ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ ಕಳಪೆ ಆಟದ ಹೊರತಾಗಿಯೂ ಟಿ20 ವಿಶ್ವಕಪ್‌ನಲ್ಲಿ ವಾರ್ನರ್ ಓಪನರ್!

Aaron Finch backs David Warner to open in T20 World Cup, despite woes in IPL 2021

ಸಿಡ್ನಿ: ಆಸ್ಟ್ರೇಲಿಯಾದ ಸ್ಟಾರ್ ಬ್ಯಾಟ್ಸ್‌ಮನ್‌ ಡೇವಿಡ್ ವಾರ್ನರ್ ಕಳೆದ ಒಂದು ವರ್ಷದಿಂದಲೂ ಯಾವುದೇ ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿಲ್ಲ. ಸದ್ಯ ನಡೆಯುತ್ತಿರುವ 2021ರ ಇಂಡಿಯನ್ ಪ್ರೀಮಿಯರ್ ಲೀಗ್‌ ಟೂರ್ನಿಯಲ್ಲೂ ವಾರ್ನರ್ ಕಳಪೆ ಪ್ರದರ್ಶನ ನೀಡಿದ್ದರು. ಐಪಿಎಲ್‌ನಲ್ಲಿ ಸನ್ ರೈಸರ್ಸ್ ಹೈದರಾಬಾದ್ ಪರ ಆಡುವ ವಾರ್ನರ್ ಸದ್ಯ ತಂಡದಿಂದ ಹೊರಗಿದ್ದಾರೆ. ನೀರಸ ಬ್ಯಾಟಿಂಗ್‌ನಿಂದಾಗಿ ವಾರ್ನರ್ ತಂಡದಿಂದ ಹೊರಗಿರಬೇಕಾಗಿ ಬಂದಿದೆ.

ಐಪಿಎಲ್ 2021: ಅಂತ್ಯವಾಯಿತಾ ಭಾರತದ ಈ ಇಬ್ಬರು ಭರವಸೆಯ ಆಟಗಾರರ ಕ್ರಿಕೆಟ್ ಕೆರಿಯರ್!?ಐಪಿಎಲ್ 2021: ಅಂತ್ಯವಾಯಿತಾ ಭಾರತದ ಈ ಇಬ್ಬರು ಭರವಸೆಯ ಆಟಗಾರರ ಕ್ರಿಕೆಟ್ ಕೆರಿಯರ್!?

ಐಪಿಎಲ್‌ನಲ್ಲಿ ಡೇವಿಡ್ ವಾರ್ನರ್ ಸದ್ಯ ನೀರಸ ಬ್ಯಾಟಿಂಗ್‌ ಪ್ರದರ್ಶಿಸುತ್ತಿರಬಹುದು. ಆದರೆ ವಾರ್ನರ್ ವಿಶ್ವ ಕ್ರಿಕೆಟ್‌ನಲ್ಲಿ ಅತೀ ಅಪಾಯಕಾರಿ ಮತ್ತು ಪ್ರತಿಭಾನ್ವಿತ ಬ್ಯಾಟ್ಸ್‌ಮನ್‌ ಅನ್ನೋದರಲ್ಲಿ ಅನುಮಾನವಿಲ್ಲ. ಇದೇ ಕಾರಣಕ್ಕೆ ಮುಂಬರಲಿರುವ ಟಿ20 ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ತಂಡದಲ್ಲಿ ವಾರ್ನರ್ ಆರಂಭಿಕರಾಗಿ ಆಡಲಿದ್ದಾರೆ ಎಂದು ಆಸ್ಟ್ರೇಲಿಯಾ ನಾಯಕ ಆ್ಯರನ್ ಫಿಂಚ್ ಹೇಳಿದ್ದಾರೆ.

