ಆಕಾಶ್ ಚೋಪ್ರಾ ಪ್ರಕಾರ ಐಪಿಎಲ್ 2022ರ ಮೆಗಾ ಆಕ್ಷನ್‌ನಲ್ಲಿ ಆರ್‌ಸಿಬಿ ಉಳಿಸಿಕೊಳ್ಳುವ ಆಟಗಾರರಿವರು!

ಬೆಂಗಳೂರು: 2021ರ ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) ಮುಕ್ತಾಯದ ಬಳಿಕ 2022ರ ಐಪಿಎಲ್‌ಗೂ ಮುನ್ನ ಮಹಾ ಹರಾಜು ಪ್ರಕ್ರಿಯೆ ನಡೆಯಲಿದೆ. ಈ ವೇಳೆ ಎಲ್ಲಾ ತಂಡಗಳ ಪ್ರಮುಖ ಆಟಗಾರರು ಅದಲು ಬದಲಾಗುವ ಸಾಧ್ಯತೆಗಳಿವೆ. ಯಾಕೆಂದರೆ ಮೆಗಾ ಆಕ್ಷನ್ ವೇಳೆ ನಾಲ್ವರು ಆಟಗಾರರನ್ನು ಮಾತ್ರ ತಂಡದಲ್ಲಿ ಉಳಿಸಿಕೊಳ್ಳಲು ಫ್ರಾಂಚೈಸಿಗಳಿಗೆ ಅವಕಾಶವಿದೆ. ಉಳಿದ ಆಟಗಾರರನ್ನು ಫ್ರಾಂಚೈಸಿಗಳು ಹರಾಜು ಕಣಕ್ಕಿಳಿಸಲೇಬೇಕು.

ಯೂರೋ 2020: ಕ್ರಿಸ್ಚಿಯಾನೊ ರೊನಾಲ್ಡೋ ಕಾಲಿಗೆ 'ಗೋಲ್ಡನ್ ಬೂಟ್'!ಯೂರೋ 2020: ಕ್ರಿಸ್ಚಿಯಾನೊ ರೊನಾಲ್ಡೋ ಕಾಲಿಗೆ 'ಗೋಲ್ಡನ್ ಬೂಟ್'!

ಮೆಗಾ ಆಕ್ಷನ್ ಪ್ರಕಾರ ಪ್ರತೀ ಫ್ರಾಂಚೈಸಿಗಳು ತಂಡದಲ್ಲಿನ ನಾಲ್ವರು ಆಟಗಾರರನ್ನು ಉಳಿಸಕೊಳ್ಳಬೇಕು. ಅದರಲ್ಲಿ 3 ಜನ ಭಾರತೀಯ ಆಟಗಾರರು, ಒಬ್ಬ ವಿದೇಶಿ ಆಟಗಾರನಿರಬೇಕು. ಹಾಗಾದರೆ ಜನಪ್ರಿಯ ಫ್ರಾಂಚೈಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ)ನಲ್ಲಿ ಯಾವ ಆಟಗಾರರು ಉಳಿದುಕೊಳ್ಳಬಹುದು ಎಂದು ಮಾಜಿ ಕ್ರಿಕೆಟರ್ ಆಕಾಶ್ ಚೋಪ್ರಾ ಊಹಿಸಿದ್ದಾರೆ.

1. ವಿರಾಟ್ ಕೊಹ್ಲಿ

1. ವಿರಾಟ್ ಕೊಹ್ಲಿ

ಟೀಮ್ ಇಂಡಿಯಾ ಮಾಜಿ ಬ್ಯಾಟ್ಸ್‌ಮನ್‌, ಈಗ ಕಾಮೆಂಟೇಟರ್ ಆಗಿರುವ ಆಕಾಶ್ ಚೋಪ್ರಾ ಪ್ರಕಾರ 2022ರ ಮೆಗಾ ಆಕ್ಷನ್ ವೇಳೆ ವಿರಾಟ್ ಕೊಹ್ಲಿಯನ್ನು ಆರ್‌ಸಿಬಿ ಉಳಿಸಿಕೊಳ್ಳಲಿದೆ. ಐಪಿಎಲ್ ಆರಂಭದಿಂದಲೂ ಕೊಹ್ಲಿ ಆರ್‌ಸಿಬಿ ತಂಡದಲ್ಲಿದ್ದಾರೆ. ಈಗ ಆರ್‌ಸಿಬಿ ನಾಯಕರಾಗಿರುವ ಕೊಹ್ಲಿ ಟೀಮ್ ಇಂಡಿಯಾ ಕ್ಯಾಪ್ಟನ್ ಕೂಡ ಹೌದು. ಹೀಗಾಗಿ ಕೊಹ್ಲಿಯನ್ನು ಆರ್‌ಸಿಬಿ ಬಿಟ್ಟುಕೊಡುವ ಸಾಧ್ಯತೆಯಿಲ್ಲ ಎಂದು ಚೋಪ್ರಾ ಊಹಿಸಿದ್ದಾರೆ.

(ಕೊಹ್ಲಿ ಐಪಿಎಲ್ ಸಾಧನೆ: 199 ಪಂದ್ಯಗಳಲ್ಲಿ 6076 ರನ್).

