ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಬೇಡವಾಗಿದ್ದರೆ ತಂಡಕ್ಕೆ ಯಾಕೆ ಸೇರಿಸಿಕೊಳ್ತೀರಿ: ಕಿಡಿಕಾರಿದ ಆಕಾಶ್ ಚೋಪ್ರ

Aakash Chopra wants Team India make changes for the 2nd T20I against Ireland

ಭಾರತ ಹಾಗೂ ಐರ್ಲೆಂಡ್ ನಡುವಿನ ಟಿ20 ಸರಣಿಯ ಎರಡನೇ ಹಾಗೂ ಅಂತಿಮ ಪಂದ್ಯ ಇಂದು ನಡೆಯಲಿದೆ. ಈ ಪಂದ್ಯಕ್ಕೆ ಮುನ್ನ ಭಾರತ ತಂಡದ ಮಾಜಿ ಕ್ರಿಕೆಟಿಗ ಹಾಗೂ ಹಾಲಿ ಕಾಮೆಂಟೇಟರ್ ಆಕಾಶ್ ಚೋಪ್ರ ಟೀಮ್ ಇಂಡಿಯಾ ವಿಚಾರವಾಗಿ ಕೆಲ ಮಾತುಗಳನ್ನಾಡಿದ್ದಾರೆ. ಅದರಲ್ಲೂ ಎರಡನೇ ಪಂದ್ಯದಲ್ಲಿ ಭಾರತ ತಂಡದಲ್ಲಿ ಮಾಡಿಕೊಳ್ಳಬೇಕಿರುವ ಬದಲಾವಣೆ ಬಗ್ಗೆ ಆಕಾಶ್ ಚೋಪ್ರ ಸಲಹೆ ನೀಡಿದ್ದಾರೆ.

ಈ ಸಂದರ್ಭದಲ್ಲಿ ಆಕಾಶ್ ಚೋಪ್ರ ಟೀಮ್ ಇಂಡಿಯಾದ ಓರ್ವ ಯುವ ಆಟಗಾರನ ಬಗ್ಗೆ ಉಲ್ಲೇಖಿಸಿ ಪ್ರತಿಕ್ರಿಯೆ ನೀಡಿದ್ದಾರೆ. ಆಡಲು ಅರ್ಹತೆಯಿಲ್ಲ ಎಂದು ಬಾವಿಸಿದ ಮೇಲೆ ಯಾವ ಕಾರಣಕ್ಕಾಗಿ ತಂಡಕ್ಕೆ ಸೇರಿಸಿಕೊಳ್ಳುತ್ತೀರಿ ಎಂದು ಕಟುವಾಗಿ ಪ್ರಶ್ನಿಸಿದ್ದಾರೆ ಆಕಾಶ್ ಚೋಪ್ರ.

ಐರ್ಲೆಂಡ್ vs ಭಾರತ: ನಾಯಕತ್ವದ ಮೊದಲ ಪಂದ್ಯದಲ್ಲೇ ಹೊಸ ದಾಖಲೆ ಬರೆದ ಹಾರ್ದಿಕ್ ಪಾಂಡ್ಯಐರ್ಲೆಂಡ್ vs ಭಾರತ: ನಾಯಕತ್ವದ ಮೊದಲ ಪಂದ್ಯದಲ್ಲೇ ಹೊಸ ದಾಖಲೆ ಬರೆದ ಹಾರ್ದಿಕ್ ಪಾಂಡ್ಯ

