ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

'ಇಂಗ್ಲೆಂಡ್‌ನಲ್ಲಿ ನಾನೂ ವರ್ಣಭೇದ ಎದುರಿಸಿದ್ದೆ' ಎಂದ ಭಾರತೀಯ ಕ್ರಿಕೆಟರ್!

Aakash Chopra says he faced racism while playing in England

ಬೆಂಗಳೂರು: ತಿನ್ನೋ ಅನ್ನ, ಉಸಿರಾಡೋ ಗಾಳಿ, ಮೈಯಲ್ಲಿ ಹರಿಯೋ ರಕ್ತ ಎಲ್ಲಾ ಒಂದೇ ಇದ್ದರೂ ಮನುಷ್ಯ ಮನುಷ್ಯರಲ್ಲಿ ಇಂದಿಗೂ ತಾರತಮ್ಯವಿದೆ. ಜಾತಿಭೇದ, ಲಿಂಗಭೇದ, ಧರ್ಮಭೇದ ಮುಂದಿಟ್ಟುಕೊಂಡು ಮನುಷ್ಯರೇ ಮನುಷ್ಯರೆದುರು ಅಮಾನುಷವಾಗಿ ನಡೆದುಕೊಂಡ ಅನೇಕ ನಿದರ್ಶನಗಳನ್ನು ನಾವು ಕೇಳಿದ್ದೇವೆ. ಇಂದಿಗೂ ಜಗತ್ತಿನ ಮೂಲೆಗಳಲ್ಲಿ ತಾರತಮ್ಯಕ್ಕೆ ಸಂಬಂಧಿಸಿದ ಘಟನೆಗಳು ಮನ ಕಲಕುತ್ತಿರುತ್ತವೆ. ತೀರಾ ಇತ್ತೀಚಿಗೆ, ಅಮೆರಿಕಾದಲ್ಲಿ ಜಾರ್ಜ್ ಫ್ಲಾಯ್ಡ್ ಸಾವು ಮನುಷ್ಯನೊಳಗಿನ ಕ್ರೌರ್ಯಕ್ಕೆ ಜೀವಂತ ಉದಾಹರಣೆಯಾಗಿ ನಿಲ್ಲುತ್ತದೆ.

24 ವರ್ಷಗಳ ಹಿಂದೆ ಟೀಮ್ ಇಂಡಿಯಾ ವಿಶಿಷ್ಠ ಗೆಲುವು ದಾಖಲಿಸಿದ್ದು ಇದೇ ದಿನ!24 ವರ್ಷಗಳ ಹಿಂದೆ ಟೀಮ್ ಇಂಡಿಯಾ ವಿಶಿಷ್ಠ ಗೆಲುವು ದಾಖಲಿಸಿದ್ದು ಇದೇ ದಿನ!

ಆಫ್ರಿಕನ್ ಅಮೆರಿಕನ್ ಆಗಿದ್ದ ಜಾರ್ಜ್ ಫ್ಲಾಯ್ಡ್‌ನನ್ನು ಬಿಳಿಯ ಪೊಲೀಸ್ ಒಬ್ಬ ಕಾಲಿನಿಂದ ಒತ್ತಿ ಹಿಡಿದು ಕೊಂದಿದ್ದ. ಈ ಘಟನೆ ಕರಿಯರ ವಿರುದ್ಧ ಬಿಳಿಯರು ಮೆರೆಯುತ್ತಿರುವ ಕ್ರೌರ್ಯವನ್ನು ಮತ್ತೆ ನೆನಪಿಸಿತ್ತು. ಅಲ್ಲದೆ ಜಗತ್ತಿನಾದ್ಯಂತ ವರ್ಣಭೇದ ನೀತಿಯ ವಿರುದ್ಧ ಜನ ಧ್ವನಿಯೆತ್ತುವಂತೆ ಮಾಡಿತ್ತು.

