ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಬೇಕೆಂದೇ ಸೋತಿತ್ತು ಭಾರತ ಎಂದ ಪಾಕ್ ಮಾಜಿ ಆಟಗಾರರಿಗೆ ಆಕಾಶ್ ಚೋಪ್ರಾ ಕ್ಲಾಸ್

Aakash Chopra To Ex-pakistan Players Accusing India Of Deliberately Losing Vs England

ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಭಾರತ ಬೇಕೆಂದೇ ಸೋತಿತ್ತು. ಪಾಕಿಸ್ತಾನವನ್ನು ಟೂರ್ನಿಯಿಂದ ಆಚೆ ಕಳಿಸಬೇಕೆಂಬ ದುರುದ್ದೇಶದಿಂದ ಈ ಸೋಲನ್ನು ಕಂಡಿತ್ತು ಎಂದು ಪಾಕಿಸ್ತಾನದ ಮಾಜಿ ಆಟಗಾರರು ಆರೋಪವನ್ನು ಮಾಡಿದ್ದಾರೆ. ಇದಕ್ಕೆ ಮಾಜಿ ಕ್ರಿಕೆಟಿಗ ಕಾಮೆಂಟೇಟರ್ ಆಕಾಶ್ ಚೋಪ್ರಾ ತಿರುಗೇಟು ನೀಡಿದ್ದಾರೆ.

ಪಾಕಿಸ್ತಾನದ ಮಾಜಿ ಆಟಗಾರರು ಈ ರೀತಿ ಅಭಿಪ್ರಾಯವನ್ನು ವ್ಯಕ್ತಪಡಿಸಲು ಸ್ವಲ್ಪವಾದರೂ ಅವಮಾನ ಪಡಬೇಕಿತ್ತು ಎಂದಿದ್ದಾರೆ. ವಾಕರ್ ಯೂನಿಸ್ ಐಸಿಸಿಯ ಬ್ರಾಂಡ್ ಅಂಬಾಸೀಡರ್ ಆಗಿದ್ದರೂ ವಿಶ್ವಕಪ್ ಸಮಯದಲ್ಲಿ ಬಾರತ ಉದ್ದೇಶ ಪೂರ್ವಕವಾಗಿ ಸೋತಿದೆ ಎಂದು ಹೇಳಿದ್ದಾರೆ. ಇದನ್ನು ನಾನು ಗಂಭೀರವಾಗಿ ಅರ್ಥೈಸುತ್ತೇನೆ ಎಂದು ಚೋಪ್ರಾ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಹೇಳಿದ್ದಾರೆ.

ಬೇರೆಯಾಗ್ತಿದ್ದಾರಾ ವಿರಾಟ್ ಅನುಷ್ಕಾ? ಟ್ವಿಟ್ಟರ್‌ನಲ್ಲಿ #VirushkaDivorce ಟ್ರೆಂಡ್ !ಬೇರೆಯಾಗ್ತಿದ್ದಾರಾ ವಿರಾಟ್ ಅನುಷ್ಕಾ? ಟ್ವಿಟ್ಟರ್‌ನಲ್ಲಿ #VirushkaDivorce ಟ್ರೆಂಡ್ !

ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ನಡುವಿನ ಪಾಲುದಾರಿಕೆಯು ಸ್ಟೋಕ್ಸ್‌ಗೆ ವಿಶೇಷವೆನಿಸಲಿಲ್ಲ. ಆದರೆ ಅಂತಿಮ ಹಂತದಲ್ಲಿ ಧೋನಿಯ ಆಟದ ಶೈಲಿಯಿಂದ ಗೊಂದಲಕ್ಕೊಳಗಾಗಿದ್ದಾರೆ ಎಂಬುದು ಅರ್ಥವಾಗುತ್ತದೆ. ಆದರೆ ಭಾರತ ಉದ್ದೇಶ ಪೂರ್ವಕವಾಗಿ ಪಂದ್ಯವನ್ನು ಕಳೆದುಕೊಂಡಿತ್ತು ಎಂದು ಸ್ಟೋಕ್ಸ್ ಎಲ್ಲೂ ಹೇಳಿಲ್ಲ ಎಂದು ಚೋಪ್ರಾ ಪ್ರತಿಕ್ರಿಯಿಸಿದ್ದಾರೆ.