ಮೊದಲ ಪಂದ್ಯದಲ್ಲಿ ಬ್ಯಾಟಿಂಗ್ ನಡೆಸದ ಋತು

ಮೊದಲ ಪಂದ್ಯದಲ್ಲಿ ಬ್ಯಾಟಿಂಗ್ ನಡೆಸದ ಋತು

ಐರ್ಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಭಾರತ ತಂಡ ಭರ್ಜರಿ ಗೆಲುವು ಸಾಧಿಸಿತು. ಈ ಪಂದ್ಯದಲ್ಲಿ ಫಿಲ್ಡಿಂಗ್ ಸಂದರ್ಭದಲ್ಲಿ ಗಾಯಗೊಂಡ ಋತುರಾಜ್ ಗಾಯಕ್ವಾಡ್ ಬಳಿಕ ಆರಂಭಿಕ ಆಟಗಾರನಾಗಿ ಕಣಕ್ಕಿಳಿದಿರಲಿಲ್ಲ. ಈ ಬಗ್ಗೆ ಆಕಾಶ್ ಚೋಪ್ರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಋತುರಾಜ್ ಗಾಯಕ್ವಾಡ್ ಎರಡನೇ ಪಂದ್ಯದಲ್ಲಿ ಆಡಲು ಅಲಭ್ಯವಾಗಿದ್ದರೆ ಆರಂಭಿಕ ಆಟಗಾರನಾಗಿ ವೆಂಕಟೇಶ್ ಐಯ್ಯರ್‌ಗೆ ಅವಕಾಶ ನೀಡಬೇಕಿದೆ ಎಂದಿದ್ದಾರೆ.

ಗಾಯಕ್ವಾಡ್ ಆಡದಿದ್ದರೆ ವೆಂಕಟೇಶ್ ಐಯ್ಯರ್ ಅವಕಾಶ ನೀಡಿ

ಗಾಯಕ್ವಾಡ್ ಆಡದಿದ್ದರೆ ವೆಂಕಟೇಶ್ ಐಯ್ಯರ್ ಅವಕಾಶ ನೀಡಿ

"ಎರಡನೇ ಪಂದ್ಯಕ್ಕೆ ಋತುರಾಜ್ ಗಾಯಕ್ವಾಟ್ ಲಭ್ಯವಾಗಿದ್ದಾರೋ ಇಲ್ಲವೋ ಎಂಬುದು ಇನ್ನೂ ಪ್ರಶ್ನೆಯಾಗಿದೆ. ಅವರೇನಾದರೂ ಆಡಲು ಅರ್ಹವಾಗಿಲ್ಲದಿದ್ದರೆ ಯಾರನ್ನು ಆರಂಬಿಕನಾಗಿ ಕಣಕ್ಕಿಳಿಸಸಬೇಕು? ನನ್ನ ಪ್ರಕಾರ ವೆಂಕಟೇಶ್ ಐಯ್ಯರ್‌ಗೆ ನೀವು ಅವಕಾಶ ನೀಡಬೇಕಿದೆ. ಆತ ಆಡಲು ಅರ್ಹನಲ್ಲ ಎನಿಸಿದರೆ, ಆತ ಆಡುವುದು ಇಷ್ಟವಿಲ್ಲದಿದ್ದರೆ ತಂಡದಲ್ಲಿ ಯಾವ ಕಾರಣಕ್ಕಾಗಿ ಉಳಿಸಿಕೊಂಡಿದ್ದೀರಿ? " ಎಂದು ಆಕಾಶ್ ಚೋಪ್ರ ಕಿಡಿ ಕಾರಿದ್ದಾರೆ.