ಪಂದ್ಯ ಗೆಲ್ಲದಿದ್ದರೂ ಅಭಿಮಾನಿಗಳ ಹೃದಯ ಗೆದ್ದ 4 ಅದ್ಭುತ ಒಡಿಐ ಪ್ರದರ್ಶನಗಳುಪಂದ್ಯ ಗೆಲ್ಲದಿದ್ದರೂ ಅಭಿಮಾನಿಗಳ ಹೃದಯ ಗೆದ್ದ 4 ಅದ್ಭುತ ಒಡಿಐ ಪ್ರದರ್ಶನಗಳು

ಜಾರ್ಜ್ ಸಾವಿನ ಬಳಿಕ ವರ್ಣ ಭೇದ ನೀತಿಯ ವಿರುದ್ಧ ಅನೇಕ ಕ್ರೀಡಾಪಟುಗಳು, ಕ್ರಿಕೆಟಿಗರು ಆಕ್ರೋಶ ತೋರಿಕೊಂಡಿದ್ದರು. ಎಲ್ಲೆಲ್ಲಿ ವರ್ಣಭೇದವನ್ನು ಆಚರಿಸಲಾಗುತ್ತಿದೆ ಎಂದು ಕ್ರೀಡಾಪಟುಗಳು ಘಟನೆಗಳನ್ನು ವಿವರಿಸಿ ಹೇಳಿದ್ದರು. ಭಾರತದ ಕ್ರಿಕೆಟರ್ ಕೂಡ ವರ್ಣಭೇದದ ಬಗ್ಗೆ ತುಟಿ ಬಿಚ್ಚಿದ್ದಾರೆ.

ಇಂಗ್ಲೆಂಡ್‌ನಲ್ಲಿ ವರ್ಣಭೇದ

ಇಂಗ್ಲೆಂಡ್‌ನಲ್ಲಿ ವರ್ಣಭೇದ

ಇಂಗ್ಲೆಂಡ್‌ನಲ್ಲಿ ಲೀಗ್‌ ಕ್ರಿಕೆಟ್‌ನಲ್ಲಿ ಪಾಲ್ಗೊಳ್ಳುವಾಗ ತಾನು ಕೂಡ ವರ್ಣಭೇದ ನೀತಿಯನ್ನು ಎದುರಿಸಬೇಕಾಗಿ ಬಂದಿತ್ತು, ಜನಾಂಗೀಯ ನಿಂದನೆಗೆ ಒಳಗಾಗಬೇಕಾಗಿ ಬಂದಿತ್ತು ಎಂದು ಟೀಮ್ ಇಂಡಿಯಾದ ಮಾಜಿ ಆರಂಭಿಕ ಬ್ಯಾಟ್ಸ್‌ಮನ್, ಈಗ ಕಾಮೆಂಟೇಟರ್ ಅಗಿರುವ ಆಕಾಶ್ ಚೋಪ್ರಾ ಹೇಳಿಕೊಂಡಿದ್ದಾರೆ.

13 ವರ್ಷಗಳ ಹಿಂದಿನ ಘಟನೆ

13 ವರ್ಷಗಳ ಹಿಂದಿನ ಘಟನೆ

ಯೂ ಟ್ಯೂಬ್‌ ಚಾನೆಲ್‌ನಲ್ಲಿ ಮಾತನಾಡಿರುವ ಚೋಪ್ರಾ, ಈ ಘಟನೆ ನಡೆದಿದ್ದು 2007ರಲ್ಲಿ ಇಂಗ್ಲೆಂಡ್‌ನಲ್ಲಿ ಮೇರಿಲೆಬೋನ್ ಕ್ರಿಕೆಟ್ ಕ್ಲಬ್ ಪರ ಆಡುತ್ತಿದ್ದಾಗ ಎಂದಿದ್ದಾರೆ. ಆಗ ಚೋಪ್ರಾ ಅವರನ್ನು 'ಪಾಕಿ' ಎಂದು ಕರೆದಿದ್ದರಂತೆ. ಸೌತ್ ಏಷ್ಯನ್ ಮೂಲದ ಜನರಿಗೆ ಕರಿಯರು ಎಂಬರ್ಥದಲ್ಲಿ ಇಂಗ್ಲಿಷ್‌ನಲ್ಲಿ ಮಾತನಾಡುವ ಮಂದಿ ಹೀಗೆ ಕರೆಯುತ್ತಾರೆ ಎಂದು ಆಕಾಶ್ ಹೇಳಿದ್ದಾರೆ.

