ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ ಪಾಕ್ ಆಟಗಾರರ ನಡುವಿನ ಬಾಂಧವ್ಯದ ಕುತೂಹಲಕಾರಿ ಸಂಗತಿ ಹೇಳಿದ ಆಕಾಶ್ ಚೋಪ್ರಾ

Aakash Chopra On India And Pakistan Cricketers Friendship

ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಬಂಧ ಹಳಸಿದ ಕಾರಣ ಈ ಎರಡು ದೇಶಗಳ ಮಧ್ಯೆ ಕ್ರಿಕೆಟ್ ಕೂಡ ಸ್ತಬ್ಧವಾಗಿ ದಶಕವೇ ಕಳೆದಿದೆ. ಆದರ ಅಂಗಳದಲ್ಲಿ ಜಿದ್ದಾಜಿದ್ದಿನ ಹೋರಾಟವನ್ನು ನಡೆಸಿ ಅಭಿಮಾನಿಗಳಿಗೆ ರಸದೌತಣವನ್ನು ನೀಡುತ್ತಿದ್ದ ಕ್ರಿಕೆಟ್ ಆಟಗಾರರು ಅಂಗಳದಾಚೆ ಉತ್ತಮ ಸ್ನೇಹಿತರಾಗಿದ್ದರು ಎಂಬುದು ಹಲವು ಸಂದರ್ಭಗಳಲ್ಲಿ ಸಾಬೀತಾಗಿದೆ.

ಇತ್ತೀಚಿನ ಸಂದರ್ಶನವೊಂದರಲ್ಲಿ ಪಾಕಿಸ್ತಾನದ ಹಿರಿಯ ಆಲ್‌ರೌಂಡರ್ ಶೋಯೆಬ್ ಮಲಿಕ್ ಟೀಮ್ ಇಂಡಿಯಾದ ಯುವರಾಜ್ ಸಿಂಗ್ ಜೊತೆಗಿನ ಸ್ನೇಹವನ್ನು ಹೇಳಿಕೊಂಡಿದ್ದರು. ಈಗ ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ, ಕಾಮೆಂಟೇಟರ್ ಆಕಾಶ್ ಚೋಪ್ರಾ ಪಾಕಿಸ್ತಾನ ಕ್ರಿಕೆಟ್ ಆಟಗಾರರ ಜೊತೆಗಿನ ಸ್ನೇಹದ ಬಗ್ಗೆ ಕುತೂಹಲಕಾರಿ ಸಂಗತಿಯನ್ನು ಹಂಚಿಕೊಂಡಿದ್ದಾರೆ.

ಐಪಿಎಲ್ ಇತಿಹಾಸದಲ್ಲಿ ಹಿರಿ ವಯಸ್ಸಿನಲ್ಲಿ ಶತಕಗಳಿಸಿದ ಟಾಪ್ 5 ಆಟಗಾರರುಐಪಿಎಲ್ ಇತಿಹಾಸದಲ್ಲಿ ಹಿರಿ ವಯಸ್ಸಿನಲ್ಲಿ ಶತಕಗಳಿಸಿದ ಟಾಪ್ 5 ಆಟಗಾರರು

ಐಪಿಎಲ್‌ನಲ್ಲಿ ಆಡಿದ್ದರು ಪಾಕ್ ಆಟಗಾರರು

ಐಪಿಎಲ್‌ನಲ್ಲಿ ಆಡಿದ್ದರು ಪಾಕ್ ಆಟಗಾರರು

ಈಗ ಪಾಕಿಸ್ತಾನದ ಕ್ರಿಕೆಟಿಗರಿಗೆ ಐಪಿಎಲ್‌ನಲ್ಲಿ ಆಡಲು ಅವಕಾಶವನ್ನು ನೀಡುತ್ತಿಲ್ಲ. ಆದರೆ ಇದು ಆರಂಭದಲ್ಲಿ ಹೀಗಿರಲಿಲ್ಲ ಎಂಬುದು ಗಮನಾರ್ಹ. ಆರಂಭದ ಆವೃತ್ತಿಯಲ್ಲಿ ಪಾಕಿಸ್ತಾನ ಕ್ರಿಕೆಟಿಗರು ಐಪಿಎಲ್‌ನಲ್ಲಿ ಆಡುವ ಅವಕಾಶವನ್ನು ಪಡೆದುಕೊಂಡಿದ್ದರು.

