ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮುಂಬೈ ಇಂಡಿಯನ್ಸ್ ರೀಟೈನ್ ಮಾಡಬೇಕಾದ 3 ಆಟಗಾರರನ್ನು ಹೆಸರಿಸಿದ ಚೋಪ್ರ

Aakash Chopra picked 3 Mumbai Indians cricketers who should retain ahead of mega auction

ಈ ಬಾರಿಯ ಐಪಿಎಲ್ ಆವೃತ್ತಿ ಅಂತಿಮ ಘಟ್ಟವನ್ನು ಪ್ರವೇಶಿಸಿದೆ. ಅಗ್ರ ನಾಲ್ಕು ತಂಡಗಳು ಪ್ಲೇಆಫ್‌ಗೆ ಪ್ರವೇಶ ಪಡೆದಿದ್ದು ಫೈನಲ್ ಪ್ರವೇಶಕ್ಕೆ ಈ ನಾಲ್ಕು ತಂಡಗಳ ಮಧ್ಯೆ ಸೆಣೆಸಾಟ ನಡೆಯಲಿದೆ. ಮುಂದಿನ ಆವೃತ್ತಿಗೆ ಎಲ್ಲಾ ತಂಡಗಳು ಹೊಸ ರೂಪದಲ್ಲಿ ಕಣಕ್ಕಿಳಿಯಲಿದೆ. ಮೆಗಾ ಆಕ್ಷನ್ ನಡೆಯಲಿರುವ ತಂಡಗಳು ಬಹುತೇಕ ಹೊಸ ಆಟಗಾರರೊಂದಿಗೆ ಕಣಕ್ಕಿಳಿಯಲಿದೆ.

ಮೆಗಾ ಹರಾಜಿನಲ್ಲಿ ಎಷ್ಟು ಆಟಗಾರರನ್ನು ತಂಡಗಳು ರಿಟೈನ್ ಮಾಡಬಹುದು ಎಂಬ ಬಗ್ಗೆ ಈವರೆಗೆ ಅಧಿಕೃತ ಮಾಹಿತಿಗಳು ಬಂದಿಲ್ಲ. ಆದರೆ ಮೂಲಗಳ ಪ್ರಕಾರ ಮೂರಕ್ಕಿಂತ ಹೆಚ್ಚಿನ ಆಟಗಾರರನ್ನು ರಿಟೈನ್ ಮಾಡಿಕೊಳ್ಳುವ ಅವಕಾಶ ಫ್ರಾಂಚೈಸಿಗೆ ಇರಲಾರದು ಎನ್ನಲಾಗಿದೆ. ಅಲ್ಲದೆ ರೈಟ್‌ ಟು ಮ್ಯಾಚ್ ಅವಕಾಶದ ಬಗ್ಗೆಯೂ ಅಧಿಕೃತವಾಗಿ ಮಾಹಿತಿಗಳು ಇಲ್ಲವಾಗಿದೆ. ಈ ಬಗ್ಗೆ ಮುಂದಿನ ಹರಾಜಿಗೂ ಮುನ್ನ ಬಿಸಿಸಿಐ ಮಾಹಿತಿಯನ್ನು ನೀಡುವ ನಿರೀಕ್ಷೆಯಿದೆ.

ನಾವು ನಮ್ಮ ಅತ್ಯುತ್ತಮ ಪ್ರದರ್ಶನ ನೀಡಿಲ್ಲ: ಆರ್‌ಸಿಬಿ ಪ್ರದರ್ಶನದ ಬಗ್ಗೆ ಎಬಿಡಿನಾವು ನಮ್ಮ ಅತ್ಯುತ್ತಮ ಪ್ರದರ್ಶನ ನೀಡಿಲ್ಲ: ಆರ್‌ಸಿಬಿ ಪ್ರದರ್ಶನದ ಬಗ್ಗೆ ಎಬಿಡಿ

ಆದರೆ ಈ ಸಂದರ್ಭದಲ್ಲಿ ಆಕಾಶ್ ಚೋಪ್ರ ಮುಂಬೈ ಇಂಡಿಯನ್ಸ್ ತಂಡ ಮೂವರು ಆಟಗಾರರನ್ನು ರಿಟೈನ್ ಮಾಡಿಕೊಳ್ಳಲು ಹೆಸರಿಸಿದ್ದಾರೆ. ಹಾಗಾದರೆ ಆಕಾಶ್ ಚೋಪ್ರ ಪ್ರಕಾರ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಯಾವ ಮೂವರು ಆಟಗಾರರನ್ನು ರೀಟೈನ್ ಮಾಡಿಕೊಳ್ಳಬೇಕು? ಮುಂದೆ ಓದಿ..

