡಿದ ಪ್ರದರ್ಶನದ ಆಧಾರದಲ್ಲಿ ಟೀಮ್ ಇಂಡಿಯಾ ಆಟಗಾರರಿಗೆ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರ ಅಂಕಗಳನ್ನು ನೀಡಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಕಣ್ಕಕಿಳಿದಿದ್ದ ಟೀಮ್ ಇಂಡಿಯಾದ ಎಲ್ಲಾ ಆಟಗಾರರನ್ನು ಕೂಡ ಚೋಪ್ರ ಪರಿಗಣಿಸಿದ್ದಾರೆ.

ಅತ್ಯುತ್ತಮ ಟೆಸ್ಟ್ ತಂಡವನ್ನು ಕನಿಷ್ಠ 3 ಪಂದ್ಯಗಳಿಂದ ನಿರ್ಧರಿಸಬೇಕು: ಕೊಹ್ಲಿಅತ್ಯುತ್ತಮ ಟೆಸ್ಟ್ ತಂಡವನ್ನು ಕನಿಷ್ಠ 3 ಪಂದ್ಯಗಳಿಂದ ನಿರ್ಧರಿಸಬೇಕು: ಕೊಹ್ಲಿ

ಆರಂಭಿಕರಿಗೆ ನೀಡಿದ ಅಂಕ

ಆರಂಭಿಕರಿಗೆ ನೀಡಿದ ಅಂಕ

ಆರಂಭಿಕರಿಂದ ಆರಂಭಿಸಿದ ಆಕಾಶ್ ಚೋಪ್ರ ಅನುಭವಿ ರೋಹಿತ್ ಶರ್ಮಾಗೆ 6/10 ಅಂಕಗಳನ್ನು ನೀಡಿದ್ದಾರೆ. ಶರ್ಮಾ ಉತ್ತಮ ಇಂಗ್ಲೆಂಡ್‌ನ ಪರಿಸ್ಥಿತಿಯಲ್ಲಿ ಎರಡು ಇನ್ನಿಂಗ್ಸ್‌ಗಳಲ್ಲಿಯೂ ಉತ್ತಮ ಆರಂಭವನ್ನು ನೀಡಿದ್ದಾರೆ ಎಂದಿದ್ದಾರೆ. ಆದರೆ ರೋಹಿತ್ ಶರ್ಮಾರ ಆರಂಭಿಕ ಜೊತೆಗಾರ ಶುಬ್ಮನ್ ಗಿಲ್‌ಗೆ 4/10 ಅಂಕಗಳನ್ನು ನೀಡಿದ್ದಾರೆ. ನಿರೀಕ್ಷೆಯನ್ನು ಮುಟ್ಟುವಲ್ಲಿ ಯುವ ಆರಂಭಿಕ ಆಟಗಾರ ವಿಫಲರಾಗಿದ್ದಾರ ಎಂದು ಆಕಾಶ್ ಚೋಪ್ರ ಅಭಿಪ್ರಾಯಪಟ್ಟಿದ್ದಾರೆ.

