ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಈ ಆರು ಪ್ರಮುಖ ಆಟಗಾರರು IPL 2022 ಹರಾಜಿಗೂ ಮೊದಲೇ ಸೇಲ್ ಆಗಲಿದ್ದಾರೆ: ಆಕಾಶ್ ಚೋಪ್ರಾ

Aakash chopra

ಇಂಡಿಯನ್ ಪ್ರೀಮಿಯರ್ ಲೀಗ್ 15ನೇ ಆವೃತ್ತಿಯ ಮೆಗಾ ಹರಾಜಿಗೂ ಬೆನ್ನಲ್ಲೇ, ಫ್ರಾಂಚೈಸಿಗಳು ಈಗಾಗಲೇ ಆಟಗಾರರನ್ನ ರೀಟೈನ್ ಮಾಡಿಕೊಂಡಿವೆ. ಡಿಸೆಂಬರ್ ಕೊನೆಯ ವಾರ ಅಥವಾ ಜನವರಿಯಲ್ಲಿ ಆಟಗಾರರ ಹರಾಜು ಪ್ರಕ್ರಿಯೆ ನಡೆಯಬಹುದು ಎನ್ನಲಾಗಿದೆ.

ಐಪಿಎಲ್‌ನ ಎಲ್ಲಾ ಎಂಟು ಫ್ರಾಂಚೈಸಿಗಳು ಈಗಾಗಲೇ ತಮ್ಮ ಉಳಿಸಿಕೊಂಡಿರುವ ಆಟಗಾರರ ಪಟ್ಟಿಯನ್ನು ಪ್ರಕಟಿಸಿವೆ. ಆದರೆ ಇದೀಗ, ಭಾರತದ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಅವರು ಬಿಡುಗಡೆಯಾದ ಆರು ಆಟಗಾರರನ್ನು ಪ್ರಮುಖವಾಗಿ ಹೆಸರಿಸಿ, ಅವರು ಮೆಗಾ ಹರಾಜಿನಲ್ಲಿ ಭಾಗವಹಿಸುವುದು ಬಹುತೇಕ ಅನುಮಾನವಾಗಿದೆ ಎಂದು ಭಾವಿಸಿದ್ದಾರೆ.

ಶೂನ್ಯಕ್ಕೆ ಔಟಾದ್ರೂ ದಾಖಲೆ ಬರೆದ ವಿರಾಟ್: ಇದು ಬೇಕಿತ್ತಾ ಕೊಹ್ಲಿ!ಶೂನ್ಯಕ್ಕೆ ಔಟಾದ್ರೂ ದಾಖಲೆ ಬರೆದ ವಿರಾಟ್: ಇದು ಬೇಕಿತ್ತಾ ಕೊಹ್ಲಿ!

ಐಪಿಎಲ್ ತನ್ನ ಮುಂಬರುವ ಸೀಸನ್‌ನಲ್ಲಿ ಲಕ್ನೋ ಮತ್ತು ಅಹಮದಾಬಾದ್ ಎರಡು ಹೊಸ ತಂಡಗಳನ್ನು ಸ್ವಾಗತಿಸಲು ಸಿದ್ಧವಾಗಿದೆ. ಮೆಗಾ ಹರಾಜಿನ ಮುಂಚೆಯೇ ಈ ಎರಡು ಫ್ರಾಂಚೈಸಿಗಳು ತಲಾ ಮೂವರು ಆಟಗಾರರನ್ನು ಡ್ರಾಫ್ಟ್ ಮಾಡಲು ಸಾಧ್ಯವಾಗುತ್ತದೆ. ಚೋಪ್ರಾ ಅವರು ನಾಲ್ವರು ಭಾರತೀಯರು ಮತ್ತು ಇಬ್ಬರು ವಿದೇಶಿ ಕ್ರಿಕೆಟಿಗರನ್ನು ಆಯ್ಕೆ ಮಾಡಿದ್ದು, ಹೊಸ ಫ್ರಾಂಚೈಸಿ ಸೇರ್ಪಡೆಯಾಗಲಿದ್ದಾರೆ ಎಂದಿದ್ದಾರೆ.

ಈ ಆರು ಆಟಗಾರರಲ್ಲಿ ಕೆ.ಎಲ್ ರಾಹುಲ್ ತನ್ನ ಮೊದಲ ಆಯ್ಕೆ ಎಂದು ಆಕಾಶ್ ಚೋಪ್ರಾ ಹೆಸರಿಸಿದ್ದಾರೆ. ಏಕೆಂದರೆ ರಾಹುಲ್ ಲಕ್ನೋ ತಂಡಕ್ಕೆ ಬರಬಹುದು ಎಂದು ಭವಿಷ್ಯ ನುಡಿದಿದ್ದಾರೆ. ಅಫ್ಘಾನಿಸ್ತಾನದ ಏಸ್ ಸ್ಪಿನ್ನರ್ ರಶೀದ್ ಖಾನ್ ಅವರ ಎರಡನೇ ಆಯ್ಕೆಯಾಗಿದ್ದು, ನಂತರ ಶ್ರೇಯಸ್ ಅಯ್ಯರ್, ಯುಜ್ವೇಂದ್ರ ಚಹಾಲ್ ಮತ್ತು ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಇಶನ್ ಕಿಶನ್ ಮೆಗಾ ಹರಾಜಿಗೂ ಬರುವ ಮೊದಲೇ ಸೇಲ್ ಆಗಲಿದ್ದಾರೆ.