ಪಾಕಿಸ್ತಾನದ ಮಾಜಿ ಆಟಗಾರರು ಬಹಿರಂಗವಾಗಿ ಹೇಳಿದ್ದಾರೆ ಭಾರತ ಬೇಕೆಂದೇ ಇಂಗ್ಲೆಂಡ್ ವಿರುದ್ಧ ಸೋಲು ಕಂಡಿತ್ತು ಎಂದು. ಅವರು ಈ ರೀತಿಯ ಹೇಳಿಕೆ ನಿಡಲು ಹೇಗೆ ಸಾಧ್ಯ. ಆ ಹಂತದಲ್ಲಿ ಟೀಮ್ ಇಂಡಿಯಾಗೆ ಎಲ್ಲಾ ಪಂದ್ಯವನ್ನು ಗೆದ್ದು ಪಟ್ಟಿಯಲ್ಲಿ ಮೊದಲ ಸ್ಥಾನವನ್ನು ಪಡೆದುಕೊಳ್ಳುವ ಅಗತ್ಯವಿತ್ತು ಎಂದು ಚೋಪ್ರಾ ಹೇಳಿದ್ದಾರೆ.

ಕೂತಲ್ಲೇ ಕೋಹ್ಲಿ ಖಾತೆಗೆ ಕೋಟಿ ಕೋಟಿ: ಲಾಕ್‌ಡೌನ್‌ನಲ್ಲಿ ಅತಿ ಹೆಚ್ಚು ಆದಾಯಕೂತಲ್ಲೇ ಕೋಹ್ಲಿ ಖಾತೆಗೆ ಕೋಟಿ ಕೋಟಿ: ಲಾಕ್‌ಡೌನ್‌ನಲ್ಲಿ ಅತಿ ಹೆಚ್ಚು ಆದಾಯ

ಇಂಗ್ಲೆಂಡ್ ಆಲ್‌ರೌಂಡರ್ ಬೆನ್ ಸ್ಟೋಕ್ಸ್ ತಮ್ಮ ಪುಸ್ತಕದಲ್ಲಿ ಇತ್ತೀಚೆಗೆ 'ಧೋನಿ ಪಂದ್ಯವನ್ನು ಗೆಲ್ಲಿಸುವ ತೀವ್ರತೆಯನ್ನು ತೋರಿಸಿರಲಿಲ್ಲ' ಎಮದು ಬರೆದುಕೊಂಡಿದ್ದು ದೊಡ್ಡ ಸುದ್ದಿಯಾಗಿತ್ತು. ಇದಕ್ಕೆ ಪಾಕಿಸ್ತಾನದ ಮಾಜಿ ಆಟಗಾರರಾದ ವಾಕರ್ ಯೂನಿಸ್, ಅಬ್ದುಲ್ ರಝಾಕ್ ಮುಷ್ತಾಕ್ ಅಹ್ಮದ್ ಸೇರಿದಂತೆ ಅನೇಕ ಕ್ರಿಕೆಟಿಗರು ಪ್ರತಿಕ್ರಿಯಿಸುತ್ತಾ ಭಾರತ ಬೇಕೆಂದೇ ಇಂಗ್ಲೆಂಡ್ ವಿರುದ್ಧ ಸೋಲನ್ನು ಕಂಡಿತ್ತು ಎಂದು ಆರೋಪಿಸಿದ್ದರು.

Story first published: Saturday, June 6, 2020, 16:50 [IST]
Other articles published on Jun 6, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X