ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಈ ಹಿಂದಿನಂತೆ ಈ ತಂಡ ಈಗ ಬಲಿಷ್ಠ ತಂಡವಲ್ಲ: ಆಕಾಶ್ ಚೋಪ್ರ ಹೇಳಿದ ಆ ತಂಡ ಯಾವುದು?

Aakash Chopra on New Zealand team said they are no longer the powerful team

ಟೀಮ್ ಇಂಡಿಯಾ ಈಗ ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಮುಖಾಮುಖಿಯಾಗಲು ಸಜ್ಜಾಗಿದೆ. ಮೂರು ಪಂದ್ಯಗಳ ಏಕದಿನ ಸರಣಿಯನ್ನು ವಶಕ್ಕೆ ಪಡೆದುಕೊಂಡ ಬಳಿಕ ಇದೀಗ ಚುಟುಕು ಮಾದರಿಯಲ್ಲಿ ಭಾರತ ತಂಡ ಹಾಗೂ ನ್ಯೂಜಿಲೆಂಡ್ ತಂಡಗಳು ಪೈಪೋಟಿ ನಡೆಸಲಿದೆ. ಟೀಮ್ ಇಂಡಿಯಾವನ್ನು ಈ ಸರಣಿಯಲ್ಲಿ ಹಾರ್ದಿಕ್ ಪಾಂಡ್ಯ ಮುನ್ನಡೆಸಿದರೆ ಮಿಚೆಲ್ ಸ್ಯಾಂಟ್ನರ್ ನ್ಯೂಜಿಲೆಂಡ್ ತಂಡದ ನಾಯಕತ್ವ ವಹಿಸಿಕೊಳ್ಳಲಿದ್ದಾರೆ. ಈ ಸಂದರ್ಭದಲ್ಲಿ ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ ಹಾಗೂ ಹಾಲಿ ಕಾಮೆಂಟೇಟರ್ ಆಕಾಶ್ ಚೋಪ್ರ ಕುತೂಹಲಕಾರಿ ಹೇಳಿಕೆಯೊಂದನ್ನು ನೀಡಿದ್ದಾರೆ.

ಭಾರತದ ಎದುರಾಳಿಯಾಗಿ ಸೆಣೆಸಾಟ ನಡೆಸಲಿರುವ ನ್ಯೂಜಿಲೆಂಡ್ ಈಗ ಈ ಹಿಂದಿನಂತೆ ಬಲಿಷ್ಠ ತಂಡವಾಗಿ ಉಳಿದಿಲ್ಲ ಎಂದಿದ್ದಾರೆ ಆಕಾಶ್ ಚೋಪ್ರ. ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿರುವ ಆಕಾಶ್ ಚೋಪ್ರ ನ್ಯೂಜಿಲೆಂಡ್ ಸ್ಕ್ವಾಡ್‌ನಲ್ಲಿರುವ ಆಟಗಾರರ ಪೈಕಿ ಅರ್ಧದಷ್ಟು ಆಟಗಾರರ ಪರಿಚಯ ತಮಗಿಲ್ಲ ಎಂದಿದ್ದಾರೆ ಆಕಾಶ್ ಚೋಪ್ರ.

Axar Patel Marriage: ಚಿತ್ರಗಳು: ಮೇಹಾ ಪಟೇಲ್ ಕೈಹಿಡಿದ ಭಾರತೀಯ ಕ್ರಿಕೆಟಿಗ ಅಕ್ಷರ್ ಪಟೇಲ್Axar Patel Marriage: ಚಿತ್ರಗಳು: ಮೇಹಾ ಪಟೇಲ್ ಕೈಹಿಡಿದ ಭಾರತೀಯ ಕ್ರಿಕೆಟಿಗ ಅಕ್ಷರ್ ಪಟೇಲ್

