ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಈ ಮಾದರಿ ಅತ್ಯಂತ ಬೋರಿಂಗ್ ಎಂದ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರ

Aakash Chopra said ODI cricket is the most boring format

ಐಪಿಎಲ್ 15ನೇ ಆವೃತ್ತಿಯ ಮುಕ್ತಾಯದ ಬಳಿಕ ಮಾಜಿ ಕ್ರಿಕೆಟಿಗ ಹಾಗೂ ಮಾಜಿ ಕೋಚ್ ರವಿ ಶಾಸ್ತ್ರಿ ನೀಡಿದ್ದ ಹೇಳಿಕೆ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಟಿ20 ಮಾದರಿಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿಶ್ವಕಪ್‌ಗೆ ಮಾತ್ರವೇ ಸೀಮಿತಗೊಳಿಸಬೇಕು ಎಂದಿದ್ದರು. ಆದರೆ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರ ಈಗ ಇದಕ್ಕೆ ವ್ಯತಿರಿಕ್ತ ಹೇಳಿಕೆಯನ್ನು ನೀಡಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಟಿ20 ಮಾದರಿಗೆ ಹೆಚ್ಚಿನ ಮಹತ್ವ ನೀಡದಿರುವ ಬದಲು ಏಕದಿನ ಮಾದರಿಯಲ್ಲಿ ಬದಲಾವಣೆಯನ್ನು ತರಬೇಕಿದೆ ಎಂದಿದ್ದಾರೆ.

ಈ ಸಂದರ್ಭದಲ್ಲಿ ಆಕಾಶ್ ಚೋಪ್ರ ಏಕದಿನ ಮಾದರಿಯ ಪ್ರಸ್ತುತತೆಯ ಬಗ್ಗೆ ಪ್ರಶ್ನೆಯನ್ನೆತ್ತಿದ್ದಾರೆ. ಟಿ20 ಮಾದರಿಯ ಬದಲಾಗಿ ಏಕದಿನ ಕ್ರಿಕೆಟ್ ಮಾದರಿಯಲ್ಲಿ ಕೆಲ ಬದಲಾವಣೆಗಳು ಆಗಬೇಕಿದೆ ಎಂದು ಮಾಜಿ ಕ್ರಿಕೆಟಿಗ ಹಾಗೂ ಹಾಲಿ ಕಾಮೆಂಟೇಟರ್ ಆಕಾಶ್ ಚೋಪ್ರ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಫ್ರೆಂಚ್ ಓಪನ್ 2022: 14ನೇ ಬಾರಿಗೆ ಚಾಂಪಿಯನ್ ಆದ ರಾಫೆಲ್ ನಡಾಲ್; ಕ್ಯಾಸ್ಪರ್ ರೂಡ್ ರನ್ನರ್ ಅಪ್ಫ್ರೆಂಚ್ ಓಪನ್ 2022: 14ನೇ ಬಾರಿಗೆ ಚಾಂಪಿಯನ್ ಆದ ರಾಫೆಲ್ ನಡಾಲ್; ಕ್ಯಾಸ್ಪರ್ ರೂಡ್ ರನ್ನರ್ ಅಪ್

ಏಕದಿನ ಮಾದರಿ ಅರ್ಥವಿಲ್ಲದಂತಾಗಿದೆ

ಏಕದಿನ ಮಾದರಿ ಅರ್ಥವಿಲ್ಲದಂತಾಗಿದೆ

ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರ ಏಕದಿನ ಕ್ರಿಕೆಟ್‌ ಅರ್ಥಹೀನವಾಗಿದೆ ಎಂದಿದ್ದಾರೆ. ಪ್ರಸಾರಕರು ಮತ್ತು ಅಭಿಮಾನಿಗಳು ಇಬ್ಬರು ಕೂಡ ಈ ಮಾದರಿಯನ್ನು ಆನಂದಿಸುತ್ತಿಲ್ಲ. ಯಾರನ್ನು ಕೂಡ ಹೆಚ್ಚಾಗಿ ಈ ಮಾದರಿ ಹೆಚ್ಚಾಗಿ ತೊಡಗಿಸಿಕೊಳ್ಳುವುದಿಲ್ಲ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಅಲ್ಲದೆ ವಿಶ್ವಕಪ್‌ಗಳಲ್ಲಿ ಮಾತ್ರವೇ ಟಿ20 ಪಂದ್ಯಗಳನ್ನಾಡಿದರೆ ಆ ಸಂದರ್ಭದಲ್ಲಿ ಆಟಗಾರರ ಹೊಂದಾಣಿಕೆಗೂ ಸಮಯ ಸಾಕಾಗುವುದಿಲ್ಲ ಎಂದಿದ್ದಾರೆ.

