ಪ್ರಸಕ್ತ ಕಾಲದ ಶ್ರೇಷ್ಠ ಆಲ್‌ರೌಂಡರ್ ಹೆಸರಿಸಿದ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ

ಭಾರತದ ಮಾಜಿ ಕ್ರಿಕೆಟಿಗ ಹಾಲಿ ಕಾಮೆಂಟೇಟರ್ ಮತ್ತು ವಿಶ್ಲೇಶಕರಾಗಿರುವ ಆಕಾಶ್ ಚೋಪ್ರಾ ಪ್ರಸಕ್ತ ಕಾಲದ ಶ್ರೇಷ್ಠ ಅಲ್‌ರೌಂಡರ್ ಯಾರು ಎಂಬುದನ್ನು ಹೇಳಿದ್ದಾರೆ. ಆದರೆ ಆಕಾಶ್ ಚೋಪ್ರಾ ಹೇಳಿದ ಆಲ್‌ರೌಂಡರ್ ಟೀಮ್ ಇಂಡಿಯಾ ಆಟಗಾರ ಅಲ್ಲ.

ಹೌದು ಆಕಾಶ್ ಚೋಪ್ರ ಪ್ರಸಕ್ತ ಕಾಲದ ಶ್ರೇಷ್ಠ ಆಲ್‌ರೌಂಡರ್ ಎಂದು ಇಂಗ್ಲೆಂಡ್ ಕ್ರಿಕೆಟ್ ತಂಡದ ಆಲ್‌ರೌಂಡರ್ ಬೆನ್ ಸ್ಟೋಕ್ಸ್ ಹೆಸರನ್ನು ಹೇಳಿದ್ದಾರೆ. ಓಲ್ಡ್ ಟ್ರಾಫರ್ಡ್‌ನಲ್ಲಿ ನಡೆಯುತ್ತಿರುವ ವೆಸ್ಟ್‌ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ಬೆನ್ ಸ್ಟೋಕ್ಸ್ ಶತಕವನ್ನು ತಮ್ಮ 10ನೇ ಬಾರಿಸಿದರು. ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿದ ಚೋಪ್ರಾ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

3TC Solidarity Cup: ಎಬಿಡಿ ಅಬ್ಬರದಾಟ, ಚಿನ್ನದ ಪದಕ ಹೊತ್ತೊಯ್ದ ಈಗಲ್ಸ್!

ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಸ್ಟೋಕ್ಸ್ 356 ಎಸೆತಗಳಲ್ಲಿ 176 ರನ್ ಗಳಿಸುವ ಮೂಲಕ ತಮ್ಮ ಕೆರಿಯರ್‌ನ ಸುದೀರ್ಘ ಇನ್ನಿಂಗ್ಸ್ ಆಡಿದರು. ಜೊತೆಗೆ ಡಾಮಿನಿಕ್ ಸಿಬ್ಲಿ ಜೊತೆಗೆ ಸೇರಿಕೊಂಡು 260 ರನ್‌ಗಳ ಜೊತೆಯಾಟವನ್ನು ನೀಡುವ ಮೂಲಕ ಮೊದಲ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್ 469-9 ಗಳಿಸಲು ಕಾರಣರಾದರು.

ಬೆನ್ ಸ್ಟೋಕ್ಸ್ ಅವರ ಬ್ಯಾಟಿಂಗ್ ಮತ್ತು ಬೌಲಿಂಗ್ ಸರಾಸರಿಯನ್ನು ಉದಾಹರಿಸಿ ಆಕಾಶ್ ಚೋಪ್ರಾ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ನಾನು ಯಾವುದೇ ಅನುಮಾನವಿಲ್ಲದೆ ಬೆನ್ ಸ್ಟೋಕ್ಸ್ ಅವರನ್ನು ಮೂರೂ ಮಾದರಿಯಲ್ಲಿ ಅತ್ಯುತ್ತಮ ಆಲ್‌ರೌಂಡರ್ ಎಂದು ಕರೆಯುತ್ತೇನೆ. ಕಳೆದ ಎರಡು ವರ್ಷಗಳಿಂದ ಅವರು ಟೆಸ್ಟ್‌ನಲ್ಲಿ 43 ಹಾಗೂ ಏಕದಿನದಲ್ಲಿ 59ರಷ್ಟು ಸರಾಸರಿಯನ್ನು ಹೊಂದಿದ್ದಾರೆ ಎಂದು ಚೋಪ್ರಾ ಹೇಳಿದರು.

ಬೌಲಿಂಗ್ ವಿಚಾರಕ್ಕೆ ಬಂದಾಗ ಅಲ್ಲೂ ಬೆನ್ ಸ್ಟೋಕ್ಸ್ ಅತ್ಯುತ್ತಮ ಸರಾಸರಿಯನ್ನು ಹೊಂದಿದ್ದಾರೆ. ಹೀಗಾಗಿ ಅವರನ್ನು ಪ್ರಸಕ್ತ ಕಾಲದ ಶ್ರೇಷ್ಠ ಆಲ್‌ರೌಂಡರ್ ಎಂದು ಹೇಳಲು ಯಾವುದೇ ಅನಿಮಾನವಿಲ್ಲ ಎಂದು ಆಕಾಶ್ ಚೋಪ್ರಾ ಹೇಳಿಕೊಂಡಿದ್ದಾರೆ.

For Quick Alerts
ALLOW NOTIFICATIONS
For Daily Alerts

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Sunday, July 19, 2020, 8:47 [IST]
Other articles published on Jul 19, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X