ಅರ್ಧದಷ್ಟು ಆಟಗಾರರ ಪರಿಚಯವಿಲ್ಲ

ಅರ್ಧದಷ್ಟು ಆಟಗಾರರ ಪರಿಚಯವಿಲ್ಲ

"ಭಾರತದ ಎದುರಾಳಿ ತಂಡ ಕುತೂಹಲಕಾರಿಯಾಗಿದೆ. ಮೊದಲನೆಯದಾಗಿ ಮಿಚೆಲ್ ಸ್ಯಾಂಟ್ನರ್ ಅವರ ನಾಯಕ. ನಿಮಗೆ ಮತ್ತು ನನಗೆ ಬಹುಶಃ ಈ ತಂಡದಲ್ಲಿರುವ ಅರ್ಧದಷ್ಟು ಆಟಗಾರರ ಪರಿಚಯವಿಲ್ಲ. ಈ ಹಿಂದೆ ಅವರು ಕರೆಸಿಕೊಳ್ಳುತ್ತಿದ್ದಂತೆ ಈಗ ಅವರು ಬಲಿಷ್ಠ ತಂಡವಲ್ಲ" ಎಂದಿದ್ದಾರೆ ಆಕಾಶ್ ಚೋಪ್ರ.

ನ್ಯೂಜಿಲೆಂಡ್ ದುರ್ಬಲವಾಗಿದೆ ಎಂದ ಆಕಾಶ್ ಚೋಪ್ರ

ನ್ಯೂಜಿಲೆಂಡ್ ದುರ್ಬಲವಾಗಿದೆ ಎಂದ ಆಕಾಶ್ ಚೋಪ್ರ

ಈ ಸಂದರ್ಭದಲ್ಲಿ ಆಕಾಶ್ ಚೋಪ್ರ ನ್ಯೂಜಿಲೆಂಡ್ ತಂಡ ಹೆಚ್ಚು ದುರ್ಬಲವಾಗಿದೆ ಎಂದಿದ್ದಾರೆ. "ನ್ಯೂಜಿಲೆಂಡ್ ತಂಡ ಈಗ ದುರ್ಬಲ ತಂಡವಾಗಿ ಕಾಣಿಸುತ್ತಿದೆ. ಈ ತಂಡವನ್ನು ಮೋಲ್ನೋಡದಲ್ಲಿ ನೋಡಿದಾಗ ತಂಡಕ್ಕೆ ಶಕ್ತಿ ಇಲ್ಲ ಎಂದು ಭಾಸವಾಗುತ್ತದೆ. ಡೆವೋನ್ ಕಾನ್ವೆ ಕಳೆದ ಪಂದ್ಯದಲ್ಲಿ ಶತಕವನ್ನು ಸಿಡಿಸಿದ್ದರು. ಈ ಪಂದ್ಯದಲ್ಲಿಯೂ ಅವರು ಶತಕವನ್ನು ಸಿಡಿಸುವ ಸಾಧ್ಯತೆಯಿದೆ. ಗ್ಲೆನ್ ಫಿಲಿಪ್ಸ್ ಅವರಿಂದ ಕೂಡ ಹೆಚ್ಚು ರನ್ ಬರುವ ಸಾಧ್ಯತೆಯಿದೆ. ಆದರೆ ಅವರು ಎಡಗೈ ಸ್ಪಿನ್ನರ್‌ಗಳಿಗೆ ವಿಕೆಟ್ ಒಪ್ಪಿಸುತ್ತಾರೆ. ಡೆವೋನ್ ಕಾನ್ವೆ ಹಾಗೂ ಫಿಲಿಪ್ಸ್ ಬ್ಯಾಟ್‌ನಿಂದ ಹೆಚ್ಚಿನ ರನ್ ಹರಿದುಬರಬಹುದು" ಎಂದಿದ್ದಾರೆ ಆಕಾಶ್ ಚೋಪ್ರ.