ಏಕದಿನ ಮಾದರಿ ಬೋರಿಂಗ್

ಏಕದಿನ ಮಾದರಿ ಬೋರಿಂಗ್

ಆಸಕ್ತಿಯ ಮಟ್ಟವನ್ನು ದೃಷ್ಟಿಯಲ್ಲಿಟ್ಟುಕೊಂಡರೆ ಟೆಸ್ಟ್ ಮಾದರಿಯನ್ನು ನಾನು ಪರಿಗಣಿಸಲು ಸಾಧ್ಯವಿಲ್ಲ. ಯಾಕೆಂದರೆ ಪ್ರತಿಯೊಂದನ್ನು ವಾಣಿಜ್ಯದ ದೃಷ್ಟಿಕೋನದಿಂದ ನೋಡಲು ಸಾಧ್ಯವಿಲ್ಲ. ಆದರೆ ನನ್ನ ಪ್ರಕಾರ ಏಕದಿನ ಕ್ರಿಕೆಟ್ ಮಾದರಿ ಅತ್ಯಂತ ಬೋರಿಂಗ್ ಕ್ರಿಕೆಟ್ ಮಾದರಿಯಾಗಿದೆ. ಅದು ಹೆಚ್ಚು ಅರ್ಥವಿಲ್ಲದಂತಾಗಿದೆ. ಪ್ರೇಕ್ಷಕರು ನೆನಪಿನಲ್ಲಿಟ್ಟುಕೊಳ್ಳದಂತಾ ಮಾದರಿ ಏಕದಿನ ಎನಿಸುತ್ತದೆ. ನನ್ನ ಪ್ರಕಾರ ಏಕದಿನ ಕ್ರಿಕೆಟ್ ಮಾದರಿ ಹೆಣಗಾಡುತ್ತಿದೆ. ಟಿ20 ಅಲ್ಲ. ಅಂತಾರಾಷ್ಟ್ರೀಯ ಟಿ20 ಮಾದರಿಗಳಿಗೆ ಅವಕಾಶವನ್ನು ನೀಡಬೇಕು. ಯಾಕೆಂದರೆ ಪ್ರಸಾರಕರಿಗೆ ಅದು ಅಗತ್ಯವಿದೆ. ಇಲ್ಲವಾದರೆ ಅವರು ನಿಮಗೆ ಹಣ ನೀಡುವುದಿಲ್ಲ. ಪ್ರತಿ ರಾಷ್ಟ್ರದ ಬ್ರಾಡ್‌ಕಾಸ್ಟ್ ಮೊತ್ತ ಪ್ರಮುಖವಾಗುತ್ತದೆ" ಎಂದಿದ್ದಾರೆ ಆಕಾಶ್ ಚೋಪ್ರ.

ಟಿ20 ಮಾದರಿ ಮುಂದುವರಿಯಬೇಕು

ಟಿ20 ಮಾದರಿ ಮುಂದುವರಿಯಬೇಕು

ಮುಂದುವರಿದು ಮಾತನಾಡಿದ ಆಕಾಶ್ ಚೋಪ್ರ "ನನ್ನ ಪ್ರಕಾರ ಟಿ20 ಮಾದರಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮುಂದುವರಿಯಬೇಕು. ಯಾಕೆಂದರೆ ಅಂತಾರಾಷ್ಟ್ರೀಯ ವಿಶ್ವಕಪ್ ಎರಡು ವರ್ಷಕ್ಕೊಮ್ಮೆ ಆಯೋಜನೆಯಾಗುತ್ತದೆ. ಈ ಟೂರ್ನಮೆಂಟ್‌ಗೆ ಸಿದ್ಧತೆಯನ್ನು ನಡೆಸುವುದಕ್ಕೆ ಹೆಚ್ಚಿನ ಸಮಯ ದೊರೆಯುವುದಿಲ್ಲ" ಎಂದಿದ್ದಾರೆ ಆಕಾಶ್ ಚೋಪ್ರ.

Mohammad Siraj ಅಂದು Riyan Paragಗೆ ಹಾಗೆ ಹೇಳಿದ್ದೇಕೆ | OneIndia Kannada
ರವಿ ಶಾಸ್ತ್ರಿ ಹೇಳಿದ್ದೇನು?

ರವಿ ಶಾಸ್ತ್ರಿ ಹೇಳಿದ್ದೇನು?

ಮಾಜಿ ಕೋಚ್ ಹಾಗೂ ಕ್ರಿಕೆಟಿಗ ರವಿ ಶಾಸ್ತ್ರಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಟಿ20 ಕ್ರಿಕೆಟ್‌ಗೆ ಹೆಚ್ಚಿನ ಪಾಧಾನ್ಯತೆ ನೀಡುವ ಅಗತ್ಯವಿಲ್ಲ ಎಂದಿದ್ದರು. ಅಲ್ಲದೆ ಫುಟ್ಬಾಲ್ ಮಾದರಿಯಲ್ಲಿ ವಿಶ್ವಕಪ್‌ನಲ್ಲಿ ಮಾತ್ರವೇ ಟಿ20 ಕ್ರಿಕೆಟ್ ಮಾದರಿಯನ್ನು ಆಡಿಬೇಕು. ದ್ವಿಪಕ್ಷೀಯ ಸರಣಿಗಳ ಅಗತ್ಯವಿಲ್ಲ. ಅದರ ಬದಲಾಗಿ ಲೀಗ್ ಕ್ರಿಕೆಟ್‌ಗಳನ್ನು ಹೆಚ್ಚಾಗಿ ಆಡಿಸಬೇಕು" ಎಂದು ರವಿ ಶಾಸ್ತ್ರಿ ಹೇಳಿಕೊಂಡಿದ್ದರು.

Story first published: Monday, June 6, 2022, 15:13 [IST]
Other articles published on Jun 6, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X