ಸ್ಟಾರ್ ಆಟಗಾರರ ನೀರಸ ಪ್ರದರ್ಶನ

ಸ್ಟಾರ್ ಆಟಗಾರರ ನೀರಸ ಪ್ರದರ್ಶನ

ಇನ್ನು ಈ ಸಂದರ್ಭದಲ್ಲಿ ಟೀಮ್ ಇಂಡಿಯಾದ ಅನುಭವಿ ಹಾಗೂ ಸ್ಟಾರ್ ಆಟಗಾರ ಚೇತೇಶ್ವರ್ ಪೂಜಾರಾ ಪ್ರದರ್ಶನದ ಬಗ್ಗೆ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಪೂಜಾರ ಅವರಿಂದ ಉತ್ತಮ ಆಟದ ನಿರೀಕ್ಷೆಯಲ್ಲಿದ್ದೆ ಎಂದು ಚೋಪ್ರ ಹೇಳಿದ್ದಾರೆ. ಈ ಪಂದ್ಯದ ಪ್ರದರ್ಶನಕ್ಕೆ ಪೂಜಾರ ಅವರಿಗೆ 2/10 ಅಂಕಗಳನ್ನಷ್ಟೇ ನೀಡುತ್ತೇನೆ ಎಂದು ಆಕಾಶ್ ಚೋಪ್ರ ಹೇಳಿದರು. ಇನ್ನು ಸ್ಟಾರ್ ಆಲ್‌ರೌಂಡ್ ರವೀಂದ್ರ ಜಡೇಜಾಗೆ 3/10 ಅಂಕಗಳನ್ನು ನೀಡಿದ್ದಾರೆ. ಜಡೇಜಾ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗದಲ್ಲಿಯೂ ವಿಫಲರಾದರು. ಆದರೆ ಆರ್ ಅಶ್ವಿನ್‌ಗೆ 6/10 ಅಂಕ ನೀಡಿದ್ದಾರೆ. ಅಶ್ವಿನ್ ಈ ಪಂದ್ಯದಲ್ಲಿ ಒಟ್ಟು 4 ವಿಕೆಟ್ ಸಂಪಾದಿಸಿದರು.

ಶಮಿ, ಶರ್ಮಾ ಉತ್ತಮ

ಶಮಿ, ಶರ್ಮಾ ಉತ್ತಮ

ಇನ್ನು ವೇಗದ ಬೌಲಿಂಗ್ ವಿಭಾಗದಲ್ಲಿ ಮಿಂಚಿದ ಮೊಹಮ್ಮದ್ ಶಮಿ ಹಾಗೂ ಇಶಾಂತ್ ಶರ್ಮಾಗೆ ಉತ್ತಮ ಅಂಕಗಳನ್ನು ನೀಡಿದ್ದಾರೆ ಚೋಪ್ರ. ಶಮಿ 7/10 ಅಂಕ ಪಡೆದುಕೊಂಡರೆ ಇಶಾಂತ್ ಶರ್ಮಾಗೆ 6/10 ಅಂಕ ನೀಡಿದ್ದಾರೆ. ಆದರೆ ಮಹತ್ವದ ಪಂದ್ಯದಲ್ಲಿ ಒಂದು ವಿಕೆಟ್ ಪಡೆಯಲೂ ವಿಫಲರಾದ ಜಸ್ಪ್ರೀತ್ ಬೂಮ್ರಾಗೆ 3/10 ಅಂಕಗಳನ್ನು ನೀಡಿದ್ದಾರೆ.

ಆಕಾಶ್ ಚೋಪ್ರ ನೀಡಿದ ಅಂಕಗಳ ವಿವರ

ಆಕಾಶ್ ಚೋಪ್ರ ನೀಡಿದ ಅಂಕಗಳ ವಿವರ

ರೋಹಿತ್ ಶರ್ಮಾ- 6/10

ಶುಬ್ಮನ್ ಗಿಲ್- 4/10

ಚೇತೇಶ್ವರ ಪೂಜಾರ- 2/10

ವಿರಾಟ್ ಕೊಹ್ಲಿ- 5/10

ಅಜಿಂಕ್ಯ ರಹಾನೆ- 5/10

ರಿಷಭ್ ಪಂತ್- 5/10

ರವೀಂದ್ರ ಜಡೇಜಾ- 3/10

ರವಿಚಂದ್ರನ್ ಅಶ್ವಿನ್- 6/10

ಇಶಾಂತ್ ಶರ್ಮಾ- 6/10

ಮೊಹಮ್ಮದ್ ಶಮಿ- 7/10

ಜಸ್ಪ್ರಿತ್ ಬುಮ್ರಾ- 3/10

For Quick Alerts
ALLOW NOTIFICATIONS
For Daily Alerts
Story first published: Friday, June 25, 2021, 16:26 [IST]
Other articles published on Jun 25, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X