ಐಸಿಸಿ ಟಿ20 ವಿಶ್ವಕಪ್: ಈ 4 ತಂಡಗಳು ಸೆಮಿಫೈನಲ್‌ಗೆ ಪ್ರವೇಶಿಸಲಿದೆ ಎಂದ ಆಕಾಶ್ ಚೋಪ್ರ

ಐಪಿಎಲ್ 2021 ಮುಕ್ತಾಯವಾಗುತ್ತಿದ್ದಂತೆಯೇ ಯುಎಇ ಹಾಗೂ ಒಮಾನ್‌ನಲ್ಲಿ ಟಿ20 ವಿಶ್ವಕಪ್ ನಡೆಯಲಿದೆ. ಈ ಪ್ರತಿಷ್ಠಿತ ಟೂರ್ನಿಯಲ್ಲಿ ಭಾಗಿಯಾಗುವ ಬಹುತೇಕ ಎಲ್ಲಾ ರಾಷ್ಟ್ರಗಳ ತಂಡವನ್ನು ಈಗಾಗಲೇ ಘೋಷಣೆ ಮಾಡಲಾಗಿದೆ. ಎಲ್ಲಾ ತಂಡಗಳು ಕೂಡ ಅತ್ಯುತ್ತಮ ತಂಡದೊಂದಿಗೆ ಕಣಕ್ಕಿಳಿಯಲಿದ್ದು ಟಿ20 ವಿಶ್ವಕಪ್ ಟ್ರೋಫಿಯನ್ನು ಎತ್ತಿಹಿಡಿಯುವ ಉತ್ಸಾಹದಲ್ಲಿದೆ. ಅಕ್ಟೋಬರ್ 17ರಿಂದ ಆರಂಭವಾಗಲಿರುವ ಈ ಟಿ20 ವಿಶ್ವಕಪ್ ನವೆಂಬರ್ 14ರಂದು ಅಂತ್ಯವಾಗಲಿದೆ.

ಐದು ವರ್ಷಗಳ ನಂತರ ನಡೆಯುತ್ತಿರುವ ಈ ಟಿ20 ವಿಶ್ವಕಪ್‌ಗೆ ಮುತ್ತಿಕ್ಕಲು ಎಲ್ಲಾ ತಂಡಗಳು ಕೂಡ ಕಾತರವಾಗಿದೆ. ಹೀಗಾಗಿ ಪ್ರತಿಯೊಂದು ಕದನಗಳು ಕೂಡ ಸಾಕಷ್ಟು ಮಹತ್ವದ್ದಾಗಿರಲಿದ್ದು ಭಾರೀ ಕುತೂಹಲ ಮೂಡಿಸಿದೆ. ಈ ಟೂರ್ನಿಯಲ್ಲಿ ಯಾವ ತಂಡ ಗೆಲುವು ಸಾಧಿಸಬಹುದು ಎಂಬುದು ಕ್ರಿಕೆಟ್ ಅಭಿಮಾನಿಗಳಿಗೆ ಕಾಡುತ್ತಿರುವ ಕುತೂಹಲಕಾರಿ ಪ್ರಶ್ನೆಯಾಗಿದೆ.

RCB blue jersey: ಕೆಕೆಆರ್ ವಿರುದ್ಧದ ಪಂದ್ಯದ ವೇಳೆ ನೀಲಿ ಜೆರ್ಸಿ ಧರಿಸಲಿದೆ ಆರ್‌ಸಿಬಿRCB blue jersey: ಕೆಕೆಆರ್ ವಿರುದ್ಧದ ಪಂದ್ಯದ ವೇಳೆ ನೀಲಿ ಜೆರ್ಸಿ ಧರಿಸಲಿದೆ ಆರ್‌ಸಿಬಿ

ಇಂಥಾ ಸಂದರ್ಭದಲ್ಲಿ ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ ಹಾಗೂ ಹಾಲಿ ಕಾಮೆಂಟೇಟರ್, ಕ್ರಿಕೆಟ್ ವಿಶ್ಲೇಷಕ ಆಕಾಶ್ ಚೋಪ್ರ ಈ ಬಾರಿಯ ಟಿ20 ವಿಶ್ವಕಪ್‌ ವಿಚಾರವಾಗಿ ಕುತೂಹಲಕಾರಿ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