2. ಎಬಿ ಡಿ ವಿಲಿಯರ್ಸ್

2. ಎಬಿ ಡಿ ವಿಲಿಯರ್ಸ್

ಐಪಿಎಲ್ ಮಹಾ ಹರಾಜಿಗೂ ಮುನ್ನ ಕೇವಲ ಒಬ್ಬ ವಿದೇಶಿ ಆಟಗಾರನನ್ನು ತಂಡದಲ್ಲಿ ಉಳಿಸಿಕೊಳ್ಳಲು ಅವಕಾಶವಿರುವುದರಿಂದ ದಕ್ಷಿಣ ಆಫ್ರಿಕಾದ ಮಾಜಿ ಆಟಗಾರ ಎಬಿ ಡಿ ವಿಲಿಯರ್ಸ್ ಅವರನ್ನು ಆರ್‌ಸಿಬಿ ಉಳಿಸಿಕೊಳ್ಳಲಿದೆ. ಸ್ಫೋಟಕ ಬ್ಯಾಟ್ಸ್‌ಮನ್‌ ಎಬಿಡಿ ಅನೇಕ ಸಾರಿ ಆರ್‌ಸಿಬಿ ಪಾಲಿಗೆ ಆಪಾದ್ಭಾಂಧವರಾಗಿ ಕಾಣಿಸಿಕೊಂಡಿದ್ದವರು.

(ಎಬಿಡಿ ಐಪಿಎಲ್ ಸಾಧನೆ: 176 ಪಂದ್ಯಗಳಲ್ಲಿ 5056 ರನ್).

3. ಯುಜುವೇಂದ್ರ ಚಾಹಲ್

3. ಯುಜುವೇಂದ್ರ ಚಾಹಲ್

ಮುಂಬೈ ಇಂಡಿಯನ್ಸ್ ತಂಡದಲ್ಲಿದ್ದ ಲೆಗ್ ಸ್ಪಿನ್ನರ್ ಯುಜಯವೇಂದ್ರ ಚಾಹಲ್ ಈಗ ಆರ್‌ಸಿಬಿ ತಂಡದಲ್ಲಿದ್ದಾರೆ. ಈಚಿನ ದಿನಗಳಲ್ಲಿ ಬೌಲಿಂಗ್ ವಿಚಾರದಲ್ಲಿ ಚಾಹಲ್ ಕೊಂಚ ಪ್ರಖರತೆ ಕಳೆದುಕೊಂಡಿದ್ದಾರಾದರೂ ಅವರು ಪ್ರತಿಭಾನ್ವಿತ ಬೌಲರ್ ಅನ್ನೋದರಲ್ಲಿ ಯಾವುದೇ ಅನುಮಾನವಿಲ್ಲ. ಹೀಗಾಗಿ ಚಾಹಲ್ ಆರ್‌ಸಿಬಿಯಲ್ಲೇ ಉಳಿಯುತ್ತಾರೆ ಎಂದು ಆಕಾಶ್ ಚೋಪ್ರಾ ಊಹಿಸಿದ್ದಾರೆ.

(ಚಾಹಲ್ ಐಪಿಎಲ್ ಸಾಧನೆ: 106 ಪಂದ್ಯಗಳಲ್ಲಿ 125 ವಿಕೆಟ್).

ಇಂಗ್ಲೆಂಡ್ ತಂಡವನ್ನು ಇಟಲಿ ಪೆನಾಲ್ಟಿಯಲ್ಲಿ ಸೋಲಿಸಿ ಚಾಂಪಿಯನ್ | Oneindia Kannada
4. ದೇವದತ್ ಪಡಿಕ್ಕಲ್

4. ದೇವದತ್ ಪಡಿಕ್ಕಲ್

ಕರ್ನಾಟಕ ರಣಜಿ ತಂಡದಲ್ಲಿ ಆಡುವ ಪ್ರತಿಭಾವಂತ ಆಟಗಾರ ದೇವದತ್ ಪಡಿಕ್ಕಲ್ ಅವರನ್ನು ಆಕಾಶ್ ಚೋಪ್ರಾ ತನ್ನ ಆಯ್ಕೆ ಪಟ್ಟಿಯಲ್ಲಿ ಹೆಸರಿಸಿದ್ದಾರೆ. ದೇಸಿ ಕ್ರಿಕೆಟ್ ಮತ್ತು ಐಪಿಎಲ್ ಎರಡರಲ್ಲೂ ಪಡಿಕ್ಕಲ್ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ಆರ್‌ಇಬಿಯಲ್ಲಿ ಆರಂಭಿಕ ಬ್ಯಾಟ್ಸ್‌ಮನ್‌ ಆಗಿರುವ ಪಡಿಕ್ಕಲ್ ಅವರನ್ನು ಆರ್‌ಸಿಬಿ ಬಿಟ್ಟುಕೊಡುವ ಸಾಧ್ಯತೆಯಿಲ್ಲ ಎಂದು ಚೋಪ್ರಾ ಹೇಳಿದ್ದಾರೆ.

(ಪಡಿಕ್ಕಲ್ ಐಪಿಎಲ್ ಸಾಧನೆ: 21 ಐಪಿಎಲ್ ಪಂದ್ಯಗಳಲ್ಲಿ 668 ರನ್, 1 ಶತಕ).

For Quick Alerts
ALLOW NOTIFICATIONS
For Daily Alerts
Story first published: Monday, July 12, 2021, 16:46 [IST]
Other articles published on Jul 12, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X