ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಆತನದ್ದು ಅಮೋಘ ಪ್ರದರ್ಶನ: 2021ರ ಅತ್ಯುತ್ತಮ ಟೆಸ್ಟ್ ಬೌಲರ್‌ನನ್ನು ಹೆಸರಿಸಿದ ಆಕಾಶ್ ಚೋಪ್ರ

Aakash Chopra praises R Ashwin said he is the test bowler of the 2021

2021 ಕ್ಯಾಲೆಂಡರ್ ವರ್ಷದ ಅಂತಿಮ ಘಟ್ಟಕ್ಕೆ ತಲುಪಿದ್ದೇವೆ. ಈ ಹಂತದಲ್ಲಿ ಈ ವರ್ಷ ನಡೆದ ಘಟನೆಗಳನ್ನು ಸ್ಮರಿಸುವುದು ಸಾಮಾನ್ಯ. ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರ ಈ ವರ್ಷ ಭಾರತೀಯ ಕ್ರಿಕೆಟ್ ತಂಡದ ಆಟಗಾರರ ಪ್ರದರ್ಶನದ ಬಗ್ಗೆ ಮಾತನಾಡಿದ್ದಾರೆ. ಈ ಸಂದರ್ಭದಲ್ಲಿ ಚೋಪ್ರ ಟೀಮ್ ಇಂಡಿಯಾ ಪರವಾಗಿ ಟೆಸ್ಟ್ ಮಾದರಿಯಲ್ಲಿ ಹಾಗೂ ಟಿ20 ಮಾದರಿಯಲ್ಲಿ ಅದ್ಭುತ ಪ್ರದರ್ಶನ ನೀಡಿ ಮಿಂಚಿದ ಬೌಲರ್‌ಗಳನ್ನು ಹೆಸರಿಸಿದ್ದಾರೆ.

ಟೀಮ್ ಇಂಡಿಯಾ ಪರವಾಗಿ ಟೆಸ್ಟ್ ಮಾದರಿಯಲ್ಲಿ ಆರ್ ಅಶ್ವಿನ್ ಈ ವರ್ಷ ಶ್ರೇಷ್ಠ ಪ್ರದರ್ಶನ ನೀಡುವ ಮೂಲಕ ಶ್ರೇಷ್ಠ ಬೌಲರ್ ಆಗಿ ಮಿಂಚಿದ್ದಾರೆ ಎಂದು ಆಕಾಶ್ ಚೋಪ್ರ ಹೇಳಿದ್ದು ಟಿ20 ಮಾದರಿಯಲ್ಲಿ ಜಸ್ಪ್ರೀತ್ ಬೂಮ್ರಾ ಅತ್ಯುತ್ತಮ ಬೌಲರ್ ಎಂದು ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. 2021ರಲ್ಲಿ ಆರ್ ಅಶ್ವಿನ್ ಈವರೆಗೆ ಆಡಿದ ಪಂದ್ಯಗಳಲ್ಲಿ 52 ವಿಕೆಟ್ ಪಡೆದುಕೊಂಡಿದ್ದಾರೆ. ಈ ಮೂಲಕ ಈ ವರ್ಷ 50ಕ್ಕಿಂತ ಹೆಚ್ಚು ವಿಕೆಟ್ ಪಡೆದ ಏಕೈಕ ಬೌಲರ್ ಎನಿಸಿದ್ದಾರೆ. ಮತ್ತೊಂದೆಡೆ ಬೂಮ್ರಾ ಟಿ20 ಕ್ರಿಕೆಟ್‌ನಲ್ಲಿ ಆಡಿದ ಐದು ಪಂದ್ಯಗಳಲ್ಲಿ 7 ವಿಕೆಟ್ ಪಡೆದುಕೊಂಡಿದ್ದಾರೆ.