ಟೆಸ್ಟ್ ಕ್ರಿಕೆಟ್‌ನ 4ನೇ ಇನ್ನಿಂಗ್ಸ್‌ನಲ್ಲಿ ವೇಗದ ಶತಕ ಸಿಡಿಸಿದ ಟಾಪ್ 3 ಬ್ಯಾಟ್ಸ್‌ಮನ್‌ಗಳು

ಆರಂಭಿಕನಾಗಿ ಹೂಡಾ ಬೇಡ್ವೇ ಬೇಡ ಎಂದ ಚೋಪ್ರ

ಆರಂಭಿಕನಾಗಿ ಹೂಡಾ ಬೇಡ್ವೇ ಬೇಡ ಎಂದ ಚೋಪ್ರ

"ಋತುರಾಜ್ ಗಾಯಕ್ವಾಡ್ ಎರಡನೇ ಪಂದ್ಯಕ್ಕೂ ಅಲಭ್ಯವಾಗಿದ್ದರೆ ನಾನು ಮತ್ತೊಮ್ಮೆ ದೀಪಕ್ ಹೂಡಾ ಆರಂಬಿಕನಾಗಿ ಕಣಕ್ಕಿಳಿಯುವುದನ್ನು ನೀಡಲು ಬಯಸುವುದಿಲ್ಲ. ಸಂಜು ಸ್ಯಾಮ್ಸನ್ ಹಾಗೂ ರಾಹುಲ್ ತ್ರಿಪಾಠಿ ಕೂಡ ತಂಡದಲ್ಲಿದ್ದು ಆರಂಬಿಕ ಸ್ಥಾನಕ್ಕೆ ಹೆಚ್ಚಿನ ಆಯ್ಕೆಗಳಿದೆ. ಈ ರೀತಿಯಾಗಿ ಯೋಚನೆ ಮಾಡಿದರೆ ಸಂಜು ಸ್ಯಾಮ್ಸನ್‌ಗೆ ಆಡುವ ಬಳಗದಲ್ಲಿ ಅವಕಾಶ ನೀಡಬೇಕು. ರಾಹುಲ್ ತ್ರಿಪಾಠಿ ಮತ್ತಷ್ಟು ಕಾಯಬೇಕಾಗುತ್ತದೆ" ಎಂದು ಆಕಾಶ್ ಚೋಪ್ರ ಹೇಳಿಕೆ ನೀಡಿದ್ದಾರೆ. ಇಂಥಾ ಸಂದರ್ಭದಲ್ಲಿ ಅಕ್ಷರ್ ಪಟೇಲ್ ಬದಲಿಗೆ ವೆಂಕಟೇಶ್ ಐಯ್ಯರ್‌ಗೆ ಅವಕಾಶ ನೀಡಬೇಕು ಎಂದಿದ್ದಾರೆ ಆಕಾಶ್ ಚೋಪ್ರ.

'ಅಪ್ಪನ ಕೈಲಾಗದ್ದನ್ನ ಮಗ ಮಾಡಿ ತೋರಿಸಿದ': 23 ವರ್ಷಗಳ ಬಳಿಕ ಕೋಚ್ ಚಂದ್ರಕಾಂತ್ ಪಂಡಿತ್ ಕನಸು ನನಸು

Dinesh Karthik ಜೀವನದ ರಹಸ್ಯ:DK ಬದುಕಿಗೆ ಈತ ಎಂಟ್ರಿ ಕೊಟ್ಟಿಲ್ಲ ಅಂದಿದ್ರೆ DK ಕಥೆ??? | *Cricket | OneIndia
ಇತ್ತಂಡಗಳ ಸ್ಕ್ವಾಡ್ ಹೀಗಿದೆ

ಇತ್ತಂಡಗಳ ಸ್ಕ್ವಾಡ್ ಹೀಗಿದೆ

ಭಾರತ: ಋತುರಾಜ್ ಗಾಯಕ್ವಾಡ್, ಇಶಾನ್ ಕಿಶನ್, ದೀಪಕ್ ಹೂಡಾ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ (ನಾಯಕ), ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಭುವನೇಶ್ವರ್ ಕುಮಾರ್, ಅಕ್ಷರ್ ಪಟೇಲ್, ಅವೇಶ್ ಖಾನ್, ಯುಜ್ವೇಂದ್ರ ಚಾಹಲ್, ಉಮ್ರಾನ್ ಮಲಿಕ್, ಸಂಜು ಸ್ಯಾಮ್ಸನ್, ಹರ್ಷಲ್ ಪಟೇಲ್, ವೆಂಕಟೇಶ್ ಅಯ್ಯರ್, ರಾಹುಲ್ ತ್ರಿಪಾಠಿ, ಅರ್ಷದೀಪ್ ಸಿಂಗ್, ರವಿ ಬಿಷ್ಣೋಯ್

ಐರ್ಲೆಂಡ್: ಪಾಲ್ ಸ್ಟಿರ್ಲಿಂಗ್, ಆಂಡ್ರ್ಯೂ ಬಾಲ್ಬಿರ್ನಿ (ನಾಯಕ), ಗರೆಥ್ ಡೆಲಾನಿ, ಹ್ಯಾರಿ ಟೆಕ್ಟರ್, ಲೋರ್ಕನ್ ಟಕರ್ (ವಿಕೆಟ್ ಕೀಪರ್), ಜಾರ್ಜ್ ಡಾಕ್ರೆಲ್, ಮಾರ್ಕ್ ಅಡೇರ್, ಆಂಡಿ ಮ್ಯಾಕ್‌ಬ್ರೈನ್, ಕ್ರೇಗ್ ಯಂಗ್, ಜೋಶುವಾ ಲಿಟಲ್, ಕಾನರ್ ಓಲ್ಫರ್ಟ್, ಕರ್ಟಿಸ್ ಕ್ಯಾಂಫರ್, ಬ್ಯಾರಿ ಮೆಕಾರ್ಥಿ, ಸ್ಟೀಫನ್ ಡೊಹೆನಿ

Story first published: Tuesday, June 28, 2022, 16:36 [IST]
Other articles published on Jun 28, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X