"ನನ್ನ ಮೊದಲ ಆಯ್ಕೆ ಕೆಎಲ್ ರಾಹುಲ್ ಆಗಿದ್ದು, ಅವರು ಹರಾಜನ್ನು ತಲುಪಲು ಸಾಧ್ಯವಾಗುವುದಿಲ್ಲ ಎಂದು ನಾನು ಭಾವಿಸುತ್ತೇನೆ. ಪಂಜಾಬ್ ಕಿಂಗ್ಸ್ ಅವರನ್ನು ಉಳಿಸಿಕೊಳ್ಳಲು ಬಯಸಿತು ಆದರೆ ಅವರು ಬಯಸಲಿಲ್ಲ. ಅವರು ಲಕ್ನೋಗೆ ಹೋಗುತ್ತಿದ್ದಾರೆ ಮತ್ತು ಹೊಸ ತಂಡದ ನಾಯಕರಾಗುತ್ತಾರೆ ಎಂದು ನಾನು ಭಾವಿಸುತ್ತೇನೆ. ರಶೀದ್ ಖಾನ್ ಎರಡನೇ ಸ್ಥಾನದಲ್ಲಿದ್ದಾರೆ. ಅವರ ಹೆಸರು ಹರಾಜು ಪಟ್ಟಿಯನ್ನ ತಲುಪುತ್ತದೆ ಎಂದು ನಾನು ಭಾವಿಸುವುದಿಲ್ಲ. ಉತ್ತಮ ವೇತನದೊಂದಿಗೆ ಹೊಸ ಫ್ರಾಂಚೈಸಿ ಈಗಾಗಲೇ ಅವರನ್ನು ಸಂಪರ್ಕಿಸಿರುವ ಕಾರಣ ಅವರು ಸನ್‌ರೈಸರ್ಸ್ ಹೈದರಾಬಾದ್‌ನಲ್ಲಿ ಉಳಿಯಲು ಬಯಸಲಿಲ್ಲ.

ನನ್ನ ಮೂರನೇ ಆಯ್ಕೆ ಶ್ರೇಯಸ್ ಅಯ್ಯರ್. ಅವರು ಅಹಮದಾಬಾದ್ ಫ್ರಾಂಚೈಸಿಯ ನಾಯಕರಾಗುವ ಸಾಧ್ಯತೆಯಿದೆ. ಅವರು ಪ್ರಮುಖ ಆಟಗಾರರಾಗಿದ್ದಾರೆ ಮತ್ತು ಹೊಸ ತಂಡಕ್ಕೆ ಡ್ರಾಫ್ಟ್ ಮಾಡಲಾಗುವುದು. ಅವರು ಈಗಾಗಲೇ ಡೆಲ್ಲಿ ಕ್ಯಾಪಿಟಲ್ಸ್ ನಾಯಕರಾಗಿರುವ ಕಾರಣ ಅವರು ಅಹಮದಾಬಾದ್ ಅನ್ನು ಮುನ್ನಡೆಸುವುದನ್ನು ನೋಡಿ ನನಗೆ ಆಶ್ಚರ್ಯವಾಗುವುದಿಲ್ಲ. ಯುಜ್ವೇಂದ್ರ ಚಹಾಲ್ ಅಹಮದಾಬಾದ್‌ಗೆ ಹೋಗಬಹುದಾದ ಮತ್ತೊಬ್ಬ ಆಟಗಾರ. ಇಶಾನ್ ಕಿಶನ್ ಮತ್ತು ಹಾರ್ದಿಕ್ ಪಾಂಡ್ಯ ಅವರು ಹರಾಜಿನಲ್ಲಿ ಭಾಗಿಯಾಗುವುದು ಇಲ್ಲ ಎಂದು ಚೋಪ್ರಾ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ತಿಳಿಸಿದ್ದಾರೆ.

ಸೆಂಚುರಿ ಸಿಡಿಸಿದ್ಮೇಲೆ ಟೀಕಾಕಾರರಿಗೆ ಕನ್ನಡಿಗ ಮಯಾಂಕ್ ತಿರುಗೇಟು ಕೊಟ್ಟಿದ್ದು ಹೀಗೆ.. | Oneindia Kannada

ಇನ್ನು ಚೋಪ್ರಾ ಅವರು ಆಸ್ಟ್ರೇಲಿಯನ್ ಬ್ಯಾಟ್ಸ್‌ಮನ್ ತಮ್ಮ ಮತ್ತೊಂದು ಆಯ್ಕೆ ಎಂದು ಹೆಸರಿಸಿದ್ದಾರೆ.

Story first published: Friday, December 3, 2021, 22:56 [IST]
Other articles published on Dec 3, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X