ಐಪಿಎಸ್‌ ಆಫೀಸರ್ ವಿರುದ್ಧ ಧೋನಿಯ 100 ಕೋಟಿ ರೂಪಾಯಿ ಕೇಸ್: ಸಂಪತ್ ಕುಮಾರ್ ಅರ್ಜಿ ತಿರಸ್ಕರಿಸಿದ ಮದ್ರಾಸ್ ಹೈಕೋರ್ಟ್ಐಪಿಎಸ್‌ ಆಫೀಸರ್ ವಿರುದ್ಧ ಧೋನಿಯ 100 ಕೋಟಿ ರೂಪಾಯಿ ಕೇಸ್: ಸಂಪತ್ ಕುಮಾರ್ ಅರ್ಜಿ ತಿರಸ್ಕರಿಸಿದ ಮದ್ರಾಸ್ ಹೈಕೋರ್ಟ್

ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ವಿಡಿಯೋ ಹಂಚಿಕೊಂಡಿರುವ ಆಕಾಶ್ ಚೋಪ್ರ ಈ ವರ್ಷದಲ್ಲಿ ಆರ್ ಅಶ್ವಿನ್ ಭಾರತದ ಶ್ರೇಷ್ಠ ಟೆಸ್ಟ್ ಬೌಲರ್ ಎಂದು ವಿಶೇಷವಾಗಿ ಪ್ರಶಂಸಿದಿದ್ದಾರೆ. ಆರ್ ಅಶ್ವಿನ್ ಟೆಸ್ಟ್ ಕ್ರಿಕೆಟ್‌ನಲ್ಲಿ ಅಕ್ಷರ್ ಪಟೇಲ್, ಮೊಹಮ್ಮದ್ ಸಿರಾಹ್ ಹಾಗೂ ಬೂಮ್ರಾ ಅವರನ್ನು ಹಿಂದಿಕ್ಕಿದ್ದಾರೆ ಎಂದು ವಿಶ್ಲೇಷಿಸಿದ್ದಾರೆ.

"ಇದೊಂದು ಕುತೂಹಲಕಾರಿಯಾದ ವರ್ಷವಾಗಿತ್ತು. ಈ ವರ್ಷ ಟೆಸ್ಟ್ ಕ್ರಿಕೆಟ್‌ನಲ್ಲಿ ಮೊಹಮ್ಮದ್ ಸಿರಾಜ್ ಅವರ ಪ್ರದರ್ಶನ ನೋಡಿದೆವು, ಅನಿಜಕ್ಕೂ ಅವರ ಬೆಳವಣಿಗೆ ಉತ್ತಮವಾಗಿದೆ. ಜಸ್ಪ್ರೀತ್ ಬೂಮ್ರಾ ಕೂಡ ಇಂಗ್ಲೆಂಡ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಆದರೆ ನನ್ನ ಪ್ರಕಾರ 2021ರ ಅತ್ಯುತ್ತಮ ಟೆಸ್ಟ್ ಮಾದರಿಯ ಬೌಲರ್ ಎಂದರೆ ಅದು ಆರ್ ಅಶ್ವಿನ್. ಆತ ನಿಜಕ್ಕೂ ಅಮೋಘ ಪ್ರದರ್ಶನ ನೀಡಿದ್ದಾರೆ" ಎಂದು ಚೋಪ್ರ ಬಣ್ಣಿಸಿದ್ದಾರೆ.

ಕೆಲ ಟೆಸ್ಟ್ ಪಂದ್ಯಗಳಲ್ಲಿ ಆಡುವ ಅವಕಾಶ ಕಳೆದುಕೊಂಡಿದ್ದರೂ ಆರ್ ಅಶ್ವಿನ್ ಹೆಚ್ಚು ವಿಕೆಟ್‌ಗಳನ್ನು ತೆಕ್ಕೆಗೆ ಹಾಕಿಕೊಂಡಿದ್ದಾರೆ ಎಂದಿದ್ದಾರೆ ಆಕಾಶ್ ಚೋಪ್ರ. "ಆತ 52 ವಿಕೆಟ್ ಸಂಪಾದಿಸಿದ್ದಾರೆ. ಆತ ಗಾಬಾ ಟೆಸ್ಟ್ ಆಡಲಿಲ್ಲ. ಇಂಗ್ಲೆಂಡ್‌ನಲ್ಲಿ ಒಂದೇ ಒಂದು ಪಂದ್ಯವನ್ನು ಕೂಡ ಆಡಲಿಲ್ಲ. ಹಾಗಾಗಿ ಅವರು ಒಟ್ಟು ಐದು ಪಂದ್ಯಗಳಲ್ಲಿ ಆಡುವ ಅವಕಾಶ ತಪ್ಪಿಸಿಕೊಂಡಿದ್ದಾರೆ. ಅಲ್ಲದೆ ಅವರು ಉತ್ತಮವಾಗಿ ರನ್‌ಕೂಡ ಗಳಿಸಿದ್ದಾರೆ. ಆದರೆ ನಾನಿಲ್ಲಿ ಅವರ ಬ್ಯಾಟಿಂಗ್ ಪ್ರದರ್ಶನದ ಬಗ್ಗೆ ಪರಿಗಣಿಸುತ್ತಿಲ್ಲ. ಅವರು ಈ ಎಲ್ಲಾ ಪಂದ್ಯಗಳಲ್ಲಿಯೂ ಆಡಿದ್ದರೆ 70 ವಿಕೆಟ್ ಪಡೆದುಕೊಳ್ಳುತ್ತಿದ್ದರು" ಎಂದಿದ್ದಾರೆ ಆಕಾಶ್ ಚೋಪ್ರ.