ಚೋಪ್ರ ಹೆಸರಿಸಿದ ಮೂವರು ಆಟಗಾರರು: ಆಕಾಶ್ ಚೋಪ್ರ ಹೆಸರಿಸಿದ ಮೂವರು ಆಟಗಾರರು ಬೇರೆ ಯಾರೂ ಅಲ್ಲ, ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ, ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಹಾಗೂ ವೇಗದ ಬೌಲರ್ ಜಸ್ಪ್ರೀತ್ ಬೂಮ್ರಾ. ಈ ಮೂವರನ್ನು ಮುಂಬೈ ಇಂಡಿಯನ್ಸ್ ತಂಡ ಹರಾಜಿಗೂ ಮುನ್ನ ರಿಟೈನ್ ಮಾಡಿಕೊಳ್ಳಬೇಕಿದೆ ಎಂದು ಸಲಹೆ ನೀಡಿದ್ದಾರೆ.

ಎಂಐ ಪ್ಲೇ ಆಫ್ಸ್‌ ಅವಕಾಶ ಮುಗಿದ ಬಳಿಕ ಭಾವನಾತ್ಮಕ ಪೋಸ್ಟ್ ಹಾಕಿದ ರೋಹಿತ್ಎಂಐ ಪ್ಲೇ ಆಫ್ಸ್‌ ಅವಕಾಶ ಮುಗಿದ ಬಳಿಕ ಭಾವನಾತ್ಮಕ ಪೋಸ್ಟ್ ಹಾಕಿದ ರೋಹಿತ್

ಈ ವಿಚಾರವಾಗಿ ಆಕಾಶ್ ಚೋಪ್ರ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ "ಮೂರು ಆಟಗಾರರಿಗಿಂತ ಹೆಚ್ಚಿನ ಆಟಗಾರರನ್ನು ರಿಟೈನ್ ಮಾಡುವ ಅವಕಾಶ ದೊರೆಯಬಹುದು ಎಂದು ನನಗೆ ಅನಿಸುತ್ತಿಲ್ಲ. ನನ್ನ ಪ್ರಕಾರ ಮುಂಬೈ ತಂಡ ನಾಯಕ ರೋಹಿತ್ ಶರ್ಮಾ, ಜಸ್ಪ್ರೀತ್ ಬೂಮ್ರಾ ಹಾಗೂ ಹಾರ್ದಿಕ್ ಪಾಂಡ್ಯ ಅವರನ್ನು ಆಯ್ಕೆ ಮಾಡಿಕೊಳ್ಳಬೇಕಿದೆ ಎಂದಿದ್ದಾರೆ.

ಈ ಹಿಂದಿನ ಎರಡು ಆವೃತ್ತಿಗಳಲ್ಲಿ ಚಾಂಪಿಯನ್ ಪಟ್ಟಕ್ಕೇರಿದ್ದ ಮುಂಬೈ ಇಂಡಿಯನ್ಸ್ ತಂಡ ಈ ಬಾರಿಯ ಆವೃತ್ತಿಯಲ್ಲಿ ಅತ್ಯಂತ ಹೀನಾಯ ಪ್ರದರ್ಶನವನ್ನು ನೀಡಿತ್ತು. ಈ ಮೂಲಕ ಪ್ಲೇಆಫ್ ಹಂತಕ್ಕೂ ಪ್ರವೇಶ ಪಡೆಯಲು ವಿಫಲವಾದ ಮುಂಬೈ ಇಂಡಿಯನ್ಸ್ ಲೀಗ್ ಹಂತದಿಂದಲೇ ಹೊರಬಿದ್ದಿದೆ. ರೋಹಿತ್ ಶರ್ಮಾ ನೇತೃತ್ವದ ತಂಡ ಈ ಬಾರಿ ಆಡಿದ 14 ಪಂದ್ಯಗಳ ಪೈಕಿ 7 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದು 7 ಪಂದ್ಯಗಳಲ್ಲಿ ಸೋಲು ಕಂಡಿತು. ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ 42 ರನ್‌ಗಳ ಅಂತರದಿಂದ ಗೆಲುವು ಸಾಧಿಸಿದರೂ ಅಗ್ರ ನಾಲ್ಕರಲ್ಲಿ ಸ್ಥಾನ ಪಡೆಯುವಲ್ಲಿ ವಿಫಲವಾಗಿತ್ತು.