ಅಖ್ತರ್ ಜೊತೆಗೆ ಚೋಪ್ರಾ ಉತ್ತಮ ಸ್ನೇಹ

ಅಖ್ತರ್ ಜೊತೆಗೆ ಚೋಪ್ರಾ ಉತ್ತಮ ಸ್ನೇಹ

ಆಕಾಶ ಚೋಪ್ರಾ 2008ರ ಐಪಿಎಲ್ ಉದ್ಘಾಟನಾ ಆವೃತ್ತಿಯಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದಲ್ಲಿ ಕಣಕ್ಕಿಳಿದಿದ್ದರು. ಈ ಸಂದರ್ಭದಲ್ಲಿ ಪಾಕಿಸ್ತಾನದ ಪ್ರಮುಖ ಆಟಗಾರರಾದ ಶೋಯೆಬ್ ಅಖ್ತರ್, ಉಮರ್ ಗುಲ್, ಸಲ್ಮಾನ್ ಬಟ್ ಮತ್ತು ಮೊಹಮ್ಮದ್ ಹಫೀಜ್ ಕೂಡ ಕೊಲ್ಕತ್ತಾ ತಂಡದ ಸದಸ್ಯರಾಗಿದ್ದರು. ಈ ಆಟಗಾರರ ಪೈಕಿ ಶೋಯೆಬ್ ಅಖ್ತರ್ ಜೊತೆಗೆ ಇಂದಿಗೂ ಅತ್ಯುತ್ತಮ ಸ್ನೇಹ ಇರುವುದನ್ನು ಚೋಪ್ರಾ ಬಹಿರಂಗಪಡಿಸಿದ್ದಾರೆ.

ಅಖ್ತರ್ ಜೊತೆ ಈಗಲೂ ಗಂಟೆಗಟ್ಟಲೆ ಮಾತನಾಡುತ್ತೇನೆ

ಅಖ್ತರ್ ಜೊತೆ ಈಗಲೂ ಗಂಟೆಗಟ್ಟಲೆ ಮಾತನಾಡುತ್ತೇನೆ

ಪಾಕಿಸ್ತಾನದ ಬ್ರಾಡ್‌ಕಾಸ್ಟರ್ ಸವೆರಾ ಪಾಶಾ ಅವರ ಯುಟ್ಯೂಬ್ ಚಾನೆಲ್‌ಗೆ ಸಂದರ್ಶನ ನೀಡಿದ್ದ ಆಕಾಶ್ ಚೋಪ್ರಾ ಪಾಕ್ ಆಟಗಾರರ ಜೊತೆಗಿನ ಗೆಳತನವನ್ನು ಹೇಳಿಕೊಂಡಿದ್ದಾರೆ. "ನಿಜ ಹೇಳಬೇಕೆಂದರೆ ನಾವು ತುಂಬಾ ಒಳ್ಳೆಯ ಗೆಳೆಯರು. ಅದರಲ್ಲೂ ಶೋಯೆಬ್ ಅಖ್ತರ್ ನನ್ನ ಅತ್ಯುತ್ತಮ ಗೆಳೆಯ. ಈಗಲೂ ಅವರೊಂದಿಗೆ ನಾನು ಗಂಟೆಗಳ ಕಾಲ ಫೋನ್‌ನಲ್ಲಿ ಮಾತನಾಡುತ್ತೇನೆ. ನಾನು ಯಾವಾಗ ಗಂಡೆಗೂ ಹೆಚ್ಚು ಕಾಲ ಫೋನ್‌ನಲ್ಲಿ ಮಾತನಾಡುತ್ತಿದ್ದರೆ ನನ್ನ ಪತ್ನಿ ನಾನು ಅಖ್ತರ್ ಜೊತೆಗೆ ಮಾತನಾಡುತ್ತಿದ್ದೇನೆ ಎಂದು ಅರ್ಥ ಮಾಡಿಕೊಳ್ಳುತ್ತಾರೆ ಎಂದು ಆಕಾಶ ಚೋಪ್ರಾ ಹೇಳಿದ್ದಾರೆ.