ಟೀಂ ಇಂಡಿಯಾದ ಪೂರ್ಣ ಪ್ರಮಾಣದ ನಾಯಕನಾದ ರೋಹಿತ್‌ ಶರ್ಮಾಗೆ ಸ್ಯಾಲರಿ ಎಷ್ಟು?ಟೀಂ ಇಂಡಿಯಾದ ಪೂರ್ಣ ಪ್ರಮಾಣದ ನಾಯಕನಾದ ರೋಹಿತ್‌ ಶರ್ಮಾಗೆ ಸ್ಯಾಲರಿ ಎಷ್ಟು?

ಆರ್ ಅಶ್ವಿನ್ ಟೆಸ್ಟ್ ಕ್ರಿಕೆಟ್‌ನಲ್ಲಿ ಈಗಾಗಲೇ ಹರ್ಭಜನ್ ಸಿಂಗ್ ಅವರ 417 ವಿಕೆಟ್‌ಗಳ ದಾಖಲೆಯನ್ನು ಹಿಂದಿಕ್ಕಿದ್ದು ಅತಿ ಹೆಚ್ಚು ಟೆಸ್ಟ್ ವಿಕೆಟ್ ಪಡೆದ ಭಾರತೀಯ ಬೌಲರ್‌ಗಳ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಎರಡನೇ ಸ್ಥಾನದಲ್ಲಿರುವ ಕಪಿಲ್‌ದೇವ್ ದಾಖಲೆಯನ್ನು ಹಿಂದಿಕ್ಕಲು ಆರ್ ಅಶ್ವಿನ್ ಇನ್ನು ಹೆಚ್ಚು ಸಮಯ ತೆಗೆದುಕೊಳ್ಳಲಾರರು ಎಂದಿದ್ದಾರೆ. "ಅವರು 417 ವಿಕೆಟ್‌ಗಳ ಮೈಲಿಗಲ್ಲನ್ನು ದಾಟಿದ್ದಾರೆ. ಈಗ ಅವರು ಕಪಿಲ್‌ ದೇವ್ ಅವರ ದಾಖಲೆಯನ್ನು ಹಿಂದಿಕ್ಕಲು ಬಹಳ ಸನಿಹದಲ್ಲಿದ್ದಾರೆ. ಅದನ್ನು ಹಿಂದಿಕ್ಕಲಿದ್ದಾರೆ. ಅವರು ತಮ್ಮ ಬೌಲಿಂಗ್ ಮಾಡುವ ರೀತಿ ಹಾಗೂ ಪಂದ್ಯಗಳಲನ್ನು ಗೆಲ್ಲಿಸುವ ರೀತಿ ಪ್ರಮುಖವಾದದ್ದು. ಜಡೇಜಾ ಗಾಯಗೊಳ್ಳುತ್ತಿರುವ ಕಾರಣ ಹೆಚ್ಚಿನ ಸಂದರ್ಭದಲ್ಲಿ ಜಡೇಜಾ ಅಶ್ವಿನ್ ಅವರೊಂದಿಗೆ ಆಡಿಲ್ಲ. ಆದರೆ ಅಕ್ಷರ್ ಪಟೇಲ್ ಅಶ್ವಿನ್ ಜೊತೆಗಿದ್ದರು" ಎಂದಿದ್ದಾರೆ ಆಕಾಶ್ ಚೋಪ್ರ.

ಈ ತ್ರಿಮೂರ್ತಿಗಳ ಕೈವಾಡದಿಂದ ನಾಯಕತ್ವ ಕಳೆದುಕೊಂಡ‌ ವಿರಾಟ್ | Oneindia Kannada

Story first published: Friday, December 10, 2021, 13:13 [IST]
Other articles published on Dec 10, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X