ಎಸ್‌ಆರ್‌ಎಚ್ ವೇಗಿ ಉಮ್ರಾನ್ ಟಿ20 ವಿಶ್ವಕಪ್‌ಗೆ ನೆಟ್ ಬೌಲರ್ ಆಗಿ ಆಯ್ಕೆ?!ಎಸ್‌ಆರ್‌ಎಚ್ ವೇಗಿ ಉಮ್ರಾನ್ ಟಿ20 ವಿಶ್ವಕಪ್‌ಗೆ ನೆಟ್ ಬೌಲರ್ ಆಗಿ ಆಯ್ಕೆ?!

ವಿಫಲವಾದ ಪ್ರಮುಖ ಆಟಗಾರರು: ಈ ಬಾರಿಯ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ಬಹುತೇಕ ಆಟಗಾರರು ವಿಫಲವಾಗಿದ್ದಾರೆ. ಸ್ವತಃ ನಾಯಕ ರೋಹಿತ್ ಶರ್ಮಾ ಕೂಡ ಈ ಬಾರಿಯ ಆವೃತ್ತಿಯಲ್ಲಿಯೂ ಉತ್ತಮ ಪ್ರದರ್ಶನ ನೀಡಲಿಲ್ಲ. ಕ್ವಿಂಟನ್ ಡಿಕಾಕ್, ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ, ಕೃನಾಲ್ ಪಾಂಡ್ಯ ಎಲ್ಲರೈ ಒಟ್ಟಾರೆ ಟೂರ್ನಿಯ ಪ್ರದರ್ಶನ ಗಮನಿಸಿದರೆ ಕಳಪೆಯಾಗಿದೆ. ಹೀಗಾಗಿ ಮುಂಬೈ ಇಂಡಿಯನ್ಸ್ ಈ ಬಾರಿ ಪ್ಲೇಆಫ್ ಹಂತಕ್ಕೂ ಪ್ರವೇಶ ಪಡೆಯುವಲ್ಲಿ ವಿಫಲವಾಗಿದೆ.

ಭಾವನಾತ್ಮಕ ಸಂದೇಶ ಬರೆದು ಐಪಿಎಲ್‌ಗೆ ಗುಡ್‌ಬೈ ಹೇಳಿದ ಡೇವಿಡ್ ವಾರ್ನರ್ಭಾವನಾತ್ಮಕ ಸಂದೇಶ ಬರೆದು ಐಪಿಎಲ್‌ಗೆ ಗುಡ್‌ಬೈ ಹೇಳಿದ ಡೇವಿಡ್ ವಾರ್ನರ್

ಈ ಆವೃತ್ತಿಯ ಮುಂಬೈ ಇಂಡಿಯನ್ಸ್‌ನ ಸಂಪೂರ್ಣ ಸ್ಕ್ವಾಡ್ ಹೀಗಿತ್ತು: ರೋಹಿತ್ ಶರ್ಮಾ (ನಾಯಕ), ಇಶಾನ್ ಕಿಶನ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ಕಿರಾನ್ ಪೊಲಾರ್ಡ್, ಕೃನಾಲ್ ಪಾಂಡ್ಯ, ಜೇಮ್ಸ್ ನೀಶಮ್, ನಾಥನ್ ಕೌಲ್ಟರ್-ನೈಲ್, ಪಿಯೂಷ್ ಚಾವ್ಲಾ, ಜಸ್ಪ್ರೀತ್ ಬುಮ್ರಾ, ಟ್ರೆಂಟ್ ಬೌಲ್ಟ್, ಕ್ವಿಂಟನ್ ಡಿ ಕಾಕ್, ಆಡಮ್ ಮಿಲ್ನೆ, ರಾಹುಲ್ ಚಹರ್, ಆದಿತ್ಯ ತಾರೆ, ಧವಳ ಕುಲಕರ್ಣಿ, ಕ್ರಿಸ್ ಲಿನ್, ರೂಶ್ ಕಲರಿಯಾ, ಅನ್ಮೋಲ್ ಪ್ರೀತ್ ಸಿಂಗ್, ಅನುಕುಲ್ ರಾಯ್, ಮಾರ್ಕೊ ಜಾನ್ಸನ್, ಯುದ್ಧವೀರ್ ಸಿಂಗ್, ಸೌರಭ್ ತಿವಾರಿ, ಜಯಂತ್ ಯಾದವ್

Story first published: Sunday, October 10, 2021, 16:38 [IST]
Other articles published on Oct 10, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X