ಟೀಮ್ ಇಂಡಿಯಾ ಆಟಗಾರರಿಗೆ ಇನ್ಜಮಾಮ್ ಆತಿಥ್ಯ

ಟೀಮ್ ಇಂಡಿಯಾ ಆಟಗಾರರಿಗೆ ಇನ್ಜಮಾಮ್ ಆತಿಥ್ಯ

ಆಕಾಶ್ ಚೋಪ್ರಾ ಮಾತನಾಡುತ್ತಾ ಟೀಮ್ ಇಂಡಿಯಾ 2004ರಲ್ಲಿ ಪಾಕಿಸ್ತಾನಕ್ಕೆ ಪ್ರವಾಸಕ್ಕೆ ತೆರಳಿದ್ದ ಸಂದರ್ಭವನ್ನು ನೆನಪಿಸಿಕೊಂಡರು. ಅಂದಿನ ತಂಡದಲ್ಲಿದ್ದ ಆಕಾಶ್ ಚೋಪ್ರಾ, ಎರಡು ತಂಡಗಳ ಮಧ್ಯೆ ಸಮಸ್ಯೆಗಳು ಇತ್ತು ಎಂದು ನನಗೆ ಯಾವತ್ತೂ ಅನಿಸಿರಲಿಲ್ಲ. ನನಗಿನ್ನೂ ಚೆನ್ನಾಗಿ ನೆನಪಿದೆ, ಆ ಸರಣಿಯ ಸಂದರ್ಭದಲ್ಲಿ ಮುಲ್ತಾನ್‌ನಲ್ಲಿ ಮನೆಯನ್ನು ಹೊಂದಿದ್ದ ಇನ್ಜಿ ಭಾಯ್(ಇನ್ಜಮಾಮ್ ಉಲ್ ಹಕ್) ಅವರ ಗಾರ್ಮೆಂಟ್ ಪ್ಯಾಕ್ಟರಿಗೆ ಕರೆದುಕೊಂಡು ಹೋಗಿದ್ದರು ಎಂದಿದ್ದಾರೆ.

ಟೀ ಶರ್ಟ್‌ ನೀಡಿದ್ದರು ಇನ್ಜಿ

ಟೀ ಶರ್ಟ್‌ ನೀಡಿದ್ದರು ಇನ್ಜಿ

ಆ ಸಂದರ್ಭದಲ್ಲಿ ಭಾರತೀಯ ಕ್ರಿಕೆಟಿಗರಿಗೆ ಇನ್ಜಮಾಮ್ ಉಲ್ ಹಕ್ ತಮ್ಮ ಒಡೆತನದ ಪ್ಯಾಕ್ಟರಿಯಿಂದ ಟಿ ಶರ್ಟ್‌ಗಳನ್ನು ನೀಡಿದ್ದರು. ಆ ಟಿ ಶರ್ಟ್‌ಗಳನ್ನು ನಾವು ಬಳಿಕ ಧರಿಸಿಕೊಂಡಿದ್ದೆವು ಎಂದು ಹೇಳಿದ್ದಾರೆ. ನೀವು ಆಟಗಾರರ ಬಗ್ಗೆ ಮಾತನಾಡುತ್ತೀರಾದರೆ ಎಲ್ಲವನ್ನೂ ಹೊರಗಿಡಬೇಕಾಗುತ್ತದೆ. ಆಟಗಾರರ ಮಧ್ಯೆ ಹಿಂದೆಯೂ ಯಾವುದೇ ಸಮಸ್ಯೆಗಳಿರಲಿಲ್ಲ, ಮುಂದೆಯೂ ಇರಲಾರದು. ನಾವು ಕ್ರಿಕೆಟ್ ಆಟಗಾರರು, ಕ್ರಿಕೆಟ್ ಆಡುತ್ತೇವೆ. ಇಲ್ಲಿ ಜಗಳ ಮಾಡಿಕೊಳ್ಳಲು ಕಾರಣವೇ ಇಲ್ಲ ಎಂದು ಆಕಾಶ್ ಚೋಪ್ರಾ ಹೇಳಿದ್ದಾರೆ.

Story first published: Thursday, July 2, 2020, 9:43 [IST]
Other articles published on Jul 2, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X