ಕಿವೀಸ್ ಪಡೆಯ ಬೌಲಿಂಗ್ ಬಗ್ಗೆ ಚೋಪ್ರ ಮಾತು

ಕಿವೀಸ್ ಪಡೆಯ ಬೌಲಿಂಗ್ ಬಗ್ಗೆ ಚೋಪ್ರ ಮಾತು

ಇನ್ನು ನ್ಯೂಜಿಲೆಂಡ್ ತಂಡದ ಬೌಲಿಂಗ್ ವಿಭಾಗದ ಬಗ್ಗೆಯೂ ಆಕಾಶ್ ಚೋಪ್ರ ಮಾತನಾಡಿದ್ದಾರೆ. " ಅವರು ಮೊದಲು ಬೌಲಿಂಗ್ ಮಾಡಿದರೆ ಮಿಚೆಲ್ ಸ್ಯಾಂಟ್ನರ್ ಮತ್ತು ಇಶ್ ಸೋಧಿ ಅವರ ಪಾತ್ರ ಮಹತ್ವದ್ದಾಗಿರುತ್ತದೆ. ಇನ್ನು ಲ್ಯೂಕಿ ಫರ್ಗುಸನ್ ಆಡುತ್ತಾರೆ ಆದರೆ ಲಾಕಿ ಫರ್ಗುಸನ್ ಅವರಿಗೆ ಯಾರು ಜೊತೆ ನೀಡಲಿದ್ದಾರೆ ಎಂಬುದು ಪ್ರಶ್ನೆಯಾಗಿದೆ. ಏಕೆಂದರೆ ಅವರಲ್ಲಿ ಸಾಕಷ್ಟು ಬೌಲರ್‌ಗಳು ಇದ್ದು ಕಳೆದ ಪಂದ್ಯದಲ್ಲಿ ಮೂರು ವಿಕೆಟ್‌ಗಳನ್ನು ಪಡೆದ ಜಾಕೋಬ್ ಡಫಿ, ಹೆನ್ರಿ ಶಿಪ್ಲಿ ಮತ್ತು ಬ್ಲೇರ್ ಟಿಕ್ನರ್ ಅವರನ್ನು ಹೊಂದಿದ್ದಾರೆ. ಇವರಲ್ಲಿ ಐಆರಾದರೂ ಕಣಕ್ಕಿಳಿಯಬಹುದು" ಎಂದಿದ್ದಾರೆ ಆಕಾಶ್ ಚೋಪ್ರ.

ಇತ್ತಂಡಗಳ ಸ್ಕ್ವಾಡ್ ಹೀಗಿದೆ

ಇತ್ತಂಡಗಳ ಸ್ಕ್ವಾಡ್ ಹೀಗಿದೆ

ಭಾರತ ತಂಡ: ಇಶಾನ್ ಕಿಶನ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ (ನಾಯಕ), ಶುಬ್ಮನ್ ಗಿಲ್, ರಾಹುಲ್ ತ್ರಿಪಾಠಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ವಾಷಿಂಗ್ಟನ್ ಸುಂದರ್, ಶಿವಂ ಮಾವಿ, ಅರ್ಷ್‌ದೀಪ್ ಸಿಂಗ್, ಉಮ್ರಾನ್ ಮಲಿಕ್, ಯುಜ್ವೇಂದ್ರ ಚಾಹಲ್, ಕುಲದೀಪ್ ಯಾದವ್, ಜಿತೇಶ್ ಶರ್ಮಾ, ಮುಖೇಶ್ ಕುಮಾರ್, ಪೃಥ್ವಿ ಶಾ

ನ್ಯೂಜಿಲೆಂಡ್ ತಂಡ: ಡೆವೊನ್ ಕಾನ್ವೇ (ವಿಕೆಟ್ ಕೀಪರ್), ಮಿಚೆಲ್ ಸ್ಯಾಂಟ್ನರ್ (ನಾಯಕ), ಫಿನ್ ಅಲೆನ್, ಮಾರ್ಕ್ ಚಾಪ್ಮನ್, ಗ್ಲೆನ್ ಫಿಲಿಪ್ಸ್, ಡ್ಯಾರಿಲ್ ಮಿಚೆಲ್, ಮೈಕೆಲ್ ಬ್ರೇಸ್ವೆಲ್, ಲಾಕಿ ಫರ್ಗುಸನ್, ಇಶ್ ಸೋಧಿ, ಬ್ಲೇರ್ ಟಿಕ್ನರ್, ಜಾಕೋಬ್ ಡಫ್ಫಿ, ಮೈಕೆಲ್ ರಿಪ್ಪನ್, ಡೇನ್ ಕ್ಲೀವರ್, ಹೆನ್ರಿ ಶಿಪ್ಲಿ, ಬೆನ್ ಲಿಸ್ಟರ್

Story first published: Friday, January 27, 2023, 13:36 [IST]
Other articles published on Jan 27, 2023
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X