ಕಳಪೆ ಬ್ಯಾಟಿಂಗ್‌ ಹೊರತಾಗಿಯೂ ವಾರ್ನರ್ ಆಸ್ಟ್ರೇಲಿಯಾಕ್ಕೆ ಓಪನರ್

ಕಳಪೆ ಬ್ಯಾಟಿಂಗ್‌ ಹೊರತಾಗಿಯೂ ವಾರ್ನರ್ ಆಸ್ಟ್ರೇಲಿಯಾಕ್ಕೆ ಓಪನರ್

ಐಪಿಎಲ್‌ನಲ್ಲಿ ಕಳಪೆ ಬ್ಯಾಟಿಂಗ್‌ ಹೊರತಾಗಿಯೂ ಮುಂಬರಲಿರುವ ಟಿ20 ವಿಶ್ವಕಪ್‌ನಲ್ಲಿ ಹೊರತಾಗಿಯೂ ಡೇವಿಡ್ ವಾರ್ನರ್ ಆಸ್ಟ್ರೇಲಿಯಾ ವಿಶ್ವಕಪ್‌ ತಂಡದಲ್ಲಿ ಆರಂಭಿಕರಾಗಿ ಆಡಲಿದ್ದಾರೆ ಎಂದು ಆಸ್ಟ್ರೇಲಿಯಾ ಟಿ20 ತಂಡದ ನಾಯಕ ಆ್ಯರನ್ ಫಿಂಚ್ ಹೇಳಿದ್ದಾರೆ. ಮಾಜಿ ಚಾಂಪಿಯನ್ಸ್ ಸನ್ ರೈಸರ್ಸ್ ಹೈದರಾಬಾದ್ ತಂಡದಲ್ಲಿ ಆಡುತ್ತಿರುವ ವಾರ್ನರ್ ಕಳೆದ ಹಲವಾರು ವರ್ಷಗಳಲ್ಲಿ ತಂಡದ ಪ್ರಮುಖ ಆಟಗಾರರಾಗಿ ಬಲ ತುಂಬುತ್ತಿದ್ದಾರೆ. ಆದರೆ ಈ ಬಾರಿ ವಾರ್ನರ್ ಐಪಿಎಲ್‌ನಲ್ಲಿ ಉತ್ತಮ ಫಾರ್ಮ್‌ನಲ್ಲಿಲ್ಲ. ಆದರೆ ವಾರ್ನರ್ ಪ್ರತಿಭಾವಂತ ಆಟಗಾರ ಎಂದು ಅರಿತಿರುವ ಫಿಂಚ್ ಐಪಿಎಲ್ ಪ್ರದರ್ಶನ ವಾರ್ನರ್ ಅವರ ಅಂತಾರಾಷ್ಟ್ರೀಯ ವೃತ್ತಿ ಬದುಕಿನ ಮೇಲೆ ಪರಿಣಾಮ ಬೀರೋದಿಲ್ಲ ಎಂದಿದ್ದಾರೆ.

ವಾರ್ನರ್ ಆಸ್ಟ್ರೇಲಿಯಾ ತಂಡದಲ್ಲಿ ಒಬ್ಬ ಅತ್ಯುತ್ತಮ ಆಟಗಾರ

ವಾರ್ನರ್ ಆಸ್ಟ್ರೇಲಿಯಾ ತಂಡದಲ್ಲಿ ಒಬ್ಬ ಅತ್ಯುತ್ತಮ ಆಟಗಾರ

ಬುಧವಾರ (ಅಕ್ಟೋಬರ್ 6) ಮಾತನಾಡಿದ ಆ್ಯರನ್ ಫಿಂಚ್, "ಹೌದು, ಖಂಡಿತಾ ಡೇವಿಡ್ ವಾರ್ನರ್ ಆಸ್ಟ್ರೇಲಿಯಾ ತಂಡದಲ್ಲಿ ಒಬ್ಬ ಅತ್ಯುತ್ತಮ ಆಟಗಾರ. ವಾರ್ನರ್ ಅವರ ವಿಶ್ವಕಪ್‌ ಅಭ್ಯಾಸದ ಬಗ್ಗೆ ನನಗೆ ಯಾವುದೇ ಅನುಮಾನವಿಲ್ಲ. ಅವರು ಸನ್ ರೈಸರ್ಸ್ ಹೈದರಾಬಾದ್ ಪರ ಆಡಲು ಇಷ್ಟಪಡುತ್ತಾರೆ ಅದರಲ್ಲೂ ಅನುಮಾನವಿಲ್ಲ. ಈಗಲೂ ಅವರು ಅಭ್ಯಾಸ ಮಾಡುತ್ತಿದ್ದಾರೆ ಅನ್ನೋದು ನನಗೆ ಗೊತ್ತಿದೆ. ವಿಶ್ವಕಪ್‌ನಲ್ಲಿ ಆಡಲು ಅವರು ಸಿದ್ಧವಾಗಿದ್ದಾರೆ," ಎಂದು ಇಎಸ್‌ಪಿಎನ್‌ ಕ್ರಿಕ್‌ಇನ್ಫೋ ಜೊತೆ ವಾರ್ನರ್ ಹೇಳಿದ್ದಾರೆ. ಅಕ್ಟೋಬರ್ 15ರಂದು ಐಪಿಎಲ್‌ ಫೈನಲ್‌ ಮೂಲಕ ಕೊನೆಗೊಳ್ಳಲಿದೆ. ಆ ಬಳಿಕ ಅಂದರೆ ಅಕ್ಟೋಬರ್‌ 17ರಿಂದ ಟಿ20 ವಿಶ್ವಕಪ್‌ ಟೂರ್ನಿ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಮತ್ತು ಓಮನ್‌ನಲ್ಲಿ ನಡೆಯಲಿದೆ. ನವೆಂಬರ್ 14ರಂದು ಟಿ20 ವಿಶ್ವಕಪ್ ಕೊನೆಗೊಳ್ಳಲಿದೆ.