ಸೆಮಿಫೈನಲ್‌ಗೇರುವ ತಂಡಗಳನ್ನು ಹೆಸರಿಸಿದ ಚೋಪ್ರ

ಸೆಮಿಫೈನಲ್‌ಗೇರುವ ತಂಡಗಳನ್ನು ಹೆಸರಿಸಿದ ಚೋಪ್ರ

ಯೂಟ್ಯೂಬ್‌ನಲ್ಲಿ ಸಕ್ರಿಯವಾಗಿರುವ ಆಕಾಶ್ ಚೋಪ್ರ ಅಭಿಮಾನಿಗಳೊಂದಿಗೆ ಪ್ರಶ್ನೋತ್ತರ ಸಂವಾದವನ್ನು ಇಟ್ಟುಕೊಂಡಿದ್ದರು. ಈ ಸಂದರ್ಭದಲ್ಲಿ ಕ್ರಿಕೆಟ್ ವಿಚಾರವಾಗಿ ಸಾಕಷ್ಟು ಪ್ರಶ್ನೆಗಳು ಆಕಾಶ್ ಚೋಪ್ರಾಗೆ ಎದುರಾಯಿತು. ಇದೇ ಸಂದರ್ಭದಲ್ಲಿ ಕ್ರಿಕೆಟ್ ಅಭಿಮಾನಿಯೋರ್ವರು ಈ ಬಾರಿಯ ಟು20 ವಿಶ್ವಕಪ್‌ನಲ್ಲಿ ಸೆಮಿಫೈನಲ್‌ ಹಂತಕ್ಕೆ ತಲುಪುವ ಅವಕಾಶ ಹೊಂದಿರುವ ನಾಲ್ಕು ತಂಡಗಳು ಯಾವುದು ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಚೋಪ್ರ ನಾಲ್ಕು ತಂಡಗಳನ್ನು ಹೆಸರಿಸಿದ್ದಾರೆ.

ಚೋಪ್ರ ಹೇಳಿದ ಆ ತಂಡಗಳು ಯಾವುದು?

ಚೋಪ್ರ ಹೇಳಿದ ಆ ತಂಡಗಳು ಯಾವುದು?

ಅಭಿಮಾನಿಗಳು ಕೇಳಿದ ಪ್ರಶ್ನೆಗೆ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರ ನೇರವಾಗಿ ಉತ್ತರವನ್ನು ನೀಡಿದ್ದಾರೆ. 1) ಭಾರತ 2) ಪಾಕಿಸ್ತಾನ 3) ಇಂಗ್ಲೆಂಡ್ 4) ವೆಸ್ಟ್ ಇಂಡೀಸ್ ಈ ನಾಲ್ಕು ತಂಡಗಳು ಸೆಮಿಫೈನಲ್‌ಗೇರುವ ಅವಕಾಶವನ್ನು ಹೊಂದಿದೆ ಎಂದಿದ್ದಾರೆ ಆಕಾಶ್ ಚೋಪ್ರ. ವೆಸ್ಟ್ ಇಂಡೀಸ್ ಹಾಗೂ ಇಂಗ್ಲೆಂಡ್ ತಂಡಗಳು ಸೂಪರ್ 12 ಹಂತದಲ್ಲಿ ಮೊದಲ ಗುಂಪಿನಲ್ಲಿದ್ದರೆ ಭಾರತ ಹಾಗೂ ಪಾಕಿಸ್ತಾನ ತಂಡಗಳು ಎರಡನೇ ಗುಂಪಿನಲ್ಲಿದೆ. ಎರಡನೇ ಗುಂಪಿನಲ್ಲಿ ಭಾರತ ಹಾಗೂ ಪಾಕಿಸ್ತಾನದ ಜೊತೆಗೆ ನ್ಯೂಜಿಲಂಡ್ ಮತ್ತು ಅಪ್ಘಾನಿಸ್ತಾನ ತಂಡಗಳು ಇದ್ದು ಮತ್ತೆರಡು ತಂಡಗಳು ಅರ್ಹತಾ ಸುತ್ತಿನಿಂದ ಸೇರ್ಪಡೆಯಾಗಲಿದೆ.

ಭಾರತದ ಸ್ಪಿನ್ ಕಾಂಬಿನೇಶನ್

ಭಾರತದ ಸ್ಪಿನ್ ಕಾಂಬಿನೇಶನ್

ಇನ್ನು ಇದೇ ಸಂದರ್ಭದಲ್ಲಿ ಟಿ20 ವಿಶ್ವಕಪ್‌ನಲ್ಲಿ ಭಾರತ ಕ್ರಿಕೆಟ್ ತಂಡದ ಆಡುವ ಬಳಗದಲ್ಲಿ ಸ್ಪಿನ್ ಕಾಂಬಿನೇಶನ್ ಹೇಗಿರಲಿದೆ ಎಂಬ ಪ್ರಶ್ನೆ ಕೂಡ ಆಕಾಶ್ ಚೋಪ್ರಗೆ ಎದುರಾಯಿತು. ಇದಕ್ಕೆ ಚೋಪ್ರ ರವೀಂದ್ರ ಜಡೇಜಾ ಹಾಗೂ ಆರ್ ಅಶ್ವಿನ್ ಅವರನ್ನು ಆಯ್ಕೆ ಮಾಡಿಕೊಂಡಿದ್ದು ಜೊತೆಗೆ ರಾಹುಲ್ ಚಹರ್ ಹಾಗೂ ವರುಣ್ ಚಕ್ರವರ್ತಿ ಮಧ್ಯೆ ಒಬ್ಬರ ಸೂಚಿಸಿದ್ದಾರೆ.