ನಿಂದಿಸಿ ಖುಷಿಪಟ್ಟುಕೊಳ್ಳುತ್ತಿದ್ದರು

ನಿಂದಿಸಿ ಖುಷಿಪಟ್ಟುಕೊಳ್ಳುತ್ತಿದ್ದರು

'ನಾವು (ಕ್ರಿಕೆಟಿಗರು) ಒಂದಿಲ್ಲ ಒಂದು ವಿಧದಲ್ಲಿ ವರ್ಣಭೇಧ ನೀತಿ ಎದುರಿಸಿರುತ್ತೇವೆ. ನಾನು ಇಂಗ್ಲೆಂಡ್‌ನಲ್ಲಿ ಲೀಗ್‌ ಕ್ರಿಕೆಟ್ ಆಡುತ್ತಿದ್ದಾಗ, ಎದುರಾಳಿ ತಂಡದಲ್ಲಿ ಇಬ್ಬರು ದಕ್ಷಿಣ ಆಫ್ರಿಕನ್ ಆಟಗಾರರಿದ್ದರು. ಅವರಿಬ್ಬರೂ ಬೇರೆಯವರನ್ನು ಜನಾಂಗೀಯವಾಗಿ ನಿಂದಿಸಿ ಖುಷಿಪಟ್ಟುಕೊಳ್ಳುತ್ತಿದ್ದರು,' ಎಂದು ಚೋಪ್ರಾ ವಿವರಿಸಿದ್ದಾರೆ.

ನನ್ನನ್ನು 'ಪಾಕಿ' ಎಂದು ಕರೆದರು

ನನ್ನನ್ನು 'ಪಾಕಿ' ಎಂದು ಕರೆದರು

'ನಾನು ನಾನ್ ಸ್ಟ್ರೈಕರ್ಸ್‌ನ ಕೊನೆಯಲ್ಲಿದ್ದಾಗ ಆ ಇಬ್ಬರು ದಕ್ಷಿಣ ಆಫ್ರಿಕನ್ನರು ನನ್ನನ್ನೂ ನಿಂದಿಸತೊಡಗಿದ್ದರು. ಅವರು ನನ್ನನ್ನು ಪದೇ ಪದೇ 'ಪಾಕಿ' ಎಂದು ಕರೆಯುತ್ತಿದ್ದರು. ಪಾಕಿ ಎಂದರೆ ಪಾಕಿಸ್ತಾನದ ಶಾರ್ಟ್ ಫಾರ್ಮ್ ಎಂದು ಎಲ್ಲರೂ ಅಂದುಕೊಳ್ಳುತ್ತಾರೆ. ಆದರೆ ಅದಲ್ಲ, ನೀವೊಂದು ವೇಳೆ ಕಂದು ಬಣ್ಣದವರಾಗಿದ್ದರೆ, ನೀವು ಯಾವುದೇ ಏಷ್ಯಾ ಖಂಡದಿಂದ ಬಂದಿದ್ದರೆ ನಿಮ್ಮನ್ನು ವರ್ಣಭೇದ ರೀತಿಯಲ್ಲಿ 'ಪಾಕಿ' ಎಂದು ಕರೆಯಲಾಗುತ್ತದೆ,' ಎಂದು ಚೋಪ್ರಾ ಹೇಳಿಕೊಂಡಿದ್ದಾರೆ.

Story first published: Wednesday, June 10, 2020, 22:45 [IST]
Other articles published on Jun 10, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X