Virat Kohli SRH ವಿರುದ್ಧ ಪಂದ್ಯ ಸೋತ ನಂತರ ಹೇಳಿದ್ದೇನು | Oneindia Kannada
ಎಸ್‌ಆರ್‌ಎಚ್ ಪರವಾಗಿ ಅದ್ಭುತ ಪ್ರದರ್ಶನ ನೀಡಿದ್ದ ವಾರ್ನರ್

ಎಸ್‌ಆರ್‌ಎಚ್ ಪರವಾಗಿ ಅದ್ಭುತ ಪ್ರದರ್ಶನ ನೀಡಿದ್ದ ವಾರ್ನರ್

ಕ್ರಿಕೆಟ್ ಆಗಲಿ ಅಥವಾ ಬೇರೆ ಕ್ರೀಡೆಯೇ ಆಗಿರಲಿ, ಅಥ್ಲೀಟ್‌ ಒಬ್ಬನ ಪ್ರದರ್ಶನದಲ್ಲಿ ಏರಿಳಿತಗಳು ಸಹಜ. ಕ್ರಿಕೆಟ್‌ನಲ್ಲಿ ಆಟಗಾರರ ಫಾರ್ಮ್ ಕಳೆಗುಂದೋದು ಇದ್ದಿದ್ದೇ. ಆದರೆ ಫಾರ್ಮ್ ಕಳೆದುಕೊಂಡಿದ್ದಾಗ ಆಟಗಾರರನ್ನು ಅವಮಾನಿಸದೆ ಅವರಲ್ಲಿ ಧೈರ್ಯ ತುಂಬಬೇಕು, ಇನ್ನಷ್ಟು ಅವಕಾಶ ನೀಡಬೇಕು, ಆಟಗಾರನ ಮೇಲೆ ನಂಬಿಕೆ ಇಡಬೇಕು. ಆಗ ಮಾತ್ರ ಪ್ರತಿಭಾನ್ವಿತ ಆಟಗಾರನನ್ನು ಮತ್ತೆ ಮಿನುಗುವಂತೆ ಮಾಡಲು ಸಾಧ್ಯವಾಗುತ್ತದೆ. ಡೇವಿಡ್ ವಾರ್ನರ್ ಈ ಐಪಿಎಲ್ ಸೀಸನ್‌ನಲ್ಲಿ ಮಾತ್ರ ಕೊಂಚ ಫಾರ್ಮ್ ಕಳೆದುಕೊಂಡಿದ್ದಾರೆ. ಗಾಯದ ಸಮಸ್ಯೆ, ಕೋವಿಡ್ ಕಾರಣ ಸರಿಯಾದ ಅಭ್ಯಾಸ ಇಲ್ಲದಿರುವುದು, ಮಾನಸಿಕ ಸ್ಥಿತಿಗತಿ ಇವೆಲ್ಲ ಕಳಪೆ ಫಾರ್ಮ್‌ಗೆ ಕಾರಣವಿರಬಹುದು. ಆದರೆ ವಾರ್ನರ್ ಈ ಬಾರಿಯ ಟಿ20 ವಿಶ್ವಕಪ್‌ಗೆ ಆಸೀಸ್ ಟಿ20 ತಂಡದಲ್ಲಿದ್ದಾರೆಂದರೆ ಆಸ್ಟ್ರೇಲಿಯಾಕ್ಕೆ ವಾರ್ನರ್ ಮೇಲಿರುವ ನಂಬಿಕೆ ಸೂಚಿಸುತ್ತದೆ. ಅಂದ್ಹಾಗೆ, ವಾರ್ನರ್ ಎಚ್‌ಆರ್‌ಎಚ್ ಪರ 2014ರಲ್ಲಿ 528 ರನ್, 2015ರಲ್ಲಿ 562 ರನ್, 2016ರಲ್ಲಿ 848 ರನ್, 2017ರಲ್ಲಿ 641 ರನ್, 2019ರಲ್ಲಿ 692 ರನ್, 2020ರಲ್ಲಿ 548 ರನ್ ಗಳಿಸಿದ್ದರು ಅನ್ನೋದು ಇಲ್ಲಿ ಉಲ್ಲೇಖನೀಯ.

Story first published: Wednesday, October 6, 2021, 17:06 [IST]
Other articles published on Oct 6, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X