ಅಕ್ಟೋಬರ್ 24ರಂದು ನಡೆಯಲಿದೆ ಭಾರತ-ಪಾಕ್ ಹಣಾಹಣಿ

ಅಕ್ಟೋಬರ್ 24ರಂದು ನಡೆಯಲಿದೆ ಭಾರತ-ಪಾಕ್ ಹಣಾಹಣಿ

ಇನ್ನು ಈ ಬಾರಿಯ ಟಿ20 ವಿಶ್ವಕಪ್‌ನಲ್ಲಿ ಅತ್ಯಂತ ಕುತೂಹಲದಿಂದ ಕಾಯುತ್ತಿರುವ ಭಾರತ ಹಾಗೂ ಪಾಕಿಸ್ತಾನ ತಂಡಗಳು ಅಕ್ಟೋಬರ್ 24ರಂದು ಮುಖಾಮುಖಿಯಾಗಲಿದೆ. ಭಾರತ ಹಾಗೂ ಪಾಕಿಸ್ತಾನ ತಂಡಗಳಿಗೆ ಈ ಪಂದ್ಯ ಟೂರ್ನಿಯ ಪ್ರಥಮ ಪಂದ್ಯವೂ ಆಗಿದೆ. ಈ ಎರಡು ತಂಡಗಳು 2019ರ ಏಕದಿನ ವಿಶ್ವಕಪ್‌ನಲ್ಲಿ ಮುಖಾಮುಖಿಯಾದ ಬಳಿಕ ಇದೇ ಮೊದಲ ಬಾರಿಗೆ ಕಣಕ್ಕಿಳಿಯುತ್ತಿದೆ. ಹೀಗಾಗಿ ಎಲ್ಲಾ ಕ್ರಿಕೆಟ್ ಪ್ರೇಮಿಗಳ ಚಿತ್ತ ಈ ಪಂದ್ಯದತ್ತ ನೆಟ್ಟಿದೆ.

IPL ನಲ್ಲಿ ಪಾಕ್ ಆಟಗಾರರಿಗೆ ಸಿಕ್ಕ ಸಕ್ಸಸ್ ವಿರಾಟ್ ಮತ್ತು ABD ಗೆ‌ ಇನ್ನೂ ಸಿಕ್ಕಿಲ್ಲ | Oneindia Kannada
ಟಿ20 ವಿಶ್ವಕಪ್‌ಗೆ ಆಯ್ಕೆಯಾಗಿರುವ ಭಾರತೀಯ ತಂಡ

ಟಿ20 ವಿಶ್ವಕಪ್‌ಗೆ ಆಯ್ಕೆಯಾಗಿರುವ ಭಾರತೀಯ ತಂಡ

ರೋಹಿತ್ ಶರ್ಮಾ (ಉಪ ನಾಯಕ), ಕೆಎಲ್ ರಾಹುಲ್, ವಿರಾಟ್ ಕೊಹ್ಲಿ (ನಾಯಕ), ಸೂರ್ಯಕುಮಾರ್ ಯಾದವ್, ರಿಷಭ್ ಪಂತ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ರಾಹುಲ್ ಚಹರ್, ರವಿಚಂದ್ರನ್ ಅಶ್ವಿನ್, ಅಕ್ಷರ್ ಪಟೇಲ್, ವರುಣ್ ಚಕ್ರವರ್ತಿ, ಜಸ್ಪ್ರೀತ್ ಬೂಮ್ರಾ , ಭುವನೇಶ್ವರ್ ಕುಮಾರ್, ಮೊಹಮ್ಮದ್ ಶಮಿ ಮೀಸಲು ಆಟಗಾರರು: ಶ್ರೇಯಸ್ ಅಯ್ಯರ್, ಶಾರ್ದೂಲ್ ಠಾಕೂರ್, ದೀಪಕ್ ಚಹರ್

ಐಸಿಸಿ ಟಿ20 ವಿಶ್ವಕಪ್ 2021 ಊಹಿಸು
Match 4 - October 18 2021, 07:30 PM
ಶ್ರೀಲಂಕಾ
Namibia
Predict Now

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Tuesday, September 14, 2021, 15:20 [IST]
Other articles published on Sep 14, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X